ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಪ್ಲಾನ್ ಇದೆಯೇ? ಇವೆ ನೋಡಿ ಹೆಚ್ಚು ಮಾರಾಟವಾಗುತ್ತಿರುವ ಇವಿಗಳು!
ಉತ್ತಮ ರೇಂಜ್, ಯೋಗ್ಯವಾದ ಸ್ಥಳಾವಕಾಶ ಮತ್ತು ಬೆಸ್ಟ್ ಪರ್ಫಾಮೆನ್ಸ್ ನೀಡುವ ಎಲೆಕ್ಟ್ರಿಕ್ ಸ್ಕೂಟರ್‌ಗಳು ಭಾರತದಲ್ಲಿ ಹಲವಿದ್ದರೂ, ಕೆಲವು ಬ್ರಾಂಡ್‌ಗಳು ಮಾತ್ರ ಉತ್ತಮ ಹೆಸರು ಮಾಡಿವೆ. ಈ ಬ್ರಾಂಡ್‌ಗಳಿಂದಲೇ ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಜನಪ್ರಿಯತೆ ಹೆಚ್ಚುತ್ತಿದೆ, ಇಲ್ಲಿ ಪಟ್ಟಿ ಮಾಡಲಾದ ಎಲೆಕ್ಟ್ರಿಕ್ ಸ್ಕೂಟರ್‌ಗಳು ಸದ್ಯ ಮಾರುಕಟ್ಟೆಯಲ್ಲಿ ಉತ್ತಮ ಮಾರಾಟ ಕಾಣುತ್ತಿರುವ ಬೆಸ್ಟ್ ಇವಿಗಳಾಗಿವೆ. ಮುಂಬರುವ ತಿಂಗಳುಗಳಲ್ಲಿ ಭಾರತದಲ್ಲಿ ಇವುಗಳ ಮಾರಾಟ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ. ಪ್ರಸ್ತುತ ಭಾರತದ ಟಾಪ್ 5 ಬೆಸ್ಟ್ ಎಲೆಕ್ಟ್ರಿಕ್ ಸ್ಕೂಟರ್‌ಗಳು ಯಾವುವು ಎಂಬುದನ್ನು ಇಲ್ಲಿ ನೋಡೋಣ.
ಎಥರ್ ರಿಜ್ಟಾ: ಎಥರ್ ರಿಜ್ಟಾ ಎಲೆಕ್ಟ್ರಿಕ್ ಸ್ಕೂಟರ್ ಮೂರು ರೂಪಾಂತರಗಳಲ್ಲಿ ಲಭ್ಯವಿದೆ. ಭಾರತದ ಎಕ್ಸ್ ಶೋರೂಂ ದರದಂತೆ ಇದರ ಬೆಲೆಯು ರೂ.1.10 ಲಕ್ಷಗಳಾಗಿದೆ. ಈ ಹೊಸ ಎಥರ್ ರಿಜ್ಟಾ ಎಲೆಕ್ಟ್ರಿಕ್ ಸ್ಕೂಟರ್, 2.9 ಮತ್ತು 3.7 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ಒಳಗೊಂಡಿದ್ದು, ಇದರ ಟಾಪ್ ಸ್ಪೆಕ್ ಮಾಡೆಲ್ ಸಿಂಗಲ್ ಚಾರ್ಜ್‌ನಲ್ಲಿ 160 ಕಿ.ಮೀ ರೇಂಜ್ ನಿಡುತ್ತದೆ ಎಂದು ಕಂಪನಿ ಹೇಳಿದೆ.

