TVS: ಎದುರಾಳಿಗಳಿಗೆ ಭೀತಿ.. ಈ ಜನಪ್ರಿಯ ಬೈಕ್‌ನ 10,00,000 ಯುನಿಟ್ ಮಾರಾಟ.. ಬಂತು ಹೊಸ ವೇರಿಯೆಂಟ್!
ಟಿವಿಎಸ್ ಮೋಟಾರ್ (TVS Motor) ಜನಪ್ರಿಯ ವಾಹನ ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ವಿವಿಧ ಬೈಕ್ ಹಾಗೂ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದೆ. ಸದ್ಯ ಕಂಪನಿಯಿಂದ ಮಾರಲ್ಪಡುವ 'ರೈಡರ್ 125' ಜನಪ್ರಿಯ ಬೈಕ್ ಎಂದೇ ಹೆಸರುವಾಸಿಯಾಗಿದ್ದು, ದೊಡ್ಡ ಸಂಖ್ಯೆಯಲ್ಲಿ ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಇದೇ ಮೋಟಾರ್‌ಸೈಕಲ್ ಮಾರಾಟದಲ್ಲಿ ಟಿವಿಎಸ್ ಕಂಪನಿ ಹೊಸದೊಂದು ಇತಿಹಾಸ ಬರೆದಿದೆ. 2021ರ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾದಾಗಿನಿಂದ ಇಲ್ಲಿಯವರೆಗೆ 36 ತಿಂಗಳಲ್ಲಿ ಬರೋಬ್ಬರಿ 10 ಲಕ್ಷ (1 ಮಿಲಿಯನ್) ಯುನಿಟ್ 'ರೈಡರ್ 125' ಬೈಕ್‌ಗಳನ್ನು ಮಾರಾಟ ಮಾಡಿದೆ.
ಐತಿಹಾಸಿಕ ದಾಖಲೆ ನಿರ್ಮಿಸಿರುವ ಉತ್ಸಾಹದಲ್ಲಿರುವ ಟಿವಿಎಸ್ ಮೋಟಾರ್, 'ರೈಡರ್ 125' ಮೋಟಾರ್‌ಸೈಕಲ್‌ನ ಹೊಚ್ಚ ಹೊಸ ರೂಪಾಂತರವನ್ನು (ವೇರಿಯೆಂಟ್) ಗುರುವಾರ ಬಿಡುಗಡೆಗೊಳಿಸಿದೆ. ಅದಕ್ಕೆ ರೈಡರ್ ಐಗೋ (Raider iGo) ಎಂದು ಹೆಸರಿಸಿದ್ದು, ಅತ್ಯಂತ ಕೈಗೆಟುಕುವ ಬೆಲೆಯಲ್ಲಿಯೂ ಖರೀದಿಗೆ ಲಭ್ಯವಿದೆ. ರೂ.98,389 ಎಕ್ಸ್ ಶೋರೂಂ ದರವನ್ನು ಪಡೆದಿದೆ.

ನೂತನ ಟಿವಿಎಸ್ ರೈಡರ್ ಐಗೋ ಬೈಕ್ 'ಬೂಸ್ಟ್ ಮೋಡ್' ಎಂಬ ವಿಶೇಷ ವೈಶಿಷ್ಟ್ಯದೊಂದಿಗೆ ಮಾರಾಟಕ್ಕೆ ಬಂದಿದೆ. ಇದು ಹೆಚ್ಚುವರಿಯಾಗಿ 0.55 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. ಜೊತೆಗೆ ಶೇಕಡ 10% ಇಂಧನ ದಕ್ಷತೆ (Fuel Efficiency) ಕೂಡ ಸುಧಾರಿಸಿದ್ದು, ಸ್ವಲ್ಪ ಅಧಿಕ ಮೈಲೇಜ್ ನೀಡುತ್ತದೆ. 5.8 ಸೆಕೆಂಡುಗಳಲ್ಲಿ 0-60 ಕೆಎಂಪಿಹೆಚ್ ವೇಗವನ್ನು ಪಡೆಯುತ್ತದೆ.
ಈ ಟಿವಿಎಸ್ ರೈಡರ್ ಐಗೋ ಮೋಟಾರ್‌ಸೈಕಲ್ 124.8 ಸಿಸಿ ಏರ್ & ಆಯಿಲ್ ಕೋಲ್ಡ್ 3ವಿ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಒಳಗೊಂಡಿದೆ. 7,500 ಆರ್‌ಪಿಎಂನಲ್ಲಿ 11.22 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 6,000 ಆರ್‌ಪಿಎಂನಲ್ಲಿ 11.75 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ.
ಹೊಸ ರೈಡರ್ ಐಗೋ ಬೈಕ್ ನಾರ್ಡೊ ಗ್ರೇ ಬಣ್ಣದ ಆಯ್ಕೆಯನ್ನು ಪಡೆದಿದ್ದು, ರೆಡ್ (ಕೆಂಪು) ಬಣ್ಣದ ಅಲಾಯ್ ವೀಲ್‌ಗಳನ್ನು ಹೊಂದಿದೆ. ಬ್ಲೂಟೂಟ್ ಕನೆಕ್ಟಿವಿಟಿಯೊಂದಿಗೆ ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನ್ನು ಹೊಂದಿದೆ. ಇದು ವಾಯ್ಸ್ ಅಸಿಸ್ಟ್, ಟರ್ನ್-ಬೈ-ಟರ್ನ್ ನಾವಿಗೇಷನ್ ಹಾಗೂ ಕಾಲ್ ನೋಟಿಫಿಕೇಶನ್ ಅನ್ನು ಬೆಂಬಲಿಸುತ್ತದೆ.
ಟಿವಿಎಸ್ ರೈಡರ್ ಐಗೋ ಮೋಟಾರ್‌ಸೈಕಲ್ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗ (ರೇರ್) ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ಆಯ್ಕೆಯನ್ನು ಒಳಗೊಂಡಿದೆ. ಸುರಕ್ಷತೆಗಾಗಿ ಮುಂದೆ ಡಿಸ್ಕ್ ಹಾಗೂ ಹಿಂಭಾಗ ಡ್ರಮ್ ಬ್ರೇಕ್‌ನ್ನು ಹೊಂದಿದೆ. 123-ಕೆಜಿ ತೂಕವಿದ್ದು, 10-ಲೀಟರ್‌ನ ಫ್ಯುಯೆಲ್ (ಇಂಧನ) ಟ್ಯಾಂಕ್‌ನ್ನು ಪಡೆದಿದೆ.
ಇತ್ತೀಚೆಗೆ ಟಿವಿಎಸ್ ರೈಡರ್ 125 ಬೈಕ್‌ನ ಡ್ರಮ್ ಬ್ರೇಕ್ (Drum Brake) ರೂಪಾಂತರವು ಅದ್ದೂರಿಯಾಗಿ ಬಿಡುಗಡೆಯಾಗಿತ್ತು. ಇದು ಅತಿಕಡಿಮೆ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, ರೂ.84,469 ಎಕ್ಸ್ ಶೋರೂಂ ದರವನ್ನು ಪಡೆದಿದೆ. ಈ ಮೋಟಾರ್‌ಸೈಕಲ್ ವಿಶೇಷತೆ ಅಂದರೆ ಹ್ಯಾಂಡಲ್ ಬಾರ್‌ನ ಎರಡು ತುದಿಯಲ್ಲಿ ಡ್ರಮ್ ಬ್ರೇಕ್‌ಗಳನ್ನು ಒಳಗೊಂಡಿದೆ.
ದೇಶೀಯ ಮಾರುಕಟ್ಟೆಯಲ್ಲಿ ಈ ಟಿವಿಎಸ್ ರೈಡರ್ 125 ಮೋಟಾರ್‌ಸೈಕಲ್‌ಗೆ ಹೀರೋ ಎಕ್ಸ್‌ಟ್ರೀಮ್ 125ಆರ್, ಹೋಂಡಾ ಶೈನ್ 125, ಬಜಾಜ್ ಪಲ್ಸರ್ ಎನ್125 ಹಾಗೂ ಹೀರೋ ಗ್ಲಾಮರ್ ಬೈಕ್‌ಗಳು ಪ್ರಬಲವಾಗಿ ಸ್ಪರ್ಧೆಯೊಡ್ಡುತ್ತಿವೆ. ಇದೀಗ ಒಂದಷ್ಟು ಹೊಸತನಗಳೊಂದಿಗೆ ನೂತನ 'ರೈಡರ್ ಐಗೋ' ಮಾರಾಟಕ್ಕೆ ಬಂದಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಯುವ ಗ್ರಾಹಕರನ್ನು ಸೆಳೆಯುವ ನಿರೀಕ್ಷೆಯಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








