TVS: ಟಿವಿಎಸ್ ಬೈಕ್ - ಸ್ಕೂಟರ್‌ಗಳಿಗೆ ಭಾರೀ ಬೇಡಿಕೆ.. ಐಕ್ಯೂಬ್‌ಗಾಗಿ ಕ್ಯೂ ನಿಂತ ಗ್ರಾಹಕರು!

ದೇಶದ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿ ಟಿವಿಎಸ್ ಮೋಟಾರ್ (TVS Motor) ಖ್ಯಾತಿ ಗಳಿಸಿದೆ. ಮಧ್ಯಮ ವರ್ಗದ ಜನರಿಗೆ ಹೆಚ್ಚಿನ ಅನುಕೂಲವಾಗುವ ನಿಟ್ಟಿನಲ್ಲಿ ಕಡಿಮೆ ದರದಲ್ಲಿ ಬೈಕ್ ಮತ್ತು ಸ್ಕೂಟರ್‌ಗಳನ್ನು ಮಾರಾಟಗೊಳಿಸುತ್ತಿದೆ. ಇವು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯವನ್ನು ಪಡೆದುಕೊಂಡಿರುವುದರಿಂದ ದೊಡ್ಡ ಸಂಖ್ಯೆಯಲ್ಲಿ ಖರೀದಿದಾರರು ಕೂಡ ಮನೆಗೆ ತರುತ್ತಿದ್ದಾರೆ. ಟಿವಿಎಸ್ ಮೋಟಾರ್ ಸೋಮವಾರದಂದು ಜೂನ್ (2024) ಮಾರಾಟದ ಅಂಕಿಅಂಶಗಳನ್ನು ಪ್ರಕಟಿಸಿದ್ದು, ಉತ್ತಮವಾದ ಪ್ರಗತಿ ಸಾಧಿಸಿದೆ. ಆ ಕುರಿತಂತೆ ಸಂಪೂರ್ಣವಾದ ವಿವರವನ್ನು ತಿಳಿಯೋಣ. ಬನ್ನಿ.

ಟಿವಿಎಸ್ ಮೋಟಾರ್ ಕಳೆದ ತಿಂಗಳು (ಜೂನ್ 2024) 333,646 ಯುನಿಟ್ (ದ್ವಿಚಕ್ರ ಹಾಗೂ ತ್ರಿಚಕ್ರ) ವಾಹನಗಳನ್ನು ಮಾರಾಟ ಮಾಡಿದೆ. 2023ರ ಜೂನ್‌ನಲ್ಲಿ ಮಾರಿದ 316,411 ಯುನಿಟ್‌ಗೆ ಹೋಲಿಸಿದರೆ ಶೇಕಡ 5% ಬೆಳವಣಿಗೆ ಕಂಡಿದೆ. ದ್ವಿಚಕ್ರ (Two-Wheeler) ವಾಹನ ವಿಭಾಗದಲ್ಲಿ ಈ ಜೂನ್‌ನಲ್ಲಿ ಒಟ್ಟು 322,168 ಯುನಿಟ್ ಮಾರಾಟ ಮಾಡಿದ್ದು, 2023ರ ಜೂನ್‌ಗೆ ಹೋಲಿಕೆ ಮಾಡಿದರೆ (304,401 ಯುನಿಟ್) ಶೇಕಡ 6% ಅಧಿವೃದ್ದಿ ಸಾಧಿಸಿದೆ.

TVS Motor Sales Report 5 Percent Growth In June 2024 iQube Become Best Electric Scooter

ತ್ರಿಚಕ್ರ (Three-Wheeler) ವಾಹನ ಮಾರಾಟದಲ್ಲಿ ಟಿವಿಎಸ್ ಕಂಪನಿಯು ಕೊಂಚ ಮಟ್ಟಿಗೆ ಹಿನ್ನಡೆಯನ್ನು ಅನುಭವಿಸಿದೆ. ಹೋದ ತಿಂಗಳು (ಜೂನ್ 2024) 11,478 ಯುನಿಟ್ ವಾಹನಗಳನ್ನು ಮಾರಾಟಗೊಳಿಸಿದೆ. ಅದೇ 2023ರ ಜೂನ್‌ನಲ್ಲಿ 12,010 ಯುನಿಟ್ ಮಾರಿತ್ತು. ವಿದೇಶಗಳಿಗೆ ರಫ್ತು ಮಾಡುವ ವಾಹನಗಳ ಸಂಖ್ಯೆಯೂ ಸ್ವಲ್ಪ ಕ್ಷೀಣಿಸಿದ್ದು, ಈ ಜೂನ್‌ನಲ್ಲಿ 76,074 ಯುನಿಟ್ (ದ್ವಿಚಕ್ರ ಹಾಗೂ ತ್ರಿಚಕ್ರ) ವಾಹನಗಳನ್ನು ರವಾನಿಸಿದೆ. 2023ರ ಜೂನ್‌ನಲ್ಲಿ 79,144 ಯುನಿಟ್ ರಫ್ತು ಮಾಡಿತ್ತು.

