ರಾಯಲ್ ಎನ್‌ಫೀಲ್ಡ್ ಬತ್ತಳಿಕೆಗೆ ಹೊಸ ಬ್ರಹ್ಮಾಸ್ತ್ರ: ಆಕರ್ಷಕ ಟೀಸರ್ ಬಿಡುಗಡೆ
ಭಾರತದಲ್ಲಿ ರಾಯಲ್ ಎನ್‌ಫೀಲ್ಡ್ (Royal Enfield) ಜನಪ್ರಿಯ ಪ್ರೀಮಿಯಂ ಮೋಟಾರ್‌ಸೈಕಲ್ ಬ್ರ್ಯಾಂಡ್ ಆಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಗೆ ಉತ್ತಮ ಬೇಡಿಕೆಯನ್ನು ಹೊಂದಿದೆ. ಇದೀಗ ರಾಯಲ್ ಎನ್‌ಫೀಲ್ಡ್ ಕಂಪನಿಯು ತನ್ನ ಜನಪ್ರಿಯ ಕ್ಲಾಸಿಕ್ 350 ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದ ಬಾಬರ್-ಶೈಲಿಯ ಬೈಕ್ ಹೊಸ ರಾಯಲ್ ಎನ್‌ಫೀಲ್ಡ್ ಗೋವಾನ್ ಕ್ಲಾಸಿಕ್ 350 (Royal Enfield Goan Classic 350) ಮಾದರಿಯ ಟೀಸರ್ ಅನ್ನು ಬಿಡುಗಡೆಗೊಳಿಸಿ ಹೊಸ ಬಿರುಗಾಳಿ ಎಬ್ಬಿಸಿದೆ. ಈ ಮಾದರಿಯು ನವೆಂಬರ್ 22-24 ರಿಂದ ಗೋವಾದ ವಾಗೇಟರ್‌ನಲ್ಲಿ 2024ರ ರಾಯಲ್ ಎನ್‌ಫೀಲ್ಡ್ ಮೋಟೋವರ್ಸ್‌ನಲ್ಲಿ ಅನಾವರಣಗೊಳ್ಳಲಿದೆ.
ರಾಯಲ್ ಎನ್‌ಫೀಲ್ಡ್ ಜೆ-ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾದ ಐದನೇ ಬೈಕ್ ಇದಾಗಿದೆ. ಇದಕ್ಕೂ ಮೊದಲು ಈ ಪ್ಲಾಟ್‌ಫಾರ್ಮ್‌ನಲ್ಲಿ ಮೆಟಿಯೊರ್ 350, ಹಂಟರ್ , ಕ್ಲಾಸಿಕ್ ಮತ್ತು ಬುಲೆಟ್ ಬೈಕ್ ಗಳಾಗಿವೆ. ಟೀಸರ್ ನಲ್ಲಿ ರಾಯಲ್ ಎನ್‌ಫೀಲ್ಡ್ ಗೋವಾನ್ ಕ್ಲಾಸಿಕ್ 350 ಬೈಕಿನ ವಿನ್ಯಾಸದ ಭಾಷೆಗೆ ಸಮಗ್ರ ನೋಟವನ್ನು ಬಹಿರಂಗಪಡಿಸಿದೆ. ಈ ಹೊಸ ಬೈಕ್ ಸಿಂಗಲ್ ಸೀಟ್ ಸೆಟಪ್ ಮತ್ತು ಮುಂಭಾಗ ಮತ್ತು ಹಿಂಭಾಗದಲ್ಲಿ ವಿಶಾಲವಾದ ಫೆಂಡರ್‌ಗಳೊಂದಿಗೆ ವಿಶಿಷ್ಟವಾದ ಬಾಬರ್ ಶೈಲಿಯನ್ನು ಹೊಂದಿದೆ.

ಈ ಹೊಸ ಬೈಕಿನಲ್ಲಿ ವಿಶಿಷ್ಟವಾದ ಯು- ಆಕಾರದ ಹ್ಯಾಂಡಲ್‌ಬಾರ್ ಮತ್ತು ಕ್ಲಾಸಿಕ್ ರೌಂಡ್ ಹೆಡ್‌ಲ್ಯಾಂಪ್ ವಿನ್ಯಾಸವು ರೆಟ್ರೊ ಆಕರ್ಷಣೆಗೆ ಸೇರಿಸಲಾಗಿದೆ. ಆದರೆ ಟಿಯರ್-ಡ್ರಾಪ್ ಆಕಾರದ ಫ್ಯೂಯಲ್ ಟ್ಯಾಂಕ್ ಕ್ಲಾಸಿಕ್ ಲುಕ್ ಅನ್ನು ನೀಡುತ್ತದೆ. ಈ ಗೋವಾನ್ ಕ್ಲಾಸಿಕ್ 350 ಹೆಚ್ಚು ಆರಾಮವಾಗಿರುವ ರೈಡಿಂಗ್ ಪೋಷಿಶನ್ ಗಾಗಿ ಫಾರ್ವರ್ಡ್-ಸೆಟ್ ಫೂಟ್ ಪೆಗ್‌ಗಳೊಂದಿಗೆ ಮತ್ತು ಫ್ರೇಮ್‌ನೊಂದಿಗೆ ಆಯ್ಕೆಯ ಪಿಲಿಯನ್ ಸೀಟ್‌ನೊಂದಿಗೆ ಬರುತ್ತದೆ.
