Royal Enfield: ನಾಳೆ ರಾಯಲ್ ಎನ್‌ಫೀಲ್ಡ್ ಮೊದಲ ಎಲೆಕ್ಟ್ರಿಕ್ ಬೈಕ್ ಪಾದಾರ್ಪಣೆ: ವಿಶೇಷತೆಗಳೇನು?

ರಾಯಲ್ ಎನ್‌ಫೀಲ್ಡ್ ತನ್ನ ಮೊದಲ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಅನ್ನು ನಾಳೆ (ನವೆಂಬರ್ 4) ಇಐಸಿಎಂಎ 2024 ರಲ್ಲಿ ಅನಾವರಣಗೊಳಿಸಲು ಸಜ್ಜಾಗಿದೆ. ಈ ಹೊಸ ರಾಯಲ್ ಎನ್‌ಫೀಲ್ಡ್ ಮೋಟಾರ್‌ಸೈಕಲ್‌ಗೆ ಕ್ಲಾಸಿಕ್ ಎಲೆಕ್ಟ್ರಿಕ್ ಎಂದು ಹೆಸರಿಡುವ ನಿರೀಕ್ಷೆಯಿದೆ. ಕಂಪನಿಯು ಇತ್ತೀಚೆಗೆ ಟೀಸರ್ ಕೂಡ ಬಿಡುಗಡೆ ಮಾಡಿತ್ತು, ಇದರಲ್ಲಿ ಮೋಟಾರ್‌ಸೈಕಲ್‌ನ ವಿನ್ಯಾಸವು ಬಹುತೇಕ ಬಹಿರಂಗೊಂಡಿದೆ. ವಿನ್ಯಾಸದ ದೃಷ್ಟಿಯಿಂದ, ಇದು ಸಾಂಪ್ರದಾಯಿಕ ವಿನ್ಯಾಸ ಅಂಶಗಳನ್ನು ಒಳಗೊಂಡ ನ್ಯೂ-ರೆಟ್ರೊ ರೋಡ್‌ಸ್ಟರ್ ಡಿಸೈನ್ ಹೊಂದಿದೆ. ಅಲ್ಲದೇ ವರ್ಷದ ಆರಂಭದಲ್ಲಿ ಕಂಪನಿ ಬಿಡುಗಡೆ ಮಾಡಿದ್ದ ಪೇಟೆಂಟ್ ಚಿತ್ರಗಳಲ್ಲಿ ಚಿತ್ರಿಸಲಾದ ಅದೇ ಮೋಟಾರ್‌ಸೈಕಲ್ ಅನ್ನು ಹೋಲುತ್ತಿದೆ.

ಡಿಸೈನ್ ಬಗ್ಗೆ ವಿವರವಾಗಿ ಹೇಳುವುದಾದ್ರೆ, ಮುಂಭಾಗದ ಫೋರ್ಕ್‌ಗಳು ವಿಶಿಷ್ಟ ವಿನ್ಯಾಸವನ್ನು ಹೊಂದಿದ್ದು, ಕ್ಲಾಸಿಕ್ ಗರ್ಡರ್ ಫೋರ್ಕ್‌ನ ಆಧುನಿಕ ವಿನ್ಯಾಸವನ್ನು ಹೋಲುತ್ತದೆ. ಎಲೆಕ್ಟ್ರಿಕ್ ನಿರ್ದಿಷ್ಟ ಡಿಸ್ಪ್ಲೇಗಳೊಂದಿಗೆ ಸಂಪೂರ್ಣ ಡಿಜಿಟಲ್ ರೌಂಡ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಪಡೆಯುವ ನಿರೀಕ್ಷೆಯಿದೆ. ಪ್ರಮುಖ ಸ್ಟೈಲಿಂಗ್ ವೈಶಿಷ್ಟ್ಯಗಳಲ್ಲಿ ರೌಂಡ್ ಹೆಡ್ ಲ್ಯಾಂಪ್, ಅಲಾಯ್ ವೀಲ್‌ಗಳು, ರೌಂಡ್ ಮಿರರ್‌ಗಳು ಮತ್ತು ಸಿಂಗಲ್ ಸೀಟ್ ನೀಡಲಾಗುವುದು.

royal-enfield-unveiling-first-electric-bike-on-nov-4th

ಟರ್ನ್ - ಬೈ - ಟರ್ನ್ ನ್ಯಾವಿಗೇಷನ್, ಬ್ಲೂಟೂತ್ ಸಂಪರ್ಕ, ಮ್ಯೂಸಿಕ್ ಕಂಟ್ರೋಲ್‌ಗಳು, ಸಂಪರ್ಕಿತ ವೈಶಿಷ್ಟ್ಯಗಳಂತಹ ಹೆಚ್ಚಿನವುಗಳನ್ನು ಪಡೆಯಲಿದೆ. ಹಾಗಯೇ ಕಂಪನಿಯ ಪೇಟೆಂಟ್ ಚಿತ್ರಗಳ ಪ್ರಕಾರ ಹೊಸ ರಾಯಲ್‌ ಎನ್‌ಫೀಲ್ಡ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಇತರ ಅನೇಕ ರಾಯಲ್‌ ಎನ್‌ಫೀಲ್ಡ್‌ ಮಾದರಿಗಳಂತೆಯೇ ಸಾಮಾನ್ಯವಾದ ಕ್ಲಾಸಿಕ್ ಟಿಯರ್ ಡ್ರಾಪ್ ಆಕಾರದ ಇಂಧನ ಟ್ಯಾಂಕ್ ಅನ್ನು ಪಡೆಯಲಿದೆ.

ರಾಯಲ್‌ ಎನ್‌ಫೀಲ್ಡ್‌ ಕಂಪನಿಯು ಬ್ಯಾಟರಿ ಮತ್ತು ಮೋಟರ್ ಬಗ್ಗೆ ಯಾವುದೇ ವಿವರಗಳನ್ನು ಬಹಿರಂಗಪಡಿಸಿಲ್ಲ. ಆದರೆ ಕಂಪನಿಯ ಪೇಟೆಂಟ್ ಚಿತ್ರಗಳಲ್ಲಿ ಮೋಟರ್ ಮೂಲಕ ಹಿಂಭಾಗದ ಚಕ್ರಕ್ಕೆ ಪವರ್ ಪುಷ್ ಮಾಡುವ ಬೆಲ್ಟ್ ಡ್ರೈವ್‌ನಂತೆ ಕಾಣುವುದನ್ನು ತೋರಿಸುತ್ತವೆ. ಇದು ಪಿಎಂಎಸ್ಎಂ ಮೋಟರ್‌ನೊಂದಿಗೆ ಜೋಡಿಸಲಾದ 5 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಅನ್ನು ಪಡೆಯುವ ನಿರೀಕ್ಷೆಯಿದೆ ಎಂಬುದು ನಮ್ಮ ನಿರೀಕ್ಷೆಯಾಗಿದೆ.

royal-enfield-unveiling-first-electric-bike-on-nov-4th

ಹೊಸ ರಾಯಲ್‌ ಎನ್‌ಫೀಲ್ಡ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ 50 ಪಿಎಸ್ ಪವರ್ ಮತ್ತು 100 ಎನ್ಎಂಗಿಂತ ಹೆಚ್ಚು ಟಾರ್ಕ್ ಹೊರಹಾಕುವ ನಿರೀಕ್ಷೆಯಿದೆ. ಸದ್ಯದ ಮಾರುಕಟ್ಟೆಯ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳಿಗೆ ಪ್ರಮುಖ ಪ್ರತಿಸ್ಪರ್ಧಿಯಾಗುವ ಗುರಿಯೊಂದಿಗೆ, ಕಂಪನಿಯು ಒಂದು ಪೂರ್ಣ ಚಾರ್ಜ್‌ನಲ್ಲಿ 150 ಕಿ.ಮೀ.ಗಿಂತ ಹೆಚ್ಚು ರೇಂಜ್ ನೀಡಬಲ್ಲ ಬ್ಯಾಟರಿಯನ್ನು ಇದರಲ್ಲಿ ನೀಡುವ ಸಾಧ್ಯತೆ ಇದೆ. ಹಾಗಯೇ 110 ರಿಂದ 120 ಕಿ.ಮೀ ಟಾಪ್‌ ಸ್ಪೀಡ್ ನಿರೀಕ್ಷಿಸಬಹುದು.

ಒಟ್ಟಾರೆ ಜನಪ್ರಿಯ ಹಿಮಾಲಯನ್ 450 ಬೈಕಿನ್ನು ಹೋಲುವ ಹೊಸ ಎಲೆಕ್ಟ್ರಿಕ್ ಆವೃತ್ತಿಯು ಈಗ ಅನಾವರಣಗೊಂಡರೆ, ಮುಂದಿನ ವರ್ಷ ಉತ್ಪಾದನೆಯಾಗುವ ಗುರಿಯನ್ನು ಹೊಂದಿದೆ. ಈ ಪ್ರಯತ್ನವು ರಾಯಲ್ ಎನ್‌ಫೀಲ್ಡ್ ತನ್ನ ಪೋರ್ಟ್ ಫೋಲಿಯೊವನ್ನು ವೈವಿಧ್ಯಗೊಳಿಸುವ ಮತ್ತು ಎಲೆಕ್ಟ್ರಿಕ್ ಚಲನಶೀಲತೆಯತ್ತ ಸಾಗುವ ಸಮರ್ಪಣೆಯನ್ನು ಸೂಚಿಸುತ್ತದೆ.

royal-enfield-unveiling-first-electric-bike-on-nov-4th

ರಾಯಲ್‌ ಎನ್‌ಫೀಲ್ಡ್ ಕಾರ್ಯತಂತ್ರವು ವಿಕಸನಗೊಳ್ಳುತ್ತಿರುವ ಗ್ರಾಹಕರ ಆದ್ಯತೆಗಳನ್ನು ಪೂರೈಸಲು ಮತ್ತು ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳು ಸೇರಿದಂತೆ ಹೊಸ ಮಾರುಕಟ್ಟೆ ವಿಭಾಗಗಳನ್ನು ಭೇದಿಸಲು ಪೂರ್ವಭಾವಿ ವಿಧಾನವನ್ನು ಒತ್ತಿಹೇಳುತ್ತದೆ. ಈ ಬೆಳವಣಿಗೆಗಳು ಮತ್ತು ನವೀಕರಣಗಳು ಸಾಂಪ್ರದಾಯಿಕ ಸಾಮರ್ಥ್ಯಗಳನ್ನು ನವೀನ ಉದ್ಯಮಗಳೊಂದಿಗೆ ಸಂಯೋಜಿಸುವ ಮೂಲಕ ಪ್ರಮುಖ ಮೋಟಾರ್ ಸೈಕಲ್ ತಯಾರಕರಾಗಿ ತಮ್ಮ ಸ್ಥಾನವನ್ನು ಭದ್ರಪಡಿಸುವ ಗುರಿಯನ್ನು ಹೊಂದಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬಧಿಸಿದ ಸುದ್ದಿಗಳನ್ನು ಒದಗಿಸುತ್ತದೆ. ಇನ್ನು ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಡ್ರೈವ್‌ ಸ್ಪಾರ್ಕ್ ಕನ್ನಡ ವೆಬ್‌ ಸೈಟ್‌ನಲ್ಲಿ ಪ್ರಚಾರವಾಗಿರುವ ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

More from DriveSpark

Article Published On: Sunday, November 3, 2024, 14:32 [IST]
English summary
Royal enfield unveiling first electric bike on nov 4th
Read more on royal enfield india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+