TVS: ಡಿಸೆಂಬರ್ ತಿಂಗಳ ವಾಹನ ಮಾರಾಟದಲ್ಲಿ ಅತ್ಯುತ್ತಮ ಬೆಳವಣಿಗೆ ಸಾಧಿಸಿದ ಟಿವಿಎಸ್
TVS ಮೋಟಾರ್ ಕಂಪನಿಯು ಕಳೆದ ವರ್ಷ ಡಿಸೆಂಬರ್ ನಲ್ಲಿ ಮಾರಾಟ ಮಾಡಿದ 2,42,012 ಯುನಿಟ್‌ಗಳಿಗೆ ಹೋಲಿಸಿದರೆ ಶೇ25 ರಷ್ಟು ಬೆಳವಣಿಗೆಯೊಂದಿಗೆ ಈ ವರ್ಷ ಡಿಸೆಂಬರ್ ನಲ್ಲಿ 3,01,898 ಯುನಿಟ್‌ಗಳ ಮಾಸಿಕ ಮಾರಾಟವನ್ನು ದಾಖಲಿಸಿದೆ ಎಂದು ಟಿವಿಎಸ್ ಕಂಪನಿ ತನ್ನ ಪ್ರಕಟಣೆಯಲ್ಲಿ ಘೋಷಿಸಿದೆ.
ದ್ವಿಚಕ್ರ ವಾಹನ: ಕಳೆದ ವರ್ಷ ಡಿಸೆಂಬರ್ (2022) ನಲ್ಲಿ 2,27,666 ಯುನಿಟ್‌ಗಳನ್ನು ಮಾರಾಟ ಮಾಡಿತ್ತು. ಈ ವರ್ಷ ಡಿಸೆಂಬರ್ (2023) ನಲ್ಲಿ 2,90,064 ಯುನಿಟ್‌ಗಳನ್ನು ಮಾರಾಟ ಮಾಡಿ ಶೇ 27 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ದೇಶೀಯ ದ್ವಿಚಕ್ರ ವಾಹನವು ಶೇ33 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ, ಡಿಸೆಂಬರ್ 2022 ರಲ್ಲಿ 1,61,369 ಯುನಿಟ್‌ಗಳಿಂದ ಡಿಸೆಂಬರ್ 2023 ರಲ್ಲಿ 214,988 ಯುನಿಟ್‌ಗಳಿಗೆ ಏರಿಕೆಯಾಗಿದೆ.

ಎಲೆಕ್ಟ್ರಿಕ್ ವಾಹನ: ಟಿವಿಎಸ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ವಿಭಾಗದಲ್ಲೂ ಉತ್ತಮ ಮಾರಾಟವನ್ನು ದಾಖಲಿಸುತ್ತಿದೆ. ತನ್ನ ಐಕ್ಯೂಬ್ ಇವಿ ಸ್ಕೂಟರ್ ಕಂಪನಿಗೆ ಇವಿ ವಿಭಾಗದಲ್ಲಿ ಜನಪ್ರಿಯತೆಯನ್ನು ತಂದುಕೊಡುತ್ತಿದೆ. ಕಂಪನಿಯು ಡಿಸೆಂಬರ್ 2022 ರಲ್ಲಿ 11,071 ಯುನಿಟ್‌ಗಳ ಮಾರಾಟ ಮಾಡಿತ್ತು ಆದರೆ ಈಗ ಡಿಸೆಂಬರ್ 2023 ರಲ್ಲಿ 11,232 ಯುನಿಟ್‌ಗಳನ್ನು ಮಾರಾಟ ಮಾಡಿದೆ.
ಅಂತರರಾಷ್ಟ್ರೀಯ ವ್ಯಾಪಾರ: ಕಂಪನಿಯ ಒಟ್ಟು ರಫ್ತುಗಳು ಡಿಸೆಂಬರ್ 2022 ರಲ್ಲಿ 79,402 ಯುನಿಟ್‌ಗಳು ಇದ್ದರೆ ಡಿಸೆಂಬರ್ 2023 ರಲ್ಲಿ 85,391 ಯುನಿಟ್‌ಗಳಿಗೆ ಏರಿಕೆಯಾಗಿ ಶೇ 8 ರಷ್ಟು ಬೆಳವಣಿಗೆ ಸಾಧಿಸಿದೆ. ದ್ವಿಚಕ್ರ ವಾಹನ ರಫ್ತುಗಳು ಶೇ13 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಮಾರಾಟವು ಡಿಸೆಂಬರ್ 2022 ರಲ್ಲಿ 66,297 ಯುನಿಟ್‌ಗಳಿಂದ 75,020 ಯುನಿಟ್‌ಗಳಿಗೆ ಏರಿಕೆಯಾಗಿದೆ.

ತ್ರಿಚಕ್ರ ವಾಹನ: ಕಂಪನಿಯ ತ್ರಿಚಕ್ರ ವಾಹನ ಮಾರಾಟದಲ್ಲಿ ಅಷ್ಟೇನು ಪ್ರಗತಿ ಸಾಧಿಸಿಲ್ಲ. ಡಿಸೆಂಬರ್ 2022 ರಲ್ಲಿ ಮಾರಾಟವಾದ 14,346 ಯುನಿಟ್‌ಗಳಿಗೆ ಹೋಲಿಸಿದರೆ, ಈ ಬಾರಿಯ ಡಿಸೆಂಬರ್ 2023 ರಲ್ಲಿ 11,834 ಯುನಿಟ್‌ಗಳ ಮಾರಾಟ ಮಾಡುವ ಮೂಲಕ ಇಳಿಕೆಯನ್ನು ಕಂಡಿದೆ ಎಂದು ಕಂಪನಿ ತಿಳಿಸಿದೆ. ಮುಂಬರುವ ತಿಂಗಳುಗಳಲ್ಲಿ ಉತ್ತಮ ಮಾರಾಟ ಕಾಣುವ ವಿಶ್ವಾಸವಿದೆ ಎಂದು ಹೇಳಿಕೊಂಡಿದೆ.
ಮೂರನೇ ತ್ರೈಮಾಸಿಕ ಮಾರಾಟದ ಕಾರ್ಯಕ್ಷಮತೆ: ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ, ದ್ವಿಚಕ್ರ ವಾಹನಗಳು ಶೇ27 ರಷ್ಟು ದೃಢವಾದ ಬೆಳವಣಿಗೆಯನ್ನು ದಾಖಲಿಸಿದ್ದು, 22-23 ರ ಮೂರನೇ ತ್ರೈಮಾಸಿಕದಲ್ಲಿ 8.4 ಲಕ್ಷ ಯುನಿಟ್‌ಗಳ ಮಾರಾಟಕ್ಕೆ ಹೋಲಿಸಿದರೆ 10.6 ಲಕ್ಷ ಯುನಿಟ್‌ಗಳ ಮಾರಾಟವನ್ನು ದಾಖಲಿಸಿದೆವಾಗಿದೆ.

ಕಂಪನಿಯ ತ್ರಿಚಕ್ರ ವಾಹನವು ಪ್ರಸಕ್ತ ವರ್ಷದ ಮೂರನೇ ತ್ರೈಮಾಸಿಕದಲ್ಲಿ 0.38 ಲಕ್ಷ ಯುನಿಟ್‌ಗಳ ಮಾರಾಟವನ್ನು ದಾಖಲಿಸಿದೆ, 22-23 ರ ಮೂರನೇ ತ್ರೈಮಾಸಿಕದಲ್ಲಿ 0.43 ಲಕ್ಷ ಯುನಿಟ್‌ಗಳನ್ನು ಮಾರಾಟ ಮಾಡಿದೆ. ದ್ವಿಚಕ್ರ ವಾಹನಗಳ ಮಾರಾಟವು 23-24 ರ ಮೂರನೇ ತ್ರೈಮಾಸಿಕದಲ್ಲಿ 0.48 ಲಕ್ಷ ಯುನಿಟ್‌ಗಳ EV ಮಾರಾಟವನ್ನು ಒಳಗೊಂಡಿದೆ, 22-23 ರ ಮೂರನೇ ತ್ರೈಮಾಸಿಕದಲ್ಲಿ 0.29 ಲಕ್ಷ ಯುನಿಟ್‌ಗಳ ಮಾರಾಟದೊಂದಿಗೆ ಶೇ65 ರಷ್ಟು ಬೆಳವಣಿಗೆಯಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications