ಬೆಸ್ಟ್ ಫ್ಯಾಮಿಲಿ ಸ್ಕೂಟರ್‌ಗಳಿವು.. 72,000 ಆರಂಭಿಕ ಬೆಲೆ, ಸಖತ್ ಮೈಲೇಜ್!

ಭಾರತದಲ್ಲಿ ಮಧ್ಯಮ ವರ್ಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ದಿನನಿತ್ಯದ ಬಳಕೆಗೆ ದ್ವಿಚಕ್ರ ವಾಹನಗಳು ತೀರಾ ಅಗತ್ಯವಾಗಿವೆ. ಬೈಕ್‌ಗಳಿಗೆ ಹೋಲಿಕೆ ಮಾಡಿದರೆ, ಸ್ಕೂಟರ್‌ಗಳು ಗೇರ್‌ಲೆಸ್ ಆಗಿರುವುದರಿಂದ ಮಹಿಳೆ ಹಾಗೂ ಪುರುಷರಿಬ್ಬರಿಗೂ ಹೆಚ್ಚು ಸೂಕ್ತವಾಗಿವೆ. ನಿಮ್ಮ ಕುಟುಂಬದ ಅಗತ್ಯತೆಗಳಿಗಾಗಿ ಹೊಚ್ಚ ಹೊಸ ಸ್ಕೂಟರ್‌ವೊಂದನ್ನು ಖರೀದಿಸಲು ಆಲೋಚಿಸಿದ್ದೀರಾ.. ಹಾಗಾದರೆ, ಹೋಂಡಾ ಆಕ್ಟಿವಾ 6ಜಿ (Honda Activa 6G), ಟಿವಿಎಸ್ ಜುಪಿಟರ್ 110 (TVS Jupiter 110) ಮತ್ತು ಹೀರೋ ಪ್ಲೆಷರ್ ಪ್ಲಸ್ (Hero Pleasure Plus) ಉತ್ತಮ ಆಯ್ಕೆಯಾಗಲಿದೆ. ಇಲ್ಲಿ ನೂತನ ಸ್ಕೂಟರ್‌ಗಳ ಬೆಲೆ ಹಾಗೂ ವಿಶೇಷತೆ ಕುರಿತಂತೆ ಸಂಕ್ಷಿಪ್ತವಾಗಿ ತಿಳಿಸಿಕೊಟ್ಟಿದ್ದೇವೆ.

ಮೊದಲಿಗೆ ಹೋಂಡಾ ಆಕ್ಟಿವಾ 6ಜಿ (Honda Activa 6G) ಬಗ್ಗೆ ಮಾತನಾಡೋಣ. ಇದು ಜನಪ್ರಿಯ ಸ್ಕೂಟರ್ ಆಗಿದೆ. ರೂ.78,623 ದಿಂದ ರೂ.84,624 ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. 109.51 ಸಿಸಿ ಪೆಟ್ರೋಲ್ ಎಂಜಿನ್ ಹೊಂದಿದ್ದು, 7.79 ಪಿಎಸ್ ಗರಿಷ್ಠ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 8.84 ಎನ್ಎಂ (ನ್ಯೂಟನ್ ಮೀಟರ್) ಟಾರ್ಕ್ ಹೊರಹಾಕುವ ಸಾಮರ್ಥ್ಯ ಹೊಂದಿದೆ.

Top 3 Family Scooters Honda Activa 6G TVS Jupiter 110 Hero Pleasure Plus Low Price Good Mileage

ಈ ಆಕ್ಟಿವಾ 6ಜಿ ಸ್ಕೂಟರ್ 59.5 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಡಿಸೆಂಟ್ ಬ್ಲೂ ಮೆಟಾಲಿಕ್, ಪರ್ಲ್ ಸೈರನ್ ಬ್ಲೂ, ಬ್ಲಾಕ್, ಪರ್ಲ್ ಪ್ರೆಶಿಯಸ್ ವೈಟ್ ಹಾಗೂ ರೆಬೆಲ್ ರೆಡ್ ಮೆಟಾಲಿಕ್ ಸೇರಿದಂತೆ ವಿವಿಧ ಬಣ್ಣಗಳ (ಕಲರ್) ಆಯ್ಕೆಯಲ್ಲಿಯೂ ಸಿಗುತ್ತದೆ. ಎಂಜಿನ್ ಕಿಲ್ ಸ್ವಿಚ್, ಸೈಲೆಂಟ್ ಸ್ಟಾರ್ಟ್ ಒಳಗೊಂಡಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದ ಡ್ರಮ್ ಬ್ರೇಕ್ ಆಯ್ಕೆಯನ್ನು ಹೊಂದಿದೆ.

