ನಿನ್ನೆಯಷ್ಟೇ ಬಿಡುಗಡೆ.. ಯುವಕರ ಫೇವರಿಟ್ ಟ್ರಯಂಫ್ ಸ್ಪೀಡ್ ಟಿ4 ಬೈಕ್ ಕುರಿತ ಪ್ರಮುಖಾಂಶಗಳು: ಬೆಲೆ ಎಷ್ಟು?

ಬ್ರಿಟನ್ ಮೂಲದ ಟ್ರಯಂಫ್ ಮೋಟಾರ್‌ಸೈಕಲ್ (Triumph Motorcycle) ಹಾಗೂ ಬಜಾಜ್ ಆಟೋ (Bajaj Auto) ಕಂಪನಿಗಳು ಸಹಭಾಗಿತ್ವ ಹೊಂದಿದ್ದು, ದೇಶೀಯ ಮಾರುಕಟ್ಟೆಯಲ್ಲಿ ವಿವಿಧ ಪ್ರೀಮಿಯಂ ಬೈಕ್‌ಗಳನ್ನು ಮಾರಾಟ ಮಾಡುತ್ತಿವೆ. ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಮಂಗಳವಾರ (ಸೆಪ್ಟೆಂಬರ್ 17) ನೂತನ ಟ್ರಯಂಫ್ ಸ್ಪೀಡ್ ಟಿ4 (Triumph Speed T4) ಮೋಟಾರ್‌ಸೈಕಲ್‌ನ್ನು ಪರಿಚಯಿಸಲಾಗಿದೆ. ಇಲ್ಲಿ ನೂತನ ಬೈಕ್‌ನ ಬೆಲೆ, ಕಾರ್ಯಕ್ಷಮತೆ ಹಾಗೂ ವೈಶಿಷ್ಟ್ಯಗಳು ಸೇರಿದಂತೆ 5 ಪ್ರಮುಖಾಂಶಗಳ ಕುರಿತಂತೆ ಸಂಪೂರ್ಣವಾಗಿ ವಿವರಿಸಿದ್ದೇವೆ.

ಬೆಲೆ: ನೂತನ ಟ್ರಯಂಫ್ ಸ್ಪೀಡ್ ಟಿ4 (Triumph Speed T4) ಬೈಕ್‌ ಅತ್ಯಂತ ಕೈಗೆಟುಕುವ ಬೆಲೆಗೆ ಖರೀದಿಗೆ ದೊರೆಯುತ್ತದೆ. ಇದು ರೂ.2.17 ಲಕ್ಷ (ಎಕ್ಸ್ ಶೋರೂಂ) ಬೆಲೆಯನ್ನು ಹೊಂದಿದೆ. ಸದ್ಯ ಬುಕ್ಕಿಂಗ್ ಪ್ರಾರಂಭವಾಗಿದೆ. ಆಸಕ್ತ ಗ್ರಾಹಕರು ಕಂಪನಿಯ ಅಧಿಕೃತ ವೆಬ್‌ಸೈಟ್‌ ಅಥವಾ ಸಮೀಪದ ಡೀಲರ್‌ಶಿಪ್‌ಗೆ ಭೇಟಿ ನೀಡಿ, ನೂತನ ಮೋಟಾರ್‌ಸೈಕಲ್‌ನ್ನು ಕಾಯ್ದಿರಿಬಹುದು. ಶೀಘ್ರದಲ್ಲಿಯೇ ವಿತರಣೆ ಶುರುವಾಗುವ ನಿರೀಕ್ಷೆಯಿದೆ.

Triumph Speed T4 Bike Top 5 Things Yesterday Launched

ಕಾರ್ಯಕ್ಷಮತೆ: ಈ ಹೊಸ ಮೋಟಾರ್‌ಸೈಕಲ್ 399 ಸಿಸಿ ಸಿಂಗಲ್-ಸಿಲಿಂಡರ್ ಲಿಕ್ವಿಡ್ ಕೋಲ್ಡ್ ಪೆಟ್ರೋಲ್ ಎಂಜಿನ್‌ನ್ನು ಹೊಂದಿದೆ. 30.6 ಬಿಹೆಚ್‍ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 36 ಎನ್ಎಂ (ನ್ಯೂಟನ್ ಮೀಟರ್) ಟಾರ್ಕ್ ಹೊರಹಾಕುವ ಸಾಮರ್ಥ್ಯ ಒಳಗೊಂಡಿದೆ. 6-ಸ್ಪೀಡ್ ಗೇರ್‌ಬಾಕ್ಸ್‌ನ್ನು ಪಡೆದಿದೆ.

