ಯುವಕರ ಮನಸೆಳೆಯಬಲ್ಲ 2 ಟ್ರಯಂಫ್ ಬೈಕ್‌ಗಳು ಬಿಡುಗಡೆ.. ಅಗ್ಗದ ಬೆಲೆ.. ನಿರೀಕ್ಷೆಗೂ ಮೀರಿದ ವೈಶಿಷ್ಟ್ಯಗಳು!

ಬ್ರಿಟನ್ ಮೂಲದ ಟ್ರಯಂಫ್ ಮೋಟಾರ್‌ಸೈಕಲ್ (Triumph Motorcycle) ಹಾಗೂ ಬಜಾಜ್ ಆಟೋ (Bajaj Auto) ಕಂಪನಿಗಳು ಭಾರತದ ಮಾರುಕಟ್ಟೆಯಲ್ಲಿ ಪಾಲುದಾರಿಕೆ ಹೊಂದಿವೆ. ಅದರ ಭಾಗವಾಗಿ ನವೀನ ವಿನ್ಯಾಸ ಹಾಗೂ ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿರವ ವಿವಿಧ ಬೈಕ್‌ಗಳನ್ನು ಮಾರಾಟಕ್ಕೆ ತರುತ್ತಿವೆ. ಇಂದು (ಮಂಗಳವಾರ), ಹೊಚ್ಚ ಹೊಸ ಟ್ರಯಂಫ್ ಸ್ಪೀಡ್ ಟಿ4 (Triumph Speed T4) ಮತ್ತು ಟ್ರಯಂಫ್ ಸ್ಪೀಡ್ 400 (Triumph Speed 400) ಮೋಟಾರ್‌ಸೈಕಲ್‌ಗಳನ್ನು ಬಿಡುಗಡೆಗೊಳಿಸಲಾಗಿದೆ. ಇಲ್ಲಿ ನೂತನ ಬೈಕ್‌ಗಳ ಬೆಲೆ ಹಾಗೂ ವಿಶೇಷತೆ ಕುರಿತಂತೆ ಸಂಪೂರ್ಣವಾಗಿ ತಿಳಿಸಿಕೊಟ್ಟಿದ್ದೇವೆ.

ಟ್ರಯಂಫ್ ಸ್ಪೀಡ್ ಟಿ4 (Triumph Speed T4): ಈ ಬೈಕ್‌ನ್ನು ಅತ್ಯಂತ ಕೈಗೆಟುಕುವ ಬೆಲೆಗೆ ಪರಿಚಯಿಸಲಾಗಿದ್ದು, ರೂ.2.17 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಲಭ್ಯವಿದೆ. ಈಗಾಗಲೇ ಬುಕ್ಕಿಂಗ್ ಕೂಡ ಶುರುವಾಗಿದೆ. ಆಸಕ್ತ ಗ್ರಾಹಕರು ಕಂಪನಿಯ ಅಧಿಕೃತ ವೆಬ್‌ಸೈಟ್‌ ಅಥವಾ ಸಮೀಪದ ಡೀಲರ್‌ಶಿಪ್‌ಗೆ ಭೇಟಿ ನೀಡಿ, ನೂತನ ಮೋಟಾರ್‌ಸೈಕಲ್‌ನ್ನು ಕಾಯ್ದಿರಿಬಹುದು.

Triumph Speed T4 And Speed 400 Motorcycles Launched In India Rs 2 17 Lakh Starting Price Details

ಹೊಚ್ಚ ಹೊಸ ಸ್ಪೀಡ್ ಟಿ4 ಮೋಟಾರ್‌ಸೈಕಲ್ ವಿನ್ಯಾಸ (ಡಿಸೈನ್) ಬಹುತೇಕ 'ಸ್ಪೀಡ್ 400' ಬೈಕ್‌ಗೆ ಹೋಲಿಕೆಯಾಗುತ್ತದೆ. ವೈಟ್ (ಬಿಳಿ), ರೆಡ್ (ಕೆಂಪು) ಹಾಗೂ ಬ್ಲ್ಯಾಕ್ (ಕಪ್ಪು) ಎಂಬ 3 ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ. ಬ್ಲೂಟೂತ್ ಕನೆಕ್ಟಿವಿಟಿಯೊಂದಿಗೆ ಅನಲಾಗ್-ಡಿಜಿಟಲ್ ಡಿಸ್ಪ್ಲೇ ಮತ್ತು ಟ್ರಾಕ್ಷನ್ ಕಂಟ್ರೋಲ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.

ಈ ಟ್ರಯಂಫ್ ಸ್ಪೀಡ್ ಟಿ4 ಬೈಕ್, 399 ಸಿಸಿ ಸಿಂಗಲ್-ಸಿಲಿಂಡರ್ ಲಿಕ್ವಿಡ್ ಕೋಲ್ಡ್ ಪೆಟ್ರೋಲ್ ಎಂಜಿನ್‌ನ್ನು ಒಳಗೊಂಡಿದೆ. 7000ಆರ್‌ಪಿಎಂನಲ್ಲಿ 30.6 ಬಿಹೆಚ್‍ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 5000ಆರ್‌ಪಿಎಂನಲ್ಲಿ 36 ಎನ್ಎಂ (ನ್ಯೂಟನ್ ಮೀಟರ್) ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, 6-ಸ್ಪೀಡ್ ಗೇರ್‌ಬಾಕ್ಸ್‌ನ್ನು ಪಡೆದಿದೆ.

Triumph Speed T4 And Speed 400 Motorcycles Launched In India Rs 2 17 Lakh Starting Price Details

ನೂತನ ಸ್ಪೀಡ್ ಟಿ4 ಮೋಟಾರ್‌ಸೈಕಲ್ ಸುರಕ್ಷತೆ ದೃಷ್ಟಿಯಿಂದ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ಸ್ ಸಸ್ಪೆನ್ಷನ್ ಸೆಟಪ್ ಹೊಂದಿದೆ. ಹ್ಯಾಂಡಲ್ ಬಾರ್‌ನ ಎರಡು ತುದಿಗಳಲ್ಲಿ ಡಿಸ್ಕ್ ಬ್ರೇಕ್‌ ಆಯ್ಕೆಯನ್ನು ಪಡೆದಿದೆ. 17-ಇಂಚಿನ ವೀಲ್‌ಗಳನ್ನು ಒಳಗೊಂಡಿದ್ದು, ಅಪೊಲೊ ಆಲ್ಫಾ ಹೆಚ್1 ಟೈರ್‌ಗಳು ಅಥವಾ ಎಂಆರ್‌ಎಫ್‌ ಸ್ಟೀಲ್ ಬ್ರೇಸ್ ಟೈರ್‌ಗಳನ್ನು ಹೊಂದಿರಲಿದೆ.

ಟ್ರಯಂಫ್ ಸ್ಪೀಡ್ 400 (Triumph Speed 400): ಈ ಬೈಕ್‌ ಕೆಲವೊಂದು ಸಣ್ಣ-ಪುಟ್ಟ ನವೀಕರಣಗಳನ್ನು ಪಡೆದುಕೊಂಡು ಮಾರಾಟಕ್ಕೆ ಬಂದಿದೆ. ಇದು ರೂ.2.4 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಹಳೆಯ 'ಸ್ಪೀಡ್ 400'ಗೆ ಹೋಲಿಕೆ ಮಾಡಿದರೆ ರೂ.15,000 ದುಬಾರಿಯಾಗಿದೆ. ಇದರ ಬುಕ್ಕಿಂಗ್ ಸಹ ಪ್ರಾರಂಭವಾಗಿದ್ದು, ಕೆಲವೇ ದಿನಗಳಲ್ಲಿ ವಿತರಣೆಯಾಗುವ ನಿರೀಕ್ಷೆಯಿದೆ.

ಹೊಚ್ಚ ಹೊಸ ಸ್ಪೀಡ್ ಮೋಟಾರ್‌ಸೈಕಲ್ ರೇಸಿಂಗ್ ಯೆಲ್ಲೋ, ಫ್ಯಾಂಟಮ್ ಬ್ಲ್ಯಾಕ್, ಪರ್ಲ್ ಮೆಟಾಲಿಕ್ ವೈಟ್ ಹಾಗೂ ರೇಸಿಂಗ್ ರೆಡ್ ಬಣ್ಣದ (ಕಲರ್) ಆಯ್ಕೆಯಲ್ಲಿಯೂ ಲಭ್ಯವಿದೆ. ಈ ಬೈಕ್ ಸೀಟನ್ನು (ಆಸನ) ಮೇಲ್ದರ್ಜೆಗೇರಿಸಲಾಗಿದ್ದು, ದೂರದ ಊರುಗಳಿಗೆ ಆರಾಮದಾಯಕವಾಗಿ ಪ್ರಯಾಣಿಸಬಹುದು. ಜೊತೆಗೆ ಅಡ್ಜಸ್ಟಬಲ್ ಬ್ರೇಕ್‌ಗಳು ಮತ್ತು ಕ್ಲಚ್ ಲಿವರ್‌ಗಳನ್ನು ಹೊಂದಿದೆ.

ಈ ಟ್ರಯಂಫ್ ಸ್ಪೀಡ್ 400 ಬೈಕ್‌, 399 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್-ಕೋಲ್ಡ್ ಪೆಟ್ರೋಲ್ ಎಂಜಿನ್ ಪಡೆದಿದೆ. 8,000ಆರ್‌ಪಿಎಂನಲ್ಲಿ 39.5 ಬಿಹೆಚ್‍ಪಿ ಅಶ್ವ ಶಕ್ತಿ ಮತ್ತು 6,500ಆರ್‌ಪಿಎಂನಲ್ಲಿ 39 ಎನ್ಎಂ ಟಾರ್ಕ್ ಹೊರಹಾಕುತ್ತದೆ. 6-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. ರೈಡ್-ಬೈ-ವೈರ್ ಥ್ರೊಟಲ್, ಫುಲ್-ಎಲ್ಇಡಿ ಲೈಟಿಂಗ್, ಡುಯಲ್-ಚಾನೆಲ್ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಮತ್ತು ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, September 17, 2024, 13:47 [IST]
English summary
Triumph speed t4 and speed 400 motorcycles launched in india rs 2 17 lakh starting price details
Read more on triumph india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+