ಟಿವಿಎಸ್ ಜುಪಿಟರ್ 110 (TVS Jupiter 110) ಕುರಿತಂತೆ ಹೇಳುವುದಾದರೆ, ಈ ಸ್ಕೂಟರ್ ರೂ.73,700 ದಿಂದ ರೂ.87,250 (ಎಕ್ಸ್ ಶೋರೂಂ) ದರವನ್ನು ಹೊಂದಿದೆ. 113 ಸಿಸಿ ಪೆಟ್ರೋಲ್ ಎಂಜಿನ್ ಪಡೆದಿದ್ದು, 7.91 ಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 9.8 ಎನ್ಎಂ (ನ್ಯೂಟನ್ ಮೀಟರ್) ಟಾರ್ಕ್ ಉತ್ಪಾದಿಸುತ್ತದೆ. 62 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡಬಹುದು ಎಂದು ಅಂದಾಜಿಸಲಾಗಿದೆ.

Top 3 Family Scooters Honda Activa 6G TVS Jupiter 110 Hero Pleasure Plus Low Price Good Mileage

ಹೊಸ ಟಿವಿಎಸ್ ಜುಪಿಟರ್ 110 ಸ್ಕೂಟರ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌, ಇಂಟಲಿಜೆಂಟ್ ಸ್ಟಾರ್ಟ್/ ಸ್ಟಾಪ್, ಇಂಟಿಗ್ರೇಟೆಡ್ ಸ್ಟಾರ್ಟರ್ ಜನರೇಟರ್, ಯುಎಸ್‌‍ಬಿ ಚಾರ್ಜರ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಯಾಣಿಕರ ರಕ್ಷಣೆಗಾಗಿ ಮುಂಭಾಗ (ಫ್ರಂಟ್) 220 ಎಂಎಂ ಪೆಟಲ್ ಡಿಸ್ಕ್ ಮತ್ತು ಹಿಂಭಾಗ (ರೇರ್) 130 ಎಂಎಂ ಡ್ರಮ್ ಬ್ರೇಕ್‌ನ್ನು ಒಳಗೊಂಡಿದೆ.

ಹೀರೋ ಪ್ಲೆಷರ್ ಪ್ಲಸ್ (Hero Pleasure Plus) ಸ್ಕೂಟರ್ ಬಗ್ಗೆ ಮಾತನಾಡುವುದಾದರೆ, ಇದು ರೂ.72,163 ದಿಂದ ರೂ.83,918 ಎಕ್ಸ್ ಶೋರೂಂ ಬೆಲೆಯನ್ನು ಪಡೆದಿದೆ. 110 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೋಲ್ಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 8.15 ಪಿಎಸ್ ಗರಿಷ್ಠ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 8.70 ಎನ್ಎಂ (ನ್ಯೂಟನ್ ಮೀಟರ್) ಟಾರ್ಕ್ ಹೊರಹಾಕುತ್ತದೆ.

Top 3 Family Scooters Honda Activa 6G TVS Jupiter 110 Hero Pleasure Plus Low Price Good Mileage

ಈ ಹೀರೋ ಪ್ಲೆಷರ್ ಪ್ಲಸ್50 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಎಲ್‌ಸಿಡಿ ಸ್ಕ್ರೀನ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ ಡ್ರಮ್ ಬ್ರೇಕ್‌ನ್ನು ಒಳಗೊಂಡಿದೆ. 104 ಕೆಜಿ ತೂಕವಿದ್ದು, 4.8 ಲೀಟರ್ ಸಾಮರ್ಥ್ಯದ ಫ್ಯುಯೆಲ್ (ಇಂಧನ) ಟ್ಯಾಂಕ್‌ನ್ನು ಪಡೆದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, September 13, 2024, 22:17 [IST]
English summary
Top 3 family scooters honda activa 6g tvs jupiter 110 hero pleasure plus low price good mileage
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+