TVS iQube: ಜನಪ್ರಿಯ ಟಿವಿಎಸ್ ಐಕ್ಯೂಬ್ ಎಸ್‌ಟಿ ಸ್ಕೂಟರ್ ವಿತರಣೆ ಶುರು, ಇವರಿಗೆ ರಿಯಾಯಿತಿ ಲಾಭ
ಹೊಸೂರು ಮೂಲದ ಟಿವಿಎಸ್ ಮೋಟಾರ್ (TVS Motor) ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಇತ್ತೀಚೆಗೆ, ಎದುರಾಳಿ ಕಂಪನಿಗಳಿಗೆ ಪ್ರಬಲ ಸ್ಪರ್ಧಿಯೊಡ್ಡಲು ಐಕ್ಯೂಬ್ (iQube) ಎಲೆಕ್ಟ್ರಿಕ್ ಸ್ಕೂಟರ್‌ನ ಹೊಸ ರೂಪಾಂತರ (ವೇರಿಯೆಂಟ್)ಗಳನ್ನು ದೇಶೀಯ ಮಾರುಕಟ್ಟೆಯಲ್ಲಿ ಅದ್ದೂರಿಯಾಗಿ ಬಿಡುಗಡೆಗೊಳಿಸಿತ್ತು. ಸದ್ಯ ಮಹಾರಾಷ್ಟ್ರದಲ್ಲಿ 'ಎಸ್‌ಟಿ' ಮಾದರಿಗಳ ವಿತರಣೆಯು ಶುರುವಾಗಿದೆ ಎಂಬ ವಿವರಗಳು ಲಭ್ಯವಾಗಿವೆ. ಶೀಘ್ರದಲ್ಲಿಯೇ ಹಂತ ಹಂತವಾಗಿ ವಿವಿಧ ರಾಜ್ಯಗಳಲ್ಲಿಯೂ ನೂತನ ಐಕ್ಯೂಬ್ ಇ-ಸ್ಕೂಟರ್‌ನ ಡಿಲೆವರಿ ಆರಂಭವಾಗಲಿದ್ದು, ಗ್ರಾಹಕರು ಸಹ ಕಾತರದಿಂದ ಕಾಯುತ್ತಿದ್ದಾರೆ.
ಹೊಸ ಟಿವಿಎಸ್ ಐಕ್ಯೂಬ್ ಎಸ್‌ಟಿ (TVS iQube ST) ರೂಪಾಂತರಗಳು ಬ್ಯಾಟರಿ ಪ್ಯಾಕ್‍ಗೆ ಅನುಗುಣವಾಗಿ ರೂ.1.56 ಲಕ್ಷದಿಂದ ರೂ.1.86 ಲಕ್ಷ (ಎಕ್ಸ್ ಶೋರೂಂ - ಮುಂಬೈ) ಬೆಲೆಯನ್ನು ಹೊಂದಿವೆ. ಜುಲೈ 15, 2022ರ ಮುನ್ನ ಈ ಎಸ್‌ಟಿ ಸ್ಕೂಟರ್‌ನ್ನು ಬುಕ್ಕಿಂಗ್ ಮಾಡಿದ್ದರೆ, ಅಂತಹ ಖರೀದಿದಾರರಿಗೆ ವಿಶೇಷವಾಗಿ ರೂ.10,000 ಮೊತ್ತದ ಲಾಯಲ್ಟಿ ಬೋನಸ್ (Loyalty Bonus) ಸಿಗುತ್ತದೆ.

ಮೊದಲಿಗೆ 5.1 ಕೆಡಬ್ಲ್ಯೂಹೆಚ್ ಬ್ಯಾಟರಿಯನ್ನು ಹೊಂದಿರುವ ಟಿವಿಎಸ್ ಐಕ್ಯೂಬ್ ಎಸ್‌ಟಿ ಆವೃತ್ತಿಯ ಬಗ್ಗೆ ಮಾತನಾಡೋಣ. ಇದು ಸಂಪೂರ್ಣ ಚಾರ್ಜ್ ನಲ್ಲಿ 150 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ. 82 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಪಡೆದಿದ್ದು, 950ಡಬ್ಲ್ಯೂ ಚಾರ್ಜರ್‌ನ್ನು ಒಳಗೊಂಡಿದೆ. ಇದರಲ್ಲಿರುವ ಬ್ಯಾಟರಿ ಪ್ಯಾಕ್ 4.18 ಗಂಟೆಗಳಲ್ಲಿ ಶೇಕಡ 0-80% ಚಾರ್ಜ್ ಆಗಿಬಿಡುತ್ತದೆ.
