68 ಕಿ.ಮೀ ಮೈಲೇಜ್: ಅಗ್ಗದ ಬೆಲೆಗೆ ಬಿಡುಗಡೆಯಾದ ಟಿವಿಎಸ್ ರೇಡಿಯಾನ್ ವಿಶೇಷತೆಗಳು!
110 ಸಿಸಿ ವಿಭಾಗದಲ್ಲಿ ಉತ್ತಮ ಬೇಡಿಕೆಯೊಂದಿಗೆ ಮುನ್ನುಗ್ಗುತ್ತಿರುವ ಟಿವಿಎಸ್ ರೇಡಿಯಾನ್, ಇದೀಗ ಹೊಸ ಅಪ್‌ಡೇಟ್‌ನೊಂದಿಗೆ ಇತ್ತೀಚೆಗೆ ಬಿಡುಗಡೆಯಾಗಿದೆ. ಟಿವಿಎಸ್ ರೇಡಿಯಾನ್ ಹೆಚ್ಚು ಕೈಗೆಟುಕುವಂತೆ ಮಾಡಲು ಬೇಸ್ ವೇರಿಯೆಂಟ್ ಬೆಲೆಯನ್ನು ಸಹ ಕಡಿಮೆ ಮಾಡಲಾಗಿದೆ. ರೇಡಿಯಾನ್ ಈಗ 59,880 ರೂ. (ಎಕ್ಸ್ ಶೋರೂಂ)ಗಳಿಂದ ಪ್ರಾರಂಭವಾಗುತ್ತದೆ, ಸದ್ಯ 2,525 ರೂ.ಗಳ ಬೆಲೆ ಕಡಿತವಾಗಿದೆ. ಮಿಡ್-ಸ್ಪೆಕ್ ಡಿಜಿ ಡ್ರಮ್ ವೇರಿಯೆಂಟ್ ಬೆಲೆಯು ರೂ.77,394 (ಎಕ್ಸ್ ಶೋರೂಂ) ಗಳಾದರೆ, ಟಾಪ್-ಸ್ಪೆಕ್ ಡಿಜಿ ಡಿಸ್ಕ್ ರೂ.81,394 (ಎಕ್ಸ್ ಶೋರೂಂ) ಗಳಿಗೆ ಲಭ್ಯವಿದೆ.
ಹೊಸ ಆಲ್-ಬ್ಲ್ಯಾಕ್ ಬೇಸ್ ಎಡಿಷನ್ ಬಿಡುಗಡೆ: ಕಂಪನಿಯು ಹೊಸ ಆಲ್-ಬ್ಲ್ಯಾಕ್ ಬಣ್ಣದ ಆಯ್ಕೆಯನ್ನು ಪರಿಚಯಿಸಿದ್ದು, ಇದರೊಂದಿಗೆ ಟಿವಿಎಸ್ ರೇಡಿಯಾನ್ ಈಗ ಏಳು ಬಣ್ಣಗಳಲ್ಲಿ ಲಭ್ಯವಿದೆ. ಹಾಗೆಯೇ ಬೇಸ್, ಡಿಜಿ ಡ್ರಮ್ ಮತ್ತು ಡಿಜಿ ಡಿಸ್ಕ್ ಎಂಬ ಮೂರು ರೂಪಾಂತರಗಳಲ್ಲಿ ಖರೀದಿಗೆ ಸಿಗುತ್ತದೆ ಎಂದು ಕಂಪನಿ ತಿಳಿಸಿದೆ.

ವಿಶೇಷತೆಗಳೇನು?: ಇದರ ಪ್ರಮುಖ ಅಂಶವೆಂದರೆ ಬ್ರಾಂಜ್ (ಕಂಚಿನ) ಎಂಜಿನ್ ಕವರ್ ಹೊಂದಿದ್ದು, ಇದು ಕಾಂಟ್ರಾಸ್ಟ್ ಸ್ಪರ್ಶವನ್ನು ನೀಡುತ್ತದೆ. ಹೊಸ ಆಲ್-ಬ್ಲ್ಯಾಕ್ ಬಣ್ಣವು ಗ್ಲಾಸಿ ಫಿನಿಶ್ ಹೊಂದಿದ್ದು, ಫ್ಯೂಯಲ್ ಟ್ಯಾಂಕ್ ಮತ್ತು ಸೈಡ್ ಪ್ಯಾನೆಲ್‌ಗಳಲ್ಲಿ ಬಿಳಿ ಟಿವಿಎಸ್ ಮತ್ತು ರೇಡಿಯಾನ್ ಬ್ಯಾಡ್ಜಿಂಗ್ ಅನ್ನು ಹೊಂದಿದೆ. ಈ ಮೂಲಕ ಬೈಕಿನ ಒಟ್ಟಾರೆ ಆಕರ್ಷಣೆಯನ್ನು ಹೆಚ್ಚಿಸಿದೆ.
ಈ ಮೋಟಾರ್‌ಸೈಕಲ್‌ನಲ್ಲಿ ಎರಡೂ ಬ್ರೇಕ್‌ಗಳನ್ನು ಏಕಕಾಲದಲ್ಲಿ ಸಕ್ರಿಯಗೊಳಿಸುವ ಸಂಯೋಜಿತ ಬ್ರೇಕಿಂಗ್ ಸಿಸ್ಟಮ್ (ಸಿಬಿಎಸ್) ಕೂಡ ನೀಡಲಾಗಿದೆ. ಡ್ರಮ್ ವೇರಿಯೆಂಟ್ 113 ಕೆ.ಜಿ ಮತ್ತು ಡಿಸ್ಕ್ ವೇರಿಯೆಂಟ್ 115 ಕೆ.ಜಿ ತೂಕವನ್ನು ಹೊಂದಿದೆ. ಕಲರ್ ಎಲ್‌ಸಿಡಿ ಸ್ಕ್ರೀನ್ ಮತ್ತು ಹೆಚ್ಚುವರಿ ಅನುಕೂಲಕ್ಕಾಗಿ ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ನೀಡಲಾಗಿದೆ.

ಟಿವಿಎಸ್ ರೇಡಿಯಾನ್ 10 ಲೀಟರ್ ಫ್ಯೂಯಲ್ ಟ್ಯಾಂಕ್ ಸಾಮರ್ಥ್ಯ ಹೊಂದಿದ್ದು, ಇದು ಪ್ರತಿ ಲೀಟರ್‌ಗೆ 68 ಕಿ.ಮೀ ಮೈಲೇಜ್ ನೀಡುವುದಾಗಿ ಕಂಪನಿ ತಿಳಿಸಿದೆ. ಟಿವಿಎಸ್ ರೇಡಿಯಾನ್ ಎಂಜಿನ್ ಬಗ್ಗೆ ಹೇಳುವುದಾದ್ರೆ, 109.7 ಸಿಸಿ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 8 ಪಿಎಸ್ ಪವರ್ ಮತ್ತು 8.7 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.
ಇದರ ಡ್ರಮ್ ವೇರಿಯೆಂಟ್ 130 ಎಂಎಂ ಫ್ರಂಟ್ ಡ್ರಮ್ ಬ್ರೇಕ್‌ನೊಂದಿಗೆ ಬಂದರೇ ಮತ್ತು ಡಿಸ್ಕ್ ವೇರಿಯೆಂಟ್ ಮುಂಭಾಗದಲ್ಲಿ 240 ಎಂಎಂ ಡಿಸ್ಕ್ ಅನ್ನು ಹೊಂದಿದೆ. ಎರಡೂ ಆವೃತ್ತಿಗಳಲ್ಲಿ 110 ಎಂಎಂ ಹಿಂಭಾಗದ ಡ್ರಮ್ ಬ್ರೇಕ್ ಅಳವಡಿಸಲಾಗಿದೆ. ಹಾಗೆಯೇ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಪ್ರಿಲೋಡ್-ಅಡ್ಜಸ್ಟ್ ಮಾಡಬಹುದಾದ ಶಾಕ್ ಅಬ್ಸಾರ್ಬರ್‌ಗಳನ್ನು ಹೊಂದಿದೆ.
ಭಾರತದಲ್ಲಿ 110 ಸಿಸಿ ವಿಭಾಗದ ಮೋಟಾರ್ ಸೈಕಲ್‌ಗಳಿಗೆ ಭಾರೀ ಬೇಡಿಕೆ ಇದೆ. ಈ ವಿಭಾಗದಲ್ಲಿ ಹೀರೋ ಸ್ಪ್ಲೆಂಡರ್ ಪ್ಲಸ್, ಬಜಾಜ್ ಸಿಟಿ 110 ಎಕ್ಸ್, ಹೋಂಡಾ ಸಿಡಿ 110 ಡ್ರೀಮ್ ಬೈಕ್‌ಗಳಿಗೆ ಟಿವಿಎಸ್‌ನ ಪ್ರಮುಖ ಮೋಟಾರ್‌ಸೈಕಲ್ ಒಂದು ಉತ್ತಮ ಪೈಪೋಟಿ ನೀಡುತ್ತಿದೆ. ಈ ಮೋಟಾರ್‌ಸೈಕಲ್ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








