ಕಾಲೇಜು ಹುಡುಗರು ಈ ಬೈಕ್‌ಗಳನ್ನು ಖರೀದಿಸಿದರೆ ಪವರ್‌ ಜೊತೆ ಉತ್ತಮ ಮೈಲೇಜ್‌: ಪಾಕೆಟ್‌ ಮನಿ ಉಳಿತಾಯ!

ಭಾರತೀಯರಿಗೆ ಬೈಕ್‌ ಅಥವಾ ಕಾರಿನ ಪವರ್‌ಗೆ ಪ್ರಾಮುಖ್ಯತೆ ಕೊಡುವುದಕ್ಕಿಂತಲೂ ಆ ವಾಹನದ ಮೈಲೇಜ್‌ಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡುತ್ತಾರೆ.ಇದು ನಿಮಗೂ ಅನುಭವ ಆಗಿರಬಹುದು. ನೀವೇನಾದರೂ ಒಂದು ಹೊಸ ಬೈಕ್ ಅಥವಾ ಕಾರು ಖರೀದಿ ಮಾಡಿದರೆ ನಿಮಗೆ ಎದುರಾಗುವ ಮೊದಲ ಪ್ರಶ್ನೆ ಇದಕ್ಕೆ ಎಷ್ಟು ಮತ್ತು ಇದರ ಮೈಲೇಜ್‌ ಎಷ್ಟು ಎಂಬುದು. ಇಂದಿನ ಈ ಲೇಖನದಲ್ಲಿ 160cc ಸೆಗ್ಮೆಂಟ್‌ ಬೈಕ್‌ನಲ್ಲಿ ಪವರ್‌ ಮತ್ತು ಮೈಲೇಜ್‌ನ ಪರ್ಫೆಕ್ಟ್‌ ಬ್ಯಾಲೆನ್ಸ್‌ ನೀಡುವ ಟಾಪ್‌ ೩ ಬೈಕ್‌ಗಳು ಮತ್ತು ಅವುಗಳ ವಿಶೇಷತೆಗಳು ಏನೆಂದು ನೋಡೋಣ.

ಬಜಾಜ್‌ ಪಲ್ಸರ್‌ N160: ಪಲ್ಸರ್ N160, 164.82cc DTS-i ಎಂಜಿನ್ ಹೊಂದಿದ್ದು, ಇದು 15.8 bhp ಪವರ್ ಮತ್ತು 14.65 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‌ನಿಂದ ಸುಮಾರು 45 kmpl ಮೈಲೇಜ್ ಪಡೆಹಬುದು ಎಂದು ಕಂಪನಿ ಹೇಳಿಕೊಂಡಿದೆ. N160 ಬಗ್ಗೆ ನೊಡುವುದಾದರೆ, ಹೊಸ ಅಪ್‌ಡೇಟ್‌ ಭಾಗವಾಗಿ ಬಜಾಜ್ ಪಲ್ಸರ್ N160 ನಲ್ಲಿ ಸಂಪೂರ್ಣ ಡಿಜಿಟಲ್ ಇನ್‌ಸ್ಟ್ರೂಮೆಂಟ್ LCD ಕ್ಲಸ್ಟರ್ ನೀಡಲಾಗಿದೆ.

Top 3 stylish fuel-efficient 160cc bikes in India TVS Apache RTR 160 4V Pulsar N160 And Xtreme 160R 4V

ಇದು ರೈಡ್ ಕನೆಕ್ಟ್ ಅಪ್ಲಿಕೇಶನ್‌ನೊಂದಿಗೆ ಬ್ಲೂಟೂತ್ ಸಂಪರ್ಕವನ್ನು ಸಪೋರ್ಟ್ ಮಾಡುತ್ತದೆ. ಪ್ರಯಾಣದಲ್ಲಿರುವಾಗ ಈ ಇಂಟರ್ಫೇಸ್ ಮೂಲಕ ಕಾರ್ಯನಿರ್ವಹಿಸಲು ಎಡ ಸ್ವಿಚ್‌ಗಿಯರ್‌ನಲ್ಲಿ ಹೊಸ ಮೋಡ್ ಬಟನ್ ನೀಡಲಾಗಿದೆ. 2024 ಪಲ್ಸರ್ N160 ಬೆಲೆಯು ರೂ. 1,30,560 (ಎಕ್ಸ್‌ ಶೋರೂಂ)ರಿಂದ ಪ್ರಾರಂಭವಾಗುತ್ತದೆ. ಬ್ಲಾಕ್, ರೆಡ್ ಮತ್ತು ಬ್ಲೂ ಮೂರು ಬಣ್ಣಗಳಲ್ಲಿ ನೀಡಲಾಗುತ್ತದೆ.

