ಆಕರ್ಷಕ ವಿನ್ಯಾಸದ ಹೊಸ ಕವಾಸಕಿ Z650RS ಬೈಕ್ ವಿಶೇಷತೆಗಳು

ಜಪಾನ್ ಮೂಲದ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಕವಾಸಕಿ (Kawasaki) ತನ್ನ ಕವಾಸಕಿ Z650RS ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಸಿತು. ಈ ಹೊಸ ಕವಾಸಕಿ Z650RS (Kawasaki Z650RS) ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.6.99 ಲಕ್ಷ ಆಗಿದೆ.

ಈ ಹೊಸ ಕವಾಸಕಿ Z650RS ಮಾದರಿಯು ನಿಯೋ-ರೆಟ್ರೋ ಮಿಡ್ ಬೈಕ್ ಆಗಿದೆ. 1970ರ ದಶಕದ ಮೂಲ ಕವಾಸಕಿ Z650-B1 ನಿಂದ ಸಾಕಷ್ಟು ವಿನ್ಯಾಸ ಅಂಶಗಳನ್ನು ಪಡೆದುಕೊಂಡಿದೆ. ಈ ಹೊಸ ಕವಾಸಕಿ Z650RS ಮಾದರಿಯು ಕವಾಸಕಿ Z650 ಅನ್ನು ಆಧರಿಸಿದೆ. ಈ ಹೊಸ ಕವಾಸಕಿ Z650RS ನಿಯೋ-ರೆಟ್ರೋ ಬೈಕ್ ಆಗಿದ್ದರೂ, ಇದು ಸಾಕಷ್ಟು ಆಧುನಿಕ ಅಂಶಗಳೊಂದಿಗೆ ಬರುತ್ತದೆ, ಇದು ಒಟ್ಟಾರೆ ದೃಶ್ಯ ಆಕರ್ಷಣೆಯನ್ನು ಸುಧಾರಿಸಿದೆ.

Kawasaki Z650RS

ಎಂಜಿನ್: ಈ ಹೊಸ ಕವಾಸಕಿ Z650Rs ಬೈಕ್ ಟ್ರೆಲ್ಲಿಸ್ ಫ್ರೇಮ್ ಚಾಸಿಸ್ ಮತ್ತು 650cc ಲಿಕ್ವಿಡ್-ಕೂಲ್ಡ್ ಪ್ಯಾರಲಲ್-ಟ್ವಿನ್ ಸಿಲಿಂಡರ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 67 bhp ಮತ್ತು 64 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ವಿನ್ಯಾಸ: ಈ ಹೊಸ ಕವಾಸಕಿ Z650Rs ಬೈಕ್ ವಿನ್ಯಾಸದ ಬಗ್ಗೆ ಹೇಳುವುದಾದರೆ, ಈ ಬೈಕ್ ದಪ್ಪ ಕ್ರೋಮ್ ಸರೌಂಡ್ ಹೊಂದಿರುವ ರೌಂಡ್ ಹೆಡ್‌ಲೈಟ್‌ಗಳು, ಟ್ವಿನ್-ಪಾಡ್ ಅನಲಾಗ್ ಇನ್ಸ್ಟ್ರುಮೆಂಟ್ ಕನ್ಸೋಲ್ ಮತ್ತು ಸ್ವಲ್ಪ ಉದ್ದವಾದ ಟೇಲ್ ವಿಭಾಗವನ್ನು ಹೊಂದಿದೆ. ಈ ಬೈಕ್ ಸ್ಲಿಮ್ ಮತ್ತು ಸ್ಪಷ್ಟವಾದ LED ಇಂಡಿಕೇಟರ್ ಮತ್ತು LED ಹೆಡ್‌ಲ್ಯಾಂಪ್ ಸೆಟಪ್‌ನಂತಹ ಒಟ್ಟಾರೆ ಸವಾರಿ ಅನುಭವವನ್ನು ಸುಧಾರಿಸಿದೆ.

Kawasaki Z650RS

ಸಸ್ಪೆಕ್ಷನ್ ಸೆಟಪ್: ಈ ಹೊಸ ಕವಾಸಕಿ Z650Rs ಬೈಕ್ ಬಗ್ಗೆ ಸಸ್ಪೆಕ್ಷನ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 41mm ಟೆಲಿಸ್ಕೋಪಿಕ್ ಫೋರ್ಕ್‌ಗಳೊಂದಿಗೆ ಒಂದೇ ರೀತಿಯ ಸಸ್ಪೆನ್ಶನ್ ಸೆಟಪ್ ಅನ್ನು ಸಹ ಬಳಸುತ್ತದೆ ಮತ್ತು ಪ್ರಿ-ಲೋಡ್ ಲೋಡ್‌ಗೆ ಸರಿಹೊಂದಿಸಬಹುದಾದ ಹಿಂಭಾಗದಲ್ಲಿ ಸಮತಲ ಲಿಂಕ್ ಸಸ್ಪೆಕ್ಷನ್ ಸೆಟಪ್ ಆಗಿದೆ.

