TVS: ಈ ಸ್ಕೂಟರ್ ನೀಡುತ್ತೆ 57 ಕಿ.ಮೀ ಮೈಲೇಜ್.. ರೂ.89,000 ಬೆಲೆ, ಲಗೇಜ್ ಸಾಗಿಲು 33-ಲೀಟರ್ ಸ್ಟೋರೇಜ್!
ಪ್ರತಿಯೊಬ್ಬರಿಗೂ ದಿನನಿತ್ಯದ ಬಳಕೆಗೆ ದ್ವಿಚಕ್ರ ವಾಹನಗಳು ಬೇಕೇ ಬೇಕು. ಅದರಲ್ಲೂ ಪುರುಷರು, ಮಹಿಳೆಯರು ಸೇರಿದಂತೆ ಎಲ್ಲ ವಯೋಮಾನದವರಿಗೂ ಸ್ಕೂಟರ್‌ಗಳು ಹೆಚ್ಚು ಸೂಕ್ತವಾಗಬಲ್ಲವು. ನೀವು ಹೊಚ್ಚ ಹೊಸ ಸ್ಕೂಟರ್ ಖರೀದಿಸಲು ಯೋಚಿಸಿದ್ದೀರಾ.. ಹಾಗಾದರೆ ಟಿವಿಎಸ್ ಜೂಪಿಟರ್ 125 (TVS Jupiter 125) ಉತ್ತಮ ಆಯ್ಕೆಯಾಗಲಿದೆ. ಈ ಸ್ಕೂಟರ್ ಕೈಗೆಟುಕುವ ಬೆಲೆಯಲ್ಲಿ ಸಿಗಲಿದ್ದು, ಗರಿಷ್ಠ ಮೈಲೇಜ್ ಕೂಡ ನೀಡುತ್ತದೆ. ಇಲ್ಲಿ ನೂತನ ಜೂಪಿಟರ್‌ನ ವಿಶೇಷತೆಗಳ ಕುರಿತಂತೆ ಸಂಪೂರ್ಣವಾಗಿ ವಿವರಿಸಿದ್ದೇವೆ.
ಬೆಲೆ & ರೂಪಾಂತರಗಳು: ಈ ಟಿವಿಎಸ್ ಜೂಪಿಟರ್ 125 (TVS Jupiter 125) ಸ್ಕೂಟರ್ ತುಂಬಾ ಅಗ್ಗದ ಬೆಲೆಗೆ ದೊರೆಯಲಿದ್ದು, ರೂ.89,155 ದಿಂದ ರೂ.99,805 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಡ್ರಮ್ (Drum), ಡಿಸ್ಕ್ (Disc) ಹಾಗೂ ಸ್ಮಾರ್ಟ್‌ಕನೆಕ್ಟ್ (SmartXonnect) ಎಂಬ ರೂಪಾಂತರ (ವೇರಿಯೆಂಟ್)ಗಳ ಆಯ್ಕೆಯಲ್ಲಿಯೂ ಸಿಗುತ್ತದೆ.

ಕಾರ್ಯಕ್ಷಮತೆ, ಮೈಲೇಜ್: ಜೂಪಿಟರ್ ಸ್ಕೂಟರ್ 124.8 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೋಲ್ಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 8.2 ಪಿಎಸ್ ಗರಿಷ್ಠ ಶಕ್ತಿ (ಪವರ್) ಹಾಗೂ 10.5 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿದೆ. 57.27 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.