ಟಿವಿಎಸ್‌ ಅಪಾಚೆ 160 4V: ಈ ಮೋಟಾರ್ ಸೈಕಲ್ ಆಕರ್ಷಕ ವಿನ್ಯಾಸವನ್ನು ಹೊಂದಿದ್ದು, ಹೊಸದಾದ ಹೆಡ್‌ಲೈಟ್‌ನ್ನು ಪಡೆದಿದೆ. ಕಂಪನಿಯ ಸ್ಮಾರ್ಟ್-ಕನೆಕ್ಟ್ (SmartXonnect) ವೆಹಿಕಲ್ ತಂತ್ರಜ್ಞಾನವನ್ನು ಹೊಂದಿದೆ. ಪ್ರಮುಖವಾಗಿ ರೈನ್, ಅರ್ಬನ್ ಮತ್ತು ಸ್ಪೋರ್ಟ್ ಎಂಬ 3 ರೈಡ್ ಮೋಡ್‌ ಆಯ್ಕೆಯನ್ನು ಒಳಗೊಂಡಿದೆ.

Top 3 stylish fuel-efficient 160cc bikes in India TVS Apache RTR 160 4V Pulsar N160 And Xtreme 160R 4V

ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ (TVS Apache RTR 160 4V) ಬೈಕ್, 4 ವಾಲ್ವ್, ಆಯಿಲ್ ಕೂಲ್ಡ್ 157.9 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, ರೈನ್ ಹಾಗೂ ಅರ್ಬನ್ ಮೋಡ್‌ನಲ್ಲಿ 8,600 rpmನಲ್ಲಿ 15.42 bhp ಗರಿಷ್ಠ ಪವರ್ ಹಾಗೂ 7,250 rpmನಲ್ಲಿ 14.14 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿದೆ.

ಸ್ಪೋರ್ಟ್ಸ್ ಮೋಡ್‌ನಲ್ಲಿ ಈ ನೂತನ ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ ಬೈಕ್‌ನ ಸಿಂಗಲ್ ಸಿಲಿಂಡರ್ ಎಂಜಿನ್ 9,250 rpmನಲ್ಲಿ 17.3 bhp ಪವರ್ ಮತ್ತು 7,250 rpmನಲ್ಲಿ 14.73 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ 5 - ಸ್ವೀಡ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ದೊರೆಯುತ್ತದೆ. 45 ರಿಂದ 50 ಕಿಮೀ ಮೈಲೇಜ್‌ ಈ ಬೈಕ್‌ ನೀಡುತ್ತದೆ.

Top 3 stylish fuel-efficient 160cc bikes in India TVS Apache RTR 160 4V Pulsar N160 And Xtreme 160R 4V

ಹೀರೋ ಎಕ್ಸ್‌ಟ್ರೀಂ 160R 4V: ಈ ಬೈಕ್‌ಸ್ಟ್ಯಾಂಡರ್ಡ್, ಕನೆಕ್ಟೆಡ್ ಮತ್ತು ಪ್ರೊ. ಸ್ಟ್ಯಾಂಡರ್ಡ್ ವೇರಿಯಂಟ್ ಬೆಲೆ 1,27,300 ರೂ. ಮತ್ತು ಕನೆಕ್ಟೆಡ್ ಬೆಲೆ 1,32,800 ರೂ. ಹೀರೋ ಎಕ್ಸ್‌ಟ್ರೀಂ 160R 4V Pro ಬೆಲೆ ರೂ 1,36,500 (ಎಲ್ಲಾ ಬೆಲೆಗಳು ಎಕ್ಸ್ ಶೋ ರೂಂ, ದೆಹಲಿ).

ಹೀರೋ ಎಕ್ಸ್‌ಟ್ರೀಂ 160R 4V ಎಂಜಿನ್ 16.6bhp ಮತ್ತು 14.6Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು ಮೋಟಾರ್‌ಸೈಕಲ್‌ನ 2-ವಾಲ್ವ್ ಆವೃತ್ತಿಗಿಂತ 1.6bhp ಮತ್ತು 0.6Nbm ಟಾರ್ಕ್‌ನ ಹೆಚ್ಚಳವಾಗಿದೆ. ಈ ಆಯಿಲ್‌ ಕೂಲ್ಡ್‌ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Sunday, July 7, 2024, 10:00 [IST]
English summary
Top 3 stylish fuel efficient 160cc bikes tvs apache rtr 160 4v pulsar n160 and xtreme 160r 4v
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+