ಬ್ರೇಕಿಂಗ್ ಸಿಸ್ಟಂ: ವಾಹನದ ಸುರಕ್ಷತಯಲ್ಲಿ ಬ್ರೇಕಿಂಗ್ ಸಿಸ್ಟಂ ಪ್ರಮುಖ ಪಾತ್ರವಹಿಸುತ್ತದೆ. ಈ ಹೊಸ ಕವಾಸಕಿ Z650Rs ಬೈಕಿನಲ್ಲಿ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಡ್ಯುಯಲ್-ಪೆಟಲ್ ಡಿಸ್ಕ್ ಬ್ರೇಕ್ ಸೆಟಪ್ ಅನ್ನು ಹೊಂದಿದೆ. ಇನ್ನು ಹೆಚ್ಚಿನ ಸುರಕ್ಷತೆಗಾಗಿ ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ನೀಡಲಾಗಿದೆ. ಕವಾಸಕಿ Z650RS ಬೈಕಿನಲ್ಲಿ ಸ್ಟ್ಯಾಂಡರ್ಡ್ ರೋಟರ್‌ಗಳನ್ನು ಬಳಸಲು ನಿರ್ಧರಿಸಿದೆ.

Kawasaki Z650RS

ಫೀಚರ್ಸ್: ಈ ಕವಾಸಕಿ Z650Rs ಬೈಕ್ ಫೀಚರ್ಸ್ ಬಗ್ಗೆ ಹೇಳುವುದಾದರೆ, ಈ ಬೈಕಿನಲ್ಲಿ ಫುಲ್ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಅನ್ನು ಹೆಚ್ಚು ಸಾಂಪ್ರದಾಯಿಕ ಟ್ವಿನ್-ಪಾಡ್ ಅನಲಾಗ್ ಇನ್ಸ್ಟ್ರುಮೆಂಟ್ ಕನ್ಸೋಲ್‌ನಿಂದ ಬದಲಾಯಿಸಲಾಗಿದೆ. ಹೆಚ್ಚುವರಿ ಮಾಹಿತಿಯನ್ನು ಪ್ರದರ್ಶಿಸಲು ಕವಾಸಕಿ ಅನಲಾಗ್ ಸ್ಪೀಡೋಮೀಟರ್ ಮತ್ತು ಟ್ಯಾಕೋಮೀಟರ್ ನಡುವೆ ಸಣ್ಣ LCD ಅನ್ನು ಸೇರಿಸಿದೆ.

ಇನ್ನು ಕವಾಸಕಿ ಕಂಪನಿಯು ಭಾರತದಲ್ಲಿ ತನ್ನ ಕವಾಸಕಿ ಡಬ್ಲ್ಯು175 ಸ್ಟ್ರೀಟ್ ಬೈಕ್ ಮೊದಲ ನೋಟದಲ್ಲೇ ಗಮನ ಸೆಳೆಯುವ ರೆಟ್ರೊ ಕ್ಲಾಸಿಕ್ ಶೈಲಿಯನ್ನು ಒಳಗೊಂಡಿದೆ. ಈ ಹೊಸ ಕವಾಸಕಿ ಬೈಕ್ ಕಾಂಪ್ಯಾಕ್ಟ್ 177 ಸಿಸಿ ಎಂಜಿನ್‌ನೊಂದಿಗೆ ಬರುತ್ತದೆ. ಇದು ಭಾರತದಲ್ಲಿನ ಅತ್ಯಂತ ಕೈಗೆಟುಕುವ ಕವಾಸಕಿ ಬೈಕ್ ಗಳಲ್ಲಿ ಒಂದಾಗಿದೆ. ಕವಾಸಕಿ ಡಬ್ಲ್ಯು175 ಸ್ಟ್ರೀಟ್ ಬೈಕಿನಲ್ಲಿ 177 cc ಸಿಂಗಲ್-ಸಿಲಿಂಡರ್, ಫ್ಯುಯಲ್-ಇಂಜೆಕ್ಟೆಡ್ ಎಂಜಿನ್‌ ಅನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, February 17, 2024, 13:11 [IST]
English summary
Top things about the new kawasaki z650rs details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+