ಕಡಿಮೆ ಬೆಲೆಗೆ ಫಸ್ಟ್‌ ಕ್ಲಾಸ್‌ ಎಲೆಕ್ಟ್ರಿಕ್‌ ಸ್ಕೂಟರ್‌: ಟಾಪ್‌ ಮತ್ತು ಬೇಸ್‌ ವೇರಿಯಂಟ್‌ನಲ್ಲಿ ನಿಮ್ಮ ಆಯ್ಕೆ ಯಾವುದು?

ಭಾರತದಲ್ಲಿ ಈಗ ಎಲ್ಲಿ ನೋಡಿದರೂ ಟಿವಿಎಸ್‌ ಎಲೆಕ್ಟ್ರಿಕ್‌ ಸ್ಕೂಟರ್‌ಗಳದ್ದೇ ಹವಾ! ದಿನಕ್ಕೊಂದರಂತೆ ಕಂಪನಿಗಳು ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್‌ ಸ್ಕೂಟರ್‌ ಅನ್ನು ಮಾರುಕಟ್ಟೆಗೆ ತರುತ್ತಿದ್ದು, ಇದೀಗ ಆ ಸಾಲಿಗೆ ಟಿವಿಎಸ್‌ ಐ ಕ್ಯೂಬ್‌ ಸಹ ಸೇರಿಕೊಳ್ಳುತ್ತಿದೆ. ಇಂದಿನ ಲೇಖನದಲ್ಲಿ ಟಿವಿಎಸ್‌ ಐ ಕ್ಯೂಬ್‌ನ ಪ್ರಮುಖ ವೇರಿಯಂಟ್‌ಗಳ ವ್ಯತ್ಯಾಸಗಳನ್ನು ನೋಡೋಣ.

ನಿಮಗೆಲ್ಲಾ ತಿಳಿದಿರುವಂತೆ ಟಿವಿಎಸ್‌ ಇದೀಗ ಕಡಿಮೆ ಬೆಲೆಯ ಐಕ್ಯೂಬ್‌ ಎಲೆಕ್ಟ್ರಿಕ್‌ ಸ್ಕೂಟರ್‌ ಅನ್ನು ಲಾಂಚ್ ಮಾಡಿದ್ದು, ಈ ಸ್ಕೂಟರ್‌ನಲ್ಲಿ ನಿಮಗೆ 2.2kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ ಲಭ್ಯವಾಗುತ್ತಿದೆ. ಈ ಬ್ಯಾಟರಿಯ ಸಹಾಯದಿಂದ ಈ ಸ್ಕೂಟರ್‌ ಸುಮಾರು 75 ಕಿಮೀ ನ ರೇಂಜ್‌ ಅನ್ನು ನೀಡುತ್ತದೆ. ಟಿವಿಎಸ್‌ ಐಕ್ಯೂಬ್‌ನ ಅತೀ ಕಡಿಮೆ ಬೆಲೆಯ ವೇರಿಯಂಟ್ ಇದಾಗಿದ್ದು, ಇದರ ಬೆಲೆ ಕ್ಯಾಶ್‌ ಬ್ಯಾಕ್‌ಗಳೆಲ್ಲಾ ಸೇರಿ ಸುಮಾರು ರೂ 94,999.

TVS iqube Base And Top End variant Explained Price Battery Performance And More

ಈ 2.2 kWh ಬ್ಯಾಟರಿಯನ್ನು ಪಡೆದಿರುವ ಐಕ್ಯೂಬ್ ರೂಪಾಂತರವು ಬೆಲೆಗೆ ತಕ್ಕಂತೆ ಸಾಕಷ್ಟು ಆಕರ್ಷಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. 5-ಇಂಚಿನ ಟಿಎಫ್‌ಟಿ ಸ್ಕ್ರೀನ್, ವೆಹಿಕಲ್ ಕ್ರ್ಯಾಶ್ & ಟೌ ಅಲರ್ಟ್, ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಸೇರಿದಂತೆ ವಿವಿಧ ವೈಶಿಷ್ಟ್ಯ (ಫೀಚರ್ಸ್)ಗಳನ್ನು ಹೊಂದಿದೆ. 30 ಲೀಟರ್ ಸಾಮರ್ಥ್ಯದ ಸೀಟ್ ಬೂಟ್ ಸ್ಪೇಸ್ ಅನ್ನು ಪಡೆದಿದ್ದು, ಇದರ ಬ್ಯಾಟರಿಯು ಫಾಸ್ಟ್ ಚಾರ್ಜರ್ ಆಯ್ಕೆಯಲ್ಲಿ 2 ಗಂಟೆಯಲ್ಲಿ ಶೇಕಡ 0-80% ಚಾರ್ಜ್ ಆಗುತ್ತದೆ.

