ರೈತರು, ಸಣ್ಣ ವ್ಯಾಪಾರಿಗಳಿಗೆ ಈ ಮೊಪೆಡ್‌ಗಳು ಉತ್ತಮ.. ರೂ.44,999 ಇದ್ರೆ ಮನೆಗೆ ತರಬಹುದು!
ರೈತ ದೇಶದ ಬೆನ್ನೆಲುಬಾಗಿದ್ದು, ಪ್ರತಿನಿತ್ಯ ಕೃಷಿ ಕಾಯಕದಲ್ಲಿ ತೊಡಗಿಕೊಂಡಿರುತ್ತಾರೆ. ಅದೇ ರೀತಿಯಲ್ಲಿ ಸಾವಿರಾರು ಜನರು ಬದುಕಿನ ಬಂಡಿ ಎಳೆಯಲು ಸಣ್ಣಪುಟ್ಟ ವ್ಯಾಪಾರ ಮಾಡುತ್ತಾರೆ. ಅಂಹತವರಿಗೆ ಈ ಜನಪ್ರಿಯ ಮೊಪೆಡ್‌ಗಳು ಸಾಕಷ್ಟು ನೆರವಾಗಲಿವೆ. ಜಾನುವಾರುಗಳಿಗೆ ಹುಲ್ಲು ಸಾಗಿಸಲು.. ಡೈರಿಗೆ ಹಾಲು ಹಾಕಲು.. ತರಕಾರಿ ಹಾಗೂ ಬಟ್ಟೆ ಸೇರಿದಂತೆ ವಿವಿಧ ಉತ್ಪನ್ನಗಳನ್ನು ಮಾರಾಟ ಮಾಡಲು ಟಿವಿಎಸ್ ಎಕ್ಸ್ಎಲ್100 (TVS XL100) ಮತ್ತು ಕೈನೆಟಿಕ್ ಇ-ಲೂನಾ (Kinetic E-Luna) ಸೂಕ್ತ ಆಯ್ಕೆಯಾಗಲಿವೆ. ಇಲ್ಲಿ ಹೊಸ ಮೊಪೆಡ್‌ಗಳ ಬೆಲೆ, ಮೈಲೇಜ್ ಹಾಗೂ ವಿಶೇಷತೆಗಳ ಕುರಿತಂತೆ ತಿಳಿಸಿಕೊಟ್ಟಿದ್ದೇವೆ.
ಟಿವಿಎಸ್ ಎಕ್ಸ್ಎಲ್100: ಇದು ಮಧ್ಯಮ ವರ್ಗದವರ ನೆಚ್ಚಿನ ಮೊಪೆಡ್ ಎಂದೇ ಖ್ಯಾತಿಗಳಿಸಿದೆ. ರೂ.44,999 ದಿಂದ ರೂ.58,724 ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಸಿಗುತ್ತದೆ. 99.7 ಸಿಸಿ ಸಿಂಗಲ್ ಸಿಲಿಂಡರ್ ಏರ್-ಕೋಲ್ಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 4.4 ಪಿಎಸ್ ಗರಿಷ್ಠ ಶಕ್ತಿ (ಪವರ್) ಹಾಗೂ 6.5 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. ಜೊತೆಗೆ 80 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ.

ಹೊಸ ಎಕ್ಸ್ಎಲ್100 ವೇಗ ಹಾಗೂ ಮೈಲೇಜ್ ಅಂಕಿಅಂಶವನ್ನು ತೋರಿಸಲು ಅನಲಾಗ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಮತ್ತು ಎಂಜಿನ್ ಕಿಲ್ ಸ್ವಿಚ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. 89 ಕೆಜಿ ತೂಕವಿರುವ ಈ ಮೊಪೆಡ್, 4 ಲೀಟರ್ ಸಾಮರ್ಥ್ಯದ ಫ್ಯುಯೆಲ್ (ಇಂಧನ) ಟ್ಯಾಂಕ್‌ನ್ನು ಒಳಗೊಂಡಿದೆ.
ಟಿವಿಎಸ್ ಎಕ್ಸ್ಎಲ್100 ಮೊಪೆಡ್ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗ (ರೇರ್) ಡುಯಲ್ ಶಾಕ್ ಅಬ್ಸಾರ್ಬರ್ ಸಸ್ಪೆಷನ್ ಸೆಟಪ್ ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ ಡ್ರಮ್ ಬ್ರೇಕ್‌ನ್ನು ಒಳಗೊಂಡಿದೆ. 16-ಇಂಚಿನ ಸ್ಪೋಕ್ ವೀಲ್‌ಗಳನ್ನು ಪಡೆದಿದೆ. ಗ್ರೇ-ಬ್ಲ್ಯಾಕ್ ಹಾಗೂ ರೆಡ್-ಬ್ಲ್ಯಾಕ್ ಒಳಗೊಂಡಂತೆ ಹಲವು ಬಣ್ಣಗಳೊಂದಿಗೂ ಸಿಗುತ್ತದೆ.

