ರಾಯಲ್ ಎನ್‌ಫೀಲ್ಡ್‌ನ ಗೆರಿಲ್ಲಾ 450: ಹಿಮಾಲಯನ್‌ಗೂ ಇದಕ್ಕೂ ಇರುವ ವ್ಯತ್ಯಾಸ ಏನು ಗೊತ್ತಾ?
ನಾವೆಲ್ಲಾ ನಿರೀಕ್ಷೆಯೂ ಮಾಡದ ರೀತಿಯಲ್ಲಿ ರಾಯಲ್ ಎನ್‌ಫೀಲ್ಡ್ ಹೊಸ ಬೈಕ್ ಒಂದನ್ನು ಬಿಡುಗಡೆ ಮಾಡಿದೆ. ಹಲವು ದಿನಗಳಿಂದ ರಾಯಲ್ ಎನ್‌ಫೀಲ್ಡ್ ಹೊಸ ಬೈಕ್ ಅನ್ನು ಲಾಂಚ್ ಮಾಡಲಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಇದೀಗ ಕಂಪನಿಯು ತನ್ನ ಹೊಸ ಬೈಕ್ ಆದ ರಾಯಲ್ ಎನ್‌ಫೀಲ್ಡ್ ಗೆರಿಲ್ಲಾ 450 ಎಂಬ ಬೈಕ್ ಅನ್ನು ಲಾಂಚ್ ಮಾಡಿದ್ದು, ಭಾರೀ ಸುದ್ದಿಯಾಗಿದೆ. ಸಾಧಾರಣವಾಗಿ ಅದ್ದೂರಿಯಾಗಿ ಬೈಕ್‌ಗಳನ್ನು ಲಾಂಚ್ ಮಾಡುತ್ತಿದ್ದ ರಾಯಲ್ ಎನ್‌ಫೀಲ್ಡ್ ಇದೀಗ ಸದ್ದಿಲ್ಲದೇ ಈ ಬೈಕ್ ಅನ್ನು ಲಾಂಚ್ ಮಾಡಿದೆ.
ಇನ್ನು ರಾಯಲ್ ಎನ್‌ಫೀಲ್ಡ್ ಗೆರಿಲ್ಲಾ 450 (Royal Enfield Guerrilla 450) ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.2.39 ಲಕ್ಷದಿಂದ ಆರಂಭವಾಗಿ ರೂ.2.54 ಲಕ್ಷಗಳಾಗಿದೆ. ಬಹುಶಃ 450 ಸಿಸಿ ಬೈಕ್ ಇಷ್ಟು ಅಗ್ಗದ ಬೆಲೆಗೆ ಬಿಡುಗಡೆಯಾಗಿರುವುದು ಇದೇ ಮೊದಲು. ಹಾಗಾಗಿ ಈ ಬೈಕ್ ಹೆಚ್ಚಿನ ಸಂಖ್ಯೆಯಲ್ಲಿ ಬಿಕರಿಯಾಗುವುದು ಪಕ್ಕಾ!

ನಿಮಗೆ ತಿಳಿದಿರಬೇಕಾದ ಪ್ರಮುಖ ವಿಚಾರವೆಂದರೆ ರಾಯಲ್ ಎನ್‌ಫಿಲ್ಡ್ ಹಿಮಾಲಯನ್ 450 ಬೈಕ್‌ನಲ್ಲಿರುವ ಅದೇ ಎಂಜಿನ್ ಅನ್ನು ಈ ಬೈಕ್‌ನಲ್ಲೂ ಕಂಪನಿ ಬಳಸಿದ್ದು, ಇಂದು ನಾವು ಈ ಗೆರಿಲ್ಲಾ 450 ಮತ್ತು ಹಿಮಾಲಯನ್ 450 ಬೈಕ್‌ಗಳ ಪವರ್ ಬಗ್ಗೆ ಮಾತನಾಡಲಿದ್ದು, ಯಾವುದು ಉತ್ತಮ ಎಂದು ನೋಡೋಣ.
ಹೊಸ ರಿಯಾಲ್ ಎನ್‌ಫೀಲ್ಡ್ ಗೆರಿಲ್ಲಾ 450 ಬೈಕಿನಲ್ಲಿ ಶೆರ್ಪಾ 452 ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 8,000 RPMನಲ್ಲಿ 39.50 Bhp ಪವರ್ ಮತ್ತು 5,500 RPMನಲ್ಲಿ 40 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಗೆರಿಲ್ಲಾ 450 ಬೈಕ್ ಸ್ಟೀಲ್ ಟ್ಯೂಬ್ಲಾರ್ ಫ್ರೇಮ್ ಹೊಂದಿದ್ದು, ಎಂಜಿನ್ ಒತ್ತಡವನ್ನು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.

ಹಿಮಾಲಯನ್ 450 ಬೈಕಿಗೆ ಹೋಲಿಸಿದರೆ ಗೆರಿಲ್ಲಾ 450 ಬೈಕ್ ವಿಭಿನ್ನ ಹಿಂಭಾಗದ ಸಬ್ ಫ್ರೇಮ್ ಅನ್ನು ಹೊಂದಿದೆ. ಮುಂಭಾಗದಲ್ಲಿ ಗೆರಿಲ್ಲಾ 450 43 ಎಂಎಂ ಟೆಲಿಸ್ಕೋಪಿಕ್ ಫೋರ್ಕ್ ಹೊಂದಿದ್ದು, ಹಿಂಭಾಗದಲ್ಲಿ ಇದು ಪ್ರಿಲೋಡ್ ಅಡ್ಜಸ್ಟ್ ಮಾಡಬಹುದಾದ ಮೊನೊಶಾಕ್ ಅನ್ನು ಹೊಂದಿದೆ. ಹಾಗೆಯೇ ಮುಂಭಾಗದಲ್ಲಿ 310 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 270 ಎಂಎಂ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ.
ಇನ್ನು ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕ್ ಬಗ್ಗೆ ನೋಡುವುದಾದರೆ, ED ಲೈಟಿಂಗ್, ರೈಡ್ ಬೈ ವೈರ್, ಸ್ವಿಚ್ ಮಾಡಬಹುದಾದ ABS, ನ್ಯಾವಿಗೇಷನ್ ಮತ್ತು ಬ್ಲೂಟೂತ್ ಸಂಪರ್ಕದೊಂದಿಗೆ ದೊಡ್ಡ ಮತ್ತು ವೃತ್ತಾಕಾರದ TFT ಸ್ಕ್ರೀನ್ ಅನ್ನು ಒಳಗೊಂಡಿದೆ.

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 ಹೊಸ 452 ಸಿಸಿ ಲಿಕ್ವಿಡ್ ಕೂಲ್ಡ್ DOHC ಸಿಂಗಲ್ ಸಿಲಿಂಡರ್ ಎಂಜಿನ್‌ನೊಂದಿಗೆ ಬಂದಿದೆ. ಈ ಎಂಜಿನ್ 40 bhp ಪವರ್ ಮತ್ತು 40 Nm ಟಾರ್ಕ್ ಉತ್ಪಾದಿಸಲು ಎಂಜಿನ್ ಅನ್ನು ಟ್ಯೂನ್ ಮಾಡಲಾಗಿದೆ. ಈ ಎಂಜಿನ್ ಅನ್ನು 6 ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








