Tata: ಹೊಸ ಟಾಟಾ ಇ-ಬೈಕ್ ಬಿಡುಗಡೆ: ಎರಡು ವರ್ಷ ವಾರೆಂಟಿ: 1 ರೂ. ಖರ್ಚಿಲ್ಲದೆ 40 ಕಿ.ಮೀ ಓಡಿಸಿ!

ಟಾಟಾ ಗ್ರೂಪ್ (Tata Group) ಕಂಪನಿಯಾದ ಸ್ಟ್ರೈಡರ್ ಸೈಕಲ್ಸ್ ತನ್ನ ಇ-ಬೈಕ್ ಶ್ರೇಣಿಯಲ್ಲಿ ಹೊಸ ETB 200 ಎಂಬ ಹೊಸ ಮಾಡಲ್ ಅನ್ನು ಬಿಡುಗಡೆ ಮಾಡಿದೆ. ಇದನ್ನು ನಗರ ಪ್ರಯಾಣಿಕರ ಅನುಕೂಲಕ್ಕಾಗಿ ವಿನ್ಯಾಸಗೊಳಿಸಲಾಗಿದ್ದು, ಪ್ರಾಯೋಗಿಕ ಮತ್ತು ಸ್ಪ್ಲಾಶ್ - ಪ್ರೂಫ್ ಬಾಹ್ಯ ಬ್ಯಾಟರಿಯನ್ನು ನೀಡಲಾಗಿದೆ. ಆಸಕ್ತ ಗ್ರಾಹಕರು ಅಧಿಕೃತ ವೆಬ್‌ಸೈಟ್ ಅಥವಾ ಫ್ಲಿಪ್‌ಕಾರ್ಟ್‌ನಲ್ಲಿ ಸೀಮಿತ ಅವಧಿಗೆ ಶೇ18 ರಷ್ಟು ರಿಯಾಯಿತಿಯೊಂದಿಗೆ ರೂ. 33,595 ವಿಶೇಷ ಬೆಲೆಯಲ್ಲಿ ಖರೀದಿಸಬಹುದಾಗಿದೆ. ಹೊಸ ಇ-ಬೈಕ್ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

ಸ್ಟ್ರೈಡರ್ ETB 200 ಇ-ಬೈಕ್ ತನ್ನ 36V ಹೈ-ಪರ್ಫಾಮೆನ್ಸ್, ಸ್ಪ್ಲಾಶ್-ಪ್ರೂಫ್ ಬಾಹ್ಯ ಬ್ಯಾಟರಿಯೊಂದಿಗೆ ಬರುತ್ತದೆ. ಚಾರ್ಜಿಂಗ್‌ಗಾಗಿ ಸುಲಭವಾಗಿ ಬ್ಯಾಟರಿಯನ್ನು ತೆಗೆದುಹಾಕಲು ಸವಾರರಿಗೆ ಅನುಮತಿಸುತ್ತದೆ. ಕೇವಲ 4 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ, ಒಮ್ಮೆ ಸಂಪೂರ್ಣವಾಗಿ ಬ್ಯಾಟರಿಯನ್ನು ಚಾರ್ಜ್ ಮಾಡಿದ್ರೆ 40 ಕಿ.ಮೀ ಓಡುತ್ತದೆ. ಇದು ನಗರ ಪ್ರಯಾಣ ಮತ್ತು ವಾರಾಂತ್ಯದ ಪ್ರವಾಸಗಳಿಗೆ ಸೂಕ್ತವಾಗಿರುತ್ತದೆ ಎಂದು ಕಂಪನಿ ಹೇಳಿದೆ.

stryder-cycles-unveils-new-etb-200-e-bike-in-india

ಹೊಸ ಸ್ಟ್ರೈಡರ್ ETB 200 ಇ-ಬೈಕ್ ಸ್ವಯಂಚಾಲಿತ ಪವರ್ ಕಟ್ - ಆಫ್ ಸಿಸ್ಟಮ್‌ನೊಂದಿಗೆ ಸಸ್ಪೆನ್ಷನ್ ಫೋರ್ಕ್ ಮತ್ತು ಡ್ಯುಯಲ್ ಡಿಸ್ಕ್ ಬ್ರೇಕ್‌ಗಳಂತಹ ವರ್ಧಿತ ವೈಶಿಷ್ಟ್ಯಗಳು ಸುಗಮ ಮತ್ತು ಸುರಕ್ಷಿತ ಸವಾರಿ ಅನುಭವವನ್ನು ನೀಡುತ್ತವೆ. ಹಾಗೆಯೇ ಕಂಪನಿಯು ಹೊಸ ಸ್ಟ್ರೈಡರ್ ETB 200 ಇ-ಬೈಕ್ ಮೇಲೆ ಎರಡು ವರ್ಷಗಳ ವಾರೆಂಟಿಯನ್ನು ನೀಡುತ್ತಿರುವುದಾಗಿ ತಿಳಿಸಿದೆ.

ಭಾರತದ EV ಮಾರುಕಟ್ಟೆ ಬೆಳೆದಂತೆ, ಸ್ಟ್ರೈಡರ್‌ನ ವಿಸ್ತರಿತ ಇ-ಬೈಕ್ ಶ್ರೇಣಿಯು ದ್ವಿಚಕ್ರ ವಾಹನ ವಿಭಾಗದಲ್ಲಿ ಗಮನಾರ್ಹ ಬೆಳವಣಿಗೆಯನ್ನು ಕಾಣುತ್ತಿದೆ, ಸವಾರರಿಗೆ ಸಾಂಪ್ರದಾಯಿಕ ಬೈಸಿಕಲ್‌ನ ಜೊತೆಗೆ ಎಲೆಕ್ಟ್ರಿಕ್ ಪವರ್ ಸಹಾಯದ ಹೆಚ್ಚುವರಿ ಅನುಕೂಲದೊಂದಿಗೆ ಒದಗಿಸಲಾಗುತ್ತಿದೆ, ದೂರದ ಮತ್ತು ಸವಾಲಿನ ಭೂಪ್ರದೇಶಗಳನ್ನು ಸುಲಭವಾಗಿ ಇ-ಬೈಕ್‌ನಲ್ಲಿ ತಲುಪಬಹುದಾಗಿದೆ ಎಂದು ಕಂಪನಿ ಹೇಳಿದೆ.

stryder-cycles-unveils-new-etb-200-e-bike-in-india

ಸ್ಟ್ರೈಡರ್ ಸೈಕಲ್‌ನ ಬ್ಯುಸಿನೆಸ್ ಹೆಡ್ ರಾಹುಲ್ ಗುಪ್ತಾ ಮಾತನಾಡಿ, "ಎಲೆಕ್ಟ್ರಿಕ್ ಸೈಕಲ್‌ಗಳು ಭಾರತದ ಶಕ್ತಿ ಪರಿವರ್ತನೆಗೆ ಚಾಲನೆ ನೀಡಲು ಸಿದ್ಧವಾಗಿವೆ. ETB 200 ನೊಂದಿಗೆ, ನಮ್ಮ ಗ್ರಾಹಕರಿಗೆ ನವೀನ, ಬಳಕೆದಾರ ಸ್ನೇಹಿ ಮತ್ತು ಪರಿಸರ ಪ್ರಜ್ಞೆಯ ಉತ್ಪನ್ನಗಳನ್ನು ತರಲು ನಾವು ಬದ್ಧರಾಗಿದ್ದೇವೆ. ಈ ಮಾದರಿಯು ಅದರ ವಿಶಿಷ್ಟವಾದ ಬಾಹ್ಯ ಬ್ಯಾಟರಿಯೊಂದಿಗೆ, ಇಂದಿನ ನಗರ ಪ್ರಯಾಣಿಕರ ಅಗತ್ಯತೆಗಳಿಗೆ ನಮ್ಯತೆ ಮತ್ತು ಅನುಕೂಲತೆಯನ್ನು ಒದಗಿಸುತ್ತದೆ ಎಂದರು.

TATA ಗ್ರೂಪ್‌ನ ಪರಂಪರೆ ಮತ್ತು ನಮ್ಮ ಸುಸ್ಥಿರತೆಯ ಗುರಿಗಳನ್ನು ನಿರ್ಮಿಸುವ ಮೂಲಕ, ನಮ್ಮ ಇ-ಬೈಕ್‌ಗಳು ಗ್ರಾಹಕರಿಗೆ ಪರಿಸರ ಸ್ನೇಹಿ ಮತ್ತು ಆರೋಗ್ಯ - ಕೇಂದ್ರಿತ ಪರ್ಯಾಯವನ್ನು ಒದಗಿಸುತ್ತವೆ. ನಗರ ಪ್ರಯಾಣದ ಬೇಡಿಕೆಗಳನ್ನು ಪೂರೈಸುವುದರ ಜೊತೆಗೆ ನಗರದ ಟ್ರಾಫಿಕ್‌ನೊಂದಗೆ ಸಂಬಂಧವಿಲ್ಲದೆ ಸಣ್ಣ ದಾರಿಗಳಲ್ಲಿಯೂ ಇ-ಬೈಕ್ ಗಮ್ಯ ತಲುಪುವಲ್ಲಿ ಸಹಕರಿಸುತ್ತದೆ ಎಂದು ಕಂಪನಿ ಹೇಳಿದೆ.

ಸ್ಟ್ರೈಡರ್ ಬಗ್ಗೆ: ಸ್ಟ್ರೈಡರ್ ಸೈಕಲ್ ಪ್ರೈ. Ltd., TATA ಇಂಟರ್ನ್ಯಾಷನಲ್ ಲಿಮಿಟೆಡ್ (TIL)ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿದ್ದು, ಆಫ್ರಿಕಾದಲ್ಲಿ ವಿಶ್ವ ಬೈಸಿಕಲ್ ರಿಲೀಫ್‌ಗೆ ಗುಣಮಟ್ಟದ ಬೈಸಿಕಲ್‌ಗಳನ್ನು ಒದಗಿಸಲು ಪರೋಪಕಾರಿ ಮಿಷನ್‌ನೊಂದಿಗೆ ಸ್ಥಾಪಿಸಲಾಗಿದೆ. ಸತತ ಎರಡು ವರ್ಷಗಳಿಂದ ಅತ್ಯಂತ ವಿಶ್ವಾಸಾರ್ಹ ಬ್ರ್ಯಾಂಡ್ ಎಂದು ಗುರುತಿಸಲ್ಪಟ್ಟಿದೆ.

ಟಾಟಾ ಗ್ರೂಪ್ ಪರಂಪರೆಯಲ್ಲಿ ಬೇರೂರಿರುವ ಬ್ರ್ಯಾಂಡ್ ಹೊಸತನವನ್ನು ಒಳಗೊಂಡಿದೆ, ಇ-ಬೈಕ್‌ಗಳು, MTB, ಜೂನಿಯರ್, ಲೇಡೀಸ್ ಮತ್ತು ರೋಡ್‌ಸ್ಟರ್ ಬೈಸಿಕಲ್‌ಗಳು ಮತ್ತು ಅವುಗಳ ಪರಿಕರಗಳನ್ನು ಒಳಗೊಂಡಂತೆ ವೈವಿಧ್ಯಮಯ ಶ್ರೇಣಿಯ ಬೈಸಿಕಲ್‌ಗಳನ್ನು ಮಾರಾಟ ಮಾಡಲಾಗುತ್ತಿದೆ. ಕಂಪನಿಯು 2012 ರಲ್ಲಿ ಪ್ರಾರಂಭವಾದಾಗಿನಿಂದ ಭಾರತದಾದ್ಯಂತ 4,000ಕ್ಕೂ ಹೆಚ್ಚು ಮಳಿಗೆಗಳು ಹಾಗೂ ಸಾರ್ಕ್, ಆಫ್ರಿಕಾ ಮತ್ತು ಮಧ್ಯಪ್ರಾಚ್ಯ ದೇಶಗಳಿಗೆ ತನ್ನ ರಫ್ತುಗಳನ್ನು ಮಾಡುತ್ತಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, November 6, 2024, 18:04 [IST]
English summary
Stryder cycles unveils new etb 200 e bike in india
Read more on electric bike india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+