Royal Enfield: ಹೊಸ ಬಣ್ಣದೊಂದಿಗೆ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಬೈಕ್ ಬಿಡುಗಡೆ.. ಬೆಲೆ ಎಷ್ಟು?

ಯುವಕರಿಗೆ ನಿಮ್ಮ ನೆಚ್ಚಿನ ಬೈಕ್ ಯಾವುದೆಂದು ಕೇಳಿದರೆ ತಕ್ಷಣ ಬರುವ ಒಂದೇ ಒಂದು ಉತ್ತರ 'ರಾಯಲ್ ಎನ್‌ಫೀಲ್ಡ್ ಬುಲೆಟ್' ಎಂದು.. ಅಷ್ಟರಮಟ್ಟಿಗೆ ಈ ಬೈಕ್‌ ಯುವ ಜನರ ಮನಸ್ಸನ್ನು ಗೆದ್ದಿದೆ. ಇಂದು (ಗುರುವಾರ) ನೂತನ ಬಣ್ಣದ ಆಯ್ಕೆಯೊಂದಿಗೆ ರಾಯಲ್ ಎನ್‌ಫೀಲ್ಡ್ ಬುಲೆಟ್ 350 (Royal Enfield Bullet 350) ಮೋಟಾರ್‌ಸೈಕಲ್‌ನ್ನು ಮಾರಾಟಕ್ಕೆ ತರಲಾಗಿದೆ. ಬನ್ನಿ.. ಈ ಬೈಕ್ ಬೆಲೆ (Price), ಕಾರ್ಯಕ್ಷಮತೆ (Performance) ಹಾಗೂ ವೈಶಿಷ್ಟ್ಯಗಳ (Features) ಕುರಿತಂತೆ ಸಂಪೂರ್ಣವಾದ ಮಾಹಿತಿ ತಿಳಿಯೋಣ.

ಹೊಸ ಬೆಟಾಲಿಯನ್ ಬ್ಲ್ಯಾಕ್ (Battalion Black) ಬಣ್ಣದೊಂದಿಗೆ ಬಿಡುಗಡೆಯಾಗಿರುವ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಮೋಟಾರ್‌ಸೈಕಲ್‌ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, ರೂ.1,74,875 ಎಕ್ಸ್ ಶೋರೂಂ ದರವನ್ನು ಹೊಂದಿದೆ. ಇದರೊಂದಿಗೆ ಈ ಬುಲೆಟ್ 350 ಬೈಕ್ ಮಿಲಿಟರಿ ಬ್ಲ್ಯಾಕ್, ಮಿಲಿಟರಿ ರೆಡ್, ಮಿಲಿಟರಿ ಸಿಲ್ವರ್‌ ಬ್ಲ್ಯಾಕ್ ಹಾಗೂ ಮಿಲಿಟರಿ ಸಿಲ್ವರ್‌ ರೆಡ್ ಬಣ್ಣದ (ಕಲರ್) ಆಯ್ಕೆಯಲ್ಲಿಯೂ ಸಿಗುತ್ತದೆ.

Royal Enfield Bullet 350 New Colour Variant Launched India Rs 1 74 Lakh Price Details

ನೂತನ ಬಣ್ಣದ ಆಯ್ಕೆಯಲ್ಲಿ ಪರಿಚಯಿಸಲಾಗಿರುವ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಮೋಟಾರ್‌ಸೈಕಲ್‌ ವಿನ್ಯಾಸದಲ್ಲಿ (ಡಿಸೈನ್) ಕೆಲವೊಂದು ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಲಾಗಿದೆ. ಐಕಾನಿಕ್ ರಾಯಲ್ ಎನ್‌ಫೀಲ್ಡ್ ಬ್ಯಾಡ್ಜಿಂಗ್‌ನೊಂದಿಗೆ ಫ್ಯುಯೆಲ್ (ಇಂಧನ) ಟ್ಯಾಂಕ್ ಮತ್ತು ಸೈಡ್ ಪ್ಯಾನೆಲ್‌ಗಳಲ್ಲಿ ಗೋಲ್ಡ್ ಪಿನ್‌ಸ್ಟ್ರೈಪ್‌ನ್ನು ಹೊಂದಿದೆ. ಸಿಂಗಲ್-ಚಾನೆಲ್ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಕೂಡ ಪಡೆದಿದೆ.

