ಟಿವಿಎಸ್ ದ್ವಿಚಕ್ರ ವಾಹನಗಳಿಗಾಗಿ ಮುಗಿಬಿದ್ದ ಗ್ರಾಹಕರು.. ಐಕ್ಯೂಬ್ ಇ-ಸ್ಕೂಟರ್ ನಂಬರ್ 1 ಆಗುವ ಸನಿಹಕ್ಕೆ!

ಟಿವಿಎಸ್ ಮೋಟಾರ್ (TVS Motor) ವಿಶ್ವಾಸಾರ್ಹ ದ್ವಿಚಕ್ರ ವಾಹನ (Two-wheeler) ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಜುಪಿಟರ್, ಸ್ಕೂಟಿ ಪೆಪ್ ಪ್ಲಸ್, ಜೆಸ್ಟ್, ರೈಡರ್ 125, ರೋನಿನ್ ಮತ್ತು ಅಪಾಚೆ ಸೇರಿದಂತೆ ವಿವಿಧ ಮೋಟಾರ್‌ಸೈಕಲ್ ಹಾಗೂ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದೆ. ಭಾನುವಾರ ಕಂಪನಿಯು ನವೆಂಬರ್ ತಿಂಗಳ ಮಾರಾಟದ ಅಂಕಿಅಂಶಗಳ ವರದಿ ಪ್ರಕಟಿಸಿದ್ದು, ನಿರೀಕ್ಷೆಗೂ ಮೀರಿದ ಬೆಳವಣಿಗೆ ಸಾಧಿಸಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಕಳೆದ ತಿಂಗಳು (ನವೆಂಬರ್- 2024) ಟಿವಿಎಸ್ ಕಂಪನಿಯು, ಬರೋಬ್ಬರಿ 401,250 ಯುನಿಟ್ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳನ್ನು (ದೇಶೀಯ ಮಾರಾಟ - ವಿದೇಶಗಳಿಗೆ ರಫ್ತು) ಯಶಸ್ವಿಯಾಗಿ ಮಾರಾಟಗೊಳಿಸಿದೆ. 2023ರ ನವೆಂಬರ್‌ನಲ್ಲಿ ಮಾರಾಟ ಮಾಡಿದ 364,231 ಯುನಿಟ್‌ಗಳಿಗೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ (YoY) ಶೇಕಡ 10% ಪ್ರಗತಿ ಕಂಡಿದೆ.

TVS Achieve 10 Percent Sales Growth In November 2024 iQube Become Game Changer

ದ್ವಿಚಕ್ರ ವಾಹನ (Two-Wheeler) ಮಾರಾಟದಲ್ಲಿಯೂ ಕಂಪನಿಯು ಉತ್ತಮವಾದ ಅಭಿವೃದ್ಧಿ ಸಾಧಿಸಿದೆ. ಈ ನವೆಂಬರ್‌ನಲ್ಲಿ ಒಟ್ಟು 392,473 ಯುನಿಟ್ ದ್ವಿಚಕ್ರ ವಾಹನಗಳನ್ನು (ಮೋಟಾರ್‌ಸೈಕಲ್ - ಸ್ಕೂಟರ್) ಮಾರಾಟ ಮಾಡಿದೆ. 2023ರ ಇದೇ ಅವಧಿಯಲ್ಲಿ ಮಾರಲ್ಪಟ್ಟ 352,103 ಯುನಿಟ್‌ಗಳಿಗೆ ಹೋಲಿಕೆ ಮಾಡಿದರೆ ಶೇಕಡ 12% ಬೆಳವಣಿಗೆಯಾಗಿದೆ.

ದೇಶೀಯ ದ್ವಿಚಕ್ರ ವಾಹನ ಮಾರಾಟದಲ್ಲಿ ಕೂಡ ಟಿವಿಎಸ್ ಮೋಟಾರ್ ಸ್ಥಿರವಾದ ಪ್ರಗತಿ ಕಂಡಿದೆ. ಹೋದ ತಿಂಗಳು (ನವೆಂಬರ್- 2024) 305,323 ಯುನಿಟ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. ಈ ಮೂಲಕ 2023ರ ನವೆಂಬರ್‌ನಲ್ಲಿ ಮಾರಾಟಗೊಳಿಸಿದ 287,017 ಯುನಿಟ್‌ಗೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ (YoY) ಶೇಕಡ 6% ಅಧಿವೃದ್ದಿ ಸಾಧಿಸಲಾಗಿದೆ.

TVS Achieve 10 Percent Sales Growth In November 2024 iQube Become Game Changer

ಟಿವಿಎಸ್ ಕಂಪನಿಯು ಉತ್ತಮ ಸಂಖ್ಯೆಯಲ್ಲಿಯೇ ಮೋಟಾರ್‌ಸೈಕಲ್‍‍ಗಳನ್ನು (Motorcycle) ಮಾರಾಟ ಮಾಡಿದೆ. ಈ ನವೆಂಬರ್‌ನಲ್ಲಿ ಒಟ್ಟಾರೆ 180,247 ಯುನಿಟ್ ಮೋಟಾರ್‌ಸೈಕಲ್‍‍ಗಳು ಮಾರಾಟವಾಗಿವೆ. 2023ರ ನವೆಂಬರ್‌ನಲ್ಲಿ ಮಾರಲ್ಪಟ್ಟ 172,836 ಯುನಿಟ್‌ಗಳಿಗೆ ಹೋಲಿಕೆ ಮಾಡಿದರೆ, ಯಾವುದೇ ಹಬ್ಬಗಳು ಇಲ್ಲದಿದ್ದರೂ ಸಹ ಶೇಕಡ 4% ಬೆಳವಣಿಗೆ ಕಂಡಿದೆ.

ಸ್ಕೂಟರ್ (Scooter) ಮಾರಾಟದಲ್ಲಿಯೂ ಟಿವಿಎಸ್ ಕಂಪನಿಯು ದೊಡ್ಡ ಮಟ್ಟದ ಪ್ರಗತಿ ಸಾಧಿಸಿದೆ. ಕಳೆದ ತಿಂಗಳು (ನವೆಂಬರ್- 2024) 165,535 ಯುನಿಟ್ ಸ್ಕೂಟರ್‌ಗಳನ್ನು ಮಾರಾಟ ಮಾಡಿದೆ. 2023ರ ನವೆಂಬರ್‌ನಲ್ಲಿ ಮಾರಾಟಗೊಳಿಸಿದ 135,749 ಯುನಿಟ್‌ಗೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ (YoY) ಶೇಕಡ 22% ಅಭಿವೃದ್ಧಿಯಾಗಿದೆ.

TVS Achieve 10 Percent Sales Growth In November 2024 iQube Become Game Changer

ಟಿವಿಎಸ್ ಕಂಪನಿಯು ವಿದೇಶಕ್ಕೆ ರಫ್ತು ಮಾಡುವ ವಾಹನಗಳ ಸಂಖ್ಯೆಯೂ ಹೆಚ್ಚಳಹೊಂದಿದೆ. ಈ ನವೆಂಬರ್‌ನಲ್ಲಿ ಒಟ್ಟು 93,755 ಯುನಿಟ್ ವಾಹನಗಳನ್ನು ಹಲವು ದೇಶಗಳಿಗೆ ರವಾನಿಸಿದೆ. 2023ರ ಇದೇ ಅವಧಿಯಲ್ಲಿ 75,203 ಯುನಿಟ್‌ಗಳನ್ನು ರಫ್ತು ಮಾಡಿತ್ತು. ಅದಕ್ಕೆ ಹೋಲಿಕೆ ಮಾಡಿದರೆ ಶೇಕಡ 25% ಬೆಳವಣಿಗೆಯಾಗಿದೆ. ಆದರೆ, ತ್ರಿಚಕ್ರ ವಾಹನ (Three-wheeler) ಮಾರಾಟದಲ್ಲಿ ಕಂಪನಿಯು ಕೊಂಚ ಮಟ್ಟಿನ ಹಿನ್ನೆಡೆ ಅನುಭವಿಸಿದ್ದು, 8,777 ಯುನಿಟ್‌ಗಳನ್ನು ಮಾತ್ರ ಮಾರಾಟಗೊಳಿಸಲು ಯಶಸ್ವಿಯಾಗಿದೆ.

ಇವಿ (ಎಲೆಕ್ಟ್ರಿಕ್ ವಾಹನ) ಮಾರಾಟದಲ್ಲಿಯೂ ಟಿವಿಎಸ್ ಮೋಟಾರ್ ನಿರೀಕ್ಷೆಗೂ ಮೀರಿದ ಪ್ರಗತಿಯನ್ನು ಸಾಧಿಸಿದೆ. ಹೋದ ತಿಂಗಳು (ನವೆಂಬರ್- 2024) 26,292 ಯುನಿಟ್ ಇವಿಗಳನ್ನು ಮಾರಾಟ ಮಾಡಿದೆ. 2023ರ ನವೆಂಬರ್‌ನಲ್ಲಿ ಮಾರಾಟ ಮಾಡಿದ 16,782 ಯುನಿಟ್‌ಗೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ ಶೇಕಡ 57% ಅಭಿವೃದ್ಧಿಯಾಗಿದೆ. ಹಾಗೆಯೇ ಒಟ್ಟು ಇವಿ ಮಾರಾಟದಲ್ಲಿ ಓಲಾ ಎಲೆಕ್ಟ್ರಿಕ್ (29,191 ಯುನಿಟ್) ಮೊದಲ ಸ್ಥಾನದಲ್ಲಿದ್ದರೆ, ಬಜಾಜ್ ಆಟೋ (26,163 ಯುನಿಟ್) ಮೂರನೇ ಸ್ಥಾನದಲ್ಲಿದೆ.

ಟಿವಿಎಸ್ ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ಈ ಮಟ್ಟಿಗೆ ಬೆಳವಣಿಗೆ ಸಾಧಿಸಲು ಐಕ್ಯೂಬ್ (iQube) ಎಲೆಕ್ಟ್ರಿಕ್ ಸ್ಕೂಟರ್ ಪ್ರಮುಖವಾದ ಕಾರಣವಾಗಿದೆ. ಇದು ರೂ.1.07 ಲಕ್ಷದಿಂದ ರೂ.1.37 ಲಕ್ಷ (ಎಕ್ಸ್ ಶೋರೂಂ) ದರವನ್ನು ಪಡೆದಿದೆ. 2.2 ಕೆಡಬ್ಲ್ಯೂಹೆಚ್, 3.04 ಕೆಡಬ್ಲ್ಯೂಹೆಚ್ ಹಾಗೂ 5.1 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಒಳಗೊಂಡಿದೆ. ಭರ್ತಿ ಚಾರ್ಜ್‌ನಲ್ಲಿ 75 ರಿಂದ 150 ಕಿಲೋಮೀಟರ್‌ವರೆಗೂ ಓಡುತ್ತದೆ.

More from DriveSpark

Article Published On: Monday, December 2, 2024, 10:16 [IST]
English summary
Tvs achieve 10 percent sales growth in november 2024 iqube become game changer
Read more on tvs motor india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+