ಓಲಾ ಎಸ್ 1 ಪ್ರೊ ಜೆನ್ 2: ಓಲಾ ಎಸ್ 1 ಪ್ರೊ ಜೆನ್ 2 ಎಲೆಕ್ಟ್ರಿಕ್ ಸ್ಕೂಟರ್ 4 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್‌ನೊಂದಿಗೆ ಒಮ್ಮೆ ಚಾರ್ಜ್ ಮಾಡಿದರೆ 195 ಕಿ.ಮೀ ಚಲಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಓಲಾ ಎಸ್ 1 ಪ್ರೊ ಜೆನ್ 2 ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.1.30 ಲಕ್ಷಗಳಾಗಿದೆ.
ಎಥರ್ 450X: ಎಥೆರ್ 450 ಎಕ್ಸ್ ಉನ್ನತ ಶ್ರೇಣಿಯ ನಿರ್ಮಾಣ ಗುಣಮಟ್ಟವನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ 3.7 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್‌ನೊಂದಿಗೆ ಇದರ ಟಾಪ್-ಸ್ಪೆಕ್ ಮಾದರಿಯು ಸಂಪೂರ್ಣವಾಗಿ ಚಾರ್ಜ್ ಮಾಡಿದರೆ 150 ಕಿ.ಮೀ ಚಲಿಸುತ್ತದೆ. ಎಥರ್ 450ಎಕ್ಸ್ ಸ್ಕೂಟರ್ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.1.41 ಲಕ್ಷಗಳಾಗಿದೆ.

ಸಿಂಪಲ್ ಒನ್: ಬೆಂಗಳೂರು ಮೂಲದ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್, ತನ್ನ ಟ್ವಿನ್ ಬ್ಯಾಟರಿ ಪ್ಯಾಕ್ ಸೆಟಪ್‌ನೊಂದಿಗೆ ಒಮ್ಮೆ ಚಾರ್ಜ್ ಮಾಡಿದ್ರೆ 211 ಕಿ.ಮೀ ಚಲಿಸಬಹುದು. ಈ ಸ್ಕೂಟರ್ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.1.66 ಲಕ್ಷಗಳಾಗಿದೆ. ಅಲ್ಲದೆ, ಅದರ ಸ್ಪೋರ್ಟಿ ವಿನ್ಯಾಸವು ಯುವಕರನ್ನು ಸಾಕಷ್ಟು ಆಕರ್ಷಿಸುತ್ತಿದೆ.
ಟಿವಿಎಸ್ ಐಕ್ಯೂಬ್ ಎಸ್‌ಟಿ: ಟಿವಿಎಸ್ ಐಕ್ಯೂಬ್ ತ್ವರಿತವಾಗಿ ಜನಪ್ರಿಯತೆಯನ್ನು ಗಳಿಸುತ್ತಿದೆ. ಇದರ ವ್ಯಾಪಕವಾದ ಸೇವಾ ನೆಟ್‌ವರ್ಕ್, ಮಾರಾಟದ ನಂತರದ ಸೇವೆಗೆ ಸಂಬಂಧಿಸಿದಂತೆ ಈ ಸ್ಕೂಟರ್ ಯಾವುದೇ ತೊಂದರೆಯನ್ನು ಎದುರಿಸದೆ ಮುನ್ನುಗ್ಗುತ್ತಿದೆ. ಟಿವಿಎಸ್ ಐಕ್ಯೂಬ್ ಎಸ್‌ಟಿ ಸ್ಕೂಟರ್ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.1.85 ಲಕ್ಷಗಳಾಗಿದೆ.

ಟಿವಿಎಸ್ ಈಗ ಭಾರತದಲ್ಲಿ ಟಾಪ್ ಸ್ಪೆಕ್ ಟಿವಿಎಸ್ ಐಕ್ಯೂಬ್ ಎಸ್‌ಟಿ ರೂಪಾಂತರದ ವಿತರಣೆಯನ್ನು ಪ್ರಾರಂಭಿಸಿದೆ. ಈ ಮಾದರಿಯು 5.1 ಕಿಲೋವ್ಯಾಟ್‌ನಲ್ಲಿ ಅತಿದೊಡ್ಡ ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ. ಅಲ್ಲದೆ, ಈ ಮಾದರಿಯು ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಆದರೆ 145 ಕಿ.ಮೀ ರೇಂಜ್ ನೀಡುವುದಾಗಿ ಟಿವಿಎಸ್ ಕಂಪನಿ ಹೇಳಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications