68 ಕಿ.ಮೀ ಮೈಲೇಜ್... ಬೆಲೆ ರೂ. 59,880: ಹೊಸ ಟಿವಿಎಸ್ ಬೈಕ್ ವಿಶೇಷತೆಗಳು!
ಟಿವಿಎಸ್ ಮೋಟಾರ್ಸ್ ಇತ್ತೀಚೆಗೆ ತನ್ನ ಜನಪ್ರಿಯ ಮೋಟಾರ್‌ಸೈಕಲ್ ಆಗಿರುವ ರೇಡಿಯಾನ್ ಅನ್ನು ಹೊಸ ಅಪ್‌ಡೇಟ್‌ನೊಂದಿಗೆ ಆಲ್ ಬ್ಲಾಕ್ ಎಡಿಷನ್‌ನಲ್ಲಿ ಬಿಡುಗಡೆ ಮಾಡಿದೆ. ಇದು ಹೊಸ ಆಲ್-ಬ್ಲ್ಯಾಕ್ ಬಣ್ಣದೊಂದಿಗೆ ಗ್ಲಾಸಿ ಫಿನಿಶ್ ಹೊಂದಿದ್ದು, ಫ್ಯೂಯಲ್ ಟ್ಯಾಂಕ್ ಮತ್ತು ಸೈಡ್ ಪ್ಯಾನೆಲ್‌ಗಳಲ್ಲಿ ಬಿಳಿ ಟಿವಿಎಸ್ ಮತ್ತು ರೇಡಿಯಾನ್ ಬ್ಯಾಡ್ಜಿಂಗ್ ಅನ್ನು ಹೊಂದಿದೆ. ಈ ಮೂಲಕ ಬೈಕ್ ಆಕರ್ಷಣೆ ಈಗ ಮತ್ತಷ್ಟು ಹೆಚ್ಚಾಗಿದೆ. ಜೊತೆಗೆ ಎಂಜಿನ್ ಕವರ್ ಬ್ರಾಂಜ್ (ಕಂಚಿನ) ಬಣ್ಣದಲ್ಲಿ ನೀಡಲಾಗಿದ್ದು, ಇದು ಕಾಂಟ್ರಾಸ್ಟ್ ಸ್ಪರ್ಶವನ್ನು ನೀಡುತ್ತದೆ. ಈ ಬೈಕ್ ಕುರಿತ ಹೆಚ್ಚಿನ ಮಾಹಿತಿಯನ್ನು ಇಲ್ಲಿ ನೋಡೋಣ.
110 ಸಿಸಿ ವಿಭಾಗದಲ್ಲಿ ಉತ್ತಮ ಬೇಡಿಕೆಯೊಂದಿಗೆ ಮುನ್ನುಗ್ಗುತ್ತಿರುವ ಟಿವಿಎಸ್ ರೇಡಿಯಾನ್, ಭಾರತದಲ್ಲಿ 110 ಸಿಸಿ ವಿಭಾಗದ ಮೋಟಾರ್ ಸೈಕಲ್‌ಗಳಾದ ಹೀರೋ ಸ್ಪ್ಲೆಂಡರ್ ಪ್ಲಸ್, ಬಜಾಜ್ ಸಿಟಿ 110 ಎಕ್ಸ್, ಹೋಂಡಾ ಸಿಡಿ 110 ಡ್ರೀಮ್ ಬೈಕ್‌ಗಳಿಗೆ ಉತ್ತಮ ಪೈಪೋಟಿ ನೀಡುತ್ತಿದೆ. ಇದೀಗ ಆಲ್ ಬ್ಲಾಕ್ ಎಡಿಷನ್ ಬಿಡುಗಡೆಯಾಗುವ ಮೂಲಕ ಪೈಪೋಟಿ ಮತ್ತಷ್ಟು ಹೆಚ್ಚಾಗಿದೆ.

ಹೊಸ ಟಿವಿಎಸ್ ರೇಡಿಯಾನ್ ಬೇಸ್, ಡಿಜಿ ಡ್ರಮ್ ಮತ್ತು ಡಿಜಿ ಡಿಸ್ಕ್ ಎಂಬ ಮೂರು ರೂಪಾಂತರಗಳಲ್ಲಿ ಖರೀದಿಗೆ ಸಿಗುತ್ತದೆ. ರೇಡಿಯಾನ್ ಈಗ 59,880 ರೂ. (ಎಕ್ಸ್ ಶೋರೂಂ)ಗಳಿಂದ ಪ್ರಾರಂಭವಾಗುತ್ತದೆ, ಸದ್ಯ 2,525 ರೂ.ಗಳ ಬೆಲೆ ಕಡಿತವಾಗಿದೆ. ಇದಕ್ಕೆ ಕಾರಣ ಗ್ರಾಹಕರಿಗೆ ಟಿವಿಎಸ್ ರೇಡಿಯಾನ್ ಹೆಚ್ಚು ಕೈಗೆಟುಕುವಂತೆ ಮಾಡಲು ಬೇಸ್ ವೇರಿಯೆಂಟ್ ಬೆಲೆಯನ್ನು ಕಡಿಮೆ ಮಾಡಲಾಗಿದೆ.