ಸ್ಟೋರೇಜ್ & ಫೀಚರ್ಸ್: ಟಿವಿಎಸ್ ಜೂಪಿಟರ್ 125 ಸ್ಕೂಟರ್ ಎಲ್ಇಡಿ ಹೆಡ್‌ಲ್ಯಾಂಪ್ ಹಾಗೂ ಎಲ್ಇಡಿ ಟೈಲ್ ಲ್ಯಾಂಪ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಯುಎಸ್‌ಬಿ ಚಾರ್ಜಿಂಗ್ ಸಾಕೆಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಹೆಲ್ಮೆಟ್ ಮತ್ತು ಲ್ಯಾಪ್‌ಟಾಪ್‌ಗಳಂತಹ ವಸ್ತುಗಳನ್ನು ಸುಲಭವಾಗಿ ಸಾಗಿಸಲು ಆಸನದ ಕೆಳಗೆ (ಸೀಟ್ ಅಂಡರ್) 33 ಲೀಟರ್ ಸಾಮರ್ಥ್ಯದ ಸ್ಟೋರೇಜ್ (ಸಂಗ್ರಹ ಪೆಟ್ಟಿಗೆ) ಅನ್ನು ಹೊಂದಿದೆ.
ಬ್ರೇಕ್, ವೀಲ್ಸ್: ಈ ಸ್ಕೂಟರ್ ಸುರಕ್ಷತೆಯ ದೃಷ್ಟಿಯಿಂದ ಡಿಸ್ಕ್ ಹಾಗೂ ಡ್ರಮ್ ಬ್ರೇಕ್ ಆಯ್ಕೆಯನ್ನು ಹೊಂದಿದೆ. ಮುಂಭಾಗ (ಫ್ರಂಟ್) ಹಾಗೂ ಹಿಂಭಾಗ (ರೇರ್) 12-ಇಂಚಿನ ಅಲಾಯ್ ವೀಲ್‌ಗಳು ಮತ್ತು 90/90-12 ಅಳತೆಯ ಟ್ಯೂಬ್‌ಲೆಸ್ ಟೈರ್‌ಗಳನ್ನು ಒಳಗೊಂಡಿದೆ. 108 ಕೆಜಿ ತೂಕವಿದ್ದು, 5.1 ಲೀಟರ್ ಸಾಮರ್ಥ್ಯದ ಫ್ಯುಯೆಲ್ (ಇಂಧನ) ಟ್ಯಾಂಕ್‌ನ್ನು ಒಳಗೊಂಡಿದೆ.
ಪ್ರತಿಸ್ಪರ್ಧಿ ಸ್ಕೂಟರ್: ಟಿವಿಎಸ್ ಜೂಪಿಟರ್ 125 ಸ್ಕೂಟರ್‌ಗೆ ಹೋಂಡಾ ಡಿಯೊ (Honda Dio) ದೊಡ್ಡ ಎದುರಾಳಿಯಾಗಿದೆ. ಇದು ರೂ.74,629 ದಿಂದ ರೂ.82,130 ಎಕ್ಸ್ ಶೋರೂಂ ದರವನ್ನು ಪಡೆದಿದೆ. 109.51 ಸಿಸಿ ಏರ್-ಕೋಲ್ಡ್ ಸಿಂಗಲ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 7.85 ಪಿಎಸ್ ಪವರ್ ಮತ್ತು 9.03 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 50 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ.
ಹೊಸ ಹೋಂಡಾ ಡಿಯೊ ಸ್ಕೂಟರ್ ಎಲ್‌ಇಡಿ ಹೆಡ್‌ಲೈಟ್, ಎಲ್ಇಡಿ ಡಿಆರ್‌ಎಲ್(ಡೇಟೈಮ್ ರನ್ನಿಂಗ್ ಲೈಟ್ಸ್), ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಕೀ ಫೋಬ್, ಸೈಲೆಂಟ್ ಸ್ಟಾರ್ಟರ್ ಒಳಗೊಂಡಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಗಾಗಿ ಡ್ರಮ್ ಬ್ರೇಕ್ ಆಯ್ಕೆಯನ್ನು ಪಡೆದಿದೆ. 103 ತೂಕವಿರುವ ಈ ಸ್ಕೂಟರ್, 5.3 ಲೀಟರ್ ಸಾಮರ್ಥ್ಯದ ಫ್ಯುಯೆಲ್ (ಇಂಧನ) ಟ್ಯಾಂಕ್‌ನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications