TVS: ಹೊಸ ಬಣ್ಣಗಳೊಂದಿಗೆ ಬಹುಬೇಡಿಕೆಯ ಟಿವಿಎಸ್ ಎನ್‌ಟಾರ್ಕ್ ಮಾರುಕಟ್ಟೆಗೆ.. ರೂ.86,871 ಬೆಲೆ

ಹೊಸೂರು ಮೂಲದ ಟಿವಿಎಸ್ ಮೋಟಾರ್ (TVS Motor), ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಮನೆ ಮಾತಾಗಿದೆ. ಇಂದು ಎನ್‌ಟಾರ್ಕ್ 125 (NTORQ 125) ಹಾಗೂ ಎನ್‌ಟಾರ್ಕ್ ರೇಸ್ ಎಕ್ಸ್‌ಪಿ ಸೀರೀಸ್‌ಗಳನ್ನು (NTORQ Race XP Series) ಮತ್ತಷ್ಟು ಹೊಸ ಬಣ್ಣಗಳೊಂದಿಗೆ ಪರಿಚಯಿಸಿದೆ. ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಈ ನೂತನ ಟಿವಿಎಸ್ ಎನ್‌ಟಾರ್ಕ್ ಸ್ಕೂಟರ್‌ ನವೀನ ಶೈಲಿಯ ವಿನ್ಯಾಸ ಹಾಗೂ ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದಿದ್ದು, ಹೆಚ್ಚಾಗಿ ಯುವ ಜನರನ್ನು ಸೆಳೆಯುತ್ತಿದೆ.

ಟಿವಿಎಸ್ ಎನ್‌ಟಾರ್ಕ್ 125 (TVS NTORQ 125): ಈ ಸ್ಕೂಟರ್ ವಿನ್ಯಾಸ (ಡಿಸೈನ್)ದಲ್ಲಿ ಕೆಲವೊಂದು ಸಣ್ಣ - ಪುಟ್ಟ ಕಾಸ್ಮೆಟಿಕ್ (ಸೌಂದರ್ಯಾತ್ಮಕ) ಬದಲಾವಣೆ ಮಾಡಲಾಗಿದೆ. ಟರ್ಕೋಯಿಸ್, ಹಾರ್ಲೆಕ್ವಿನ್ ಬ್ಲೂ ಮತ್ತು ನಾರ್ಡೊ ಗ್ರೇ ಎಂಬ ಮೂರು ಹೊಸ ಬಣ್ಣಗಳ ಆಯ್ಕೆಯಲ್ಲಿ ಬಿಡುಗಡೆಗೊಂಡಿದೆ.

TVS Ntorq 125 Lineup Gets New Colour Option Rs 86 871 Price Details

ನೂತನ ಟಿವಿಎಸ್ ಎನ್‌ಟಾರ್ಕ್ 125 ಹತ್ತಾರು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸಿಗ್ನೇಚರ್ ಎಲ್‌ಇಡಿ ಹೆಡ್‌ಲ್ಯಾಂಪ್, ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕನ್ಸೋಲ್, ಬ್ಲೂಟೂತ್ ಕನೆಕ್ಟಿವಿಟಿ, ನ್ಯಾವಿಗೇಷನ್ ಅಸಿಸ್ಟ್, ಕಾಲರ್ ಐಡಿ, ಲಾಸ್ಟ್ ಪಾರ್ಕಿಂಗ್ ಲೊಕೇಶನ್ ಅಸಿಸ್ಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಜೊತೆಗೆ ಡುಯಲ್ ರೈಡ್ ಮೋಡ್‌ಗಳನ್ನು ಹೊಂದಿದೆ.

