TVS: ಹೊಸ ದಾಖಲೆ ನಿರ್ಮಿಸಿದ ಟಿವಿಎಸ್.. ಐಕ್ಯೂಬ್ ಇ-ಸ್ಕೂಟರ್‌ಗಾಗಿ ಕ್ಯೂ ನಿಂತ ಗ್ರಾಹಕರು!
ಟಿವಿಎಸ್ ಮೋಟಾರ್ ಏಪ್ರಿಲ್ 2024ರ ಮಾರಾಟದ ಕುರಿತ ವಿವರವನ್ನು ಬುಧವಾರ ಪ್ರಕಟಿಸಿದ್ದು, ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳನ್ನು ಮಾರುವಲ್ಲಿ ಉತ್ತಮವಾದ ಪ್ರಗತಿಯನ್ನು ಸಾಧಿಸಿದೆ. 2023ರ ಏಪ್ರಿಲ್ ತಿಂಗಳ 306,224 ಯುನಿಟ್‌ಗಳಿಗೆ ಹೋಲಿಸಿದರೆ, ಈ ಬಾರಿ 383,615 ಯುನಿಟ್ ವಾಹನಗಳನ್ನು ಮಾರಾಟ ಮಾಡಿದ್ದು, ಶೇಕಡ 25% ಬೆಳವಣಿಗೆ ಕಂಡಿದೆ.
ಟಿವಿಎಸ್ ಕಂಪನಿಯು ದ್ವಿಚಕ್ರ ವಾಹನ (Two-Wheeler) ಮಾರುಕಟ್ಟೆಯಲ್ಲಿ ದೊಡ್ಡಪಾಲನ್ನು ಹೊಂದಿದೆ. ಈ ಏಪ್ರಿಲ್‌ನಲ್ಲಿ 374,592 ಯುನಿಟ್ ದ್ವಿಚಕ್ರ ವಾಹನಗಳನ್ನು ಮಾರಾಟಗೊಳಿಸುವ ಮೂಲಕ ಶೇಕಡ 27% ಪ್ರಗತಿಯನ್ನು ಸಾಧಿಸಿದೆ. ಅದೇ 2023ರ ಏಪ್ರಿಲ್ ತಿಂಗಳಲ್ಲಿ 294,786 ಯುನಿಟ್‌ಗಳನ್ನು ಮಾರಿತ್ತು. ಇದು ದೇಶ - ವಿದೇಶದಲ್ಲಿ ಮಾರಾಟ ಮಾಡಿದ ಒಟ್ಟಾರೆ ದ್ವಿಚಕ್ರ ವಾಹನಗಳ ಸಂಖ್ಯೆಯಾಗಿದೆ.

ಮೋಟಾರ್‌ಸೈಕಲ್ (Motorcycle) ಮಾರಾಟದಲ್ಲಿ ಕೂಡ ಟಿವಿಎಸ್ ಮೋಟಾರ್ (TVS Motor) ಉತ್ತಮ ಬೆಳವಣಿಗೆಯನ್ನು ಕಂಡಿದೆ. 2023ರ ಏಪ್ರಿಲ್‌ನಲ್ಲಿ ಮಾರಿದ 152,365 ಯುನಿಟ್ ಮೋಟಾರ್‌ಸೈಕಲ್ ಹೋಲಿಕೆ ಮಾಡಿದರೆ, ಈ ಏಪ್ರಿಲ್‌ನಲ್ಲಿ 188,110 ಯುನಿಟ್ ಮಾರಾಟಗೊಳಿಸುವ ಮೂಲಕ ಶೇಕಡ 24% ಪ್ರಗತಿಯನ್ನು ಸಾಧಿಸಿದೆ. ಬರೋಬ್ಬರಿ 144,126 ಯುನಿಟ್ ಸ್ಕೂಟರ್‌ಗಳನ್ನು ವಿತರಿಸುವುದರೊಂದಿಗೆ ಶೇಕಡ 34% ಬೆಳವಣಿಗೆಯನ್ನು ದಾಖಲಿಸಿದೆ.
ತ್ರಿಚಕ್ರ (Three-Wheeler) ವಾಹನಗಳ ಮಾರಾಟದಲ್ಲಿಯೂ ಟಿವಿಎಸ್ ಕಂಪನಿ ಉತ್ತಮವಾದ ಅಭಿವೃದ್ಧಿಯನ್ನು ಸಾಧಿಸಿದೆ. 2023ರ ಏಪ್ರಿಲ್ ತಿಂಗಳಿಗೆ ಹೋಲಿಸಿದರೆ (9,023 ಯುನಿಟ್) ಈ ಏಪ್ರಿಲ್‌ನಲ್ಲಿ 11,438 ಯುನಿಟ್ ತ್ರಿಚಕ್ರ ವಾಹನಗಳನ್ನು ಮಾರಿದೆ. ರಫ್ತು ಮಾಡುವಲ್ಲಿಯೂ ಒಳ್ಳೆಯ ಬೆಳವಣಿಗೆಯನ್ನು ದಾಖಲಿಸಿದ್ದು, 80,508 ಯುನಿಟ್ ವಾಹನಗಳನ್ನು ವಿದೇಶಕ್ಕೆ ರವಾನಿಸಿ ಶೇಕಡ 18% ಪ್ರಗತಿಯನ್ನು ಕಂಡಿದೆ.

