ಪರ್ಫೆಕ್ಟ್‌ ಫ್ಯಾಮಿಲಿ ಸ್ಕೂಟರ್‌ ಹುಡುಕುತ್ತಿದ್ದೀರಾ?: ಹಾಗಾದರೆ ಇಲ್ಲಿದೆ ಎಥರ್‌ ರಿಜ್ಟಾ ಖರೀದಿಸಲು ಪ್ರಮುಖ ಕಾರಣಗಳು

ಭಾರತದಲ್ಲಿನ ಎಲೆಕ್ಟ್ರಿಕ್‌ನ ದ್ವಿಚಕ್ರ ವಾಹನ ನಿರ್ಮಾಣ ಕ್ಷೇತ್ರದಲ್ಲಿ ಅಗ್ರಸ್ಥಾನದಲ್ಲಿರುವ ಕಂಪನಿ ಯಾವುದು ಎಂದು ಕೇಳಿದರೆ ಎಲ್ಲರೂ ಕಣ್ಣು ಮುಚ್ಚಿಕೊಂಡು ಹೇಳುವ ಹೆಸರುಗಳಲ್ಲಿ ಒಂದು ಏಥರ್‌. ಬೆಂಗಳೂರು ಮೂಲದ ಎಲೆಕ್ಟ್ರಿಕ್‌ ಸ್ಕೂಟರ್‌ ನಿರ್ಮಾಣ ಕಂಪನಿಯಾಗಿರುವ ಏಥರ್‌, ಈಗಾಗಲೇ ಮಾರುಕಟ್ಟೆಯಲ್ಲಿ ಹಲವು ಎಲೆಕ್ಟ್ರಿಕ್‌ ಸ್ಕೂಟರ್‌ಗಳನ್ನು ನಿರ್ಮಿಸಿ ಮಾರಾಟ ಮಾಡಿ ಜನಮಾನಸವನ್ನು ಗೆದ್ದಿದೆ. ಇವರು ಇದೇ ವರ್ಷದ ಏಥರ್‌ ಕಮ್ಯುನಿಟಿ ದಿನದಂದು ಏಥರ್‌ ರಿಜ್ಟಾ ಎಂಬ ಎಲೆಕ್ಟ್ರಿಕ್‌ ಸ್ಕೂಟರ್‌ ಅನ್ನು ಲಾಂಚ್ ಮಾಡಿದ್ದರು. ಇಂದಿನ ಈ ಲೇಖನದಲ್ಲಿ ಈ ಸ್ಕೂಟರ್‌ ಅನ್ನು ಖರಿದಿಸಲು ಇರುವ ಕಾರಣಗಳನ್ನು ನೋಡೋಣ.

ಏಥರ್‌, ತನ್ನ ಹೊಸ ರಿಜ್ಟಾ (Ather Rizta Electric) ಎಂಬ ಸ್ಕೂಟರ್‌ ಅನ್ನು ಭಾರತೀಯರ ಮುಂದಿಟ್ಟು ತಿಂಗಳುಗಳೇ ಆಗಿದೆ. ಹೊಸ ಎಥರ್ ರಿಜ್ಟಾ ಎಂಬುವುದು ಫ್ಯಾಮಿಲಿ ಸ್ಕೂಟರ್ ಆಗಿದ್ದು, ಇದನ್ನು 450X ಗಿಂತ ಹೆಚ್ಚು ಪ್ರಾಯೋಗಿಕವಾಗಿ ವಿನ್ಯಾಸಗೊಳಿಸಲಾಗಿದೆ. ಈ ಸ್ಕೂಟರ್ ನಲ್ಲಿ ಸೌಕರ್ಯ, ಅನುಕೂಲತೆ ಮತ್ತು ಸುರಕ್ಷತೆಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ.

Ather Rizta Electric Scooter

ವಿನ್ಯಾಸ: ರಿಜ್ಟಾ ಮಾರುಕಟ್ಟೆಗೆ ಬರುವ ವರೆಗೆ, ಏಥರ್‌ ಸ್ಕೂಟರ್‌ಗಳೆಂದರೆ ಗಾತ್ರದಲ್ಲಿ ಚಿಕ್ಕದು ಎಂಬ ರೀತಿಯಲ್ಲಿತ್ತು. ಆದರೆ ರಿಜ್ಟಾ ಸ್ಕೂಟರ್‌ ಮಾರುಕಟ್ಟೆಗೆ ಲಾಂಚ್ ಆಗುವ ಮೂಲಕ ಈ ಮಾತಿಗೆ ತೆರೆ ಬಿದ್ದಿದೆ. ಈ ಬಾರಿ ಏಥರ್‌ ತನ್ನ ರಿಜ್ಟಾ ಸ್ಕೂಟರ್‌ ಅನ್ನು ತನ್ನ 450 ಸರಣಿಯ ಸ್ಕೂಟರ್‌ಗಳಿಗಿಂತಲೂ ದೊಡ್ಡದಾಗಿ ನಿರ್ಮಿಸಿದ್ದು, ಹೆಚ್ಚು ಆರಾಮದಾಯಕ ಪ್ರಯಾಣಕ್ಕಾಗಿ ಸೆಗ್ಮೆಂಟ್‌ನಲ್ಲಿಯೇ ದೊಡ್ಡದಾದ ಸೀಟ್‌ಗಳನ್ನು ನೀಡಿದೆ.

ಈ ಸ್ಕೂಟರ್‌ನ ಹಿಂಬಾಗಕ್ಕೆ ಬಂದಾಗ ಮುಂಭಾಗದಲ್ಲಿ ಇರುವ ಹೆಡ್‌ ಲ್ಯಾಂಪ್‌ ವಿನ್ಯಾಸದ ಟೇಲ್‌ ಲ್ಯಾಂಪ್‌ ಹಾಗೂ ಅದರ ಜೊತೆ ಇಂಡಿಕೇಟರ್‌ಗಳನ್ನು ಕಾಣಬಹುದು. ವಿಶಾಲವಾದ ಸೀಟ್‌ಗೆ ಬ್ಯಾಕ್‌ ರೆಸ್ಟ್‌ಗಳನ್ನು ಅಳವಡಿಸಲಾಗಿದ್ದು, ಇದರ ಸಹಾಯದಿಂದ ಹಿಂಬದಿ ಸವಾರರು ಆರಾಮದಾಯಕ ರೈಡ್‌ ಅನ್ನು ಪಡೆಯಬಹುದು. ಹಲವಾರು ಸಂಧರ್ಭಗಳಲ್ಲಿ ಈ ಬ್ಯಾಕ್‌ ರೆಸ್ಟ್‌ ಹಿಂಬದಿ ಸವಾರರ ಉಪಯೋಗಕ್ಕೆ ಬರುತ್ತವೆ.

Ather Rizta Electric Scooter

ಫೀಚರ್‌ಗಳು: ರಿಜ್ಟಾ ಫ್ಯಾಮಿಲಿ ಸ್ಕೂಟರ್‌ ಆಗಿದ್ದರೂ, ಏಥರ್‌ ಈ ಸ್ಕೂಟರ್‌ನಲ್ಲಿ ಅತ್ಯಾಧುನಿಕ ಫೀಚರ್‌ಗಳನ್ನು ಅಳವಡಿಸಿದ್ದಾರೆ. ಹಲವು ಟೆಕ್‌ಗಳಿಂದ ಕೂಡಿರುವ ರಿಜ್ಟಾದ ಪ್ರಮುಖ ಫೀಚರ್‌ ಎಂದರೆ 7 ಇಂಚ್‌ ಅಳತೆಯಲ್ಲಿರುವ ಇದರ ಟಿಎಫ್‌ಟಿ ಪರದೆ. ಏಥರ್ ರಿಜ್ಟಾ ಎಸ್‌ ಆವೃತ್ತಿಯಲ್ಲಿ‌ 450S ನಿಂದ ಎರವಲು ಪಡೆದ ಡೀಪ್‌ ವ್ಯೂವ್‌ ಎಲ್‌ಸಿಡಿ ಪರದೆಯನ್ನು ಬಳಸಲಾಗಿದೆ.

ಸುರಕ್ಷತೆ: ಈ ಸ್ಕೂಟರ್ ನಲ್ಲಿ ಸೌಕರ್ಯ, ಅನುಕೂಲತೆ ಮತ್ತು ಸುರಕ್ಷತೆಗೆ ಆದ್ಯತೆ ನೀಡಿದೆ. ಈ ಸ್ಕೂಟರ್ ಡ್ಯಾಶ್‌ಬೋರ್ಡ್‌ನಲ್ಲಿ SkidControl ಟೆಕ್ನಾಲಜಿಯನ್ನು ಅಳವಡಿಸಲಾಗಿದೆ. ನಿಮ್ಮ ಸ್ಕೂಟರ್‌ನ ಚಕ್ರಗಳು ಯಾವ ವೇಗದಲ್ಲಿ ತಿರುಗುತ್ತಿದೆ ಎಂಬುದರ ಆಧಾರದ ಮೇಲೆ ಇದು ಕಾರ್ಯ ನಿರ್ವಹಿಸುತ್ತದೆ. ಇದು ಮಾತ್ರವಲ್ಲದೇ ಸ್ಕೂಟರ್‌ ಏನಾದರೂ ಬಿದ್ದರೆ ತನ್ನ ಟೇಲ್‌ ಲೈಟ್‌ ವೇಗವಾಗಿ ಬ್ಲಿಂಕ್‌ ಆಗುವ ಮೂಲಕ ಹಿಂಬದಿ ವಾಹನ ಸವಾರರಿಗೆ ಎಚ್ಚರಿಕೆ ರವಾನಿಸುತ್ತದೆ.

Ather Rizta Electric Scooter

ಬ್ಯಾಟರಿ ಮತ್ತು ರೇಂಜ್‌: ಏಥರ್‌ ರಿಜ್ಟಾ ಸ್ಕೂಟರ್‌ ಪ್ರಮುಖವಾಗಿ ಎರಡು ಬ್ಯಾರಿ ಆಯ್ಕೆಗಳನ್ನು ನೀಡುತ್ತದೆ. ಈ ಎಲೆಕ್ಟ್ರಿಕ್ ಸ್ಕೂಟರ್‌ನ ಬೇಸ್ ರಿಜ್ಟಾ S ಮತ್ತು Z ರೂಪಾಂತರವು 2.9 kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಈ ಮಾದರಿಯು 123 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಈ ಮಾದರಿಯು 80 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

ಈ ರಿಜ್ಟಾ ಸ್ಕೂಟರ್‌ನ ಬ್ಯಾಟರಿ ಪ್ಯಾಕ್‌ ವಾರಂಟಿ ಬಗ್ಗೆ ನೊಡುವುದಾದರೆ, ಏಥರ್‌ ಈ ಸ್ಕೂಟರ್‌ಗೆ ಐದು ವರ್ಷ ಅಥವಾ 60,000km ವಾರಂಟಿಯನ್ನು ನೀಡುತ್ತಿದೆ. ಈ ಸ್ಕೂಟರ್‌ಗೆ ಅಳವಡಿಸಲಾದ ಎಲೆಕ್ಟ್ರಿಕ್‌ ಮೋಟಾರ್ ಸಹಾಯದಿಂದ .76 bhp ಪವರ್‌ ಮತ್ತು 22 Nm ಟಾರ್ಕ್‌ ಅನ್ನು ಉತ್ಪಾದಿಸುತ್ತದೆ. 40km/h ವೇಗವನ್ನು 4.7 ಸೆಕೆಂಡ್‌ಗಳಲ್ಲಿ ತಲುಪುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, July 5, 2024, 18:13 [IST]
English summary
Top reasons to buy ather rizta electric scooter right now
Read more on ather energy india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+