ಮೇ ತಿಂಗಳಲ್ಲಿ ಟಿವಿಎಸ್ ವಾಹನಗಳ ಭರ್ಜರಿ ಮಾರಾಟ: ಕಂಪನಿಗೆ ಉತ್ತಮ ಲಾಭ

ದೇಶದ ಜನಪ್ರಿಯ ದ್ವಿಚಕ್ರ ವಾಹನ ತಯಾರಕರಾದ ಟಿವಿಎಸ್ ಮೋಟಾರ್ ಕಂಪನಿಯು ಮೇ 2024 ರಲ್ಲಿ 3,69,914 ಯುನಿಟ್‌ ವಾಹನಗಳನ್ನು ಮಾರಾಟ ಮಾಡುವ ಮೂಲಕ ಶೇ12 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಕಳೆದ ವರ್ಷ ಇದೇ ಮೇ ತಿಂಗಳಲ್ಲಿ 3,30,609 ಯುನಿಟ್‌ ವಾಹನಗಳನ್ನು ಮಾರಾಟ ಮಾಡಿತ್ತು. ಎಲೆಕ್ಟ್ರಿಕ್ ವಾಹನಗಳ ವಿಚಾರಕ್ಕೆ ಬಂದರೆ ಮೇ 2023 ರಲ್ಲಿ 17,953 ಯುನಿಟ್‌ ವಾಹನಗಳಿಂದ ಈ ವರ್ಷ ಮೇ ತಿಂಗಳಲ್ಲಿ 18,674 ಯೂನಿಟ್‌ ವಾಹನಗಳ ಮಾರಾಟದೊಂದಿಗೆ ಶೇ 4 ರಷ್ಟು ಹೆಚ್ಚಾಗಿದೆ.

ಮೇ 2023 ರಲ್ಲಿ 3,19,295 ಯುನಿಟ್‌ ವಾಹನಗಳಿಂದ ಮೇ 2024 ರಲ್ಲಿ 3,59,590 ಯೂನಿಟ್‌ ವಾಹನಗಳನ್ನು ಮಾರಾಟವಾಗುವುದರೊಂದಿಗೆ ಒಟ್ಟು ದ್ವಿಚಕ್ರ ವಾಹನಗಳು ಶೇ13 ರಷ್ಟು ಬೆಳವಣಿಗೆಯನ್ನು ದಾಖಲಿಸಿವೆ. ಮೇ 2023 ರಲ್ಲಿ 1,62,248 ಯೂನಿಟ್‌ಗಳಿಂದ ಮೇ 2024 ರಲ್ಲಿ 173,627 ಯೂನಿಟ್‌ ಮೋಟಾರ್‌ಸೈಕಲ್ ಮಾರಾಟವು ಶೇ7 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ.

TVS Motor

ಸ್ಕೂಟರ್ ಮಾರಾಟವು ಶೇ20 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ, ಮೇ 2023 ರಲ್ಲಿ 1,21,156 ಯುನಿಟ್‌ಗಳಿಂದ ಮೇ 2024 ರಲ್ಲಿ 145,305 ಯುನಿಟ್‌ಗೆ ಏರಿಕೆಯಾಗಿದೆ. ಅಂತರಾಷ್ಟ್ರಿಯ ವ್ಯಾಪರವನ್ನು ನೋಡಿಕೊಂಡರೆ, ಮೇ 2023 ರಲ್ಲಿ 76,607 ಯೂನಿಟ್‌ಗಳಿಂದ ಮೇ 2024 ರಲ್ಲಿ 96,966 ಯೂನಿಟ್‌ಗಳ ಮಾರಾಟದೊಂದಿಗೆ ಕಂಪನಿಯ ಒಟ್ಟು ರಫ್ತುಗಳು ಶೇ27 ರಷ್ಟು ಬೆಳೆದಿವೆ.

TVS ಮೋಟಾರ್ ಕಂಪನಿ ಭಾರತದ ಮಾತ್ರವಲ್ಲದೇ ಜಾಗತಿಕವಾಗಿ ಹೆಸರಾಂತ ದ್ವಿಚಕ್ರ ವಾಹನ ತಯಾರಕರಾಗಿ ಗುರ್ತಿಸಿಕೊಂಡಿದೆ. ಭಾರತ ಮತ್ತು ಇಂಡೋನೇಷ್ಯಾದಲ್ಲಿ ನೆಲೆಗೊಂಡಿರುವ ನಾಲ್ಕು ಅತ್ಯಾಧುನಿಕ ಉತ್ಪಾದನಾ ಸೌಲಭ್ಯಗಳೊಂದಿಗೆ ಸುಸ್ಥಿರ ಚಲನಶೀಲತೆಯ ಮೂಲಕ ಪ್ರಗತಿ ಸಾಧಿಸುತ್ತಿರುವುದಾಗಿ ಟಿವಿಎಸ್ ಮೋಟಾರ್ ಕಂಪನಿ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿಕೊಂಡಿದೆ.

TVS Motor

ಗ್ರಾಹಕರ ಮೇಲಿನ ನಂಬಿಕೆ, ಮೌಲ್ಯ ಮತ್ತು ಉತ್ಸಾಹ ನಮ್ಮ 100 ವರ್ಷಗಳ ಪರಂಪರೆಯಲ್ಲಿ ಬೇರೂರಿದೆ, ನವೀನ ಮತ್ತು ಸುಸ್ಥಿರ ಪ್ರಕ್ರಿಯೆಗಳ ಮೂಲಕ ಅಂತಾರಾಷ್ಟ್ರೀಯವಾಗಿ ಅಂಗೀಕರಿಸಲ್ಪಟ್ಟ ಉತ್ಪನ್ನಗಳನ್ನು ಅತ್ಯುನ್ನತ ಗುಣಮಟ್ಟದಲ್ಲಿ ನೀಡುವುದಕ್ಕೆ ಹೆಮ್ಮೆಪಡುತ್ತಿದ್ದೇವೆ. ನಮ್ಮ ಉತ್ಪನ್ನಗಳು J.D. Power IQS ಮತ್ತು APEAL ಸಮೀಕ್ಷೆಗಳಲ್ಲಿ ಆಯಾ ವಿಭಾಗಗಳಲ್ಲಿ ಮುನ್ನಡೆ ಸಾಧಿಸುತ್ತಿವೆ.

ಸತತ ನಾಲ್ಕು ವರ್ಷಗಳಿಂದ J.D. ಪವರ್ ಗ್ರಾಹಕ ಸೇವಾ ತೃಪ್ತಿ ಸಮೀಕ್ಷೆಯಲ್ಲಿ ನಾವು ನಂಬರ್ 1 ಕಂಪನಿಯಾಗಿ ಸ್ಥಾನ ಪಡೆದಿದ್ದೇವೆ. ಯುನೈಟೆಡ್ ಕಿಂಗ್‌ಡಂ ಮೂಲದ ನಮ್ಮ ಗ್ರೂಪ್ ಕಂಪನಿ ನಾರ್ಟನ್ ಮೋಟಾರ್‌ಸೈಕಲ್ಸ್, ವಿಶ್ವದ ಅತ್ಯಂತ ಭಾವನಾತ್ಮಕ ಮೋಟಾರ್‌ಸೈಕಲ್ ಬ್ರ್ಯಾಂಡ್‌ಗಳಲ್ಲಿ ಒಂದಾಗಿದೆ.

TVS Motor

ವೈಯಕ್ತಿಕ ಇ - ಮೊಬಿಲಿಟಿ ಜಾಗದಲ್ಲಿ ನಮ್ಮ ಅಂಗಸಂಸ್ಥೆಗಳು, ಸ್ವಿಸ್ ಇ - ಮೊಬಿಲಿಟಿ ಗ್ರೂಪ್ (SEMG) ಮತ್ತು EGO ಮೂವ್‌ಮೆಂಟ್ ಸ್ವಿಟ್ಜರ್ಲೆಂಡ್‌ನ ಇ - ಬೈಕ್ ಮಾರುಕಟ್ಟೆಯಲ್ಲಿ ಪ್ರಮುಖ ಸ್ಥಾನವನ್ನು ಹೊಂದಿವೆ. ಟಿವಿಎಸ್ ಮೋಟಾರ್ ಕಂಪನಿಯು ನಾವು ಕಾರ್ಯನಿರ್ವಹಿಸುವ 80 ದೇಶಗಳಲ್ಲಿ ಅತ್ಯಂತ ಉತ್ತಮವಾದ ಗ್ರಾಹಕ ಅನುಭವವನ್ನು ನೀಡಲು ಪ್ರಯತ್ನಿಸುತ್ತದೆ ಎಂದು ತಿಳಿಸಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Sunday, June 2, 2024, 13:00 [IST]
English summary
Tvs motor company may 2024 sales register growth of 12 percent
Read more on tvs motor india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+