ಒಂದು ತಿಂಗಳಲ್ಲೇ ಹೊಸ ಹಿಮಾಲಯನ್ ಬೆಲೆ ಏರಿಕೆ: ಸಂಪೂರ್ಣ ವಿವರ ನಿಮಗಾಗಿ!
ಬಿಡುಗಡೆಯಾಗಿ ಕೇವಲ ಒಂದು ತಿಂಗಳು ಕಳೆಯುವಷ್ಟರಲ್ಲಿ ರಾಯಲ್ ಎನ್‌ಫೀಲ್ಡ್ ತನ್ನ ಹೊಸ ಬೈಕಾದ ಹಿಮಾಲಯನ್‌ನ ಬೆಲೆಯನ್ನು ಏರಿಸಿದೆ. ಹೌದು, ಡಿಸೆಂಬರ್ 2023ನಲ್ಲಿ ರಾಯಲ್ ಎನ್‌ಫೀಲ್ಡ್ ಹಲವಾರು ಬದಲಾವಣೆಗಳೊಂದಿಗೆ ಹೊಸ ರಾಯಲ್ ಎನ್‌ಪೀಲ್ಡ್ ಹಿಮಾಲಯನ್ 450 ಯನ್ನು ಲಾಂಚ್ ಮಾಡಿತ್ತು. ಆದರೆ ಒಂದು ತಿಂಗಳ ಒಳಗೆ ಬೈಕ್‌ನ ಬೆಲೆ ಹೆಚ್ಚಾಗಿದೆ.
ಮಾಹಿತಿಗಳ ಪ್ರಕಾರ ಹೊಸ ಹಿಮಾಲಯನ್ ತನ್ನ ಮೂಲ ಬೆಲೆಗಿಂತ ಸುಮಾರು 14000 ರಿಂದ 16000 ರೂಗಳ ಬೆಲೆ ಏರಿಕೆ ಕಂಡಿದ್ದು, ಇದು ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಪ್ರೀಯರ ಬೇಸರಕ್ಕೆ ಕಾರಣವಾಗಿದೆ. ಇನ್ನು ಈ ಬೆಲೆ ಹಿಮಾಲಯನ್‌ನ ಎಲ್ಲಾ ವೇರಿಯಂಟ್‌ಗಳಿಗೂ ಸಹ ಅನ್ವಯಿಸುತ್ತದೆ ಎಂದು ಕಂಪನಿ ತಿಳಿಸಿದೆ. ಮಾರುಕಟ್ಟೆಗೆ ಲಾಂಚ್ ಆದಾಗ ಈ ಬೈಕ್‌ನ ಬೆಲೆ ಸುಮಾರು 2.69 ಲಕ್ಷಗಳಷ್ಟಿತ್ತು. ಈ ಬೆಲೆಯನ್ನು ಇಂಟ್ರೋಡಕ್ಟರಿ ಬೆಲೆಯಾಗಿ ರಾಯಲ್ ಎನ್‌ಫೀಲ್ಡ್ ಘೋಷಣೆ ಮಾಡಿತ್ತು.

ಇದೀಗ ಈ ಕಂಪನಿಯು ಬೈಕ್ ಮೇಲೆ ಇದ್ದ ಇಂಟ್ರೋಡಕ್ಟರಿ ಬೆಲೆಯನ್ನು ಕಡಿತಗೊಳಿಸಿದ್ದು ಇನ್ನು ಮುಂದೆ ರಾಯಲ್ ಎನ್‌ಫೀಲ್ಡ್ ಹೊಸ ಹಿಮಾಲಯನ್ ಕಂಪನಿ ನಿಗದಿಪಡಿಸಿದ ಹೊಸ ಬೆಲೆಗೆ ದೊರಕಲಿದೆ. ಕೂಡಲೇ ಹೊಸ ಬೆಲೆ ಅನ್ವಯವಾಗಲಿದ್ದು, ಗ್ರಾಹಕರು ಆಯ್ಕೆ ಮಾಡುವ ವೇರಿಯೆಂಟ್‌ಗೆ ಅನುಗುಣವಾಗಿ ಬೆಲೆ ನಿಗದಿಯಾಗಲಿದೆ ಎಂದು ತಿಳಿದು ಮೂಲಗಳು ತಿಳಿಸಿದೆ.
ರಾಯಲ್ ಎನ್‌ಫೀಲ್ಡ್ ಹಿಮಾಲಯನ್‌ನ ಕಾಝಾ ಬ್ಲಾಕ್ ಬಣ್ಣವು ಹೊಸ ಬೆಲೆಯಾದ 2.85 ಲಕ್ಷಗಳಿಂದ ಆರಂಭವಾಗಲಿದ್ದು ಇದರ ಟಾಪ್ ವೇರಿಯಂಟ್ ಆದ ಹಾನ್ಲೆ ಬ್ಲಾಕ್ ಬಣ್ಣವು ಸುಮಾರು 2.98 ಲಕ್ಷ ರೂಗಳಿಗೆ ಸಿಗಲಿದೆ. ಟಾಪ್ ವೇರಿಯಂಟ್ ಆದ ಕಾನ್ಲೆ ಬ್ಲಾಕ್‌ನ ಮೊದಲ ಬೆಲೆ ಸುಮಾರು 2.84 ಲಕ್ಷ ರೂಗಳಾಗಿತ್ತು. ಅಂದರೆ ಕಳೆದ ಬೆಲೆಗಿಂತ ಸುಮಾರು 14 ಸಾವಿರ ರೂಗಳಷ್ಟು ಬೆಲೆ ಹೆಚ್ಚಾಗಿದೆ.