ಟೀಸರ್ ಚಿತ್ರಗಳಲ್ಲಿ, ರಾಯಲ್ ಎನ್‌ಫೀಲ್ಡ್ ಹೊಸ ರಾಯಲ್ ಎನ್‌ಫೀಲ್ಡ್ ಲೋಗೋದೊಂದಿಗೆ ವಿವಿಧ ಬಣ್ಣಗಳ ಆಯ್ಕೆಗಳಲ್ಲಿ ಹೊಂದಿರಲಿವೆ. ವಿನ್ಯಾಸವನ್ನು ನೋಡಿದರೆ ಇತ್ತೀಚಿನ ರಾಯಲ್ ಎನ್‌ಫೀಲ್ಡ್ ಮಾದರಿಗಳಾದ ಗೆರಿಲ್ಲಾ 450 ಮತ್ತು ಇಂಟರ್‌ಸೆಪ್ಟರ್ ಬೇರ್ 650 ಗಳಲ್ಲಿ ಕಂಡುಬರುವಂತಹ ವಿನ್ಯಾಸ ಶೈಲಿಯನ್ನು ಹೊಂದಿದೆ ಎಂದು ಹೇಳಬಹುದು.

ಹೊಸ ರಾಯಲ್ ಎನ್‌ಫೀಲ್ಡ್ ಬೈಕಿನ ಟೈರ್‌ಗಳೊಂದಿಗೆ ಅಳವಡಿಸಲಾದ ಸ್ಪೋಕ್ಡ್ ವೀಲ್‌ಗಳ ಸೇರ್ಪಡೆಯು ಅದರ ಓಲ್ಡ್ ಸ್ಕೂಲ್ ಚಾರ್ಮ್ ಅನ್ನು ನೀಡುತ್ತದೆ. ಈ ರಾಯಲ್ ಎನ್‌ಫೀಲ್ಡ್ ಗೋವಾನ್ ಕ್ಲಾಸಿಕ್ 350 ಬೈಕಿನಲ್ಲಿ ಅದರ ಆಕ್ಸೆಸರಿ ಪ್ಯಾಕೇಜ್‌ನ ಭಾಗವಾಗಿ ಎತ್ತರದ ವಿಂಡ್‌ಸ್ಕ್ರೀನ್‌ನೊಂದಿಗೆ ಬರಲಿದೆ ಎಂದು ಹೇಳಲಾಗುತ್ತಿದೆ.
ಈ ಹೊಸ ಬೈಕಿನಲ್ಲಿ J-ಪ್ಲಾಟ್‌ಫಾರ್ಮ್‌ನ 349cc ಏರ್-ಕೂಲ್ಡ್, ಸಿಂಗಲ್-ಸಿಲಿಂಡರ್ ಎಂಜಿನ್ ನೊಂದಿಗೆ ಬರಲಿದೆ. ಈ ಎಂಜಿನ್ 6,100 rpm ನಲ್ಲಿ 20.2 hp ಮತ್ತು 4,000 rpm ನಲ್ಲಿ 27 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಸ್ಥಿರ ಮೆಶ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.
ಹೊಸ ರಾಯಲ್ ಎನ್‌ಫೀಲ್ಡ್ ಬೈಕಿನ ಸಸ್ಪೆಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳನ್ನು ಮತ್ತು ಹಿಂಭಾಗದಲ್ಲಿ ಟ್ವಿನ್ ಶಾಕ್ ಅಬ್ಸಾರ್ಬರ್‌ಗಳನ್ನು ಒಳಗೊಂಡಿರುತ್ತದೆ. ಇನ್ನು ಪ್ರಮುಖವಾಗಿ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲೂ ಡಿಸ್ಕ್ ಬ್ರೇಕ್ ಅನ್ನು ನೀಡಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