ಟಿವಿಎಸ್ ಕಂಪನಿಯು ಇವಿ (ಎಲೆಕ್ಟ್ರಿಕ್ ವಾಹನ) ಮಾರಾಟದಲ್ಲಿಯೂ ಉತ್ತಮವಾದ ಅಧಿವೃದ್ದಿ ಸಾಧಿಸಿದೆ. ಕಳೆದ ತಿಂಗಳು (ಜೂನ್ 2024) 15,859 ಯುನಿಟ್ ಇವಿಗಳನ್ನು ಮಾರಾಟ ಮಾಡಿದೆ. 2023ರ ಜೂನ್‌ನಲ್ಲಿ ಮಾರಿದ 14,462 ಯುನಿಟ್‌ಗೆ ಹೋಲಿಕೆ ಮಾಡಿದರೆ ಶೇಕಡ 10% ಪ್ರಗತಿ ಕಂಡಿದೆ. ಇವಿ ವಿಭಾಗದಲ್ಲಿ ಟಿವಿಎಸ್ ಈ ಮಟ್ಟಿಗೆ ಬೆಳವಣಿಗೆ ಹೊಂದಲು 'ಐಕ್ಯೂಬ್' ಎಲೆಕ್ಟ್ರಿಕ್ ಸ್ಕೂಟರ್ ಪ್ರಮುಖ ಕಾರಣವಾಗಿದೆ.

TVS Motor Sales Report 5 Percent Growth In June 2024 iQube Become Best Electric Scooter

ದೇಶೀಯ ಮಾರುಕಟ್ಟೆಯಲ್ಲಿ ಟಿವಿಎಸ್ ಐಕ್ಯೂಬ್ (TVS iQube) ಎಲೆಕ್ಟ್ರಿಕ್ ಸ್ಕೂಟರ್, ಐಕ್ಯೂಬ್, ಐಕ್ಯೂಬ್ ಎಸ್ ಹಾಗೂ ಐಕ್ಯೂಬ್ ಎಸ್‌ಟಿ ಎಂಬ ಮೂರು ರೂಪಾಂತರ (ವೇರಿಯೆಂಟ್)ಗಳ ಆಯ್ಕೆಯಲ್ಲಿ ಸಿಗುತ್ತದೆ. ರೂ.94,999 ದಿಂದ ರೂ.185,373 ಎಕ್ಸ್ ಶೋರೂಂ ದರವನ್ನು ಹೊಂದಿದೆ. 2.2 ಕೆಡಬ್ಲ್ಯೂಹೆಚ್, 3.4 ಕೆಡಬ್ಲ್ಯೂಹೆಚ್ ಮತ್ತು 5.1 ಕೆಡಬ್ಲ್ಯೂಹೆಚ್ ಸಾಮರ್ಥ್ಯದ ಬ್ಯಾಟರಿಯನ್ನು ಪಡೆದಿದ್ದು, ಸಂಪೂರ್ಣ ಚಾರ್ಜ್‌ನಲ್ಲಿ 75 ರಿಂದ 150 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ.

ನೂತನ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ರೂಪಾಂತರಗಳನ್ನು ಅವಲಂಭಿಸಿ ಬೇರೆ-ಬೇರೆ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ. ಪ್ರಮುಖವಾಗಿ 7-ಇಂಚಿನ ಫುಲ್-ಕಲರ್ ಟಿಎಫ್‌ಟಿ ಸ್ಕ್ರೀನ್, ವಾಯ್ಸ್ ಅಸಿಸ್ಟ್-ಅಲೆಕ್ಸಾ ಸ್ಕಿಲ್‌ಸೆಟ್‌, TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಡಿಜಿಟಲ್ ಡಾಕ್ಯುಮೆಂಟ್ ಸ್ಟೋರೇಜ್ ಸೇರಿದಂತೆ ಹತ್ತಾರು ವೈಶಿಷ್ಟ್ಯ (ಫೀಚರ್)ಗಳನ್ನು ಪಡೆದಿದೆ. 75 ರಿಂದ 82 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ.

TVS Motor Sales Report 5 Percent Growth In June 2024 iQube Become Best Electric Scooter

'ಟಿವಿಎಸ್ ಎಕ್ಸ್' ಎಲೆಕ್ಟ್ರಿಕ್ ಸ್ಕೂಟರ್ ಕೂಡ ಖರೀದಿಗೆ ಲಭ್ಯವಿದೆ. ರೂ.2.50 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 4.44 ಕೆಡಬ್ಲ್ಯೂಹೆಚ್ (Kwh) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಒಳಗೊಂಡಿದ್ದು, ಭರ್ತಿ ಚಾರ್ಜ್‌ನಲ್ಲಿ 140 ಕಿ.ಮೀ ಓಡುತ್ತದೆ. 105 ಕೆಎಂಪಿಹೆಚ್ ಟಾಪ್ ಸ್ಪೀಡ್‌ ಹೊಂದಿದೆ. 10.25-ಇಂಚಿನ ಟಿಎಫ್‌ಟಿ ಕನ್ಸೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, July 2, 2024, 10:51 [IST]
English summary
Tvs motor sales report 5 percent growth in june 2024 iqube become best electric scooter
Read more on tvs motor india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+