ಟಿವಿಎಸ್ ವಾಹನಗಳ ಅಬ್ಬರ: ಕೇವಲ ಒಂದೇ ತಿಂಗಳಲ್ಲಿ 4 ಲಕ್ಷ ವಾಹನಗಳ ಮಾರಾಟ!
ಟಿವಿಎಸ್ ಮೋಟಾರ್ ಕಂಪನಿಯು ಕಳೆದ ವರ್ಷ (ನವೆಂಬರ್ 2023) 3,64,231 ಯುನಿಟ್ ವಾಹನಗಳನ್ನು ಮಾರಾಟ ಮಾಡಿದ್ದು, ಈ ವರ್ಷ ಅದೇ ಅವಧಿಯಲ್ಲಿ ಶೇ10 ರಷ್ಟು ಹೆಚ್ಚುವರಿ ವಾಹನಗಳನ್ನು ಮಾರಾಟ ಮಾಡಿದೆ. ಅಂದರೆ ನವೆಂಬರ್ 2024 ರಲ್ಲಿ ಬರೋಬ್ಬರಿ 4,01,250 ಯುನಿಟ್ ವಾಹನಗಳ ಮಾರಾಟವನ್ನು ದಾಖಲಿಸಿದೆ. ಇದರಲ್ಲಿ ದ್ವಿಚಕ್ರ ವಾಹನಗಳ ವಿಷಯಕ್ಕೆ ಬಂದರೆ ಒಟ್ಟು 3,92,473 ಯುನಿಟ್ ವಾಹನಗಳು ಮಾರಾಟವಾಗುವುದರೊಂದಿಗೆ ಕಳೆದ ವರ್ಷಕ್ಕೆ ಹೋಲಿಸಿದರೆ ದ್ವಿಚಕ್ರ ವಾಹನ ಮಾರಾಟದಲ್ಲಿ ಶೇ12 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ.
ಅಂದಹಾಗೆ ಕಳೆದ ವರ್ಷ ನವೆಂಬರ್ 2023 ರಲ್ಲಿ ಒಟ್ಟು 3,52,103 ಯೂನಿಟ್ ದ್ವಿಚಕ್ರ ವಾಹನಗಳು ಮಾರಾಟವಾಗಿದ್ದವು. ಇದರಲ್ಲಿ ರಫ್ತು ಹೊರತುಪಡಿಸಿ ದೇಶೀಯವಾಗಿ ಕಳೆದ ನವೆಂಬರ್ 2023 ರಲ್ಲಿ 2,87,017 ಯುನಿಟ್ ವಾಹನಗಳು ಮಾರಾಟವಾಗಿದ್ದು, ಈ ಬಾರಿ 2024 ರ ನವೆಂಬರ್‌ನಲ್ಲಿ 3,05,323 ಯುನಿಟ್ ವಾಹನಗಳು ಮಾರಾಟವಾಗಿವೆ. ಈ ಮೂಲಕ ದೇಶೀಯ ಮಾರಾಟದಲ್ಲಿ ಶೇ6 ರಷ್ಟು ಬೆಳವಣಿಗೆಯಾಗಿದೆ.

ಇದರಲ್ಲಿ ಮೋಟಾರ್‌ಸೈಕಲ್ ಮಾರಾಟದ ವಿಷಯಕ್ಕೆ ಬಂದರೆ, 2023 ರ ನವೆಂಬರ್‌ನಲ್ಲಿ ಮಾರಾಟವಾಗಿದ್ದ 1,72,836 ಯುನಿಟ್ ಟಿವಿಎಸ್ ಮೋಟಾರ್‌ಸೈಕಲ್ ವಾಹನಗಳಿಗೆ ಹೋಲಿಸಿದರೆ ಈ ಬಾರಿ ನವೆಂಬರ್ 2024 ರಲ್ಲಿ 1,80,247 ಯುನಿಟ್ ವಾಹನಗಳು ಮಾರಾಟವಾಗುವುದರೊಂದಿಗೆ ಮೋಟಾರ್‌ಸೈಕಲ್ ಮಾರಾಟದಲ್ಲಿ ಶೇ4 ರಷ್ಟು ಬೆಳವಣಿಗೆ ಆಗಿದೆ ಎಂದು ಕಂಪನಿ ತಿಳಿಸಿದೆ.
ಟಿವಿಎಸ್ ಸ್ಕೂಟರ್ ಮಾರಾಟದ ವಿಷಯಕ್ಕೆ ಬಂದರೆ, ನವೆಂಬರ್ 2023 ರಲ್ಲಿ ಮಾರಾಟವಾಗಿದ್ದ 1,35,749 ಯುನಿಟ್ ಸ್ಕೂಟರ್‌ಗಳಿಗೆ ಹೋಲಿಸಿದರೆ ಈ ಬಾರಿ 1,65,535 ಯುನಿಟ್ ಸ್ಕೂಟರ್‌ಗಳು ಮಾರಾಟವಾಗಿವೆ. ಈ ಮೂಲಕ ಈ ವರ್ಷ ಸ್ಕೂಟರ್ ಮಾರಾಟದಲ್ಲಿ ಶೇ22 ರಷ್ಟು ಬೆಳವಣಿಗೆಯನ್ನು ಟಿವಿಎಸ್ ದಾಖಲಿಸಿದೆ.

ಎಲೆಕ್ಟ್ರಿಕ್ ವಾಹನ ಮಾರಾಟದ ವಿಷಯಕ್ಕೆ ಬಂದರೆ, ನವೆಂಬರ್ 2023 ರಲ್ಲಿ ಮಾರಾಟವಾಗಿದ್ದ 16,782 ಯುನಿಟ್ ಎಲೆಕ್ಟ್ರಿಕ್ ವಾಹನಗಳಿಗೆ ಹೋಲಿಸಿದರೆ 2024 ರ ನವೆಂಬರ್‌ನಲ್ಲಿ 26,292 ಯುನಿಟ್ ಎಲೆಕ್ಟ್ರಿಕ್ ವಾಹನಗಳು ಮಾರಾಟವಾಗುವುದರೊಂದಿಗೆ EV ಮಾರಾಟವು ಶೇ57 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಮುಖ್ಯವಾಗಿ ಇದರಲ್ಲಿ ಟಿವಿಎಸ್ ಐಕ್ಯೂಬ್ ಸ್ಕೂಟರ್ ಇದೆ ಎಂಬುದನ್ನು ಗಮನಿಸಬೇಕು.
ಅಂತರರಾಷ್ಟ್ರೀಯ ವ್ಯಾಪಾರದ ವಿಷಯಕ್ಕೆ ಬಂದರೆ, ನವೆಂಬರ್ 2023 ರಲ್ಲಿ 75,203 ಯುನಿಟ್ ವಾಹನಗಳಿಂದ ನವೆಂಬರ್ 2024 ರಲ್ಲಿ 93,755 ಯುನಿಟ್‌ಗಳ ಮಾರಾಟದೊಂದಿಗೆ ಕಂಪನಿಯ ಒಟ್ಟು ರಫ್ತುಗಳು ಶೇ25 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ದ್ವಿಚಕ್ರ ವಾಹನ ರಫ್ತುಗಳು ಶೇ34 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಇದರಲ್ಲಿ ದ್ವಿಚಕ್ರ ವಾಹನಗಳ ರಫ್ತು ನವೆಂಬರ್ 2023 ರಲ್ಲಿ 65,086 ಯುನಿಟ್‌ಗಳಿಂದ ನವೆಂಬರ್ 2024 ರಲ್ಲಿ 87,150 ಯುನಿಟ್‌ಗಳಿಗೆ ಏರಿಕೆಯಾಗಿದೆ.

ಟಿವಿಎಸ್ ತ್ರಿಚಕ್ರ ವಾಹನ ಮಾರಾಟದ ವಿಷಯಕ್ಕೆ ಬಂದರೆ, ತ್ರಿಚಕ್ರ ವಾಹನವು ನವೆಂಬರ್ 2023 ರಲ್ಲಿ ಮಾರಾಟವಾಗಿದ್ದ 12,128 ಯುನಿಟ್ ವಾಹನಗಳಿಗೆ ಹೋಲಿಸಿದರೆ 2024 ರ ನವೆಂಬರ್‌ನಲ್ಲಿ 8,777 ಯುನಿಟ್ ವಾಹನಗಳ ಮಾರಾಟವನ್ನು ದಾಖಲಿಸಿದೆ. ಒಟ್ಟಾರೆ ಟಿವಿಎಸ್ ಮೋಟಾರ್ ಈ ತಿಂಗಳಲ್ಲಿ ಉತ್ತಮ ಮಾರಾಟ ಅಂಕಿಅಂಶಗಳನ್ನು ದಾಖಲಿಸಿದೆ ಎಂದು ಹೇಳಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