ವಿನ್ಯಾಸ: ನೂತನ ಸ್ಪೀಡ್ ಟಿ4 ಮೋಟಾರ್‌ಸೈಕಲ್ ಆಕರ್ಷಕವಾದ ವಿನ್ಯಾಸ (ಡಿಸೈನ್) ಹೊಂದಿದೆ. ಬಹುತೇಕ 'ಸ್ಪೀಡ್ 400' ಬೈಕ್‌ಗೆ ಹೋಲಿಕೆಯಾಗುತ್ತದೆ. ವೈಟ್, ರೆಡ್ ಮತ್ತು ಬ್ಲ್ಯಾಕ್ ಎಂಬ 3 ಬಣ್ಣಗಳ ಆಯ್ಕೆಯಲ್ಲಿಯೂ ಲಭ್ಯವಿದೆ. ಇದರೊಟ್ಟಿಗೆ ಮರುವಿನ್ಯಾಸಗೊಳಿಸಲಾದ ಫ್ಯುಯೆಲ್ (ಇಂಧನ) ಟ್ಯಾಂಕ್, ಮೇಲ್ದರ್ಜೆಗೇರಿಸಿದ ಸೀಟ್ (ಆಸನ) ಮತ್ತು ಹೊಸದಾದ ಬಾರ್-ಎಂಡ್ ಮಿರರ್‌ಗಳನ್ನು ಒಳಗೊಂಡಿದೆ.

Triumph Speed T4 Bike Top 5 Things Yesterday Launched

ವೈಶಿಷ್ಟ್ಯಗಳು: ಟ್ರಯಂಫ್ ಸ್ಪೀಡ್ ಟಿ4 ಬೈಕ್‌ ಎಲ್ಇಡಿ ಲೈಟಿಂಗ್, ಬ್ಲೂಟೂತ್ ಕನೆಕ್ಟಿವಿಟಿಯೊಂದಿಗೆ ಅನಲಾಗ್ ಡಿಜಿಟಲ್ ಡಿಸ್ಪ್ಲೇ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು (ಫೀಚರ್) ಹೊಂದಿದೆ. 17-ಇಂಚಿನ ವೀಲ್‌ಗಳನ್ನು ಒಳಗೊಂಡಿದ್ದು, ಅಪೊಲೊ ಆಲ್ಫಾ ಹೆಚ್1 ಟೈರ್‌ಗಳು ಅಥವಾ ಎಂಆರ್‌ಎಫ್‌ ಸ್ಟೀಲ್ ಬ್ರೇಸ್ ಟೈರ್‌ಗಳನ್ನು ಪಡೆದಿರಲಿದೆ.

ಸಸ್ಪೆನ್ಷನ್ ಸೆಟಪ್ & ಬ್ರೇಕಿಂಗ್ ಸಿಸ್ಟಮ್: ಈ ಬೈಕ್ ಮುಂಭಾಗ (ಫ್ರಂಟ್) 43 ಎಂಎಂ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗ (ರೇರ್) ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ಒಳಗೊಂಡಿದೆ. ಜೊತೆಗೆ ಮುಂದೆ 300 ಎಂಎಂ ಹಾಗೂ ಹಿಂದೆ 230 ಎಂಎಂ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಪಡೆದಿದ್ದು, ಡುಯಲ್ ಚಾನೆಲ್ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಸಹ ಒಳಗೊಂಡಿದೆ.

Triumph Speed T4 Bike Top 5 Things Yesterday Launched

ಟ್ರಯಂಫ್ ಸ್ಪೀಡ್ 400 (Triumph Speed 400) ವಿಶೇಷತೆ ಏನು: ಟ್ರಯಂಫ್ ಸ್ಪೀಡ್ ಟಿ4 ಮೋಟಾರ್‌ಸೈಕಲ್‌ನೊಂದಿಗೆ ಟ್ರಯಂಫ್ ಸ್ಪೀಡ್ 400 ಬೈಕ್‌ನ್ನು ಬಿಡುಗಡೆಗೊಳಿಸಲಾಗಿದೆ. ಇದು ರೂ.2.4 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 399 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್-ಕೋಲ್ಡ್ ಪೆಟ್ರೋಲ್ ಎಂಜಿನ್ ಹಾಗೂ 6-ಸ್ಪೀಡ್ ಗೇರ್‌ಬಾಕ್ಸ್‌ನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, September 18, 2024, 8:30 [IST]
English summary
Triumph speed t4 bike top 5 things yesterday launched
Read more on triumph india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+