TVS iQube: 4.5 ಲಕ್ಷ ಟಿವಿಎಸ್ ಐಕ್ಯೂಬ್ ಇ-ಸ್ಕೂಟರ್ ಮಾರಾಟ.. ಸಂಭ್ರಮದಲ್ಲಿ ಕಂಪನಿ, ದೊಡ್ಡ ಆಫರ್ ಘೋಷಣೆ!
ಟಿವಿಎಸ್ ಮೋಟಾರ್ (TVS Motor), ಪ್ರಖ್ಯಾತ ದ್ವಿಚಕ್ರ ವಾಹನ (Two Wheeler) ತಯಾರಕ ಕಂಪನಿಯಾಗಿದ್ದು, ಹಳ್ಳಿಯಿಂದ ದಿಲ್ಲಿವರೆಗೆ ಮನೆ ಮಾತಾಗಿದೆ. ದೇಶೀಯವಾಗಿ ಕಂಪನಿ ಮಾರಾಟಗೊಳಿಸುವ 'ಐಕ್ಯೂಬ್' ಎಲೆಕ್ಟ್ರಿಕ್ ಸ್ಕೂಟರ್ ಗೇಮ್ ಚೇಂಜರ್ ಆಗಿ ಹೊರಹೊಮ್ಮಿದ್ದು, ಉತ್ತಮ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಟಿವಿಎಸ್ ಇದೇ ಐಕ್ಯೂಬ್ ಸ್ಕೂಟರ್ ನೆರವಿನಿಂದ ಇವಿ (ಎಲೆಕ್ಟ್ರಿಕ್ ವೆಹಿಕಲ್) ವಿಭಾಗದಲ್ಲಿ ನೀರಿಕ್ಷೆಗೂ ಮೀರಿದ ಬೆಳವಣಿಗೆಯನ್ನು ಸಾಧಿಸಿದೆ. ಕಳೆದ ತಿಂಗಳು (ನವೆಂಬರ್- 2024) 26,292 ಯುನಿಟ್ ಇವಿಗಳನ್ನು ಮಾರಾಟಗೊಳಿಸಿದೆ. 2023ರ ಇದೇ ಅವಧಿಯಲ್ಲಿ ಮಾರಲ್ಪಟ್ಟ 16,782 ಯುನಿಟ್‌ಗಳಿಗೆ ಹೋಲಿಕೆ ಮಾಡಿದರೆ, ವರ್ಷದಿಂದ ವರ್ಷಕ್ಕೆ ಶೇ.57% ಪ್ರಗತಿಯಾಗಿದೆ.
ಸದ್ಯ, ಟಿವಿಎಸ್ ಮೋಟಾರ್ ಐಕ್ಯೂಬ್ (iQube) ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಹೊಸ ಇತಿಹಾಸ ನಿರ್ಮಿಸಿದೆ. ಸರಿ ಸುಮಾರು 4,50,000 ಯುನಿಟ್‌ಗೂ ಅಧಿಕ ಐಕ್ಯೂಬ್ ಇ-ಸ್ಕೂಟರ್‌ಗಳನ್ನು ಮಾರಾಟಗೊಳಿಸಿದೆ. ಈ ಸಂಭ್ರಮವನ್ನು ಹಿಮ್ಮಡಿಗೊಳಿಸಲು ಕಂಪನಿ ನಿರ್ಧರಿಸಿದ್ದು, ಟಿವಿಎಸ್ ಐಕ್ಯೂಬ್ ಮಿಡ್‌ನೈಟ್ ಕಾರ್ನಿವಲ್ (TVS iQube Midnight Carnival) ಹೆಸರಿನ ಮಾರಾಟ ಮೇಳವನ್ನು ಆಯೋಜಿಸಿದೆ.

ಭರ್ತಿ 10 ದಿನಗಳ ಕಾಲ ನಡೆಯುವ ಈ ಮೇಳಕ್ಕೆ ಈಗಾಗಲೇ ಅಧಿಕೃತವಾಗಿ ಚಾಲನೆ ದೊರೆತಿದೆ. ಡಿಸೆಂಬರ್ 22ರ ರಾತ್ರಿ 11:59 ಗಂಟೆವರೆಗೆ ಚಾಲ್ತಿಯಲ್ಲಿರುತ್ತದೆ. ವಿಶೇಷವಾಗಿ ಅರ್ಹ ಅದೃಷ್ಟಶಾಲಿಗಳಿಗೆ ನೂತನ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮೇಲೆ ಶೇ.100% ಕ್ಯಾಶ್‌ಬ್ಯಾಕ್ ಲಭ್ಯವಾಗಲಿದೆ.
'ಟಿವಿಎಸ್ ಐಕ್ಯೂಬ್ ಮಿಡ್‌ನೈಟ್ ಕಾರ್ನಿವಲ್' ಮೇಳದಲ್ಲಿ ಪ್ರತಿದಿನ ಒಬ್ಬರಂತೆ ವಿಜೇತ ಗ್ರಾಹಕರನ್ನು ಆಯ್ಕೆ ಮಾಡಲಾಗುತ್ತದೆ. ಈ ಹಿಂದೆ, ಐಕ್ಯೂಬ್ ಇ-ಸ್ಕೂಟರ್ ಬುಕ್ಕಿಂಗ್ ಮಾಡಿದ ಎಲ್ಲ ಗ್ರಾಹಕರು ಕೂಡ 'ಮಿಡ್‌ನೈಟ್ ಕಾರ್ನಿವಲ್' ಆಫರ್‌ಗೆ ಅರ್ಹರಾಗುತ್ತಾರೆ. ಇದಕ್ಕೆ ಸಂಬಂಧಿದಂತೆ ಯಾವುದೇ ಗೊಂದಲವಿದ್ದರೂ ಅಧಿಕೃತ ವೆಬ್‌ಸೈಟ್ ಅಥವಾ ಸಮೀಪದ ಡೀಲರ್‌ಶಿಪ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಬಹುದು.

