ವರ್ಷಾಂತ್ಯದ ಆಫರ್: ಟ್ರಯಂಫ್ ಬೈಕ್ ಮೇಲೆ 12,500 ರೂ. ಮೌಲ್ಯದ ಕೊಡುಗೆಗಳು

ಟ್ರಯಂಫ್ ಮೋಟಾರ್‌ಸೈಕಲ್ಸ್ (Triumph Motorcycles) ತನ್ನ ಹೊಸ ಸ್ಕ್ರ್ಯಾಂಬ್ಲರ್ 400 ಎಕ್ಸ್‌ (Scrambler 400 X) ಮೋಟಾರ್‌ಸೈಕಲ್‌ ಮೇಲೆ ವರ್ಷಾಂತ್ಯದ ಕೊಡುಗೆಯನ್ನು ಪ್ರಕಟಿಸಿದೆ. ಡಿಸೆಂಬರ್ 1 ರಿಂದ ಪ್ರಾರಂಭವಾಗುವ ಸ್ಕ್ರ್ಯಾಂಬ್ಲರ್ 400 ಎಕ್ಸ್ ಬೈಕ್ ಮೇಲೆ 12,500 ರೂ. ಮೌಲ್ಯದ ಉಚಿತ ಪರಿಕರಗಳು ಮತ್ತು ಸರಕುಗಳೊಂದಿಗೆ (accessories and merchandise) ಬರುತ್ತದೆ. ಡಿಸೆಂಬರ್ 1 ರಿಂದ ಸ್ಕ್ರ್ಯಾಂಬ್ಲರ್ 400 X ಅನ್ನು ಖರೀದಿಸಿದ ಎಲ್ಲಾ ಗ್ರಾಹಕರಿಗೆ ಈ ಕೊಡುಗೆಯು ಅನ್ವಯಿಸುತ್ತದೆ. 31ನೇ ಡಿಸೆಂಬರ್ 2024 ರವರೆಗೆ ಮಾನ್ಯವಾಗಿರುತ್ತದೆ ಎಂದು ಕಂಪನಿ ಹೇಳಿದೆ.

ಬಿಡಿಭಾಗಗಳು ಮತ್ತು ಸರಕುಗಳ ಪಟ್ಟಿಯಲ್ಲಿ ಲೋ ಎಂಜಿನ್ ಬಾರ್ಸ್, ಹೈ ಮಡ್ ಗಾರ್ಡ್ ಕಿಟ್, ಕೋಟೆಡ್ ವಿಂಡ್‌ಸ್ಕ್ರೀನ್, ಲಗೇಜ್ ರ್ಯಾಕ್ ಕಿಟ್, ಟ್ಯಾಂಕ್ ಪ್ಯಾಡ್, ಅಧಿಕೃತ ಟ್ರಯಂಫ್ ಮರ್ಚಂಡೈಸ್ (ಟಿ-ಶರ್ಟ್) ಅನ್ನು ಪಡೆಯಬಹುದು. ಗ್ರಾಹಕರು ತಮ್ಮ ಹತ್ತಿರದ ಟ್ರಯಂಫ್ ಡೀಲರ್‌ಶಿಪ್‌ಗೆ ಭೇಟಿ ನೀಡಿ ಆಫರ್‌ನ ಕುರಿತು ಇನ್ನಷ್ಟು ತಿಳಿದುಕೊಳ್ಳಬಹುದು.

triumph-year-end-offer-free-accessories-with-scrambler-400-x

ಸ್ಕ್ರ್ಯಾಂಬ್ಲರ್ 400 ಎಕ್ಸ್‌ ವಿಶೇಷತೆಗಳು: ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಟ್ರಯಂಫ್ ಮೋಟಾರ್‌ಸೈಕಲ್ಸ್ ಇಂಡಿಯಾ ತನ್ನ ಸ್ಕ್ರ್ಯಾಂಬ್ಲರ್ 400X ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ವರ್ಷ ಬಿಡುಗಡೆಗೊಳಿಸಿತ್ತು. ಈ ಮೋಟಾರ್‌ಸೈಕಲ್ ಹೈಬ್ರಿಡ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದ್ದು, 398cc ಎಂಜಿನ್‌ನಿಂದ ಹೊಂದಿದೆ.

ಈ ಎಂಜಿನ್ 8,000 rpm ನಲ್ಲಿ 40 bh ಪವರ್ ಮತ್ತು 6,500 rpm ನಲ್ಲಿ 37.5 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಸ್ಲಿಪ್ ಮತ್ತು ಅಸಿಸ್ಟ್ ಕ್ಲಚ್‌ನೊಂದಿಗೆ ಬರುತ್ತದೆ. ಈ ಟ್ರಯಂಫ್ ಸ್ಕ್ರ್ಯಾಂಬ್ಲರ್ 400 ಬೈಕ್ 179 ಕೆ.ಜಿ ತೂಕವಿದ್ದು, 195 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ.

triumph-year-end-offer-free-accessories-with-scrambler-400-x

ಫೀಚರ್‌ಗಳ ವಿಷಯಕ್ಕೆ ಬಂದರೆ ಟ್ರಯಂಫ್ ಸ್ಕ್ರ್ಯಾಂಬ್ಲರ್ 400 ಎಕ್ಸ್ ಬೈಕ್ ಅತ್ಯಾಧುನಿಕ ಫೀಚರ್ಸ್ ಗಳನ್ನು ಒಳಗೊಂಡಿದೆ. ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಯುಎಸ್‌ಬಿ-ಸಿ ಚಾರ್ಜಿಂಗ್ ಸಾಕೆಟ್, ರೈಡ್-ಬೈ-ವೈರ್ ಥ್ರೊಟಲ್, ಟ್ರಾಕ್ಷನ್ ಕಂಟ್ರೋಲ್ ಮತ್ತು ಡ್ಯುಯಲ್-ಚಾನೆಲ್ ಎಬಿಎಸ್, ಆಲ್-ಎಲ್‌ಇಡಿ ಲೈಟಿಂಗ್ ಸಿಸ್ಟಮ್ ಮತ್ತು ಸ್ಟೀರಿಂಗ್ ಲುಕ್ ಹೊಂದಿದೆ.

ಈ ಟ್ರಯಂಫ್ ಸ್ಕ್ರ್ಯಾಂಬ್ಲರ್ 400 ಎಕ್ಸ್ ಬೈಕ್ ಸ್ಟ್ಯಾಂಡರ್ಡ್ ಆಗಿ ಸಂಪ್ ಗಾರ್ಡ್ ಮತ್ತು ಹೆಡ್‌ಲೈಟ್ ಗ್ರಿಲ್ ಅನ್ನು ಪಡೆಯುತ್ತದೆ. ಸ್ಕ್ರ್ಯಾಂಬ್ಲರ್ 400 ಎಕ್ಸ್ 19 - ಇಂಚಿನ ಮುಂಭಾಗ ಮತ್ತು 17 - ಇಂಚಿನ ಹಿಂಭಾಗದ ವೀಲ್‌ಗಳೊಂದಿಗೆ ಕ್ರಮವಾಗಿ 100-80 ಮತ್ತು 140-80 ವಿಭಾಗದ ಟೈರ್‌ಗಳನ್ನು ಹೊಂದಿದೆ.

triumph-year-end-offer-free-accessories-with-scrambler-400-x

ಇನ್ನು ಈ ಹೊಸ ಬೈಕಿನಲ್ಲಿ ದೀರ್ಘಾವಧಿಯ ಸಸ್ಪೆಕ್ಷನ್ 835mm ಸೀಟ್ ಎತ್ತರವನ್ನು ಹೊಂದಿದೆ. ಹೊಸ ಟ್ರಯಂಫ್ ಸ್ಕ್ರ್ಯಾಂಬ್ಲರ್ 400 ಎಕ್ಸ್ ಬೈಕ್ 790 ಮಿ.ಮೀ ಸೀಟ್ ಎತ್ತರವನ್ನು ಹೊಂದಿದೆ. ಈ ಹೊಸ ಟ್ರಯಂಫ್ ಸ್ಕ್ರ್ಯಾಂಬ್ಲರ್ 400 ಎಕ್ಸ್ ಬೈಕ್ ಬ್ರೇಕ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಈ ಬೈಕಿನಲ್ಲಿ 320mm ಫ್ರಂಟ್ ಡಿಸ್ಕ್ ಮತ್ತು ಹಿಂಭಾಗದಲ್ಲಿ 300mm ಡಿಸ್ಕ್ ಯುನಿಟ್ ಅನ್ನು ನೀಡಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, December 3, 2024, 11:29 [IST]
English summary
Triumph year end offer free accessories with scrambler 400 x
Read more on triumph india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+