ಕಾರಿನಷ್ಟು ಬೂಟ್‌ಸ್ಪೇಸ್ ಇಲ್ಲ, ಆದರೆ ಅದಕ್ಕಿಂತ ಏನೂ ಕಮ್ಮಿಯಲ್ಲ!: ಟಾಪ್‌ 5 ಎಲೆಕ್ಟ್ರಿಕ್‌ ಸ್ಕೂಟರ್‌ಗಳು

ಭಾರತೀಯ ಆಟೋಮೊಬೈಲ್‌ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನಗಳ ಅಧಿಪತ್ಯ ದಿನಕಳೆದಂತೆ ಹೆಚ್ಚಾಗುತ್ತಲೇ ಇದೆ. ಇದೇ ಕಾರಣದಿಂದ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನ ತಯಾರಕಾ ಕಂಪನಿಗಳು ಸ್ಪರ್ಧೆಗೆ ಬಿದ್ದಂತೆ ಮಾರುಕಟ್ಟೆಗೆ ವಾಹನಗಳನ್ನು ಲಾಂಚ್ ಮಾಡುತ್ತಿದೆ. ಇಂದು ದೊಡ್ಡ ಬೂಟ್‌ ಸ್ಪೇಸ್‌ ಇರುವ ಎಲೆಕ್ಟ್ರಿಕ್‌ ಸ್ಕೂಟರ್‌ಗಳ ಬಗ್ಗೆ ನೋಡೋಣ.

ಸಿಂಪಲ್‌ 1 (30 ಲೀಟರ್‌): ಸಿಂಪಲ್‌ ಎನರ್ಜಿ ತಯಾರಿಸಿರುವ ಸಿಂಪಲ್ ವನ್‌ ಎಲೆಕ್ಟ್ರಿಕ್‌ ಸ್ಕೂಟರ್‌ನಲ್ಲಿ ಸುಮಾರು 30 ಲೀಟರ್‌ನ ಬೂಟ್‌ ಸ್ಪೇಸ್‌ ನಿಮಗೆ ಸಿಗುತ್ತದೆ. 3.7 kWh ಬ್ಯಾಟರಿ ಪ್ಯಾಕ್ ಪಡೆದಿದ್ದು, ಸಂಪೂರ್ಣ ಚಾರ್ಜ್ ನಲ್ಲಿ 151 ಕಿಲೋಮೀಟರ್ ರಿಂದ 160 ಕಿಲೋಮೀಟರ್ ರೇಂಜ್ ನೀಡಲಿದೆ. ಆದರೆ, ಇದರಲ್ಲಿ ಉಪಯೋಗಗೊಳಿಸಲಾಗಿರುವ ಎಲೆಕ್ಟ್ರಿಕ್ ಮೋಟಾರ್ ಬಗ್ಗೆ ಮಾಹಿತಿಯಿಲ್ಲ. ಶಕ್ತಿಯುತ ಮೋಟಾರ್ ಬಳಕೆ ಮಾಡಿರಬಹುದು ಎಂದು ಅಂದಾಜಿಸಲಾಗಿದೆ.

Top Five Electric Scooters With Large Boot Space Complete List

ಟಿವಿಎಸ್‌ ಐ ಕ್ಯೂಬ್‌( 32 ಲೀಟರ್‌): ನಿಮಗೆಲ್ಲಾ ತಿಳಿದಿರುವಂತೆ ಟಿವಿಎಸ್‌ ಇದೀಗ ಕಡಿಮೆ ಬೆಲೆಯ ಐಕ್ಯೂಬ್‌ ಎಲೆಕ್ಟ್ರಿಕ್‌ ಸ್ಕೂಟರ್‌ ಅನ್ನು ಲಾಂಚ್ ಮಾಡಿದ್ದು, ಈ ಸ್ಕೂಟರ್‌ನಲ್ಲಿ ನಿಮಗೆ 2.2kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ ಲಭ್ಯವಾಗುತ್ತಿದೆ. ಈ ಬ್ಯಾಟರಿಯ ಸಹಾಯದಿಂದ ಈ ಸ್ಕೂಟರ್‌ ಸುಮಾರು 75 ಕಿಮೀ ನ ರೇಂಜ್‌ ಅನ್ನು ನೀಡುತ್ತದೆ. ಟಿವಿಎಸ್‌ ಐಕ್ಯೂಬ್‌ನ ಅತೀ ಕಡಿಮೆ ಬೆಲೆಯ ವೇರಿಯಂಟ್ ಇದಾಗಿದ್ದು, ಇದರ ಬೆಲೆ ಕ್ಯಾಶ್‌ ಬ್ಯಾಕ್‌ಗಳೆಲ್ಲಾ ಸೇರಿ ಸುಮಾರು ರೂ 94,999.

ಎರಡನೇ ತಲೆಮಾರಿನ ಓಲಾ ಎಸ್‌1 ಲೈನ್‌ಅಪ್‌(34 ಲೀಟರ್‌): ಎರಡನೇ ತಲೆಮಾರಿನ ಓಲಾ ಎಸ್‌1 ಲೈನ್‌ಅಪ್ ಸ್ಕೂಟರ್‌ಗಳು ಬರೋಬ್ಬರಿ 34 ಲೀಟರ್‌ನ ಬೂಟ್‌ಸ್ಪೇಸ್‌ ಪಡೆದಿದೆ. ಓಲಾ ಎಸ್‌ 1 ಪ್ರೋ ಬೆಲೆಯು 1,47,499 ಗೆ ಆರಂಭವಾಗುತ್ತಿದ್ದು, ಏಥರ್‌ ಸ್ಕೂಟರ್‌ಗಿಂತ ಕೊಂಚ ದುಬಾರಿಯಾಗಿದೆ. ಆದರೆ ಫೀಚರ್‌ಗಳನ್ನು ಅಕ್ಕಪಕ್ಕದಲ್ಲಿಟ್ಟುಕೊಂಡು ನೋಡುವಾಗ ಈ ಸ್ಕೂಟರ್‌ನಲ್ಲಿ ಕೊಂಚ ಹೆಚ್ಚೇ ಎನ್ನಬಹುದು. ಇದು ಈ ಎರಡೂ ಸ್ಕೂಟರ್‌ನ ಬೆಲೆ. ಬಜೆಟ್‌ಗೆ ತಕ್ಕದಾಗಿ ಯಾವ ಸ್ಕೂಟರ್‌ ಬೇಕೋ ಅದನ್ನು ಆರಿಸಬಹುದು.

Top Five Electric Scooters With Large Boot Space Complete List

ಏಥರ್‌ ರಿಜ್ಟಾ (34 ಲೀಟರ್): ಏಥರ್‌ನ ಮತ್ತೊಂದು ಹೊಸ ಲಾಂಚ್ ಆಗಿರುವ ರಿಜ್ಟಾ ಎಲೆಕ್ಟ್ರಿಕ್‌ ಸ್ಕೂಟರ್‌ನಲ್ಲಿ ಸುಮಾರು 34 ಲೀಟರ್‌ ಬೂಟ್‌ ಸ್ಪೇಸ್‌ ಸಿಗುತ್ತಿದೆ. ಏಥರ್‌ ರಿಜ್ಟಾ ಸ್ಕೂಟರ್‌ ಪ್ರಮುಖವಾಗಿ ಎರಡು ಬ್ಯಾರಿ ಆಯ್ಕೆಗಳನ್ನು ನೀಡುತ್ತದೆ. ಈ ಎಲೆಕ್ಟ್ರಿಕ್ ಸ್ಕೂಟರ್‌ನ ಬೇಸ್ ರಿಜ್ಟಾ S ಮತ್ತು Z ರೂಪಾಂತರವು 2.9 kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಈ ಮಾದರಿಯು 123 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಈ ಮಾದರಿಯು 80 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

ಇದರ ಎರಡನೇ ಬ್ಯಾಟರಿ ಆಯ್ಕೆಯನ್ನು ನೋಡುವುದಾದರೆ (Electric Scooters), ಎಥರ್ ರಿಜ್ಟಾ ಝಡ್ (ಲಾಂಗ್ ರೇಂಜ್) ರೂಪಾಂತರವು 3.7kWh ಬ್ಯಾಟರಿ ಪ್ಯಾಕ್‌ನೊಂದಿಗೆ ಬಂದಿದೆ. ಇದು 159 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಈ ಮಾದರಿಯು 80 ಪ್ರತಿಶತದಷ್ಟು ಚಾರ್ಜ್ ಆಗಲು ಈಗ ದೊಡ್ಡ ಬ್ಯಾಟರಿ ಪ್ಯಾಕ್ ಹೊರತಾಗಿಯೂ ಕೇವಲ 4 ಗಂಟೆ ಮತ್ತು 30 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.

Top Five Electric Scooters With Large Boot Space Complete List

ರಿವರ್‌ ಇಂಡೀ(43 ಲೀಟರ್‌): ಎಲೆಕ್ಟ್ರಿಕ್‌ ಸ್ಕೂಟರ್‌ಗಳ ಲೈನ್‌ಅಪ್‌ನಲ್ಲಿ ಅತೀ ಹೆಚ್ಚು ಬೂಟ್‌ಸ್ಪೇಸ್‌ ನೀಡುವ ಕಂಪನಿಯೆಂದರೆ ಅದು ರಿವರ್ ಕಂಪನಿಯ ಇಂಡೀ ಎಂಬ ಸ್ಕೂಟರ್‌. ಇದರಲ್ಲಿ ಬರೋಬ್ಬರಿ 43 ಲೀಟರ್‌ನ ಬೂಟ್‌ ಸ್ಟೋರೇಜ್‌ ಲಭಿಸುತ್ತದೆ. ಈ ಹೊಸ River Indie ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯು ರೂ.1.25 ಲಕ್ಷವಾಗಿದೆ. ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಹೆಚ್ಚಿನ ಸ್ಟೋರೇಜ್ ಸ್ಪೇಸ್, ಪ್ಯಾನಿಯರ್ ಮೌಂಟ್‌ಗಳು, ಮುಂಭಾಗದ ಫುಟ್‌ಪೆಗ್‌ಗಳು ಮತ್ತು ಕ್ರ್ಯಾಶ್ ಗಾರ್ಡ್‌ಗಳಂತಹ ವೈಶಿಷ್ಟ್ಯಗಳೊಂದಿಗೆ ಬಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, May 28, 2024, 13:10 [IST]
English summary
Top five electric scooters with large boot space complete list
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+