TVS: ಟಿವಿಎಸ್ ದ್ವಿಚಕ್ರ ವಾಹನಗಳಿಗೆ ಮನಸೋತ ಗ್ರಾಹಕರು, ಐಕ್ಯೂಬ್‌ ಎಲೆಕ್ಟ್ರಿಕ್ ಸ್ಕೂಟರ್‌ಗಾಗಿ ಕ್ಯೂ..!

ಭಾರತದ ಪ್ರಮುಖ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿ ಟಿವಿಎಸ್ ಮೋಟಾರ್ (TVS Motor) ಗುರುತಿಸಿಕೊಂಡಿದೆ. ಸಾಮಾನ್ಯ ಜನರಿಗೆ ಹೆಚ್ಚಿನ ಅನುಕೂಲವಾಗುವ ಸಲುವಾಗಿ ಕೈಗೆಟುಕುವ ಬೆಲೆಯಲ್ಲಿ ವಿವಿಧ ಬೈಕ್ ಹಾಗೂ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದೆ. ನವೀನ ಶೈಲಿಯ ವಿನ್ಯಾಸ ಮತ್ತು ವೈಶಿಷ್ಟ್ಯ ಹೊಂದಿರುವುದರಿಂದ ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಗುರುವಾರ ಟಿವಿಎಸ್ ಕಂಪನಿ ಜುಲೈ (2024) ಮಾರಾಟದ ಅಂಕಿಅಂಶಗಳನ್ನು ಪ್ರಕಟಿಸಿದ್ದು, ಒಳ್ಳೆಯ ಬೆಳವಣಿಗೆ ಸಾಧಿಸಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಟಿವಿಎಸ್ ಮೋಟಾರ್, ಕಳೆದ ತಿಂಗಳು (ಜುಲೈ 2024) 354,140 ಯುನಿಟ್ (ದ್ವಿಚಕ್ರ ಮತ್ತು ತ್ರಿಚಕ್ರ) ವಾಹನಗಳನ್ನು ಮಾರಾಟ ಮಾಡಿದೆ. 2023ರ ಜುಲೈನಲ್ಲಿ ಮಾರಿದ 325,977 ಯುನಿಟ್‌ಗೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ ಶೇಕಡ 9% ಬೆಳವಣಿಗೆ ಕಂಡಿದೆ. ಇದು ದೇಶೀಯ ಹಾಗೂ ವಿದೇಶಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ ಒಟ್ಟಾರೆ ವಾಹನಗಳ ಸಂಖ್ಯೆಯಾಗಿದೆ.

Tvs July 2024 Sales Report 9 Percent Growth Most Of Indians Like Iqube Electric Scooters

ದ್ವಿಚಕ್ರ (Two-Wheeler) ವಾಹನ ವಿಭಾಗದಲ್ಲಿ ಜುಲೈನಲ್ಲಿ ಒಟ್ಟು 339,676 ಯುನಿಟ್ ಮಾರಾಟ ಮಾಡಿದ್ದು, 2023ರ ಜುಲೈಗೆ ಹೋಲಿಕೆ ಮಾಡಿದರೆ (312,307 ಯುನಿಟ್) ಶೇಕಡ 9% ಪ್ರಗತಿಯಾಗಿದೆ. ತ್ರಿಚಕ್ರ (Three-Wheeler) ವಾಹನ ಮಾರಾಟವು ಸುಧಾರಿಸಿದ್ದು, ಟಿವಿಎಸ್ ಮೋಟಾರ್ ಜುಲೈ ತಿಂಗಳಲ್ಲಿ 14,464 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 13,670 ಯುನಿಟ್ ಮಾರಿತ್ತು. ಈ ಮೂಲಕ ವರ್ಷದಿಂದ ವರ್ಷಕ್ಕೆ 6% ಅಧಿವೃದ್ಧಿ ಕಂಡಿದೆ.

ವಿದೇಶಿ ಮಾರುಕಟ್ಟೆಯಲ್ಲಿ ಸಹ ಟಿವಿಎಸ್ ಮೋಟಾರ್ ಪಾರುಪತ್ಯ ಸಾಧಿಸುತ್ತಿದೆ. ಅಲ್ಲಿಯೂ ಮಾರಾಟ ಪ್ರಮಾಣ ಹೆಚ್ಚಳವಾಗಿದೆ. ಜುಲೈನಲ್ಲಿ ಒಟ್ಟು 97,589 ಯುನಿಟ್ (ದ್ವಿಚಕ್ರ ಮತ್ತು ತ್ರಿಚಕ್ರ) ವಾಹನಗಳನ್ನು ಮಾರಾಟ ಮಾಡಿದೆ. 2023ರ ಜುಲೈನಲ್ಲಿ ಮಾರಿದ 89,213 ಯುನಿಟ್‌ಗೆ ಹೋಲಿಸಿದರೆ, ಶೇಕಡ 9% ಬೆಳವಣಿಗೆ ದಾಖಲಿಸಿದೆ. ವಿಶೇಷವಾಗಿ ದ್ವಿಚಕ್ರ ವಾಹನ ರಫ್ತು 11% ಬೆಳವಣಿಗೆಯಾಗಿದೆ.

Tvs July 2024 Sales Report 9 Percent Growth Most Of Indians Like Iqube Electric Scooters

ಟಿವಿಎಸ್ ಮೋಟಾರ್, ಇವಿ (ಎಲೆಕ್ಟ್ರಿಕ್ ವೆಹಿಕಲ್) ಮಾರಾಟದಲ್ಲಿಯೂ ಭಾರೀ ಪ್ರಗತಿ ಸಾಧಿಸಿದೆ. ಜುಲೈನಲ್ಲಿ 21,442 ಯುನಿಟ್ ಇವಿಗಳನ್ನು ಮಾರಾಟ ಮಾಡಿದೆ. 2023ರ ಜುಲೈನಲ್ಲಿ ಮಾರಾಟಗೊಳಿಸಿದ 13,306 ಯುನಿಟ್‌ಗೆ ಹೋಲಿಕೆ ಮಾಡಿದರೆ, ವರ್ಷದಿಂದ ವರ್ಷಕ್ಕೆ (YOY) ಶೇಕಡ 61% ಅಭಿವೃದ್ಧಿಯಾಗಿದೆ. ಇವಿ ವಿಭಾಗದಲ್ಲಿ ಟಿವಿಎಸ್ ಈ ಪರಿಪ್ರಮಾಣದಲ್ಲಿ ಬೆಳವಣಿಗೆ ಕಾಣಲು 'ಐಕ್ಯೂಬ್' ಎಲೆಕ್ಟ್ರಿಕ್ ಸ್ಕೂಟರ್ ಮುಖ್ಯವಾಗಿದೆ.

ದೇಶೀಯವಾಗಿ ಟಿವಿಎಸ್ ಐಕ್ಯೂಬ್ (TVS iQube) ಎಲೆಕ್ಟ್ರಿಕ್ ಸ್ಕೂಟರ್, ಐಕ್ಯೂಬ್, ಐಕ್ಯೂಬ್ ಎಸ್ ಮತ್ತು ಐಕ್ಯೂಬ್ ಎಸ್‌ಟಿ ಎಂಬ ಮೂರು ವಿಧದಲ್ಲಿ ದೊರೆಯುತ್ತದೆ. ರೂ.94,999 ದಿಂದ ರೂ.185,373 ಎಕ್ಸ್ ಶೋರೂಂ ಬೆಲೆಯನ್ನು ಪಡೆದಿದೆ. 2.2 ಕೆಡಬ್ಲ್ಯೂಹೆಚ್, 3.4 ಕೆಡಬ್ಲ್ಯೂಹೆಚ್ ಹಾಗೂ 5.1 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಒಳಗೊಂಡಿದ್ದು, ಭರ್ತಿ ಚಾರ್ಜ್‌ನಲ್ಲಿ 75 ರಿಂದ 150 ಕಿಲೋಮೀಟರ್ ಕ್ರಮಿಸುತ್ತದೆ.

Tvs July 2024 Sales Report 9 Percent Growth Most Of Indians Like Iqube Electric Scooters

ಈ ಎಲೆಕ್ಟ್ರಿಕ್ ಸ್ಕೂಟರ್ ರೂಪಾಂತರ (ವೇರಿಯೆಂಟ್)ಗಳನ್ನು ಅವಲಂಭಿಸಿ, ವಿಭಿನ್ನವಾದ ವೈಶಿಷ್ಟ್ಯಗಳನ್ನು ಒಳಗೊಂಡಿರುತ್ತದೆ. 7-ಇಂಚಿನ ಫುಲ್-ಕಲರ್ ಟಿಎಫ್‌ಟಿ ಸ್ಕ್ರೀನ್, ವಾಯ್ಸ್ ಅಸಿಸ್ಟ್ ಅಲೆಕ್ಸಾ ಸ್ಕಿಲ್‌ಸೆಟ್‌, ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಡಿಜಿಟಲ್ ಡಾಕ್ಯುಮೆಂಟ್ ಸ್ಟೋರೇಜ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. 75 ರಿಂದ 82 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, August 1, 2024, 19:37 [IST]
English summary
Tvs july 2024 sales report 9 percent growth most of indians like iqube electric scooters
Read more on tvs motor india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+