ರಾಯಲ್‌ ಎನ್‌ಫೀಲ್ಡ್‌ನ ಈ ಬೈಕ್‌ ಈಗಲೂ ಟಾಪ್‌: 650cc ಬೈಕ್‌ಗಳಿಗೂ ಅಲುಗಾಡಿಸಲಾಗುತ್ತಿಲ್ಲ ಇದನ್ನು!

ರಾಯಲ್‌ ಎನ್‌ಫೀಲ್ಡ್‌ ಬೈಕ್‌ಗಳೆಂದರೆ ಭಾರತೀಯರಿಗೆ ಒಂದು ರೀತಿಯ ಪ್ರೀತಿ. ಅದರಲ್ಲೂ ಕೆಲ ವರ್ಷಗಳಿಂದೀಚೆಗೆ ರಾಯಲ್‌ ಎನ್ಫೀಲ್ಡ್‌ ಸಹ ಗ್ರಾಹಕರ ಅಭಿರುಚಿಯನ್ನು ಅವಲೋಕಿಸಿಕೊಂಡು ಅವರಿಗೆ ಬೇಕಾದ ರೀತಿಯಲ್ಲಿ ಬೈಕ್‌ಗಳನ್ನು ಮಾರುಕಟ್ಟೆಗೆ ಬಿಡುತ್ತಿರುವುದು, ಭಾರತದಲ್ಲಿ ರಾಯಲ್‌ ಎನ್‌ಫೀಲ್ಡ್‌ನ ಅಭಿವೃದ್ದಿಗೆ ಮತ್ತಷ್ಟು ಸೊಪ್ಪು ಹಾಕುತ್ತಿದೆ ಎನ್ನುವುದು ಒಪ್ಪಲೇಬೇಕಾದ ವಿಚಾರ.

ನಿಮಗೆಲ್ಲಾ ತಿಳಿದಿರುವಂತೆ ರಾಯಲ್‌ ಎನ್‌ಫೀಲ್ಡ್‌ ಇತ್ತೀಚೆಗೆ ಹಲವು ಬೈಕ್ ಮಾದರಿಗಳನ್ನು ಮಾರುಕಟ್ಟೆಗೆ ತಂದಿದೆ. ಅಡ್ವೆಂಚರ್‌ ವಿಭಾಗದಲ್ಲಿ ಹಿಮಾಲಯನ್‌ ಇದ್ದರೆ, ರೆಟ್ರೋ ಕೆಫೆ ರೇಸರ್‌ ವಿಭಾಗದಲ್ಲಿ ಕಾಂಟಿನೆಂಟಲ್‌ ಜಿಟಿ 650 ಬೈಕ್‌ ಇದೆ. ರಾಯಲ್‌ ಎನ್‌ಫೀಲ್ಡ್‌ ಯಾವುದೇ ಮಾದರಿಯಲ್ಲಿ ಬೈಕ್‌ ಅನ್ನು ಮಾರುಕಟ್ಟೆಗೆ ತಂದರೂ, ಅಲುಗಾಡದೆ ಕಲ್ಲಿನಂತೆ ನಿಂತಿರುವ ಬೈಕ್‌ ಎಂದರೆ ಅದು ಕ್ಲಾಸಿಕ್‌ 350.

Royal Enfield Classic 350 Tops April Sales Numbers In India

ಹೌದು, ಆಕರ್ಷಕ ರೆಟ್ರೋ ಲುಕ್‌ನಿಂದ ಕೂಡಿರುವ classic 350 ಈಗಲೂ ಸಹ ರಾಯಲ್‌ ಎನ್‌ಫೀಲ್ಡ್‌ ಮಾರಾಟ ಮಾಡುವ ಬೈಕ್‌ಗಳಲ್ಲಿ ಅಗ್ರ ಸ್ಥಾನದಲ್ಲಿದೆ. ಇದಕ್ಕೆ ಇತ್ತೀಚೆಗೆ ಬಂದಿರುವ ಎಪ್ರಿಲ್‌ ತಿಂಗಳ ಮಾರಾಟದ ಸಂಖ್ಯೆಯೂ ಸಹ ಇದಕ್ಕೆ ಇಂಬು ನೀಡುತ್ತದೆ. ಎಪ್ರಿಲ್‌ ತಿಂಗಳ ಮಾರಾಟದ ಪ್ರಕಾರ 29476 ಯೂನಿಟ್‌ ರಾಯಲ್‌ ಎನ್‌ಫೀಲ್ಡ್‌ ಕ್ಲಾಸಿಕ್‌ ೩೫೦ ಮಾರಾಟವಾಗಿ ಉಳಿದೆಲ್ಲಾ ಮಾದರಿಗಳನ್ನು ಹಿಂದಿಕ್ಕಿದೆ.

