TVS: ಟಿವಿಎಸ್ ಐಕ್ಯೂಬ್‌ಗೆ ರೂ.30,000 ಆಫರ್.. ಕಡಿಮೆ ಬೆಲೆಗೆ ಹೊಸ ಇ-ಸ್ಕೂಟರ್, ರೂ.2,399ರಿಂದ EMI ಶುರು!

ಟಿವಿಎಸ್ ಮೋಟಾರ್ ಕಂಪನಿ (TVS Motor Company) ವಿಶ್ವಾಸಾರ್ಹ ದ್ವಿಚಕ್ರ & ತ್ರಿಚಕ್ರ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ದಸರಾ ಹಾಗೂ ದೀಪಾವಳಿ ಹಬ್ಬಕ್ಕೆ ನೂತನ ಐಕ್ಯೂಬ್‌ (iQube) ಎಲೆಕ್ಟ್ರಿಕ್ ಸ್ಕೂಟರ್‌ನ್ನು ಮನೆಗೆ ತರಬೇಕು ಎಂದು ಆಲೋಚಿಸಿರುವ ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಿದ್ದು, ರೂ.30,000 ವರೆಗೆ ಕ್ಯಾಶ್‌ಬ್ಯಾಕ್‌ನ್ನು ಘೋಷಣೆ ಮಾಡಿದೆ. ಇದರಿಂದ ಹೊಚ್ಚ ಹೊಸ ಐಕ್ಯೂಬ್ ಇ-ಸ್ಕೂಟರ್‌ ಕೇವಲ ರೂ.89,999 ಎಕ್ಸ್ ಶೋರೂಂ (ಬೆಂಗಳೂರು) ಬೆಲೆಗೆ ಖರೀದಿಗೆ ಲಭ್ಯವಾಗಲಿದೆ.

ಟಿವಿಎಸ್ ಐಕ್ಯೂಬ್ ಎಸ್ (TVS iQube S) ರೂಪಾಂತರವನ್ನು (ವೇರಿಯೆಂಟ್) ತೆಗೆದುಕೊಳ್ಳುವ ಗ್ರಾಹಕರಿಗೆ ವಿಶೇಷ ಹಣಕಾಸಿನ ಪ್ರಯೋಜನ ಸಿಗಲಿದೆ. ರೂ.5,999 ವೆಚ್ಚದ 5 ವರ್ಷ ಅಥವಾ 70,000 ಕಿಲೋಮೀಟರ್‌ಗಳ ವಿಸ್ತೃತ ವಾರಂಟಿ (Extended Warranty) ಕೂಡ ದೊರೆಯಲಿದೆ. ಈ ಕೊಡುಗೆಯನ್ನು (Offer) ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರ, ತೆಲಂಗಾಣ, ಪುದುಚೇರಿ, ಉತ್ತರ ಪ್ರದೇಶ, ಉತ್ತರಾಖಂಡ, ರಾಜಸ್ಥಾನ, ಗುಜರಾತ್, ಒರಿಸ್ಸಾ ಮತ್ತು ಮಹಾರಾಷ್ಟ್ರದ ಖರೀದಿದಾರರು ಮಾತ್ರ ಸದುಪಯೋಗಪಡಿಸಿಕೊಳ್ಳಬಹುದು.

Tvs iQube Electric Scooter Get Upto Rs 30000 Cashback Offer Emi Starts Rs 2 399 Details

ಇದಿಷ್ಟೇ ಅಲ್ಲದೆ, ಟಿವಿಎಸ್ ಐಕ್ಯೂಬ್ 2.2 ಕೆಡಬ್ಲ್ಯೂಹೆಚ್ ರೂಪಾಂತರ, ರೂ.17,300 ಹಾಗೂ ಟಿವಿಎಸ್ ಐಕ್ಯೂಬ್ 3.4 ಕೆಡಬ್ಲ್ಯೂಹೆಚ್ ರೂಪಾಂತರ ರೂ.20,000 ವರೆಗೆ ಕ್ಯಾಶ್‌ಬ್ಯಾಕ್‌ನ್ನು ಒಳಗೊಂಡಿದೆ. ಜುಲೈ 15, 2022ರೊಳಗೆ ಟಿವಿಎಸ್ ಐಕ್ಯೂಬ್ ಎಸ್‌ಟಿ (TVS iQube ST) ರೂಪಾಂತರವನ್ನು ಬುಕ್ಕಿಂಗ್ ಮಾಡಿರುವ ಗ್ರಾಹಕರು, 5.1 ಕೆಡಬ್ಲ್ಯೂಹೆಚ್ ಅಥವಾ 3.4 ಕೆಡಬ್ಲ್ಯೂಹೆಚ್ ಎಸ್‌ಟಿ ರೂಪಾಂತರವನ್ನು ತೆಗೆದುಕೊಂಡರೆ ರೂ.10,000 ಲಾಯಲ್ಟಿ ಬೋನಸ್ ಸಹ ಸಿಗುತ್ತದೆ.

ಆಯ್ದ ಬ್ಯಾಂಕ್‌ಗಳ ಡೆಬಿಟ್/ಕ್ರೆಡಿಟ್ ಕಾರ್ಡ್ ಹೊಂದಿರುವವರೂ ಟಿವಿಎಸ್ ಐಕ್ಯೂಬ್ ಖರೀದಿ ಮೇಲೆ ರೂ.10,000 ವರೆಗೆ ಕ್ಯಾಶ್‌ಬ್ಯಾಕ್‌ನ್ನು ಪಡೆಯಬಹುದು. ಜೊತೆಗೆ ರೂ.7,999 ಡೌನ್ ಪೇಮೆಂಟ್ ಪಾವತಿಸುವ ಮೂಲಕ ಐಕ್ಯೂಬ್ ಇ-ಸ್ಕೂಟರ್‌ನ್ನು ಮನೆಗೆ ತರಬಹದಾಗಿದ್ದು, ತಿಂಗಳ ಇಎಂಐ ರೂ.2,399 ರಿಂದ ಶುರುವಾಗಲಿದೆ. ಆದರೆ, ಎಲ್ಲ ಹಣಕಾಸು ಪ್ರಯೋಜನಗಳು ಅಕ್ಟೋಬರ್ 31 ರವರೆಗೆ ಮಾತ್ರ ಲಭ್ಯವಾಗಲಿವೆ.

ಹೊಚ್ಚ ಹೊಸ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್‌ನ 2.2 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್ ಒಳಗೊಂಡಿರುವ ರೂಪಾಂತರ (ವೇರಿಯೆಂಟ್) ರೂ.1.07 ಲಕ್ಷ (ಎಕ್ಸ್ ಶೋರೂಂ) ದರವನ್ನು ಪಡೆದಿದೆ. ಭರ್ತಿ ಚಾರ್ಜ್‌ನಲ್ಲಿ 75 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ. ಟಿಎಫ್‌ಟಿ ಸ್ಕ್ರೀನ್ ಮತ್ತು ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಸೇರಿದಂತೆ ಹತ್ತಾರು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಟಿವಿಎಸ್ ಐಕ್ಯೂಬ್ ಇ-ಸ್ಕೂಟರ್‌ನ 3.4 ಕೆಡಬ್ಲ್ಯೂಹೆಚ್ ಬ್ಯಾಟರಿಯನ್ನು ಪಡೆದಿರುವ ರೂಪಾಂತರ, ರೂ.1.37 ಲಕ್ಷ (ಎಕ್ಸ್ ಶೋರೂಂ) ದರವನ್ನು ಹೊಂದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 75 ರಿಂದ 100 ಕಿಲೋಮೀಟರ್‌ವರೆಗೂ ಓಡುತ್ತದೆ. ಟಿವಿಎಸ್ ಐಕ್ಯೂಬ್ ಎಸ್ ರೂ.1.46 ಲಕ್ಷ ಎಕ್ಸ್ ಶೋರೂಂ ದರವನ್ನು ಪಡೆದಿದೆ. ಪೂರ್ತಿ ಚಾರ್ಜ್‌ನಲ್ಲಿ 75-100 ಕಿಲೋಮೀಟರ್‌ವರೆಗೂ ಕ್ರಮಿಸುತ್ತದೆ.

ಇನ್ನು, ಟಿವಿಎಸ್ ಮೋಟಾರ್ ಘೋಷಣೆ ಮಾಡಿರುವ ಈ ಹಣಕಾಸಿನ ಪ್ರಯೋಜನದಿಂದ ದಸರಾ ಹಾಗೂ ದೀಪಾವಳಿ ಹಬ್ಬಕ್ಕೆ ಹೊಸ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್‌ನ್ನು ಖರೀದಿಸಬೇಕು ಎಂದುಕೊಂಡಿರುವ ಗ್ರಾಹಕರಿಗೆ ವರದಾನವಾಗಲಿದೆ. ನಿಮಗೆ ರಿಯಾಯಿತಿ ಕುರಿತಂತೆ ಯಾವುದೇ ಗೊಂದಲವಿದ್ದರೂ ಹೆಚ್ಚಿನ ಮಾಹಿತಿಗಾಗಿ ಸಮೀಪದ ಶೋರೂಂಗೆ ಭೇಟಿ ನೀಡಿರಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, October 9, 2024, 15:25 [IST]
English summary
Tvs iqube electric scooter get upto rs 30000 cashback offer emi starts rs 2399 details
Read more on tvs motor india diwali
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+