TVS Sales Report: ಭಾರೀ ವೇಗದಲ್ಲಿ ಮುನ್ನುಗ್ಗುತ್ತಿದೆ ಟಿವಿಎಸ್ ಐಕ್ಯೂಬ್, ನಂಬರ್ 1 ಆಗುತ್ತಾ?

ಟಿವಿಎಸ್ ಮೋಟಾರ್ (TVS Motor) ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿದೆ. ಇದರ ಮೋಟಾರ್‌ಸೈಕಲ್ ಹಾಗೂ ಸ್ಕೂಟರ್‌ಗಳು ಆಕರ್ಷಕ ವೈಶಿಷ್ಟ್ಯ, ವಿನ್ಯಾಸವನ್ನು ಹೊಂದಿರುವುದರಿಂದ ಹೆಚ್ಚಿನ ಮಂದಿ ಇಷ್ಟಪಟ್ಟು ಖರೀದಿಸುತ್ತಾರೆ. ಹಾಗೆಯೇ ಕಂಪನಿಯ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ದೊಡ್ಡ ಹೆಸರನ್ನು ಮಾಡಿದ್ದು, ಭಾರೀ ಸಂಖ್ಯೆಯಲ್ಲಿ ಸೇಲ್ ಆಗುತ್ತಿದೆ.

ಈಗ ಟಿವಿಎಸ್ ಜನವರಿ (2024) ತಿಂಗಳ ಮಾರಾಟ ವರದಿಯನ್ನು ಪ್ರಕಟಿಸಿದ್ದು, ಐಕ್ಯೂಬ್ (iQube) ಎಲೆಕ್ಟ್ರಿಕ್ ಸ್ಕೂಟರ್‌ಗಳು ಅಧಿಕ ಸಂಖ್ಯೆಯಲ್ಲಿ ಸೇಲ್ ಆಗಿವೆ. ಇದರ ಮಾರಾಟ ವಿವರವನ್ನು ನೋಡುವ ಮೊದಲ ಒಟ್ಟಾರೆ ಅಂಕಿಅಂಶಗಳ ಬಗ್ಗೆ ಗಮನ ಹರಿಸೋಣ. ಕಂಪನಿಯು ಕಳೆದ ತಿಂಗಳು 339,513 ಯುನಿಟ್ ವಾಹನಗಳನ್ನು ಸೇಲ್ ಮಾಡಿದ್ದು, ಹೋದ ವರ್ಷದ ಇದೇ ಅವಧಿಗೆ ಹೋಲಿಕೆ ಮಾಡಿದರೆ (275,115 ಯುನಿಟ್) ವರ್ಷದಿಂದ ಶೇಕಡ 23% ಪ್ರಗತಿ ಸಾಧಿಸಿದೆ.

TVS January 2024 Sales Growth 23 Percent: People Like iQube Electric Scooter

ಈ ಜನವರಿಯಲ್ಲಿ 329,937 ಯುನಿಟ್ ದ್ವಿಚಕ್ರ ವಾಹನ (Two-Wheelers)ಗಳನ್ನು ಮಾರಾಟಗೊಳಿಸಿದ್ದು, 2023ರ ಇದೇ ತಿಂಗಳಿಗೆ ಹೋಲಿಸಿದರೆ (264,710 ಯುನಿಟ್) ಶೇಕಡ 25% ಬೆಳವಣಿಗೆ ಕಂಡಿದೆ. ಮೋಟಾರ್‌ಸೈಕಲ್ ಸೇಲ್ಸ್ ವಿವರವನ್ನು ನೋಡುವುದಾದರೆ, ಕಳೆದ ತಿಂಗಳು 1,55,611 ಯುನಿಟ್ ಬೈಕ್ ಮಾರಿದ್ದು, ಶೇಕಡ 29% ಪ್ರಗತಿಯಾಗಿದೆ. ಹೋದ ವರ್ಷದ ಜನವರಿಯಲ್ಲಿ 1,21,042 ಯುನಿಟ್ ಸೇಲ್ ಮಾಡಿದೆ.

ಸ್ಕೂಟರ್ ಮಾರಾಟದಲ್ಲಿಯೂ ಟಿವಿಎಸ್ ಉತ್ತಮವಾದ ಮುನ್ನಡೆಯನ್ನು ಸಾಧಿಸಿದೆ. ಹೋದ ತಿಂಗಳು 132,290 ಯುನಿಟ್ ಸ್ಕೂಟರ್ ಸೇಲ್ ಮಾಡಿದ್ದು, 2023ರ ಜನವರಿಗೆ ಹೋಲಿಸಿದರೆ (106,537 ಯುನಿಟ್) ಶೇಕಡ 24% ಬೆಳವಣಿಗೆ ಕಂಡಿದೆ. ಆದರೆ, ತ್ರಿಚಕ್ರ ವಾಹನ ಮಾರಾಟದಲ್ಲಿ ಕೊಂಚ ಹಿನ್ನಡೆ ಅನುಭವಿಸಿದೆ. ಮತ್ತೊಂದೆಡೆ ರಫ್ತು ಪ್ರಮಾಣವು ವೃದ್ಧಿಯಾಗಿದೆ.

