TVS Apache: ಟಿವಿಎಸ್ ಅಪಾಚೆ ಆರ್‌ಆರ್‌ 310 ವಿಡಿಯೋ ರಿವ್ಯೂ.. ಹೇಗಿದೆ ಗೊತ್ತಾ?

ಟಿವಿಎಸ್ ಮೋಟಾರ್ (TVS Motor) ವಿಶ್ವಾಸಾರ್ಹ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಮನೆ ಮಾತಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ವಿವಿಧ ಸ್ಕೂಟರ್ ಹಾಗೂ ಬೈಕ್‌ಗಳನ್ನು ಮಾರಾಟ ಮಾಡುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಈಚೆಗೆ, 2024ರ ನವೀಕರಿಸಿದ ಟಿವಿಎಸ್ ಅಪಾಚೆ ಆರ್‌ಆರ್‌ 310 ಮೋಟಾರ್‌ಸೈಕಲ್‌ನ್ನು ಬಿಡುಗಡೆಗೊಳಿಸಲಾಗಿತ್ತು. ನಮಗೆ ಈ ಬೈಕ್‌ನ್ನು ಟೆಸ್ಟ್ ರೈಡ್ ನಡೆಸುವುದಕ್ಕೆ ಕಂಪನಿಯು ಕೊಯಮತ್ತೂರಿಗೆ ಆಹ್ವಾನಿಸಿತ್ತು. ಬನ್ನಿ.. ನೂತನ ಮೋಟಾರ್‌ಸೈಕಲ್‌ ಹೇಗಿದೆ ಎಂಬುದರ ವಿಡಿಯೋ ರಿವ್ಯೂ ನಿಮಗಾಗಿ ಇಲ್ಲಿದೆ..

ಹೊಚ್ಚ ಹೊಸ ಟಿವಿಎಸ್ ಅಪಾಚೆ ಆರ್‌ಆರ್‌ 310 (TVS Apache RR 310) ಬೈಕ್ ರೂ.2.75 ಲಕ್ಷ (ಎಕ್ಸ್ ಶೋರೂಂ) ಆರಂಭಿಕ ಬೆಲೆಯನ್ನು ಹೊಂದಿದೆ. 312 ಸಿಸಿ ಲಿಕ್ವಿಡ್-ಕೋಲ್ಡ್ ಸಿಂಗಲ್-ಸಿಲಿಂಡರ್ ಪೆಟ್ರೋಲ್ ಎಂಜಿನ್ ಒಳಗೊಂಡಿದ್ದು, 38 ಬಿಹೆಚ್‍ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 29 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿದೆ. 6-ಸ್ಪೀಡ್ ಗೇರ್‌ಬಾಕ್ಸ್‌ನ್ನು ಹೊಂದಿದೆ.

ಈ ಟಿವಿಎಸ್ ಅಪಾಚೆ ಆರ್‌ಆರ್‌ 310 ಮೋಟಾರ್‌ಸೈಕಲ್‌ ಬ್ಲೂಟೂತ್ ಕನೆಕ್ಟಿವಿಟಿ & ನ್ಯಾವಿಗೇಷನ್‌ನೊಂದಿಗೆ ಟಿಎಫ್‌ಟಿ ಡಿಸ್ಪ್ಲೇ, ಬೈ-ಡೈರೆಕ್ಷನಲ್ ಕ್ವಿಕ್‌ಶಿಫ್ಟರ್, ಕಾರ್ನರಿಂಗ್ ಟ್ರಾಕ್ಷನ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಮತ್ತು ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ.

ನೂತನ ಟಿವಿಎಸ್ ಅಪಾಚೆ ಆರ್‌ಆರ್‌ 310 ಬೈಕ್ ಹೊರಭಾಗದಲ್ಲಿ ಆಕರ್ಷಕವಾದ ವಿನ್ಯಾಸ (ಡಿಸೈನ್) ಹೊಂದಿದೆ. ವಿನೂತನವಾಗಿರುವ ವಿಂಗ್‌ಲೆಟ್ಸ್‌ನ್ನು ಒಳಗೊಂಡಿದೆ. 164 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಪಡೆದಿದೆ. ಕೇವಲ 6.74 ಸೆಕೆಂಡುಗಳಲ್ಲಿ 0 ಯಿಂದ 100 ಕೆಎಂಪಿಹೆಚ್ ವೇಗವನ್ನು ಹೊಂದುತ್ತದೆ.

TVS Apache RR 310 Bike Video Review Details

ಈ ಅಪಾಚೆ ಆರ್‌ಆರ್‌ 310 ಮೋಟಾರ್‌ಸೈಕಲ್‌ ಸವಾರರಿಗೆ ಗರಿಷ್ಠ ಒದಗಿಸುತ್ತದೆ. ಸುರಕ್ಷತೆಯ ಸಲುವಾಗಿ ಮುಂಭಾಗ (ಫ್ರಂಟ್) ಯುಎಸ್‌ಡಿ ಫೋರ್ಕ್ ಹಾಗೂ ಹಿಂಭಾಗ (ರೇರ್) ಪ್ರಿಲೋಡ್ ಅಡ್ಜಸ್ಟಬಲ್ ಸಸ್ಪೆನ್ಷನ್ ಸೆಟಪ್ ಹೊಂದಿದೆ. ಹ್ಯಾಂಡಲ್ ಬಾರ್‌ನ ಎರಡು ತುದಿಗಳಲ್ಲಿ ಡಿಸ್ಕ್ ಬ್ರೇಕ್‌ ಆಯ್ಕೆಯನ್ನು ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, September 27, 2024, 12:29 [IST]
English summary
Tvs apache rr 310 bike video review details
Read more on tvs motor india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+