ಕೈನೆಟಿಕ್ ಇ-ಲೂನಾ: ಇದೊಂದು ಪ್ರಮುಖ ಎಲೆಕ್ಟ್ರಿಕ್ ಮೊಪೆಡ್ ಆಗಿದ್ದು, ಎಕ್ಸ್1 ಹಾಗೂ ಎಕ್ಸ್2 ಎಂಬ ಎರಡು ರೂಪಾಂತರ (ವೇರಿಯೆಂಟ್)ಗಳ ಆಯ್ಕೆಯನ್ನು ಹೊಂದಿದೆ. ಹೊಚ್ಚ ಹೊಸ ಕೈನೆಟಿಕ್ ಇ-ಲೂನಾ ಎಕ್ಸ್1 ಮಾದರಿಯು ರೂ.69,990 ಎಕ್ಸ್ ಶೋರೂಂ ಬೆಲೆಯಲ್ಲಿ ದೊರೆಯುತ್ತದೆ. 1.7 ಕೆಡಬ್ಲ್ಯೂಹೆಚ್ ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಪಡೆದಿದೆ. ಭರ್ತಿ ಚಾರ್ಜ್‌ನಲ್ಲಿ 90 ಕಿ.ಮೀ ಓಡುತ್ತದೆ.
ಕೈನೆಟಿಕ್ ಇ-ಲೂನಾ ಎಕ್ಸ್2 ರೂಪಾಂತರವು ರೂ.79,990 (ಎಕ್ಸ್ ಶೋರೂಂ) ದರವನ್ನು ಪಡೆದಿದೆ. 2 ಕೆಡಬ್ಲ್ಯೂಹೆಚ್ ಬ್ಯಾಟರಿಯನ್ನು ಹೊಂದಿದ್ದು, ಪೂರ್ತಿ ಚಾರ್ಜ್‌ನಲ್ಲಿ 110 ಕಿ.ಮೀ ರೇಂಜ್ (ಮೈಲೇಜ್) ನೀಡುತ್ತದೆ. 50 ಕೆಎಂಪಿಹೆಚ್ ಟಾಪ್ ಸ್ಪೀಡ್ ಹೊಂದಿದ್ದು, ಇದರ ಬ್ಯಾಟರಿ ಪ್ಯಾಕ್ 4 ಗಂಟೆಯಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗಿಬಿಡುತ್ತದೆ.

ಇವೆರೆಡು ಎಲೆಕ್ಟ್ರಿಕ್ ಲೂನಾ ರೂಪಾಂತರಗಳು ಪರ್ಲ್ ಯೆಲ್ಲೋ, ಮಲ್ಬೆರಿ ರೆಡ್, ಓಷನ್ ಬ್ಲೂ, ಸ್ಪಾರ್ಕ್ಲಿಂಗ್ ಗ್ರೀನ್ ಸೇರಿದಂತೆ 5 ಬಣ್ಣಗಳ ಆಯ್ಕೆಯಲ್ಲಿ ಕೂಡ ಸಿಗುತ್ತವೆ. 16-ಇಂಚಿನ ವೀಲ್‌ಗಳು, ಟೆಲಿಸ್ಕೊಪಿಕ್ ಫ್ರಂಟ್ ಸಸ್ಪೆನ್ಷನ್ ಸೆಟಪ್, ಡಿಜಿಟಲ್ ಮೀಟರ್, ಸ್ಯಾರಿ ಗಾರ್ಡ್, ಸೇಫ್ಟಿ ಲಾಕ್ ಒಳಗೊಂಡಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications