ಒಮ್ಮೆ ಟ್ಯಾಂಕ್ ತುಂಬಿಸಿದರೆ 750 ಕಿ.ಮೀ ಓಡಿಸಬಹುದು: ಟಾಪ್-2 ಅಗ್ಗದ ಮೈಲೇಜ್ ಬೈಕ್‌ಗಳು!

ಭಾರತದಲ್ಲಿ ನಿತ್ಯ ನೂರಾರು ಕಿ.ಮೀ ಸವಾರಿ ಮಾಡುವ ಮಧ್ಯಮ ಹಾಗೂ ಬಡ ವರ್ಗದ ಜನರಿಗೆ ದ್ವಿಚಕ್ರ ವಾಹನಗಳೆ ದುಡಿಮೆಗೆ ಆಧಾರವಾಗಿವೆ. ಹೆಚ್ಚುತ್ತಿರುವ ಪೆಟ್ರೋಲ್ ಬೆಲೆ ಮತ್ತು ನಿರ್ವಹಣಾ ವೆಚ್ಚವನ್ನು ಗಮನದಲ್ಲಿಟ್ಟುಕೊಂಡು ಗ್ರಾಹಕರು ಕೂಡ ಹೆಚ್ಚಾಗಿ ಮೈಲೇಜ್ ನೀಡುವ ಮೋಟಾರ್ ಸೈಕಲ್‌ಗಳಿಗೆ ಆದ್ಯತೆ ನೀಡುತ್ತಾರೆ. ಇಂತಹ ಗ್ರಾಹಕರಿಗಾಗಿಯೇ ಪ್ರಮುಖ ಕಂಪನಿಗಳು ಅತ್ಯಧಿಕ ಮೈಲೇಜ್ ನೀಡುವ ಬೈಕ್‌ಗಳನ್ನು ಪರಿಚಯಿಸಿವೆ. ಆದ್ರೆ ಪ್ರಸ್ತುತದ ಮಟ್ಟಿಗೆ ಭಾರತದಲ್ಲಿ ಅತಿಹೆಚ್ಚು ಮಾರಾಟ ಕಾಣುವ ಹಾಗೂ ನಂಬಲಾಗದ ಮೈಲೇಜ್ ನೀಡುವ ಎರಡು ಬೈಕ್‌ಗಳ ಬಗ್ಗೆ ಇಲ್ಲಿ ವಿವರಿಸಿದ್ದೇವೆ.

ಮೈಲೇಜ್ ಬೈಕ್‌ಗಳು ಸಾಮಾನ್ಯವಾಗಿ ಹಗುರವಾಗಿರುತ್ತವೆ. ತೆಳುವಾದ ಟೈರ್‌ಗಳಿಂದಾಗಿ, ಎಂಜಿನ್ ಮೇಲಿನ ಒತ್ತಡ ಕಡಿಮೆಯಾಗಿ ಮೋಟಾರ್ ಸೈಕಲ್ ಗರಿಷ್ಠ ಮೈಲೇಜ್ ನೀಡುತ್ತದೆ. ಇತರ ಮೋಟಾರ್‌ಸೈಕಲ್‌ಗಳಿಗೆ ಹೋಲಿಸಿದರೆ ಪ್ರತಿ ತಿಂಗಳು ಇಂಧನ ವೆಚ್ಚವನ್ನು ನಿಮಗೆ ಕಡಿಮೆ ಮಾಡುತ್ತವೆ, ಇದು ಗ್ರಾಹಕರ ಜೇಬಿಗೆ ಭಾರವಾಗುವುದಿಲ್ಲ. ಬನ್ನಿ ನಿಮ್ಮ ಹಣ ಉಳಿಸುವ ಎರಡು ಬೈಕ್‌ಗಳ ವಿಶೇಷತೆಗಳನ್ನು ನೋಡೋಣ.

top-2-mileage-bikes-in-india-bajaj-platina-and-tvs-sport-details

ಬಜಾಜ್ ಪ್ಲಾಟಿನಾ 100: ಬಜಾಜ್ ಪ್ಲಾಟಿನಾ ಬೈಕ್ 68,685 ರೂ. (ಎಕ್ಸ್ ಶೋರೂಂ) ಆರಂಭಿಕ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಮೈಲೇಜ್ ವಿಷಯಕ್ಕೆ ಬಂದರೆ ಇದು ಪ್ರತಿ ಲೀಟರ್‌ಗೆ 72 ಕಿ.ಮೀ. ಓಡಬಲ್ಲದು ಎಂದು ಕಂಪನಿ ಹೇಳಿಕೊಂಡಿದೆ. ಈ ಬೈಕ್‌ನಲ್ಲಿ ಗ್ರಾಹಕರಿಗೆ 11 ಲೀ. ಸಾಮರ್ಥ್ಯದ ಇಂಧನ ಟ್ಯಾಂಕ್ ಸಿಗಲಿದೆ.

ಅಲ್ಲಿಗೆ ಒಮ್ಮೆ ಇದರ ಇಂಧನ ಟ್ಯಾಂಕ್ ಅನ್ನು ತುಂಬಿಸಿದರೆ ಬರೋಬ್ಬರಿ 792 ಕಿ.ಮೀ ಓಡಿಸಬಹುದಾಗಿದೆ. 102 ಸಿಸಿ ಸಿಂಗಲ್ ಸಿಲಿಂಡರ್ ಡಿಟಿಎಸ್-ಐ ಎಂಜಿನ್ ಸಹಾಯದೊಂದಿಗೆ 7.79 ಬಿಹೆಚ್‌ಪಿ ಪವರ್ ಮತ್ತು 8.34 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಬೈಕ್ 4-ಸ್ಪೀಡ್ ಗೇರ್ ಬಾಕ್ಸ್ ಹೊಂದಿದ್ದು, ಮುಂಭಾಗ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ.

top-2-mileage-bikes-in-india-bajaj-platina-and-tvs-sport-details

ಟಿವಿಎಸ್ ಸ್ಪೋರ್ಟ್: ಟಿವಿಎಸ್ ಕಂಪನಿಗೆ ಭರ್ಜರಿ ಮಾರಾಟ ತಂದುಕೊಡುತ್ತಿರುವ ಬೈಕ್ ಆಗಿ ಜನಪ್ರಿಯತೆ ಪಡೆದಿರುವ 'ಟಿವಿಎಸ್ ಸ್ಪೋರ್ಟ್' ಎಕ್ಸ್ ಶೋರೂಂ ದರದಂತೆ ರೂ. 65,625 ಆರಂಭಿಕ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಒಂದು ಲೀಟರ್‌ ಪೆಟ್ರೋಲ್‌ಗೆ ಬರೋಬ್ಬರಿ 70-80 ಕಿ.ಮೀ ಮೈಲೇಜ್ ನೀಡುತ್ತದೆ. ಇದು 10 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಹೊಂದಿದೆ.

ಅಲ್ಲಿಗೆ ಒಮ್ಮೆ ಇದರ ಟ್ಯಾಂಕ್ ಫುಲ್ ಮಾಡಿಸಿದರೆ ಅಂದಾಜು 700-750 ಕಿ.ಮೀ ಓಡಿಸಬಹುದಾಗಿದೆ. 109.7 ಸಿಸಿ ಸಿಂಗಲ್ ಸಿಲಿಂಡರ್, ಏರ್-ಕೂಲ್ಡ್ ಬಿಎಸ್-6 ಎಂಜಿನ್ ಹೊಂದಿದ್ದು, 4-ಸ್ಪೀಡ್ ಗೇರ್ ಬಾಕ್ಸ್‌ನೊಂದಿಗೆ ಬರುತ್ತದೆ. ಇದರ ಎಂಜಿನ್ 8.07 ಪಿಎಸ್ ಪವರ್ ಮತ್ತು 8.4 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಮುಂಭಾಗ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್‌ಗಳನ್ನು ನೀಡಲಾಗಿದೆ.

top-2-mileage-bikes-in-india-bajaj-platina-and-tvs-sport-details

ಪ್ರಸ್ತುತ ಭಾರತದಲ್ಲಿ ಅತ್ಯಧಿಕ ಮೈಲೇಜ್‌ನೊಂದಿಗೆ ಸಿಗುವ ಬೈಕ್‌ಗಳಾಗಿ ಬಜಾಜ್ ಪ್ಲಾಟಿನಾ ಹಾಗೂ ಟಿವಿಎಸ್ ಸ್ಪೋರ್ಟ್ ಮಾರಾಟದಲ್ಲಿವೆ. ಇವೆರಡರ ಬೆಲೆ, ಎಂಜಿನ್ ಪವರ್, ಮೈಲೇಜ್ ಸೇರಿದಂತೆ ಅವುಗಳ ವಿಶೇಷತೆಗಳನ್ನು ಆಯಾ ಕಂಪನಿಗಳು ಹೇಳಿಕೊಂಡಿರುವಂತೆ ಇಲ್ಲಿ ವಿವರಿಸಲಾಗಿದೆ. ಇಲ್ಲಿ ತಿಳಿಸಿರುವ ಎರಡೂ ಬೈಕ್‌ಗಳ ಬೆಲೆಗಳು ಎಕ್ಸ್‌ ಶೂರೂಂ ಬೆಲೆಗಳು ಎಂಬುದನ್ನು ಗಮನಿಸಬೇಕಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Sunday, October 13, 2024, 14:00 [IST]
English summary
Top 2 mileage bikes in india bajaj platina and tvs sport details
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+