ಈ ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್ 124.8 ಸಿಸಿ 3-ವಾಲ್ವ್ ಪೆಟ್ರೋಲ್ ಎಂಜಿನ್ ಪಡೆದಿದ್ದು, 7,000 ಆರ್‌ಪಿಎಂನಲ್ಲಿ 9.5 ಪಿಎಸ್ ಗರಿಷ್ಠ ಶಕ್ತಿ (ಪವರ್) ಹಾಗೂ 5,500 ಆರ್‌ಪಿಎಂನಲ್ಲಿ 10.6 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಒಳಗೊಂಡಿದೆ. ಇದು ರೂ.86,871 (ಎಕ್ಸ್ ಶೋರೂಂ ದೆಹಲಿ) ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ.

TVS Ntorq 125 Lineup Gets New Colour Option Rs 86 871 Price Details

ಟಿವಿಎಸ್ ಎನ್‌ಟಾರ್ಕ್ ರೇಸ್ ಎಕ್ಸ್‌ಪಿ ಸೀರೀಸ್‌ (TVS NTORQ Race XP Series): ಈ ಸ್ಕೂಟರ್‌ನ 'ಮ್ಯಾಟ್ ಬ್ಲ್ಯಾಕ್ ಸ್ಪೆಷಲ್ ಎಡಿಷನ್'ನ್ನು ಪರಿಚಯಿಸಲಾಗಿದೆ. ಇದು ಮ್ಯಾಟ್ ಮತ್ತು ಗ್ಲೋಸಿ ಪಿಯಾನೋ ಬ್ಲ್ಯಾಕ್‌ ಬಣ್ಣಗಳ ಸಮ್ಮಿಶ್ರಣದಿಂದ ಕೂಡಿದೆ. ತೀಕ್ಷ್ಣವಾದ ಗ್ರಾಫಿಕ್ಸ್ ವಿನ್ಯಾಸವನ್ನು ಪಡೆದಿದ್ದು, ನೋಡಲು ಹೆಚ್ಚು ಆಕರ್ಷಣೀಯವಾಗಿದೆ.

ಹೊಸ ಟಿವಿಎಸ್ ಎನ್‌ಟಾರ್ಕ್ ರೇಸ್ ಎಕ್ಸ್‌ಪಿ ಸೀರೀಸ್‌ ಸ್ಕೂಟರ್ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕನ್ಸೋಲ್, ಬ್ಲೂಟೂತ್ ಕನೆಕ್ಟಿವಿಟಿ, ಕಾಲರ್ ಐಡಿ, 20ಕ್ಕೂ ಹೆಚ್ಚು ವಾಯ್ಸ್ ಅಸಿಸ್ಟ್, ಲಾಸ್ಟ್ ಪಾರ್ಕಿಂಗ್ ಲೊಕೇಶನ್ ಅಸಿಸ್ಟ್, ಕಾಲ್ ಅಲರ್ಟ್, ಎಸ್ಎಂಎಸ್ ಅಲರ್ಟ್, ಲ್ಯಾಪ್ ಟೈಮರ್, ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಸೇರಿದಂತೆ ಹಲವು ವೈಶಿಷ್ಟ್ಯಗಳಿವೆ. ಡುಯಲ್ ರೈಡ್ ಮೋಡ್‌ಗಳನ್ನು ಕೂಡ ತನ್ನದಾಗಿಸಿಕೊಂಡಿದೆ.

ಈ ಟಿವಿಎಸ್ ಎನ್‌ಟಾರ್ಕ್ ರೇಸ್ ಎಕ್ಸ್‌ಪಿ ಸೀರೀಸ್‌ ಶಕ್ತಿಯುತ ಪವರ್‌ಟ್ರೇನ್ ಒಳಗೊಂಡಿದೆ. 124.8 ಸಿಸಿ 3-ವಾಲ್ವ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 7,000 ಆರ್‌ಪಿಎಂನಲ್ಲಿ 10.2 ಗರಿಷ್ಠ ಶಕ್ತಿ (ಪವರ್) ಮತ್ತು 5,500 ಆರ್‌ಪಿಎಂನಲ್ಲಿ 10.9 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. ರೂ.97,501 ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಲಭ್ಯವಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, August 8, 2024, 16:01 [IST]
English summary
Tvs ntorq 125 lineup gets new colour option rs 86871 price details
Read more on tvs motor india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+