ಮೋಸ ಹೋಗಬೇಡಿ... ರಾಯಲ್ ಎನ್‌ಫೀಲ್ಡ್ ಬಗ್ಗೆ ನಿಮಗೆ ಯಾರೂ ಹೇಳದ ವಿಷಯಗಳಿವು!
ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಭಾರತ ಸೇರಿದಂತೆ ವಿಶ್ವದ ವಿವಿಧ ದೇಶಗಳಲ್ಲಿ ಬಹಳ ಜನಪ್ರಿಯವಾಗಿವೆ. ನಮ್ಮಲ್ಲಿಯೂ ಅನೇಕರಿಗೆ ರಾಯಲ್ ಎನ್‌ಫೀಲ್ಡ್ ಮೋಟಾರ್‌ಸೈಕಲ್ ಮಾಲೀಕರಾಗುವುದು ಕನಸಾಗಿದೆ. ಆದ್ರೆ ಈ ಬ್ರಾಂಡ್‌ನ ಬೈಕ್ ಖರೀದಿಸುವ ಮುನ್ನ ನೀವು ತಿಳಿದುಕೊಳ್ಳಬೇಕಾದ ಹಾಗೂ ಯಾರೂ ತಿಳಿಸಿದ 6 ಪ್ರಮುಖ ವಿಷಯಗಳು ಇಲ್ಲಿವೆ.
ಈ ಬೈಕ್ ವೇಗಕ್ಕಾಗಿ ಅಲ್ಲ: ರಾಯಲ್ ಎನ್‌ಫೀಲ್ಡ್ ಮೋಟಾರ್ ಸೈಕಲ್‌ಗಳ ಶ್ರೇಣಿಯನ್ನು ಕ್ರೂಸರ್ ಎಂದು ಕರೆಯಲಾಗುತ್ತದೆ. ಈ ಬೈಕ್‌ಗಳು ಗಂಟೆಗೆ 80 ರಿಂದ 100 ಕಿ.ಮೀ ವೇಗದಲ್ಲಿ 'ಕ್ರೂಸ್' ಮಾಡಲು ಅನುಕೂಲಕರವಾಗಿರುತ್ತವೆಯೇ ಹೊರತು ತ್ವರಿತ ವೇಗವನ್ನು ಪಡೆಯಲು ಅಲ್ಲ. ಇದರಿಂದಾಗಿ ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನು ಪ್ರವಾಸಕ್ಕೆ ಹೋಗುವವರು ಹೆಚ್ಚಾಗಿ ಬಳಸುತ್ತಾರೆ. ಈ ಬೈಕ್‌ಗಳಲ್ಲಿ ಹೆಚ್ಚಿನ ವೇಗದಲ್ಲಿ ಪ್ರಯಾಣಿಸುವುದು ಸೂಕ್ತವಲ್ಲ.

ಮೈಲೇಜ್ ಮರೆತುಬಿಡಿ: ಭಾರತದಲ್ಲಿ ಇಂಧನ ಬೆಲೆ ತುಂಬಾ ಹೆಚ್ಚಿದೆ. ಎಷ್ಟೋ ಜನ ಹೆಚ್ಚು ಮೈಲೇಜ್ ಪಡೆಯಬೇಕು ಎಂದುಕೊಂಡಿರುತ್ತಾರೆ. ನೀವು ಅವರಲ್ಲಿ ಒಬ್ಬರಾಗಿದ್ದರೆ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ನಿಮಗಾಗಿ ಅಲ್ಲ. ಏಕೆಂದರೆ ರಾಯಲ್ ಎನ್ ಫೀಲ್ಡ್ ಬೈಕ್‌ಗಳಿಗೆ ಅಷ್ಟು ಮೈಲೇಜ್ ಸಿಗುವುದಿಲ್ಲ. ಎಂಜಿನ್ ಗಾತ್ರವನ್ನು ಅವಲಂಬಿಸಿ, ನೀವು 25-35 kmpl ಮೈಲೇಜ್ ಪಡೆಯಬಹುದು ಅಷ್ಟೇ.
ಭಾರೀ ತೂಕ: ಎಲ್ಲಾ ರಾಯಲ್ ಎನ್‌ಫೀಲ್ಡ್ ಮೋಟಾರ್‌ಸೈಕಲ್‌ಗಳು ತುಂಬಾ ಭಾರವಾಗಿರುತ್ತದೆ. ಸುಮಾರು 200 ಕೆ.ಜಿ ಇರುತ್ತವೆ, ಹೊಸಬರಿಂದ ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನು ನಿಭಾಯಿಸುವುದು ಸ್ವಲ್ಪ ಕಷ್ಟ. ಅಕಸ್ಮಾತ್ ಕೆಳಗೆ ಬಿದ್ದರೆ ಮೇಲಕ್ಕೆತ್ತುವುದು ಹೇಗೆ? ಎಂಬುದನ್ನು ತಿಳಿದುಕೊಳ್ಳುವುದು ಕೂಡ ಮುಖ್ಯ. ನೀವು ತಪ್ಪಾಗಿ ಎತ್ತಿದರೆ, ನಿಮ್ಮ ಸೊಂಟಕ್ಕೆ ಹಾನಿಯಾಗಬಹುದು.

ಮಹಿಳೆಯರು ಸ್ಕೂಟರ್ ಸೆಂಟರ್ ಸ್ಟ್ಯಾಂಡ್ ಕೂಡ ಹಾಕುವುದಿಲ್ಲ ಎಂದು ಕೆಲವರು ತಮಾಷೆ ಮಾಡುತ್ತಾರೆ. ಆದರೆ ರಾಯಲ್ ಎನ್‌ಫೀಲ್ಡ್ ಕಂಪನಿಯ ಬೈಕ್‌ಗಳ ವಿಷಯಕ್ಕೆ ಬಂದರೆ, ಕೆಲವೊಮ್ಮೆ ಪುರುಷರೂ ಸಹ ಸೆಂಟರ್ ಸ್ಟ್ಯಾಂಡ್ ಅನ್ನು ಎಳೆಯಲು ಪರದಾಡುತ್ತಾರೆ ಎಂಬುದನ್ನು ನಂಬಲು ಹಿಂಜರಿದರೂ ಇದು ಸತ್ಯದ ಸಂಗತಿ.
ನಿರ್ವಹಣೆ ವೆಚ್ಚಕ್ಕೆ ಸುಸ್ತಾಗಬಹುದು: ರಾಯಲ್ ಎನ್‌ಫೀಲ್ಡ್ ಬೈಕು ಸವಾರಿ ಮಾಡುವುದು ನಿಮಗೆ ಸಂತೋಷವನ್ನು ನೀಡುತ್ತದೆ. ಆದರೆ ಅದು ನಿಮಗೆ ಅಷ್ಟೇ ನಿರ್ವಹಣಾ ವೆಚ್ಚವಾಗುತ್ತದೆ ಎಂದು ತಿಳಿದಿರಲಿ. ಸಾಮಾನ್ಯ ಬೈಕ್‌ಗೆ ಹೋಲಿಸಿದರೆ ರಾಯಲ್ ಎನ್‌ಫೀಲ್ಡ್ ಬೈಕಿನ ಸೇವಾ ವೆಚ್ಚವು ಸುಮಾರು ದ್ವಿಗುಣವಾಗಿದೆ. ಅಲ್ಲದೆ, ಬಿಡಿಭಾಗಗಳು ಸಾಕಷ್ಟು ದುಬಾರಿಯಾಗಿವೆ.

ಹೆಚ್ಚು ಆಧುನಿಕ: ರಾಯಲ್ ಎನ್‌ಫೀಲ್ಡ್ ಈಗ ತನ್ನ ಮೋಟಾರ್‌ಸೈಕಲ್‌ಗಳಲ್ಲಿ ಎಬಿಎಸ್ ಬ್ರೇಕ್ ಸೌಲಭ್ಯವನ್ನು ನೀಡುತ್ತಿದೆ. ಎಬಿಎಸ್ ಬ್ರೇಕ್‌ಗಳನ್ನು ಮುಂಭಾಗ ಮತ್ತು ಹಿಂಭಾಗದ ಎರಡೂ ಚಕ್ರಗಳಲ್ಲಿ ನೀಡಲಾಗಿದೆ. ಇದು ಒತ್ತಡದ ಸಂದರ್ಭಗಳಲ್ಲಿ ಬ್ರೇಕ್ ಮಾಡುವಾಗ ಕೆಳಗೆ ಬೀಳುವ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ. ಜೊತೆಗೆ ಕಾರ್ಬೋರೇಟರ್‌ಗಳ ಬದಲಿಗೆ ಫ್ಯೂಲ್ ಇಂಜೆಕ್ಷನ್‌ನೊಂದಿಗೆ ಬರುತ್ತವೆ. BS-6 ಹೊರಸೂಸುವಿಕೆಯ ಮಾನದಂಡಗಳ ನಂತರ ಈ ಬದಲಾವಣೆ ಬಂದಿದೆ.
ಮರುಮಾರಾಟ ಮೌಲ್ಯ: ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಉತ್ತಮ ಮರುಮಾರಾಟ ಮೌಲ್ಯವನ್ನು ಹೊಂದಿವೆ. ಅಲ್ಲದೆ ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಗೆ ದೀರ್ಘ ಕಾಯುವಿಕೆ ಇರುವ ಕಾರಣ, ಕೆಲವರು ಅವುಗಳನ್ನು ಸೆಕೆಂಡ್ ಹ್ಯಾಂಡ್ ಖರೀದಿಸುತ್ತಾರೆ. ಈ ಎಲ್ಲಾ ವಿಷಯಗಳನ್ನು ತಿಳಿದ ನಂತರ ಎನ್‌ಫೀಲ್ಡ್ ಬೈಕಿನ ಬಗ್ಗೆ ನಿಮಗೊಂದು ಅವಗಾಹನೆ ಬಂದಿರಬಹುದು. ಮೇಲೆ ತಿಳಿಸಿರುವ ಎಲ್ಲಾ ವಿಷಯಗಳು ನಿಮಗೆ ಸಮ್ಮತಿಯೆನಿಸಿದರೆ ನಿರಾಳವಾಗಿ ಬೈಕನ್ನು ಖರೀದಿಸಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








