TVS: ಟಿವಿಎಸ್ ಐಕ್ಯೂಬ್‌ಗೆ ಸರಿಸಾಟಿ ಇದ್ಯಾ.. ನಂಬರ್ 1 ಪಕ್ಕಾ!

ಹೊಸೂರು ಮೂಲದ ಟಿವಿಎಸ್ ಮೋಟಾರ್ (TVS Motor) ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿದೆ. ಫೆಬ್ರವರಿ (2024) ಮಾರಾಟ ವರದಿಯನ್ನು ಶುಕ್ರವಾರ ಪ್ರಕಟಿಸಿದ್ದು, ಉತ್ತಮವಾದ ಪ್ರಗತಿಯನ್ನು ಸಾಧಿಸಿದೆ. ಅದರಲ್ಲೂ 'ಐಕ್ಯೂಬ್‌' ಎಲೆಕ್ಟ್ರಿಕ್ ಸ್ಕೂಟರ್‌ನ್ನು ದೊಡ್ಡ ಸಂಖ್ಯೆಯಲ್ಲಿ ಗ್ರಾಹಕರು ಇಷ್ಟಪಟ್ಟು ಖರೀದಿಸುತ್ತಿದ್ದಾರೆ.

ಮೊದಲಿಗೆ ಟಿವಿಎಸ್ (TVS) ಕಂಪನಿಯ ಒಟ್ಟಾರೆ ಮಾರಾಟದ ಅಂಕಿಅಂಶದ ಬಗ್ಗೆ ಗಮನ ಹರಿಸೋಣ. ಕಳೆದ ತಿಂಗಳು ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳನ್ನು ಒಳಗೊಂಡಂತೆ 368,424 ಯುನಿಟ್ ಮಾರಿದ್ದು, 2023ರ ಫೆಬ್ರವರಿಗೆ ಹೋಲಿಕೆ ಮಾಡಿದರೆ (276,150 ಯುನಿಟ್) ವರ್ಷದಿಂದ ವರ್ಷಕ್ಕೆ (YoY) ಶೇಕಡ 33% ಬೆಳವಣಿಗೆ ಸಾಧಿಸಿದೆ.

TVS Company Sales Growth 33 Percent In February 2024: iQube Become Game Changer

ದ್ವಿಚಕ್ರ ವಾಹನ (Two-Wheelers): ಟಿವಿಎಸ್ ಮೋಟಾರ್ ದ್ವಿಚಕ್ರ ವಾಹನ ಮಾರಾಟದಲ್ಲಿ ಯಶಸ್ಸಿನ ಉತ್ತುಂಗಕ್ಕೆ ಏರುತ್ತಿದ್ದು, ಫೆಬ್ರವರಿ (2024) ತಿಂಗಳಲ್ಲಿ ರಫ್ತು ಮಾಡಿರುವುದು ಒಳಗೊಂಡಂತೆ ದೇಶೀಯ ಮಾರುಕಟ್ಟೆಯಲ್ಲಿ ಒಟ್ಟು 357,810 ಯುನಿಟ್ ದ್ವಿಚಕ್ರ ವಾಹನಗಳನ್ನು ಮಾರಿ, ಹೋದ ವರ್ಷದ ಇದೇ ಅವಧಿಯ 267,026 ಯುನಿಟ್‌ಗಳಿಗೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ ಶೇಕಡ 34% ಪ್ರಗತಿ ಕಂಡಿದೆ.

ಮೋಟಾರ್‌ಸೈಕಲ್ & ಸ್ಕೂಟರ್ (Motorcycle & Scooter): ಟಿವಿಎಸ್ ಕಂಪನಿಯ ಮೋಟಾರ್‌ಸೈಕಲ್ ಮತ್ತು ಸ್ಕೂಟರ್‌ಗಳಿಗೆ ಮನಸೋಲದವರೇ ಇಲ್ಲ ಎಂದು ಹೇಳಿದರೆ ತಪ್ಪಾಗುದಿಲ್ಲ. ಫೆಬ್ರವರಿಯಲ್ಲಿ 184,023 ಯುನಿಟ್ ಮೋಟಾರ್‌ಸೈಕಲ್ ಮಾರಾಟಗೊಳಿಸಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಕೆ ಮಾಡಿದರೆ ವರ್ಷದಿಂದ ವರ್ಷಕ್ಕೆ ಶೇಕಡ 46% ಬೆಳವಣಿಗೆ ಸಾಧಿಸಿದೆ. ಜೊತೆಗೆ 132,152 ಯುನಿಟ್ ಸ್ಕೂಟರ್ ಮಾರುವ ಮೂಲಕ 26% ಪ್ರಗತಿ ಕಂಡಿದೆ. ರಫ್ತು ಕೂಡ ಉತ್ತಮವಾಗಿದೆ.