ಈ ಹೊಸ ಬೆಟಾಲಿಯನ್ ಬ್ಲ್ಯಾಕ್ ಬಣ್ಣದೊಂದಿಗೆ ಮಾರಾಟಕ್ಕೆ ಬಂದಿರುವ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಬೈಕ್ ಪವರ್‌ಟ್ರೇನ್‌ನಲ್ಲಿಯೂ ಯಾವುದೇ ಮಾರ್ಪಾಡುಗಳನ್ನು ಮಾಡಲಾಗಿಲ್ಲ. ಇದು 349 ಸಿಸಿ ಏರ್-ಕೋಲ್ಡ್ ಸಿಂಗಲ್-ಸಿಲಿಂಡರ್ ಜೆ-ಸೀರಿಯಸ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 20.4 ಬಿಹೆಚ್‍ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 27 ಎನ್ಎಂ (ನ್ಯೂಟನ್ ಮೀಟರ್) ಟಾರ್ಕ್ ಉತ್ಪಾದಿಸುತ್ತದೆ. 5-ಸ್ಪೀಡ್ ಗೇರ್‌ಬಾಕ್ಸ್ ಆಯ್ಕೆಯನ್ನು ಒಳಗೊಂಡಿದೆ.

Royal Enfield Bullet 350 New Colour Variant Launched India Rs 1 74 Lakh Price Details

ನೂತನ ಬೈಕ್‌ನ ವೈಶಿಷ್ಟ್ಯಗಳನ್ನು (ಫೀಚರ್‌ಗಳು) ಸಹ ನವೀಕರಿಸಲಾಗಿಲ್ಲ. ಹ್ಯಾಲೊಜೆನ್ ಹೆಡ್‌ಲೈಟ್, ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಬಲ್ಬ್ ಟೈಪ್ ಇಂಡಿಕೇಟರ್‌ಗಳು, ಟೈಲ್ ಲೈಟ್ ಹಾಗೂ ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಸೇರಿದಂತೆ ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ. ಬರೊಬ್ಬರಿ 195 ಕೆಜಿ ತೂಕವಿದ್ದು, 13 ಲೀಟರ್ ಸಾಮರ್ಥ್ಯದ ಫ್ಯುಯೆಲ್ (ಇಂಧನ) ಟ್ಯಾಂಕ್‌ನ್ನು ಒಳಗೊಂಡಿದೆ.

ಹೊಸ ಬುಲೆಟ್ 350 ಮೋಟಾರ್‌ಸೈಕಲ್‌, ಮುಂಭಾಗ (ಫ್ರಂಟ್) 19-ಇಂಚು ಹಾಗೂ ಹಿಂಭಾಗ (ರೇರ್) 18-ಇಂಚಿನ ಸ್ಪೋಕ್ ವೀಲ್‌ಗಳನ್ನು ಪಡೆದಿದೆ. ಜೊತೆಗೆ ಮುಂದೆ 100-ಸೆಕ್ಷನ್ ಮತ್ತು ಹಿಂದೆ 120-ಸೆಕ್ಷನ್ ಟೈರ್‌ಗಳನ್ನು ಹೊಂದಿದೆ. ವೀಲ್‌ಬೇಸ್‌ 1390 ಎಂಎಂ, ಗ್ರೌಂಡ್ ಕ್ಲಿಯರೆನ್ಸ್ 170 ಎಂಎಂ ಮತ್ತು ಸೀಟ್ ಹೈಟ್ 805 ಎಂಎಂ ಇದೆ.

ಈ ಬೈಕ್ ಸವಾರರ ಸುರಕ್ಷತೆಯ ದೃಷ್ಟಿಯಿಂದ ಮುಂದೆ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂದೆ (ರೇರ್) ಟ್ವಿನ್ ಶಾಕ್ ಅಬ್ಸಾರ್ಬರ್ ಸಸ್ಪೆನ್ಷನ್ ಸೆಟಪ್ ಹೊಂದಿದೆ. ಮುಂಭಾಗ ಡಿಸ್ಕ್ ಹಾಗೂ ಹಿಂಭಾಗ ಡ್ರಮ್ ಬ್ರೇಕ್ ಆಯ್ಕೆಯನ್ನು ಒಳಗೊಂಡಿದೆ. ಈ ಮೋಟಾರ್‌ಸೈಕಲ್‌ಗೆ ಹೋಂಡಾ ಸಿಬಿ350 ಮತ್ತು ಜಾವಾ 350ಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, September 19, 2024, 17:10 [IST]
English summary
Royal enfield bullet 350 new colour variant launched india rs 1 74 lakh price details
Read more on royal enfield india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+