Royal Enfield: ಗುಡ್‌ನ್ಯೂಸ್.. ನೂತನ ರಾಯಲ್ ಎನ್‌ಫೀಲ್ಡ್ ಬೈಕ್ ಬಿಡುಗಡೆ, ಯಾವುದು.. ಬೆಲೆ ಇಷ್ಟೇನಾ?
ಚೆನ್ನೈ ಮೂಲದ ರಾಯಲ್ ಎನ್‌ಫೀಲ್ಡ್ (Royal Enfield) ಪ್ರೀಮಿಯಂ ಮೋಟಾರ್‌ಸೈಕಲ್ ತಯಾರಿಸುವ ಮೂಲಕ ಮನೆ ಮಾತಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿರುವ ವಿವಿಧ ಬೈಕ್‌ಗಳನ್ನು ಮಾರಾಟಗೊಳಿಸುತ್ತಿದೆ. ಗೋವಾದಲ್ಲಿ ಏರ್ಪಡಿಸಿರುವ 'ಮೋಟೋವರ್ಸ್ 2024' ಕಾರ್ಯಕ್ರಮದಲ್ಲಿ ಶನಿವಾರ ಕಂಪನಿಯು ನೂತನ ಗೋವಾನ್ ಕ್ಲಾಸಿಕ್ 350 (Goan Classic 350) ಮೋಟಾರ್‌ಸೈಕಲ್‌ನ್ನು ಬಿಡುಗಡೆಗೊಳಿಸಿದೆ. ಬನ್ನಿ.. ಈ ಬೈಕ್ ಬೆಲೆ ಹಾಗೂ ವಿಶೇಷತೆ ಕುರಿತಂತೆ ಸಂಪೂರ್ಣವಾದ ಮಾಹಿತಿ ತಿಳಿಯೋಣ.
ಬೆಲೆ (Price): ಹೊಚ್ಚ ಹೊಸ ರಾಯಲ್ ಎನ್‌ಫೀಲ್ಡ್ ಗೋವಾನ್ ಕ್ಲಾಸಿಕ್ 350 (Royal Enfield Goan Classic 350) ಬೈಕ್ ಸ್ಪರ್ಧಾತ್ಮಕ ಬೆಲೆಯಲ್ಲಿ ಮಾರಾಟಕ್ಕೆ ಬಂದಿದೆ. ಇದು ರೂ.2.35 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಜೊತೆಗೆ ವಿವಿಧ ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿಯೂ
ಖರೀದಿಗೆ ದೊರೆಯುತ್ತದೆ.

ವಿನ್ಯಾಸ (Design): ಈ ಮೋಟಾರ್‌ಸೈಕಲ್ ಆಕರ್ಷಕವಾದ ವಿನ್ಯಾಸವನ್ನು ಪಡೆದಿದೆ. ಎಲ್ಇಡಿ ಟೈಲ್ ಲ್ಯಾಂಪ್, ಎಲ್ಇಡಿ ಟರ್ನ್ ಇಂಡಿಕೇಟರ್‌ಗಳು, ಅಡ್ಜೆಸ್ಟೇಬಲ್ ಕ್ಲಚ್ & ಬ್ರೇಕ್ ಲಿವರ್‌ಗಳನ್ನು ಹೊಂದಿದೆ. 'ಟಿಯರ್ ಡ್ರಾಪ್' ಹೋಲಿಕೆಯಾಗುವ ಫ್ಯುಯೆಲ್ ಟ್ಯಾಂಕ್, ಕರ್ವ್ ಫೆಂಡರ್‌ಗಳು, 'ಏಪ್-ಹ್ಯಾಂಗರ್' ರೀತಿಯಲ್ಲಿರುವ ಹ್ಯಾಂಡಲ್‌ಬಾರ್‌ಗಳು, ಫ್ಲೋಟಿಂಗ್ ಸೀಟ್ ಮತ್ತು ಫಾರ್ವರ್ಡ್-ಸೆಟ್ ಫುಟ್‌ಪೆಗ್‌ಗಳನ್ನು ಒಳಗೊಂಡಿದೆ.
ನೂತನ ಗೋವಾನ್ ಕ್ಲಾಸಿಕ್ 350 ಬೈಕ್ 2,130 ಎಂಎಂ ಉದ್ದ, 825 ಎಂಎಂ ಅಗಲ ಹಾಗೂ 1,200 ಎಂಎಂ ಎತ್ತರವೂ ಇದೆ. 1,400 ಎಂಎಂ ಉದ್ದದ ವೀಲ್‌ಬೇಸ್‌ನ್ನು ಒಳಗೊಂಡಿದೆ. ಮುಂಭಾಗ (ಫ್ರಂಟ್) 19-ಇಂಚಿನ ವೀಲ್ & 100/90-1 ಅಳತೆಯ ಟೈರ್‌ನ್ನು ಹೊಂದಿದೆ. ಹಿಂಭಾಗ (ರೇರ್) 16-ಇಂಚಿನ ವೀಲ್ & 30/90-16 ಅಳತೆಯ ಟೈರ್‌ನ್ನು ಪಡೆದಿದೆ. ಸರಿ ಸುಮಾರು 197 ಕೆಜಿ ತೂಕವಿದೆ.

ವೈಶಿಷ್ಟ್ಯಗಳು (Features): ಹೊಸ ಮೋಟಾರ್‌ಸೈಕಲ್ ಹತ್ತಾರು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ ಸೆಮಿ-ಡಿಜಿಟಲ್ ಕನ್ಸೋಲ್ ಅನ್ನು ಪಡೆದಿದೆ. ಇದು ಟ್ರಿಪ್ಪರ್ ನ್ಯಾವಿಗೇಷನ್, ಫ್ಯೂಯೆಲ್ ಲೆವೆಲ್ ಸೇರಿದಂತೆ ಹೆಚ್ಚಿನ ವಿವರಗಳನ್ನು ನೋಡಲು ಅನುಮತಿಸುತ್ತದೆ.
ಕಾರ್ಯಕ್ಷಮತೆ (Performance): ಈ ಬೈಕ್ 349 ಸಿಸಿ ಏರ್-ಕೋಲ್ಡ್ ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. 20.2 ಬಿಹೆಚ್‍ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 4,000 ಆರ್‌ಪಿಎಂನಲ್ಲಿ 27 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 36.2 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿದೆ.

ಸಸ್ಪೆನ್ಷನ್ ಸೆಟಟ್ & ಬ್ರೇಕಿಂಗ್ ಸಿಸ್ಟಮ್ (Suspension Setup And Braking System): ನೂತನ ಮೋಟಾರ್‌ಸೈಕಲ್ ಮುಂಭಾಗ (ಫ್ರಂಟ್) 41 ಎಂಎಂ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗ (ರೇರ್) 6-ಸ್ಟೆಪ್ಸ್ ಟ್ವಿನ್ ಶಾಕ್ಸ್ ಸಸ್ಪೆನ್ಷನ್ ಸೆಟಪ್ ಒಳಗೊಂಡಿದೆ. ಮುಂದೆ (ಫ್ರಂಟ್) 300 ಎಂಎಂ ಹಾಗೂ ಹಿಂದೆ (ರೇರ್) 270 ಎಂಎಂ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ. ಜೊತೆಗೆ ಡುಯಲ್-ಚಾನೆಲ್ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಅನ್ನು ಪಡೆದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