TVS Company Sales Growth 33 Percent In February 2024: iQube Become Game Changer

ಇವಿ (EV): ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿಯೂ ಟಿವಿಎಸ್ ಒಳ್ಳೆಯ ಸಾಧನೆಯನ್ನು ಮಾಡುತ್ತಿದೆ. ಕಳೆದ ತಿಂಗಳು 17,959 ಯುನಿಟ್ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಮಾರಿದ್ದು, 2023ರ ಇದೇ ಅವಧಿಗೆ ಹೋಲಿಕೆ ಮಾಡಿದರೆ (15,522 ಯುನಿಟ್) ವರ್ಷದಿಂದ ವರ್ಷಕ್ಕೆ ಶೇಕಡ 16% ಪ್ರಗತಿ ಸಾಧಿಸದೆ. ಟಿವಿಎಸ್ ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ಈ ಮಟ್ಟದಲ್ಲಿ ಬೆಳವಣಿಗೆ ಕಾಣಲು ಐಕ್ಯೂಬ್‌ (iQube) ಎಲೆಕ್ಟ್ರಿಕ್ ಸ್ಕೂಟರ್ ಪ್ರಮುಖ ಕಾರಣವಾಗಿದೆ.

ಭಾರತದ ಮಾರುಕಟ್ಟೆಯಲ್ಲಿ ಟಿವಿಎಸ್ ಐಕ್ಯೂಬ್‌, 2 ರೂಪಾಂತರಗಳ ಆಯ್ಕೆಯಲ್ಲಿ ಖರೀದಿದಾರರಿಗೆ ಲಭ್ಯವಿದೆ. ಸಾಮಾನ್ಯ ಐಕ್ಯೂಬ್ (iQube) ಮಾದರಿ ರೂ.1,47,968 ಮತ್ತು ಐಕ್ಯೂಬ್ ಎಸ್ (iQube S) ಮಾದರಿ ರೂ.1,53,909 ಆನ್-ರೋಡ್ (ಬೆಂಗಳೂರು) ಬೆಲೆಯನ್ನು ಹೊಂದಿದೆ ಎಂದು ತಿಳಿದುಬಂದಿದೆ. ಇವೆರೆಡು ರೂಪಾಂತರಗಳು 3.04 ಕೆಡಬ್ಲ್ಯೂಹೆಚ್ (kWh) ಸಾಮರ್ಥ್ಯದ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಹೊಂದಿದ್ದು, ಭರ್ತಿ ಚಾರ್ಜ್ ನಲ್ಲಿ 100 ಕಿ.ಮೀ ಕ್ರಮಿಸಲಿವೆ.

ಟಿವಿಎಸ್ ಐಕ್ಯೂಬ್ ಮಾದರಿಗಳು ಗಂಟೆ 75 ಕಿ.ಮೀ ಗರಿಷ್ಠ ವೇಗವನ್ನು ಪಡೆಯಲಿದ್ದು, ಕೇವಲ 4 ಗಂಟೆ 30 ನಿಮಿಷದಲ್ಲಿ ಇವುಗಳ ಬ್ಯಾಟರಿ 0 - 80% ಚಾರ್ಜ್ ಆಗುತ್ತದೆ. ಫುಲ್ ಕಲರ್ ಟಿಎಫ್‌ಟಿ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಗಾಗಿ ಫ್ರಂಟ್ (ಮುಂಭಾಗ) ಡಿಸ್ಕ್, ರೇರ್ (ಹಿಂಭಾಗ) ಡ್ರಮ್ ಬ್ರೇಕ್ ಆಯ್ಕೆಯನ್ನು ಪಡೆದಿದೆ.

ಕಳೆದ ವರ್ಷ ಟಿವಿಎಸ್ ಮೋಟಾರ್ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ 'ಎಕ್ಸ್' ಅನ್ನು ರೂ.2.50 ಲಕ್ಷ ಎಕ್ಸ್ ಶೋರೂಂ ಬೆಲೆಗೆ ಬಿಡುಗಡೆಯಾಗಿತ್ತು. ಈ ಎಲೆಕ್ಟ್ರಿಕ್ ಸ್ಕೂಟರ್, 4.44 ಕೆಡಬ್ಲ್ಯೂಹೆಚ್ (kWh) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಪಡೆದಿದ್ದು, ಸಂಪೂರ್ಣ ಚಾರ್ಜ್ ನಲ್ಲಿ 140 ಕಿ.ಮೀ ರೇಂಜ್ (ಮೈಲೇಜ್) ನೀಡುತ್ತದೆ. 105 ಕೆಎಂಪಿಹೆಚ್ ಟಾಪ್ ಸ್ವೀಡ್ (ಗರಿಷ್ಠ ವೇಗ) ಹೊಂದಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, March 2, 2024, 10:28 [IST]
English summary
Tvs company sales growth 33 percent in february 2024 iqube become game changer
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+