ಇನ್ನು ಟಿವಿಎಸ್‌ ಐಕ್ಯೂಬ್‌ನ ಟಾಪ್ ರೂಪಾಂತರವನ್ನು ಎಸ್‌ಟಿ ಎಂದು ಕರೆಯುತ್ತಾರೆ. ಈ ರೂಪಾಂತರದ ಬಗ್ಗೆ ನೋಡುವುದಾದರೆ, ಇದರಲ್ಲಿ ಸುಮಾರು 5.1kWh ಬ್ಯಾಟರಿಯನ್ನು ಹೊಂದಿದ್ದು ಇದರ ಸಹಾಯದಿಂದ ಸುಮಾರು 150 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ. ಈ ವೇರಿಯಂಟ್‌ನ ಎಕ್ಸ್‌ಶೋ ರೂಮ್‌ ಬೆಲೆ ಸುಮಾರು ರೂ.185,373.

TVS iqube Base And Top End variant Explained Price Battery Performance And More

ಟಿವಿಎಸ್‌ ಐ ಕ್ಯೂಬ್‌ನ ಈ ಆವೃತ್ತಿಯಲ್ಲಿ ಹಲವಾರು ಫೀಚರ್‌ಗಳಿಗೆ. 7-ಇಂಚಿನ ಫುಲ್ ಕಲರ್ ಟಿಎಫ್‌ಟಿ ಸ್ಕ್ರೀನ್, 118+ ಕನೆಕ್ಟ್ದ್ ಫೀಚರ್ಸ್, ವಾಯ್ಸ್ ಅಸಿಸ್ಟ್ & ಅಲೆಕ್ಸಾ ಸ್ಕಿಲ್‌ಸೆಟ್‌, ಡಿಜಿಟಲ್ ಡಾಕ್ಯುಮೆಂಟ್ ಸ್ಟೋರೇಜ್, TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ.

ಇದರಲ್ಲಿ ಹೈಲೈಟ್‌ ಆಗುವ ಮತ್ತೊಂದು ವಿಷಯವೆಂದರೆ ಇದರ ಸ್ಟೋರೇಜ್‌ ಕೆಪಾಸಿಟಿ. ಈ ಸ್ಕೂಟರ್‌ 32-ಲೀಟರ್ ಸಾಮರ್ಥ್ಯದ ಸೀಟ್ ಬೂಟ್ ಸ್ಪೇಸ್ ಅನ್ನು ಒಳಗೊಂಡಿದೆ. ಈ ಸ್ಕೂಟರ್‌ನ ಬಣ್ಣಗಳ ಬಗ್ಗೆ ನೋಡುವುದಾದರೆ ಇದು ಟೈಟಾನಿಯಂ ಗ್ರೇ ಮ್ಯಾಟ್, ಸ್ಟಾರ್‌ಲೈಟ್ ಬ್ಲೂ ಬಣ್ಣಗಳಲ್ಲಿ ಲಭ್ಯವಿದೆ.

TVS iqube Base And Top End variant Explained Price Battery Performance And More

ಸಾಧರಣವಾಗಿ ಟಿವಿಎಸ್‌ ಐಕ್ಯೂಬ್‌ ಇದರ ಡಿಸೈನ್‌ ಮತ್ತು ಪರ್ಫಾಮೆನ್ಸ್‌ಗೆ ಹೆಸರುವಾಸಿ. ಇದೇ ಕಾರಣದಿಂದ ಹಲವರು ಬೇರೆಲ್ಲಾ ಎಲೆಕ್ಟ್ರಿಕ್‌ ಸ್ಕೂಟರ್‌ಗಿಂತ ಇದಕ್ಕೆ ಹೆಚ್ಚಿನ ಒತ್ತನ್ನು ನೀಡಿ ಖರೀದಿ ಮಾಡುತ್ತಿದ್ದರು. ಆದರೆ ಇದೀಗ ಈ ಸ್ಕೂಟರ್‌ಗೆ ಮತ್ತೊಂದು ಕಡಿಮೆ ಬೆಲೆಯ ಆವೃತ್ತಿ ಸೇರಿಕೊಂಡಿದ್ದು, ಇದರಿಂದಾಗಿ ಈ ಸ್ಕೂಟರ್‌ನ ಮಾರಾಟ ಮತ್ತಷ್ಟು ಹೆಚ್ಚಾಗಲಿದೆ ಎಂಬುದು ಎಲ್ಲಾ ಆಟೋಮೊಬೈಲ್‌ ಪ್ರೇಮಿಗಳ ಲೆಕ್ಕಾಚಾರ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, May 15, 2024, 18:37 [IST]
English summary
Tvs iqube base and top end variant explained price battery performance and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+