ಇನ್ನು ಈ ಹೊಸ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬಗ್ಗೆ ನೊಡುವುದಾದರೆ ಈ ಬೈಕ್‌ನಲ್ಲಿ ಕಳೆದ ಬಾರಿಯ ಹಿಮಾಲಯನ್‌ಗಿಂತ ಹಲವಾರು ಬದಲಾಣೆಗಳನ್ನು ಕಾಣಬಹುದಾಗಿದೆ. ಅದು ಡಿಸೈನ್‌ನಲ್ಲಿ ಆಗಿರಬಹುದು ಅಥವಾ ಪರ್ಫಾಮೆನ್‌ನಲ್ಲಿ ಆಗಿರಬಹುದು. ಹೊಸ ಬೈಕ್‌ನಲ್ಲಿ ಆಗಿರುವಂತಹ ಬದಲಾವಣೆಗಳು ಹಿಮಾಲಯನ್ ಬೈಕ್‌ಗೆ ಹೊಸ ಹುರುಪನ್ನು ನೀಡಿದ್ದು ಅಡ್ವೆಂಚರ್ ಬೈಕ್ ಪ್ರೇಮಿಗಳ ಪ್ರಮುಖ ಬದಲಾವಣೆಗಳಾಗಿದೆ.
ಈ ಬೈಕ್‌ನ ಗಮನಾರ್ಹ ಫೀಚರ್‌ಗಳ ವಿಷಯಕ್ಕೆ ಬಂದರೆ ಫುಲ್ LED ಲೈಟಿಂಗ್, ರೈಡ್ ಬೈ ವೈರ್, ಸ್ವಿಚ್ ಮಾಡಬಹುದಾದ ABS, ನ್ಯಾವಿಗೇಷನ್ ಮತ್ತು ಬ್ಲೂಟೂತ್ ಸಂಪರ್ಕದೊಂದಿಗೆ ದೊಡ್ಡ ಮತ್ತು ವೃತ್ತಾಕಾರದ TFT ಸ್ಕ್ರೀನ್ ಅನ್ನು ಒಳಗೊಂಡಿದೆ. ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 ಭಾರತೀಯ ಮಾರುಕಟ್ಟೆಯಲ್ಲಿ KTM 390 ಅಡ್ವೆಂಚರ್‌ನೊಂದಿಗೆ ಸ್ಪರ್ಧಿಸಲಿದೆ.

ಈ ಹೊಸ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 ಹೊಸ 452 ಸಿಸಿ ಲಿಕ್ವಿಡ್ ಕೂಲ್ಡ್ DOHC ಸಿಂಗಲ್ ಸಿಲಿಂಡರ್ ಎಂಜಿನ್‌ನೊಂದಿಗೆ ಬಂದಿದೆ. ಈ ಎಂಜಿನ್ 40 bhp ಪವರ್ ಮತ್ತು 40 Nm ಟಾರ್ಕ್ ಉತ್ಪಾದಿಸಲು ಎಂಜಿನ್ ಅನ್ನು ಟ್ಯೂನ್ ಮಾಡಲಾಗಿದ್ದು ಈ ಎಂಜಿನ್ ಅನ್ನು 6 ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.
ಹೊಸ ಹಿಮಾಲಯನ್ 450 ನವೀಕೃತ ವಿಶೇಷತೆಗಳನ್ನು ನೋಡುವುದಾದರೆ, ಸ್ಲಿಪ್ಪರ್ ಕ್ಲಚ್ ಮತ್ತು ಅಸಿಸ್ಟ್ ಕ್ಲಚ್ ಸಹ ಸ್ಟ್ಯಾಂಡರ್ಡ್ ಆಗಿ ಬರಲಿದೆ. ಅದೇ ಸಮಯದಲ್ಲಿ ಈ ಬೈಕಿನ ತೂಕವು 196 ಕೆ.ಜಿ ಇರಲಿದೆ. ಇದಲ್ಲದೆ, ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 ಬೈಕ್‌ಗೆ ವಿವಿಧ ಸುಧಾರಿತ ವೈಶಿಷ್ಟ್ಯಗಳನ್ನು ಒದಗಿಸಲಾಗುವುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








