1 ಲೀಟರ್ ಪೆಟ್ರೋಲ್ ಹಾಕಿಸಿದರೆ ಸಾಕು.. ಜಾಸ್ತಿ ದೂರ ಓಡುತ್ತವೆ ಈ ಸ್ಕೂಟರ್‌ಗಳು, ಕೈಗೆಟುಕುವ ಬೆಲೆ!

ಭಾರತದಲ್ಲಿ ಮಧ್ಯಮ ವರ್ಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದು, ದಿನನಿತ್ಯ ಕಚೇರಿಗೆ ಹೋಗಲು ದ್ವಿಚಕ್ರ ವಾಹನಗಳು ತೀರಾ ಅಗತ್ಯವಾಗಿವೆ. ಬೈಕ್‌ಗಳಿಗೆ ಹೋಲಿಕೆ ಮಾಡಿದರೆ, ಸ್ಕೂಟರ್‌ಗಳು 'ಗೇರ್ ಲೆಸ್' ಆಗಿರುವುದರಿಂದ ಮಹಿಳೆಯರು ಹಾಗೂ ಪುರುಷರಿಬ್ಬರಿಗೂ ಇಷ್ಟವಾಗುತ್ತವೆ. ನೀವು ಹೊಸ ಸ್ಕೂಟರ್‌ವೊಂದನ್ನು ಖರೀದಿಸಲು ಆಲೋಚಿದ್ದರೆ.. ಹೋಂಡಾ ಆಕ್ಟಿವಾ 125, ಹೋಂಡಾ ಡಿಯೋ, ಟಿವಿಎಸ್ ಜುಪಿಟರ್ 125, ಸುಜುಕಿ ಅವೆನಿಸ್ 125 ಹಾಗೂ ಹೀರೋ ಪ್ಲೆಷರ್ ಪ್ಲಸ್‌ಗಳು ಉತ್ತಮ ಆಯ್ಕೆಯಾಗಲಿವೆ. ಬನ್ನಿ.. ಈ ನೂತನ ಸ್ಕೂಟರ್‌ಗಳ ವಿಶೇಷತೆ ಕುರಿತಂತೆ ಸಂಪೂರ್ಣವಾಗಿ ತಿಳಿಯೋಣ.

ಮೊದಲಿಗೆ ಹೋಂಡಾ ಆಕ್ಟಿವಾ 125 (Honda Activa 125) ಸ್ಕೂಟರ್ ಬಗ್ಗೆ ಮಾತನಾಡೋಣ. ಇದು ರೂ.80,256 ದಿಂದ ರೂ.89,429 ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. 124 ಸಿಸಿ ಏರ್-ಕೋಲ್ಡ್ ಸಿಂಗಲ್-ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 8.3 ಪಿಎಸ್ ಶಕ್ತಿ (ಪವರ್) ಹಾಗೂ 10.4 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 60 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ.

Top 5 Best Mileage Scooters Honda Activa Honda Dio TVS Jupiter Suzuki Avenis Hero Pleasure plus

ಈ ಹೊಸ ಆಕ್ಟಿವಾ 125 ಸ್ಕೂಟರ್ ಬೆಲೆಗೆ ತಕ್ಕಂತೆ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಎಲ್‌ಇಡಿ ಹೆಡ್‌ಲೈಟ್, ಡಿಆರ್‌ಎಲ್‌, ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನ್ನು ಹೊಂದಿದೆ. ಸವಾರರಿಗೆ ರಕ್ಷಣೆ ಒದಗಿಸಲು ಡಿಸ್ಕ್ ಬ್ರೇಕ್‌ನ್ನು ಪಡೆದಿದೆ. 109 ಕೆಜಿ ತೂಕವಿರುವ ಈ ಸ್ಕೂಟರ್, 5.3 ಲೀಟರ್‌ನಷ್ಟು ಫ್ಯುಯೆಲ್ (ಇಂಧನ) ಟ್ಯಾಂಕ್‌ನ್ನು ತನ್ನದಾಗಿಸಿಕೊಂಡಿದೆ.

ಹೋಂಡಾ ಡಿಯೋ (Honda Dio) ಕೂಡ ಪ್ರಖ್ಯಾತ ಸ್ಕೂಟರ್ ಆಗಿದ್ದು, ರೂ.70,211 ದಿಂದ ರೂ.77,712 ಎಕ್ಸ್ ಶೋರೂಂ ದರವನ್ನು ಪಡೆದಿದೆ. 109.51 ಸಿಸಿ ಏರ್-ಕೋಲ್ಡ್ ಸಿಂಗಲ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 7.85 ಪಿಎಸ್ ಶಕ್ತಿ ಮತ್ತು 9.03 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿದೆ. 50 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.

Top 5 Best Mileage Scooters Honda Activa Honda Dio TVS Jupiter Suzuki Avenis Hero Pleasure plus

ಟಿವಿಎಸ್ ಜುಪಿಟರ್ 125 (TVS Jupiter 125) ಕುರಿತಂತೆ ಹೇಳುವುದಾದರೆ, ಈ ಸ್ಕೂಟರ್ ರೂ.89,155 ದಿಂದ ರೂ.99,805 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 124.8 ಸಿಸಿ ಪೆಟ್ರೋಲ್ ಎಂಜಿನ್ ಪಡೆದಿದ್ದು, 8.2 ಪಿಎಸ್ ಗರಿಷ್ಠ ಶಕ್ತಿ (ಪವರ್) ಹಾಗೂ 10.5 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. 57.27 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ.

ಸುಜುಕಿ ಅವೆನಿಸ್ 125 (Suzuki Avenis 125) ಸ್ಕೂಟರ್ ರೂ.88,300 ದಿಂದ ರೂ.92,000 ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಲಭ್ಯವಿದೆ. 124.3 ಸಿಸಿ ಏರ್-ಕೋಲ್ಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 8.7 ಪಿಎಸ್ ಗರಿಷ್ಠ ಶಕ್ತಿ ಮತ್ತು 10 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 55 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.

Top 5 Best Mileage Scooters Honda Activa Honda Dio TVS Jupiter Suzuki Avenis Hero Pleasure plus

ಹೀರೋ ಪ್ಲೆಷರ್ ಪ್ಲಸ್ (Hero Pleasure +) ಜನಪ್ರಿಯ ಸ್ಕೂಟರ್ ಆಗಿದೆ. ರೂ.70,963 ದಿಂದ ರೂ.83,363 ಎಕ್ಸ್ ಶೋರೂಂ ಬೆಲೆಯನ್ನು ಪಡೆದಿದೆ. 110 ಸಿಸಿ ಸಿಂಗಲ್-ಸಿಲಿಂಡರ್ ಏರ್-ಕೋಲ್ಡ್ ಪೆಟ್ರೋಲ್ ಎಂಜಿನ್ ಒಳಗೊಂಡಿದ್ದು, 8.1 ಪಿಎಸ್ ಗರಿಷ್ಠ ಶಕ್ತಿ (ಪವರ್) ಮತ್ತು 8.7 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. 50 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, July 30, 2024, 18:17 [IST]
English summary
Top 5 best mileage scooters honda activa honda dio tvs jupiter suzuki avenis hero pleasure plus
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+