ಈ ಬೈಕ್‌ನ ನಂತರದ ಸ್ಥಾನವನ್ನು ರಾಯಲ್‌ ಎನ್‌ಫೀಲ್ಡ್ ಹಂಟರ್ ಪಡೆದುಕೊಂಡಿದೆ. classic 350 ಕಳೆದ ವರ್ಷದ ಎಪ್ರಿಲ್‌ ತಿಂಗಳಿಗೆ ಹೋಲಿಕೆ ಮಾಡಿದರೆ ಸುಮಾರು ಹತ್ತು ಶತಮಾನದಷ್ಟು ಮಾರಾಟದಲ್ಲಿ ಅಭಿವೃದ್ದಿಯನ್ನು ಹೊಂದಿದೆ. ರಾಯಲ್‌ ಎನ್ಫೀಲ್ಡ್‌ ಬೈಕ್‌ಗಳ ಪೈಕಿ ಸುಮಾರು 39% ಮಾರಾಟವನ್ನು classic 350 (Royal Enfield Classic 350) ಪಡೆದುಕೊಂಡಿದೆ.

ರಾಯಲ್‌ ಎನ್‌ಫೀಲ್ಡ್‌ 650 ಸಿಸಿ ಟ್ವಿನ್‌ ಸಿಲಿಂಡರ್‌ ಬೈಕ್‌ಗಳನ್ನು ಬಿಟ್ಟರೂ ಸಹ ಈ ಕ್ಲಾಸಿಕ್‌ ಬೈಕ್‌ನ ಪ್ರಸಿದ್ದಿ ಮಾತ್ರ ಎಳ್ಳಷ್ಟೂ ಕಮ್ಮಿಯಾಗಿಲ್ಲ. ಇದಕ್ಕೆ ಈ ಬೈಕ್‌ ನೀಡುವ ಪರ್ಫಾಮೆನ್ಸ್‌ ಮತ್ತು ಆರಾಮದಾಯಕ ಪ್ರಯಾಣದ ಅನುಭವವೇ ಪ್ರಮುಖ ಕಾರಣ ಎಂಬುದು ಆಟೋಮೊಬೈಲ್‌ ಪಂಡಿತರ ಅಭಿಪ್ರಾಯ. ಇನ್ನು ನಾವು ಈ ಬೈಕ್‌ನ ಇತರ ವಿಶೇಷತೆಗಳನ್ನು ನೋಡೋಣ.

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 (Royal Enfield Classic 350) ಬೈಕಿನಲ್ಲಿ ಎಲ್ಇಡಿ ಹೆಡ್‌ಲ್ಯಾಂಪ್‌ಗಳ ಬದಲಾಗಿ ಹಾಲೊಜೆನ್ ಬಲ್ಬ್ ಬಳಕೆ ಮಾಡಿದೆ. ಇದರ ಹೆಡ್‌ಲ್ಯಾಂಪ್ ಮಾತ್ರವಲ್ಲ ಟೈಲ್ ಲ್ಯಾಂಪ್, ಟರ್ನ್ ಇಂಡಿಕೇಟರ್ ಹಾಲೊಜೆನ್ ಬಲ್ಬ್ ಸಹ ನೀಡಿದೆ, ಕಂಪನಿಯು ಹೊಸ ಬೈಕ್ ಮಾದರಿಯನ್ನು ಸಿಂಗಲ್ ಕ್ರೆಡಲ್ ಫ್ರೆಮ್ ಬದಲಾಗಿ ಡ್ಯುಯಲ್ ಡೌನ್ ಟ್ಯೂಬ್ ಚಾರ್ಸಿ‌ಯೊಂದಿಗೆ ಅಭಿವೃದ್ದಿಗೊಳಿಸಿದೆ.

ರಾಯಲ್ ಎನ್‌ಫೀಲ್ಡ್ ಕಂಪನಿಯು ಈ ಕ್ಲಾಸಿಕ್ 350 ಬೈಕ್ ಮಾದರಿಯಲ್ಲಿ ಮಿಟಿಯೊರ್ 350 ಮಾದರಿಗಾಗಿ ಪರಿಚಯಿಸಿರುವ 349 ಸಿಸಿ SOHC ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 19.1 ಬಿಎಚ್‌ಪಿ ಪವರ್ ಮತ್ತು 28 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ.

ಇನ್ನು ಈ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ಕ್ರೋಮ್ ರೆಡ್, ಕ್ರೋಮ್ ಬ್ರೊಂಜ್, ಡಾರ್ಕ್ ಸ್ಟೆಲ್ತ್ ಬ್ಲ್ಯಾಕ್, ಡಾರ್ಕ್ ಗನ್‌ಮೆಟಲ್ ಗ್ರೇ, ಸಿಗ್ನಲ್ಸ್ ಮಾರ್ಷ್ ಗ್ರೇ, ಸಿಗ್ನಲ್ಸ್ ಸ್ಯಾಂಡ್ ಸ್ಟಾರ್ಮ, ಹಾಲ್ಸಿಯಾನ್ ಗ್ರೀನ್, ಹಾಲ್ಸಿಯಾನ್ ಬ್ಲ್ಯಾಕ್, ಹಾಲ್ಸಿಯಾನ್ ಗ್ರೇ, ರೆಡ್‌ಡಿಚ್ ಗ್ರೀನ್ ಮತ್ತು ರೆಡ್‌ಡಿಚ್ ಗ್ರೇ ಎಂಬ ಬಣ್ಣಗಳನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.

More from DriveSpark

Article Published On: Wednesday, May 22, 2024, 16:31 [IST]
English summary
Royal enfield classic 350 tops april sales numbers in india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+