ಬಿಡುಗಡೆಗೂ ಮುನ್ನ ಶೋರೂಮ್ ತಲುಪಿದ ಟ್ರಯಂಫ್‌ನ ಟ್ರಂಫ್ ಕಾರ್ಡ್: ಇನ್ಮೇಲೆ ಇದರದ್ದೇ ಹವಾ!
ಭಾರತದಲ್ಲಿ ಸೂಪರ್‌ಬೈಕ್ ಹಾವಳಿ ಸಿಕ್ಕಾಪಟ್ಟೆ ಹೆಚ್ಚಾಗುತ್ತಿದೆ. ದಿನಕ್ಕೊಂದರಂತೆ ಬೈಕ್ ನಿರ್ಮಾಣ ಕಂಪನಿಗಳು ಸೂಪರ್ ಬೈಕ್‌ಗಳನ್ನು ಮಾರುಕಟ್ಟೆಗೆ ತರುತ್ತಿದೆ. ಇನ್ನು ಸಾಕಷ್ಟು ವರ್ಷಗಳ ಹಿಂದೆ ಉತ್ಪಾದನೆಯನ್ನು ನಿಲ್ಲಿಸಿದ್ದ ಮಾಡೆಲ್‌ಗಳನ್ನು ಸಹ ಕಂಪನಿಗಳು ಇದೀಗ ಮಾರುಕಟ್ಟೆಗೆ ತರುತ್ತಿದೆ. ಅಂತಹ ಸೂಪರ್ ಬೈಕ್‌ನಲ್ಲಿ ಟ್ರಯಂಫ್ ಕಂಪನಿಯ ಡೇಟೋನಾ ಸಹ ಒಂದು. ಈ ಹಿಂದೆ ಮಾರುಕಟ್ಟೆಯಲ್ಲಿ ಟ್ರಯಂಫ್, ಡೇಟೋನಾ 675r ಎಂಬ ಬೈಕ್ ಅನ್ನು ಮಾರಾಟ ಮಾಡಿ, ಆ ನಂತರದಲ್ಲಿ ಅದರ ಉತ್ಪಾದನೆಯನ್ನು ನಿಲ್ಲಿಸಿತ್ತು. ಇತ್ತೀಚೆಗಷ್ಟೇ ಕಂಪನಿ ಮತ್ತೆ ಡೇಟೋನಾ 660 ಅನಾವರಣ ಮಾಡಿತ್ತು.
ಇದೀಗ ಕಂಪನಿ ಹೊಸ ಡೇಟೋನಾ 660 ಬೈಕ್ ಮಾದರಿಯನ್ನು ಡೀಲರ್‌ಶಿಪ್‌ಗೆ ತಲುಪಿಸಿದ್ದು, ಕೊಂಚ ದಿನಗಳಲ್ಲೇ ಇದನ್ನು ಮಾರುಕಟ್ಟೆಗೆ ಲಾಂಚ್ ಮಾಡಲಿದೆ. ಈ ಬೈಕ್ ಈ ಹಿಂದೆಯೇ ಅಂದರೆ ಎಪ್ರಿಲ್ ಅಥವಾ ಮೇ ತಿಂಗಳಲ್ಲಿಯೇ ಭಾರತದಲ್ಲಿ ಮಾರಾಟಕ್ಕೆ ಲಭ್ಯವಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ಕಂಪನಿ ಈ ಬೈಕ್‌ನ ಲಾಂಚ್ ಅನ್ನು ಮುಂದಕ್ಕೆ ಹಾಕಿತ್ತು.

ಟ್ರಯಂಫ್ ಟ್ರಿಡಿಯಂಟ್ 660 ಬೈಕ್‌ನ ಅದೇ ಪ್ಲಾಟ್‌ಫಾರ್ಮ್‌ನಲ್ಲಿ ಈ ಬೈಕ್ ಅನ್ನು ಸಹ ಕಂಪನಿ ನಿರ್ಮಿಸುತ್ತಿದೆ. ಫುಲ್ಲೀ ಫೇರ್ಡ್ ಅಗ್ರೆಸಿವ್ ಸ್ಪೋರ್ಟ್ಸ್ ಬೈಕಾಗಿರುವ ಹೊಸ ಡೇಟೋನಾ 660 , ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಬೈಕ್ ಪ್ರೇಮಿಗಳ ಹೃದಯವನ್ನು ಗೆಲ್ಲಲಿದೆ ಎಂಬುದರಲ್ಲಿ ಎರಡು ಮಾತಿಲ್ಲ.
ಈ ಬೈಕ್ ಬಗ್ಗೆ ನೋಡುವುದಾದರೆ, ಟ್ರಯಂಫ್ ಡೇಟೋನಾ 660 ಬೈಕಿನಲ್ಲಿ ಅದೇ ಇನ್-ಲೈನ್ ಮೂರು-ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 11,250 rpm ನಲ್ಲಿ 93.70 bhp ಪವರ್ ಮತ್ತು 8,250 rpm ನಲ್ಲಿ 69 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಈ ಹೊಸ ಟ್ರಯಂಫ್ ಡೇಟೋನಾ 660 ಬೈಕಿನಲ್ಲಿ ರೋಡ್ ಮತ್ತು ರೈನ್ ರೈಡಿಂಗ್ ಮೋಡ್‌ಗಳ ಹೊರತಾಗಿ, ಬ್ರ್ಯಾಂಡ್ ಹೊಸ ಸ್ಪೋರ್ಟ್ ರೈಡಿಂಗ್ ಮೋಡ್ ಅನ್ನು ಸೇರಿಸಿದೆ. ಈ ಬೈಕಿನ ಸೀಟ್ ಎತ್ತರವು 810 ಎಂಎಂ ಆಗಿದ್ದು, ಇದು ತುಂಬಾ ಎತ್ತರವಾಗಿರುವುದಿಲ್ಲ. ಎಲ್ಲಾ ಜನರಿಗೆ ಆರಾಮದಾಯಕವಾದ ಸೀಟಿಂಗ್ ಆಗಿದೆ. ಈ ಹೊಸ ಟ್ರಯಂಫ್ ಡೇಟೋನಾ 660 ಬೈಕ್ ವಿನ್ಯಾಸವು ಸಾಕಷ್ಟು ಸ್ಪೋರ್ಟಿಯಾಗಿ ಕಾಣುತ್ತದೆ.
ಹೊಸ ಟ್ರಯಂಫ್ ಡೇಟೋನಾ 660 ಬೈಕಿನ ಸಸ್ಪೆಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಕೊಳವೆಯಾಕಾರದ ಸ್ಟೀಲ್ ಫ್ರೇಮ್ 41 ಎಂಎಂ ಅಪ್-ಸೈಡ್ ಡೌನ್ ಪ್ರತ್ಯೇಕ ಕಾರ್ಯ ಬಿಗ್ ಪಿಸ್ಟನ್ ಫೋರ್ಕ್‌ಗಳಿಂದ ಸೆಟಪ್ ಇದೆ. ಇದರ ಮುಂಭಾಗದಲ್ಲಿ 110 ಎಂಎಂ ಟ್ರ್ಯಾವೆಲ್ ಮತ್ತು ಹಿಂಭಾಗದಲ್ಲಿ ಶೋವಾ ಮೊನೊಶಾಕ್ ಪ್ರಿ-ಲೋಡ್ ಮತ್ತು 130 ಎಂಎಂ ಟ್ರ್ಯಾವೆಲ್ ಅನ್ನು ಹೊಂದಿದೆ.

ಟ್ರಯಂಫ್ ಮೋಟಾರ್‌ಸೈಕಲ್ಸ್ ಭಾರತದಲ್ಲಿ ಟ್ರಯಂಫ್ ಸ್ಪೀಡ್ 400 (Triumph Speed 400) ಬೈಕನ್ನು ಬಿಡುಗಡೆಗೊಳಿಸಿತು. ಟ್ರಯಂಫ್ ಕಂಪನಿಯು ತನ್ನ ಈ ಟ್ರಯಂಫ್ ಸ್ಪೀಡ್ 400 ಬೈಕಿನ ವಿತರಣೆಯನ್ನು ಈಗಾಗಲೇ ಪ್ರಾರಂಭಿಸಿದೆ. ಈ ಬೈಕನ್ನು ಪರಿಚಯಾತ್ಮಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.2.23 ಲಕ್ಷವಾಗಿತ್ತು. ಹೊಸ ಟ್ರಯಂಫ್ ಸ್ಪೀಡ್ 400 ಬೈಕಿನ ಎಂಜಿನ್ ಬಗ್ಗೆ ಹೇಳುವುದಾದರೆ, 398.15cc, ಲಿಕ್ವಿಡ್-ಕೂಲ್ಡ್, 4-ವಾಲ್ವ್, DOHC, ಓವರ್‌ಸ್ಕ್ವೇರ್ ಎಂಜಿನ್ ಅನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