TVS January 2024 Sales Growth 23 Percent: People Like iQube Electric Scooter

ಟಿವಿಎಸ್ ಮಾರಾಟಗೊಳಿಸುವ ಎಲೆಕ್ಟ್ರಿಕ್ ವಾಹನ (ಇವಿ)ಗಳ ಮಾರಾಟ ಪ್ರಮಾಣವನ್ನು ನೋಡುವುದಾದರೆ, ಕಂಪನಿಯು ಕಳೆದ ಜನವರಿಯಲ್ಲಿ 16,276 ಯುನಿಟ್ ಇವಿ ಸೇಲ್ ಮಾಡಿದೆ. ಈ ಮೂಲಕ ಶೇಕಡ 34% ಪ್ರಗತಿ ಸಾಧಿಸಿದೆ. ಅದರಲ್ಲೂ ಹೋದ ತಿಂಗಳೊಂದರಲ್ಲಿಯೇ 15,181 ಯುನಿಟ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟಗೊಳಿಸಿ, ಶೇಕಡ 19% ಮಾರುಕಟ್ಟೆ ಪಾಲನ್ನು ತನ್ನದಾಗಿಸಿಕೊಂಡಿದೆ ಎಂದು ವರದಿಯಾಗಿದೆ.

2023ರ ಆರ್ಥಿಕ ವರ್ಷದಲ್ಲಿ ಟಿವಿಎಸ್, 166,190 ಯುನಿಟ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಸೇಲ್ ಮಾಡಿದೆ. ಅದೇ 2022ರ ಆರ್ಥಿಕ ವರ್ಷಕ್ಕೆ ಹೋಲಿಕೆ ಮಾಡಿದರೆ (47,185 ಯುನಿಟ್), ಶೇಕಡ 252% ಬೆಳವಣಿಗೆಯಾಗಿದೆ. 2020ರಲ್ಲಿ ಬಿಡುಗಡೆಯಾದ ಟಿವಿಎಸ್ ಐಕ್ಯೂಬ್ ಒಂದೆರೆಡು ವರ್ಷದಲ್ಲಿಯೇ ಈ ಮಟ್ಟಿಗೆ ಏರಿರುವುದು ನಿಜಕ್ಕೂ ಉತ್ತಮ ಬೆಳವಣಿಗೆಯಾಗಿದೆ.

ಭಾರತದ ಮಾರುಕಟ್ಟೆಯಲ್ಲಿ ಟಿವಿಎಸ್ ಐಕ್ಯೂಬ್ (TVS iQube), 2 ಆಕರ್ಷಕ ರೂಪಾಂತರ (Variants)ಗಳ ಆಯ್ಕೆಯಲ್ಲಿ ದೊರೆಯುತ್ತದೆ. ಅವುಗಳೆಂದರೆ, ಐಕ್ಯೂಬ್, ಐಕ್ಯೂಬ್ ಎಸ್. ರೂ.1,47,968ರಿಂದ ಆನ್-ರೋಡ್ ಬೆಲೆಗಳು ಆರಂಭವಾಗಿದೆ. ಇವೆರಡು ರೂಪಾಂತರಗಳು, 3.04 ಕೆಡಬ್ಲ್ಯೂಹೆಚ್ ಸಾಮರ್ಥ್ಯದ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, ಸಂಪೂರ್ಣ ಚಾರ್ಜ್ ನಲ್ಲಿ 100 km ರೇಂಜ್ ನೀಡಲಿವೆ.

ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ 4.4 ಕೆಡಬ್ಲ್ಯೂ ಹಬ್ - ಮೌಂಟೆಡ್ ಮೋಟಾರ್ ಪಡೆದಿದ್ದು, 140 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 75 ಕೆಎಂ/ಹೆಚ್ ಟಾಪ್ ಸ್ವೀಡ್ ಪಡೆದಿದ್ದು,ಫುಲ್ ಕಲರ್ ಟಿಎಫ್‌ಟಿ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಇನ್ನು, ಟಿವಿಎಸ್ ಕಂಪನಿಯ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ 'ಎಕ್ಸ್' ಹೋದ ವರ್ಷದ ಆಗಸ್ಟ್ ತಿಂಗಳಲ್ಲಿ ರೂ.2.50 ಲಕ್ಷ ಎಕ್ಸ್ ಶೋರೂಂ ಬೆಲೆಗೆ ಲಾಂಚ್ ಆಗಿತ್ತು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, February 2, 2024, 12:48 [IST]
English summary
Tvs january 2024 sales growth 23 percent people like iqube electric scooter
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+