TVS Apache: ಟಿವಿಎಸ್ ಅಪಾಚೆ ಆರ್‌ಟಿಆರ್ 160 ಬೈಕ್ ಖರೀದಿಸಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?

ಭಾರತದ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಹೊಸೂರು ಮೂಲದ ಟಿವಿಎಸ್ ಮೋಟಾರ್ (TVS Motor) ಗುರುತಿಸಿಕೊಂಡಿದೆ. ದೇಶೀಯ ಮಾರುಕಟ್ಟೆಯಲ್ಲಿ ಕಂಪನಿಯು ಕೈಗೆಟುಕುವ ದರದಲ್ಲಿ ವಿವಿಧ ಬೈಕ್ ಹಾಗೂ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಟಿವಿಎಸ್ ಅಪಾಚೆ ಆರ್‌ಟಿಆರ್ 160 ಜನಪ್ರಿಯ ಮೋಟಾರ್‌ಸೈಕಲ್ ಆಗಿದೆ. ನೀವು ಈ ಬೈಕ್‌ನ್ನು ಮನೆಗೆ ತರಲು ಯೋಚಿಸುತ್ತಿದ್ದೀರಾ... ನಾವಿಲ್ಲಿ ಆನ್-ರೋಡ್ ಬೆಲೆ (On-Road Price) ಹಾಗೂ ಇಎಂಐ (EMI) ಆಯ್ಕೆಯ ಬಗ್ಗೆ ಸಂಪೂರ್ಣವಾಗಿ ತಿಳಿಸಿಕೊಟ್ಟಿದ್ದೇವೆ.

ಟಿವಿಎಸ್ ಅಪಾಚೆ ಆರ್‌ಟಿಆರ್ 160 ಬೈಕ್ ವಿವಿಧ ರೂಪಾಂತರ (ವೇರಿಯೆಂಟ್)ಗಳ ಆಯ್ಕೆಯಲ್ಲಿ ಖರೀದಿಗೆ ಸಿಗುತ್ತದೆ. ಬೆಂಗಳೂರಿನಲ್ಲಿ ಇದರ ಡ್ರಮ್ (Drum) ಮಾದರಿಯು ರೂ.1,59,966 ಆನ್-ರೋಡ್ ಬೆಲೆಯನ್ನು ಹೊಂದಿದೆ. ನೀವು ರೂ.20,000 ಡೌನ್ ಪೇಮೆಂಟ್ ಪಾವತಿಸಿ ಈ ಮೋಟಾರ್‌ಸೈಕಲ್‌ನ್ನು ಖರೀದಿಸಿದರೆ, ರೂ.1,39,966 ಸಾಲವಿರುತ್ತದೆ. ಶೇಕಡ 9.7% ಬಡ್ಡಿ ದರದಲ್ಲಿ ಮೂರು ವರ್ಷದ ಅವಧಿಗೆ (36 ತಿಂಗಳು) ಮಾಸಿಕ ರೂ.4,497 ಇಎಂಐ ಕಟ್ಟಬೇಕು.

TVS Apache RTR 160 Bike On Road Price And Emi Details

ಅಪಾಚೆ ಆರ್‌ಟಿಆರ್ 160 ಡಿಸ್ಕ್ (Disc) ರೂಪಾಂತರವು ರೂ.1,64,236 ಆನ್-ರೋಡ್ ದರವನ್ನು ಹೊಂದಿದೆ. ರೂ.20,000 ಡೌನ್ ಪೇಮೆಂಟ್ (Down Payment) ಕಟ್ಟಿ ಈ ಬೈಕ್‌ನ್ನು ಮನೆಗೆ ತಂದರೆ, ಉಳಿದ ರೂ.1,44,236 ಸಾಲದ ಮೊತ್ತಕ್ಕೆ ಶೇಕಡ 9.7% ಬಡ್ಡಿಯನ್ನು ಹಾಕಿ ಮೂರು ವರ್ಷಕ್ಕೆ ರೂ.4,634 ಇಎಂಐ (EMI) ಪಾವತಿಸಬೇಕು.

ಟಿವಿಎಸ್ ಅಪಾಚೆ ಆರ್‌ಟಿಆರ್ 160 ಡಿಸ್ಕ್ ಬ್ಲೂಟೂತ್ (Disc Bluetooth) ಮಾದರಿಯು ರೂ.1,68,263 ಆನ್-ರೋಡ್ ಬೆಲೆಯನ್ನು ಹೊಂದಿದೆ. ನೀವು ರೂ.20,000 ಡೌನ್ ಪೇಮೆಂಟ್ ಪಾವತಿಸಿ ಈ ಮೋಟಾರ್‌ಸೈಕಲ್‌ನ್ನು ಕೊಂಡುಕೊಂಡರೆ, ರೂ.1,48,263 ಸಾಲವಿರುತ್ತದೆ. ಶೇಕಡ 9.7% ಬಡ್ಡಿ ದರದಲ್ಲಿ ಮೂರು ವರ್ಷದ ಅವಧಿಗೆ ರೂ.4,763 ಇಎಂಐ ಕಟ್ಟಬೇಕು.

ಹೊಚ್ಚ ಹೊಸ ಟಿವಿಎಸ್ ಅಪಾಚೆ ಆರ್‌ಟಿಆರ್ 160 ಬೈಕ್ 159.7 ಸಿಸಿ ಸಿಂಗಲ್ ಸಿಲಿಂಡರ್ ಪೆಟ್ರೋಲ್ ಎಂಜಿನ್‌ನ್ನು ಹೊಂದಿದೆ. 15.82 ಪಿಎಸ್ ಗರಿಷ್ಠ ಶಕ್ತಿ (ಪವರ್) ಮತ್ತು 13.85 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ 5-ಸ್ಪೀಡ್ ಗೇರ್‌ಬಾಕ್ಸ್‌ ಕೂಡ ಇದ್ದು, 46.99 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.

ನೂತನ ಮೋಟಾರ್‌ಸೈಕಲ್‌ ಸ್ಪೋರ್ಟ್ಸ್, ಅರ್ಬನ್ ಮತ್ತು ರೈನ್ ಎಂಬ ರೈಡಿಂಗ್ ಮೋಡ್ ಆಯ್ಕೆಯನ್ನು ಹೊಂದಿದೆ. ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಕ್ರ್ಯಾಶ್ ಅಲರ್ಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಯ ದೃಷ್ಟಿಯಿಂದ ಡ್ರಮ್ & ಡಿಸ್ಕ್ ಬ್ರೇಕ್‌ನ್ನು ಪಡೆದಿದೆ. ಬರೊಬ್ಬರಿ 137 ಕೆಜಿ ತೂಕವಿರುವ ಈ ಬೈಕ್, 12 ಲೀಟರ್ ಸಾಮರ್ಥ್ಯದ ಇಂಧನ (ಫ್ಯುಯೆಲ್) ಟ್ಯಾಂಕ್‌ನ್ನು ಹೊಂದಿದೆ.

ಟಿವಿಎಸ್ ಅಪಾಚೆ ಆರ್‌ಟಿಆರ್ 160 ಬೈಕ್‌ಗೆ ಬಜಾಜ್ ಪಲ್ಸರ್ ಎನ್150, ಬಜಾಜ್ ಪಲ್ಸರ್ ಎನ್160, ಹೀರೋ ಎಕ್ಸ್‌ಟ್ರೀಮ್ 160ಆರ್ ಹಾಗೂ ಹೋಂಡಾ ಎಸ್‌ಪಿ 160 ಮಾದರಿಗಳು ಪ್ರಬಲ ಪ್ರತಿಸ್ಪರ್ಧಿಯಾಗಿವೆ. ನಿಮ್ಮ ಗಮನಕ್ಕೆ.. ಇಲ್ಲಿ ಕೆಲವು ರೂಪಾಂತರಗಳ ಆನ್-ರೋಡ್ ಬೆಲೆ ಹಾಗೂ ಸಾಲದ ಆಯ್ಕೆ ಕುರಿತಂತೆ ವಿವರಿಸಿದ್ದೇವೆ. ಹೆಚ್ಚಿನ ಮಾಹಿತಿಗೆ ಸಮೀಪದ ಶೋರೂಂಗೆ ಭೇಟಿ ನೀಡಿರಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, July 22, 2024, 11:12 [IST]
English summary
Tvs apache rtr 160 bike on road price and emi details
Read more on tvs motor india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+