ಈ ಐಕ್ಯೂಬ್ ಎಸ್‌ಟಿ (5.1 ಕೆಡಬ್ಲ್ಯೂಹೆಚ್) ರೂಪಾಂತರವು 7-ಇಂಚಿನ ಫುಲ್ - ಕಲರ್ ಟಿಎಫ್‌ಟಿ ಸ್ಕ್ರೀನ್, ವಾಯ್ಸ್ ಅಸಿಸ್ಟ್ - ಅಲೆಕ್ಸಾ ಸ್ಕಿಲ್‌ಸೆಟ್, ಡಿಜಿಟಲ್ ಡಾಕ್ಯುಮೆಂಟ್ ಸ್ಟೋರೇಜ್, TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಸೇರಿದಂತೆ ಹತ್ತಾರು ನವೀನ ವೈಶಿಷ್ಟ್ಯಗಳನ್ನು ಹೊಂದಿದೆ. 32 - ಲೀಟರ್ ಸಾಮರ್ಥ್ಯದ ಸೀಟ್ ಬೂಟ್ ಬೂಟ್ ಸ್ಪೇಸ್‍ನ್ನು ಹೊಂದಿದ್ದು, ಸ್ಟಾರ್‌ಲೈಟ್ ಬ್ಲೂ, ಟೈಟಾನಿಯಂ ಗ್ರೇ ಮ್ಯಾಟ್ ಬಣ್ಣಗಳೊಂದಿಗೂ ಲಭ್ಯವಿದೆ.

ಮತ್ತೊಂದು 3.4 ಕೆಡಬ್ಲ್ಯೂಹೆಚ್ ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಪಡೆದಿರುವ ಮಾದರಿಯು ಪೂರ್ತಿ ಚಾರ್ಜ್ ನಲ್ಲಿ 100 ಕಿ.ಮೀ ಓಡುತ್ತದೆ. 78 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಪಡೆದಿದ್ದು, ಸ್ಟಾರ್‌ಲೈಟ್ ಬ್ಲೂ, ಟೈಟಾನಿಯಂ ಗ್ರೇ ಮ್ಯಾಟ್, ಕೋರಲ್ ಸ್ಯಾಂಡ್ ಸ್ಯಾಟಿನ್ ಒಳಗೊಂಡಂತೆ ಹಲವು ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿಯೂ ದೊರೆಯುತ್ತದೆ.
ನೂತನ ಐಕ್ಯೂಬ್ ಎಸ್‌ಟಿ (3.4 ಕೆಡಬ್ಲ್ಯೂಹೆಚ್) ಆವೃತ್ತಿಯು 7-ಇಂಚಿನ ಟಿಎಫ್‌ಟಿ ಸ್ಕ್ರೀನ್, 118+ ಕನೆಕ್ಟ್ದ್ ಫೀಚರ್ಸ್, ವಾಯ್ಸ್ ಅಸಿಸ್ಟ್ & ಅಲೆಕ್ಸಾ ಸ್ಕಿಲ್‌ಸೆಟ್, ಡಿಜಿಟಲ್ ಡಾಕ್ಯುಮೆಂಟ್ ಸ್ಟೋರೇಜ್, TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಒಳಗೊಂಡಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಜೊತೆಗೆ ಕೋರಲ್ ಸ್ಯಾಂಡ್ ಸ್ಯಾಟಿನ್, ಟೈಟಾನಿಯಂ ಗ್ರೇ ಮ್ಯಾಟ್, ಸ್ಟಾರ್‌ಲೈಟ್ ಬ್ಲೂ ಸೇರಿದಂತೆ ಹಲವು ಬಣ್ಣಗಳೊಂದಿಗೆ ಸಿಗುತ್ತದೆ.
ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ 'ಎಸ್‌ಟಿ' ಮಾತ್ರವಲ್ಲದೆ, ವಿವಿಧ ರೂಪಾಂತರಗಳ ಆಯ್ಕೆಯಲ್ಲಿಯೂ ಗ್ರಾಹಕರಿಗೆ ದೊರೆಯುತ್ತವೆ. ಇದರ ಸಾಮಾನ್ಯ ಐಕ್ಯೂಬ್ ಮಾದರಿಯು 2.2 ಕೆಡಬ್ಲ್ಯೂಹೆಚ್ ಬ್ಯಾಟರಿಯನ್ನು ಹೊಂದಿದ್ದು, ಭರ್ತಿ ಚಾರ್ಜ್ ನಲ್ಲಿ 75 ಕಿ.ಮೀ ಓಡುತ್ತದೆ. 3.04 ಕೆಡಬ್ಲ್ಯೂಹೆಚ್ ಬ್ಯಾಟರಿಯನ್ನು ಪಡೆದಿರುವ ಐಕ್ಯೂಬ್ ಹಾಗೂ ಐಕ್ಯೂಬ್ ಎಸ್ ಆವೃತ್ತಿಗಳು, ಸಂಪೂರ್ಣ ಚಾರ್ಜ್ ನಲ್ಲಿ 100 ಕಿ.ಮೀ ರೇಂಜ್ (ಮೈಲೇಜ್) ನೀಡುತ್ತೇವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








