ಅಗ್ಗದ ಬೆಲೆಯಲ್ಲಿ ಸಿಗುವ ಎರಡು ಉತ್ತಮ ಸ್ಕೂಟರ್‌ಗಳು! ಆದ್ರೆ ಒಂದು ಬೆಸ್ಟ್‌.. ಯಾವುದು?

ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ವಿಭಾಗವು ಉತ್ತಮ ಬೆಳವಣಿಗೆ ಕಾಣುತ್ತಿದ್ದು, ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಗಳ ನಡುವೆ ಭಾರೀ ಪೈಪೋಟಿ ನಡೆಯುತ್ತಿದೆ. ಟಿವಿಎಸ್ ಮೋಟಾರ್ಸ್' ಐಕ್ಯೂಬ್ ಇವಿಯನ್ನು ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಆಗಿ ಮಾರುಕಟ್ಟೆಯಲ್ಲಿ ಪರಿಚಯಿಸಿದರೇ, ಬಜಾಜ್ ಕಂಪನಿಯು ತನ್ನ ಜನಪ್ರಿಯ ಚೇತಕ್ ಅನ್ನು ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಮರು ಬಿಡುಗಡೆ ಮಾಡಿದೆ. ಎರಡನ್ನೂ ದೈನಂದಿನ ಪ್ರಯಾಣಕ್ಕಾಗಿ ಉತ್ತಮ ವೈಶಿಷ್ಟ್ಯಗಳು ಮತ್ತು ಯೋಗ್ಯ ರೇಂಜ್‌ನೊಂದಿಗೆ ನೀಡಲಾಗುತ್ತದೆ. ಹಾಗಾದ್ರೆ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಮತ್ತು ಬಜಾಜ್ ಚೇತಕ್ ಅನ್ನು ಹೋಲಿಸಿ ಯಾವುದು ಉತ್ತಮ ಎಂದು ನೋಡೋಣ.

ವೈಶಿಷ್ಟ್ಯಗಳು: ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್' ST ಎಂಬ ವೇರಿಯೆಂಟ್ ಹೊಂದಿದ್ದು, ಇದರಲ್ಲಿ ಹೆಚ್ಚಿನ ವೈಶಿಷ್ಟ್ಯಗಳು ಸಿಗುತ್ತವೆ. 7 ಇಂಚಿನ ಟಿಎಫ್‌ಟಿ ಟಚ್ ಸ್ಕ್ರೀನ್, ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಕಾಲ್/ಎಸ್‌ಎಂಎಸ್ ನೋಟಿಫಿಕೇಷನ್, ಡಾಕ್ಯುಮೆಂಟ್ ಸ್ಟೋರೇಜ್, ಮ್ಯೂಸಿಕ್ ಕಂಟ್ರೋಲ್, ಸೋಷಿಯಲ್ ಮೀಡಿಯಾ ನೋಟಿಫಿಕೇಷನ್, ನಾಲ್ಕು ಕ್ಲಸ್ಟರ್ ಥೀಮ್‌ಗಳು, ಒಟಿಎ ನವೀಕರಣಗಳು ಇತ್ಯಾದಿ ವೈಶಿಷ್ಟ್ಯಗಳಿವೆ.

tvs-iqube-electric-vs-bajaj-chetak-price-features-battery-comparison

ಹಾಗೆಯೇ ಬಜಾಜ್ ಚೇತಕ್ ಹೆಚ್ಚುವರಿ ವೈಶಿಷ್ಟ್ಯಗಳಿಗಾಗಿ ವಿಶೇಷವಾಗಿ ಟಾಕ್ ಪ್ಯಾಕ್ ಅನ್ನು ನೀಡುತ್ತದೆ. ಇದರಲ್ಲಿ ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಆನ್‌ಬೋರ್ಡ್ ಮ್ಯೂಸಿಕ್ ಕಂಟ್ರೋಲ್, ಕಾಲ್ ಅಲರ್ಟ್ ಮತ್ತು ಥೀಮ್ ಕಸ್ಟಮೈಸೇಷನ್ ಆಯ್ಕೆಗಳನ್ನು ನೀಡುತ್ತದೆ. ಟಾಕ್ ಪ್ಯಾಕ್ ಹಿಲ್ ಹೋಲ್ಡ್ ಕಂಟ್ರೋಲ್ ಮತ್ತು ರಿವರ್ಸ್ ಮೋಡ್ ಅನ್ನು ಸಹ ಹೊಂದಿದೆ.