ಮಿಡ್-ಸ್ಪೆಕ್ ಡಿಜಿ ಡ್ರಮ್ ವೇರಿಯೆಂಟ್ ಬೆಲೆಯು ರೂ.77,394 (ಎಕ್ಸ್ ಶೋರೂಂ) ಗಳಾದರೆ, ಟಾಪ್-ಸ್ಪೆಕ್ ಡಿಜಿ ಡಿಸ್ಕ್ ರೂ.81,394 (ಎಕ್ಸ್ ಶೋರೂಂ) ಗಳಿಗೆ ಲಭ್ಯವಿದೆ. ಟಿವಿಎಸ್ ರೇಡಿಯಾನ್ ಹೊಸ ಆಲ್ ಬ್ಲಾಕ್ ಎಡಿಷನ್ ಬಣ್ಣದಲ್ಲಿ ಬಿಡುಗಡೆಯಾಗುವ ಮೂಲಕ ಈಗ ಒಟ್ಟು ಏಳು ಬಣ್ಣಗಳಲ್ಲಿ ಬೈಕ್ ಖರೀದಿಗೆ ಲಭ್ಯವಿದೆ.

ಟಿವಿಎಸ್ ರೇಡಿಯಾನ್ 10 ಲೀಟರ್ ಫ್ಯೂಯಲ್ ಟ್ಯಾಂಕ್ ಸಾಮರ್ಥ್ಯ ಹೊಂದಿದ್ದು, 180 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ನೀಡಲಾಗಿದೆ. ಕಲರ್ ಎಲ್‌ಸಿಡಿ ಸ್ಕ್ರೀನ್ ಮತ್ತು ಹೆಚ್ಚುವರಿ ಅನುಕೂಲಕ್ಕಾಗಿ ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ನೀಡಲಾಗಿದೆ. ಎರಡೂ ಬ್ರೇಕ್‌ಗಳನ್ನು ಏಕಕಾಲದಲ್ಲಿ ಸಕ್ರಿಯಗೊಳಿಸುವ ಸಂಯೋಜಿತ ಬ್ರೇಕಿಂಗ್ ಸಿಸ್ಟಮ್ (ಸಿಬಿಎಸ್) ಕೂಡ ನೀಡಲಾಗಿದೆ.
ಇದರ ಡ್ರಮ್ ವೇರಿಯೆಂಟ್ 130 ಎಂಎಂ ಫ್ರಂಟ್ ಡ್ರಮ್ ಬ್ರೇಕ್‌ನೊಂದಿಗೆ ಬಂದರೇ ಮತ್ತು ಡಿಸ್ಕ್ ವೇರಿಯೆಂಟ್ ಮುಂಭಾಗದಲ್ಲಿ 240 ಎಂಎಂ ಡಿಸ್ಕ್ ಅನ್ನು ಹೊಂದಿದೆ. ಎರಡೂ ಆವೃತ್ತಿಗಳಲ್ಲಿ 110 ಎಂಎಂ ಹಿಂಭಾಗದ ಡ್ರಮ್ ಬ್ರೇಕ್ ಅಳವಡಿಸಲಾಗಿದೆ. ಹಾಗೆಯೇ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಪ್ರಿಲೋಡ್-ಅಡ್ಜಸ್ಟ್ ಮಾಡಬಹುದಾದ ಶಾಕ್ ಅಬ್ಸಾರ್ಬರ್‌ಗಳನ್ನು ಹೊಂದಿದೆ.
ಡ್ರಮ್ ವೇರಿಯೆಂಟ್ 113 ಕೆ.ಜಿ ಮತ್ತು ಡಿಸ್ಕ್ ವೇರಿಯೆಂಟ್ 115 ಕೆ.ಜಿ ತೂಕವನ್ನು ಹೊಂದಿದೆ. ಟಿವಿಎಸ್ ರೇಡಿಯಾನ್ ಎಂಜಿನ್ ಬಗ್ಗೆ ಹೇಳುವುದಾದ್ರೆ, 109.7 ಸಿಸಿ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 8 ಪಿಎಸ್ ಪವರ್ ಮತ್ತು 8.7 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇದು 68 ಕಿ.ಮೀ ಮೈಲೇಜ್ ನೀಡುವುದಾಗಿ ಕಂಪನಿ ತಿಳಿಸಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