ಟಿವಿಎಸ್ ಮೋಟಾರ್ ಎಲೆಕ್ಟ್ರಿಕ್ ವಾಹನ (ಇವಿ) ವಾಹನ ಮಾರಾಟದಲ್ಲಿ ಸಹ ವೇಗವಾಗಿ ಮುನ್ನುಗುತ್ತಿದೆ. ಈ ಏಪ್ರಿಲ್ ತಿಂಗಳಲ್ಲಿ 17,403 ಯುನಿಟ್ ಇವಿ ಮಾರುವ ಮೂಲಕ ಶೇಕಡ 179% ಬೆಳವಣಿಗೆಯನ್ನು ಸಾಧಿಸಿದೆ. ಅದೇ 2023ರ ಏಪ್ರಿಲ್‌ನಲ್ಲಿ 6,227 ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಮಾಡಿತ್ತು. ಟಿವಿಎಸ್ ಕಂಪನಿ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ಈ ಮಟ್ಟಕ್ಕೆ ಪ್ರಗತಿಯೊಂದಲು 'ಐಕ್ಯೂಬ್' ಇ-ಸ್ಕೂಟರ್ ಪ್ರಮುಖ ಕಾರಣವಾಗಿದೆ.
ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಟಿವಿಎಸ್ ಐಕ್ಯೂಬ್ (TVS iQube) ಎಲೆಕ್ಟ್ರಿಕ್ ಸ್ಕೂಟರ್, ರೂ.1.37 ಲಕ್ಷದಿಂದ ರೂ.1.46 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 3.04 ಕೆಡಬ್ಲ್ಯೂಹೆಚ್ ಸಾಮರ್ಥ್ಯದ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಪಡೆದಿದ್ದು, 140 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸಬಲ್ಲ 4.4 ಕೆಡಬ್ಲ್ಯೂ ಹಬ್ ಮೌಂಟೆಡ್ ಮೋಟಾರ್ ಒಳಗೊಂಡಿದೆ. ಸಂಪೂರ್ಣ ಚಾರ್ಜ್ ನಲ್ಲಿ 100 ಕಿ.ಮೀ ರೇಂಜ್ (ಮೈಲೇಜ್) ನೀಡುತ್ತದೆ.

ಈ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಗಂಟೆಗೆ 75 ಕಿಲೋಮೀಟರ್ ಗರಿಷ್ಠ ವೇಗವನ್ನು ಪಡೆಯಲಿದ್ದು, ಕೇವಲ 4 ಗಂಟೆ 30 ನಿಮಿಷದಲ್ಲಿ ಇದರ ಬ್ಯಾಟರಿ 0-80% ಚಾರ್ಜ್ ಆಗುತ್ತವೆ. ಫುಲ್ ಕಲರ್ ಟಿಎಫ್‌ಟಿ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಮೊಬೈಲ್ ಚಾರ್ಜ್ ಮಾಡಲು ಯುಎಸ್‌ಬಿ ಸಾಕೆಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರೀಮಿಯಂ 'ಟಿವಿಎಸ್ ಎಕ್ಸ್' ಎಲೆಕ್ಟ್ರಿಕ್ ಸ್ಕೂಟರ್ ಕೂಡ ಗ್ರಾಹಕರಿಗೆ ಸಿಗಲಿದ್ದು, ರೂ.2.50 ಲಕ್ಷ ಬೆಲೆಯಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








