ಹೋಂಡಾ ಆಕ್ಟಿವಾ ನಂಬರ್ 1.. ಟಿವಿಎಸ್ ಜುಪಿಟರ್ ನಂಬರ್ 2.. ಓಲಾ ಎಸ್1 ಎಷ್ಟನೇ ಸ್ಥಾನ?

ಭಾರತ ಅತಿದೊಡ್ಡ ದ್ವಿಚಕ್ರ ವಾಹನ ಮಾರುಕಟ್ಟೆ ಹೊಂದಿದ್ದು, ಬೈಕ್‌ಗಳಂತೆ ಸ್ಕೂಟರ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ. ಇವು 'ಗೇರ್ ಲೆಸ್' ಆಗಿರುವುದರಿಂದ ಮಹಿಳೆಯರು ಹಾಗೂ ಪುರುಷರಿಗೆ ಇಷ್ಟವಾಗುತ್ತಿದ್ದು, ದಿನನಿತ್ಯದ ಬಳಕೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ತೆಗೆದುಕೊಳ್ಳುತ್ತಿದ್ದಾರೆ. ಇತ್ತೀಚೆಗೆ, 2024ರ ಜೂನ್​ ತಿಂಗಳ ಪ್ರಮುಖ ಸ್ಕೂಟರ್‌ಗಳ ಮಾರಾಟದ ಅಂಕಿಅಂಶಗಳು ಪ್ರಕಟಗೊಂಡಿತ್ತು. ಜನಪ್ರಿಯ ಹೋಂಡಾ ಆಕ್ಟಿವಾ ಮೊದಲ ಸ್ಥಾನದಲ್ಲಿ ಮುಂದುವರಿದಿದ್ದು, ಟಿವಿಎಸ್ ಜುಪಿಟರ್ ಎರಡನೇ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ ಓಲಾ ಎಸ್1, ಬಜಾಜ್ ಚೇತಕ್ ಹಾಗೂ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್‌ಗಳು ಕೂಡ ಸ್ಥಾನವನ್ನು ಪಡೆದಿವೆ.

ಹೋಂಡಾ ಆಕ್ಟಿವಾ (Honda Activa) ಪ್ರಖ್ಯಾತ ಸ್ಕೂಟರ್ ಆಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಗೊಳ್ಳುವ ಮೂಲಕ ಮೊದಲ ಸ್ಥಾನದಲ್ಲಿದೆ. ಜೂನ್​ನಲ್ಲಿ 2,33,376 ಯುನಿಟ್ ಆಕ್ಟಿವಾ ಸ್ಕೂಟರ್‌ಗಳನ್ನು ಮಾರಾಟ ಮಾಡಲಾಗಿದೆ. 2023ರ ಇದೇ ಅವಧಿಯಲ್ಲಿ ಮಾರಿದ 1,30,830 ಯುನಿಟ್‌ಗೆ ಹೋಲಿಕೆ ಮಾಡಿದರೆ, ವರ್ಷದಿಂದ ವರ್ಷಕ್ಕೆ ಶೇಕಡ 78.38% ಬೆಳವಣಿಗೆಯಾಗಿದೆ. ಈ ಆಕ್ಟಿವಾ ರೂ.78,624 (ಎಕ್ಸ್ ಶೋರೂಂ) ಆರಂಭಿಕ ಬೆಲೆಯನ್ನು ಹೊಂದಿದೆ.

Top 10 Scooter sales in June 2024 Honda Activa first TVS Jupiter second details

ಎರಡನೇ ಸ್ಥಾನದಲ್ಲಿ ಟಿವಿಎಸ್ ಜುಪಿಟರ್ (TVS Jupiter) ಇದ್ದು, 2024ರ ಜೂನ್​ನಲ್ಲಿ 72,100 ಯುನಿಟ್ ಮಾರಲಾಗಿದೆ. 2023ರ ಜೂನ್ ತಿಂಗಳಲ್ಲಿ ಮಾರಾಟ ಮಾಡಿದ 64,252 ಯುನಿಟ್‌ಗೆ ಹೋಲಿಸಿದರೆ, ಶೇಕಡ 12.21% ಪ್ರಗತಿ ಸಾಧಿಸಲಾಗಿದೆ. ಈ ಜುಪಿಟರ್ ಸ್ಕೂಟರ್‌ ರೂ.77,431 ದಿಂದ ರೂ.93,026 ಎಕ್ಸ್ ಶೋರೂಂ ದರದಲ್ಲಿ ಸಿಗುತ್ತದೆ.

ಸುಜುಕಿ ಆಕ್ಸೆಸ್ (Suzuki Access) ಮೂರನೇ ಸ್ಥಾನದಲ್ಲಿದ್ದು, ಜೂನ್​ನಲ್ಲಿ 52,192 ಯುನಿಟ್ ಮಾರಾಟ ಮಾಡಲಾಗಿದೆ. 2023ರ ಇದೇ ಅವಧಿಯಲ್ಲಿ ಮಾರಿದ 39,503 ಯುನಿಟ್‌ಗೆ ಹೋಲಿಕೆ ಮಾಡಿದರೆ, ವರ್ಷದಿಂದ ವರ್ಷಕ್ಕೆ (YoY) ಶೇಕಡ 32.12% ಬೆಳವಣಿಗೆ ಕಾಣಲಾಗಿದೆ. ಈ ಆಕ್ಸೆಸ್ ಸ್ಕೂಟರ್ ರೂ.82,586 ದಿಂದ ರೂ.94,082 ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಸಿಗುತ್ತದೆ.

Top 10 Scooter sales in June 2024 Honda Activa first TVS Jupiter second details

ಓಲಾ ಎಸ್1 (Ola S1) ಎಲೆಕ್ಟ್ರಿಕ್ ಸ್ಕೂಟರ್ ನಾಲ್ಕನೇ ಸ್ಥಾನದಲ್ಲಿದೆ. 2024ರ ಜೂನ್​ನಲ್ಲಿ 36,723 ಯುನಿಟ್ 'ಎಸ್1' ಸರಣಿ ಸ್ಕೂಟರ್‌ಗಳನ್ನು ಮಾರಲಾಗಿದೆ. 2023ರ ಜೂನ್​ನಲ್ಲಿ ಮಾರಾಟ ಮಾಡಿದ 17,579 ಯುನಿಟ್‌ಗೆ ಹೋಲಿಸಿದರೆ ಶೇಕಡ 108.9% ಪ್ರಗತಿಯಾಗಿದೆ. ಓಲಾ ಎಸ್1
ಪ್ರಾರಂಭಿಕ ರೂಪಾಂತರ (ವೇರಿಯೆಂಟ್) ರೂ.74,999 (ಎಕ್ಸ್ ಶೋರೂಂ) ದರವನ್ನು ಪಡೆದಿದೆ.

ಐದನೇ ಸ್ಥಾನವನ್ನು ಹೋಂಡಾ ಡಿಯೋ (Honda Dio) ತನ್ನದಾಗಿಸಿಕೊಂಡಿದೆ. ಜೂನ್​ನಲ್ಲಿ 32,584 ಯುನಿಟ್ ಮಾರಾಟ ಮಾಡಲಾಗಿದೆ. 2023ರ ಇದೇ ಅವಧಿಯಲ್ಲಿ ಮಾರಿದ 9,189 ಯುನಿಟ್‌ಗೆ ಹೋಲಿಕೆ ಮಾಡಿದರೆ ವರ್ಷದಿಂದ ವರ್ಷಕ್ಕೆ 254% ಬೆಳವಣಿಗೆಯಾಗಿದೆ. ಈ ಡಿಯೋ ಸ್ಕೂಟರ್ ರೂ.74,629 ದಿಂದ ರೂ.82,580 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ.

Top 10 Scooter sales in June 2024 Honda Activa first TVS Jupiter second details

ಆರನೇ ಸ್ಥಾನದಲ್ಲಿ ಟಿವಿಎಸ್ ಎನ್‌ಟಾರ್ಕ್ (TVS Ntorq) ಇದ್ದು, 27,812 ಯುನಿಟ್ ಮಾರಲಾಗಿದೆ. ಏಳನೇ ಸ್ಥಾನದಲ್ಲಿ ಬಜಾಜ್ ಚೇತಕ್ (16,691 ಯುನಿಟ್), ಎಂಟನೇ ಸ್ಥಾನದಲ್ಲಿ ಟಿವಿಎಸ್ ಐಕ್ಯೂಬ್ (15,210 ಯುನಿಟ್), ಒಂಬತ್ತನೇ ಸ್ಥಾನದಲ್ಲಿ ಯಮಹಾ ರೇ ಜಡ್ಆರ್ (15,184 ಯುನಿಟ್) ಹಾಗೂ ಹತ್ತನೇ ಸ್ಥಾನದಲ್ಲಿ ಸುಜುಕಿ ಬರ್ಗ್‌ಮನ್ (15,118 ಯುನಿಟ್) ಸ್ಕೂಟರ್‌ ಇದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, July 25, 2024, 21:08 [IST]
English summary
Top 10 scooter sales in june 2024 honda activa first tvs jupiter second details
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+