ಇದು ಮಾತ್ರವಲ್ಲದೆ, ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಖರೀದಿದಾರರಿಗೆ 3.4 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ರೂಪಾಂತರದ (ವೇರಿಯೆಂಟ್) ಮೇಲೆ 5 ವರ್ಷ ಅಥವಾ 70,000 ಕಿಲೋಮೀಟರ್‌ಗಳ ವಾರಂಟಿ ದೊರೆಯುತ್ತದೆ. 2.2 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ರೂಪಾಂತರದ ಮೇಲೆ 5 ವರ್ಷ ಅಥವಾ 50,000 ಕಿಲೋಮೀಟರ್‌ಗಳ ವಾರಂಟಿ ಸಿಗುತ್ತದೆ.
ದೇಶೀಯ ಮಾರುಕಟ್ಟೆಯಲ್ಲಿ 'ಟಿವಿಎಸ್ ಐಕ್ಯೂಬ್' ಎಲೆಕ್ಟ್ರಿಕ್ ಸ್ಕೂಟರ್ ವಿವಿಧ ರೂಪಾಂತರಗಳ ಆಯ್ಕೆಯಲ್ಲಿ ಲಭ್ಯವಿದೆ. ಅದರಲ್ಲಿ 2.2 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಒಳಗೊಂಡಿರುವ ಐಕ್ಯೂಬ್ ಇ-ಸ್ಕೂಟರ್, ಎಂಟ್ರಿ ಲೆವೆಲ್ ಮಾಡೆಲ್ ಆಗಿದೆ. ಇದು ಬೆಂಗಳೂರಿನಲ್ಲಿ ರೂ.1.14 ಲಕ್ಷ ಆನ್-ರೋಡ್ ಬೆಲೆಯನ್ನು ಹೊಂದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 75 ಕಿಲೋಮೀಟರ್ ರೇಂಜ್ (ಮೈಲೇಜ್) ಕೊಡುತ್ತದೆ. 75 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಪಡೆದಿದೆ.

ಟಿವಿಎಸ್ ಐಕ್ಯೂಬ್ ಎಸ್‌ಟಿ 3.4 ಕೆಡಬ್ಲ್ಯೂಹೆಚ್ ಬ್ಯಾಟರಿಯನ್ನು ಹೊಂದಿರುವ ಮಾಡೆಲ್ ಬಗ್ಗೆ ಹೇಳುವುದಾದರೆ, ಈ ಎಲೆಕ್ಟ್ರಿಕ್ ಸ್ಕೂಟರ್ ರೂ.1.69 ಲಕ್ಷ ಆನ್-ರೋಡ್ ದರವನ್ನು ಪಡೆದಿದೆ. ಭರ್ತಿ ಚಾರ್ಜ್‌ನಲ್ಲಿ 100 ಕಿಲೋಮೀಟರ್ ಓಡುತ್ತದೆ. 78 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. 7-ಇಂಚಿನ ಫುಲ್-ಕಲರ್ ಟಿಎಫ್‌ಟಿ ಸ್ಕ್ರೀನ್, ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಟಿವಿಎಸ್ ಐಕ್ಯೂಬ್ ಎಸ್‌ಟಿ 5.1 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಪಡೆದಿರುವ ಮಾಡೆಲ್ ಕುರಿತಂತೆ ಮಾತನಾಡುವುದಾದರೆ, ಇದು ರೂ.1.98 ಲಕ್ಷ ಆನ್-ರೋಡ್ ಬೆಲೆಯನ್ನು ಒಳಗೊಂಡಿದೆ. ಪೂರ್ತಿ ಚಾರ್ಜ್‌ನಲ್ಲಿ 150 ಕಿಲೋಮೀಟರ್ ಕ್ರಮಿಸುತ್ತದೆ. 82 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. 7-ಇಂಚಿನ ಫುಲ್-ಕಲರ್ ಟಿಎಫ್‌ಟಿ ಸ್ಕ್ರೀನ್ ಒಳಗೊಂಡಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