ರೇಂಜ್: ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಅನ್ನು ಮೂರು ಬ್ಯಾಟರಿ ಪ್ಯಾಕ್‌ಗಳಲ್ಲಿ ನೀಡಲಾಗುತ್ತದೆ. ಬಜಾಜ್ ಚೇತಕ್ ಅನ್ನು ಒಂದೇ ಬ್ಯಾಟರಿ ಪ್ಯಾಕ್‌ನಲ್ಲಿ ನೀಡಲಾಗುತ್ತದೆ. TVS IQube ಎಲೆಕ್ಟ್ರಿಕ್ 3.4 kWh ಬ್ಯಾಟರಿ ಪ್ಯಾಕ್ ಹಾಗೂ ಬಜಾಜ್ ಚೇತಕ್ 3.2 kWh ಬ್ಯಾಟರಿ ಪ್ಯಾಕ್‌ನೊಂದಿಗೆ ಸ್ಪರ್ಧಿಸುತ್ತದೆ.

tvs-iqube-electric-vs-bajaj-chetak-price-features-battery-comparison

TVS IQube ಎಲೆಕ್ಟ್ರಿಕ್ ಒಂದೇ ಚಾರ್ಜ್‌ನಲ್ಲಿ 120 ರಿಂದ 100 ಕಿ.ಮೀ. ಓಡಬಲ್ಲದು. ಮತ್ತೊಂದೆಡೆ, ಬಜಾಜ್ ಚೇತಕ್ 126 ಕಿ.ಮೀ ವ್ಯಾಪ್ತಿಯನ್ನು ನೀಡುತ್ತದೆ. ಎರಡೂ ಎಲೆಕ್ಟ್ರಿಕ್ ಸ್ಕೂಟರ್‌ಗಳು ಯೋಗ್ಯ ಶ್ರೇಣಿಯನ್ನು ನೀಡುತ್ತವೆ. ಟಿವಿಎಸ್ ಮೋಟಾರ್ಸ್ ಮತ್ತು ಬಜಾಜ್ ಆಟೋ ಎರಡೂ ನಿಧಾನವಾಗಿ ಚಾರ್ಜ್ ಆಗುತ್ತವೆ.

ಬೆಲೆ ಮತ್ತು ರೂಪಾಂತರಗಳು: ಬಜಾಜ್ ಚೇತಕ್ ಅನ್ನು ಆರು ವೇರಿಯೆಂಟ್‌ಗಳಲ್ಲಿ ನೀಡಲಾಗುತ್ತದೆ. ಇದರಲ್ಲಿ 2901 ಆವೃತ್ತಿಯ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.1.10 ಲಕ್ಷಗಳಾಗಿದೆ. ಮತ್ತೊಂದೆಡೆ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಅನ್ನು ಐದು ವೇರಿಯೆಂಟ್‌ಗಳು ಮತ್ತು ಮೂರು ಬ್ಯಾಟರಿ ಪ್ಯಾಕ್‌ಗಳಲ್ಲಿ ನೀಡಲಾಗುತ್ತದೆ. 2.2 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್‌ 1.17 ಲಕ್ಷ ರೂ.ಗಳಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುತ್ತದೆ.

tvs-iqube-electric-vs-bajaj-chetak-price-features-battery-comparison

ಫಲಿತಾಂಶ: ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಮತ್ತು ಬಜಾಜ್ ಚೇತಕ್ ಸ್ಪರ್ಧಾತ್ಮಕ ಬೆಲೆಯನ್ನು ಹೊಂದಿದ್ದು, ಗ್ರಾಹಕರಿಗೆ ಉತ್ತಮ ವೈಶಿಷ್ಟ್ಯಗಳನ್ನು ನೀಡುತ್ತವೆ. ಈ ಎರಡೂ ಸ್ಕೂಟರ್‌ಗಳು ತಮ್ಮದೇ ಆದ ಸಾಧಕ-ಬಾಧಕಗಳನ್ನು ಹೊಂದಿವೆ. ಮಾರಾಟದ ಅಂಕಿಅಂಶಗಳನ್ನು ನೊಡಿದ್ರೆ, ಆಧುನಿಕ ಕ್ಲಾಸಿಕ್ ಸ್ಕೂಟರ್‌ಗಾಗಿ ಹುಡುಕುತ್ತಿದ್ದವರಿಗೆ, ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಉತ್ತಮ ಆಯ್ಕೆಯಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, August 12, 2024, 16:33 [IST]
English summary
Tvs iqube electric vs bajaj chetak price features battery comparison
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+