TVS Raider 125: ಸದ್ದಿಲ್ಲದೇ ಟಿವಿಎಸ್ ರೈಡರ್ 125 ಹೊಸ ವೇರಿಯೆಂಟ್ ಬಿಡುಗಡೆ.. 84,469 ಬೆಲೆ, ವಿಶೇಷತೆಗಳೇನು?
ಭಾರತದ ವಿಶ್ವಾಸಾರ್ಹ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಟಿವಿಎಸ್ ಮೋಟಾರ್ (TVS Motor) ಗುರುತಿಸಿಕೊಂಡಿದೆ. ಮಧ್ಯಮ ವರ್ಗದ ಜನರನ್ನು ಗಮನದಲ್ಲಿಟ್ಟುಕೊಂಡು ಕೈಗೆಟುಕುವ ಬೆಲೆಯಲ್ಲಿ ವಿವಿಧ ಬೈಕ್ ಹಾಗೂ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಸೋಮವಾರ ಜನಪ್ರಿಯ ರೈಡರ್ 125 (Raider 125) ಮೋಟಾರ್‌ಸೈಕಲ್‌ನ ಹೊಸ ರೂಪಾಂತರವನ್ನು (ವೇರಿಯೆಂಟ್) ಬಿಡುಗಡೆಗೊಳಿಸಿದೆ. ಬನ್ನಿ.. ಈ ನೂತನ ಬೈಕ್ ಬೆಲೆ ಹಾಗೂ ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ಮಾಹಿತಿ ತಿಳಿಯೋಣ.
ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಟಿವಿಎಸ್ ರೈಡರ್ 125 (TVS Raider 125) ಮೋಟಾರ್‌ಸೈಕಲ್‌ನ ಡ್ರಮ್ ಬ್ರೇಕ್ (drum brake) ರೂಪಾಂತರ ಮಾರಾಟಕ್ಕೆ ಬಂದಿದೆ. ಇದು ಅತ್ಯಂತ ಕಡಿಮೆ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ರೂ. 84,469 ಎಕ್ಸ್ ಶೋರೂಂ (ನವದೆಹಲಿ) ದರವನ್ನು ಹೊಂದಿದೆ. ಹೀಗಾಗಿ, ಮೂಲ ಬೆಲೆ (ಬೇಸ್ ಪ್ರೈಸ್) ಸರಿ ಸುಮಾರು ರೂ.11,000 ಕಡಿಮೆಯಾಗಿದೆ.

ನೂತನ ಟಿವಿಎಸ್ ರೈಡರ್ 125 ಡ್ರಮ್ ಬ್ರೇಕ್ ರೂಪಾಂತರದ ವಿನ್ಯಾಸದಲ್ಲಿ ಯಾವುದೇ ದೊಡ್ಡ ಬದಲಾವಣೆಗಳನ್ನು ಮಾಡಲಾಗಿಲ್ಲ. ಆದಾಗ್ಯೂ ಈ ಬೈಕ್ ಸಿಂಗಲ್ ಪೀಸ್ ಸೀಟ್ ಆಯ್ಕೆಯೊಂದಿಗೆ ಮಾತ್ರ ದೊರೆಯುತ್ತದೆ. ಜೊತೆಗೆ ಸ್ಟ್ರೈಕಿಂಗ್ ರೆಡ್ ಮತ್ತು ವಿಕೆಡ್ ಬ್ಲ್ಯಾಕ್ ಎಂಬ 2 ಬಣ್ಣಗಳನ್ನು ಹೊಂದಿದೆ.
ಈ ಮೋಟಾರ್‌ಸೈಕಲ್‌ನ ಕಾರ್ಯಕ್ಷಮತೆಯಲ್ಲಿ ಸಹ ಮಾರ್ಪಾಡುಗಳಾಗಿಲ್ಲ. ಇದು 124.8 ಸಿಸಿ ಸಿಂಗಲ್-ಸಿಲಿಂಡರ್ ಏರ್-ಕೋಲ್ಡ್ ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. 11.12 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 11.2 ಎನ್ಎಂ (ನ್ಯೂಟನ್ ಮೀಟರ್) ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೂ ಸಿಗುತ್ತದೆ. 67 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ ಎಂದು ಅಂದಾಜಿಸಲಾಗಿದೆ.

ಹೊಚ್ಚ ಹೊಸ ಟಿವಿಎಸ್ ರೈಡರ್ 125 ಡ್ರಮ್ ಬ್ರೇಕ್ ರೂಪಾಂತರವು ಹತ್ತಾರು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಎಲ್ಇಡಿ ಲೈಟಿಂಗ್, ವಿವಿಧ ರೈಡಿಂಗ್ ಮೋಡ್‌ಗಳೊಂದಿಗೆ ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನ್ನು ಹೊಂದಿದೆ. ಈ ಬೈಕ್ ಬರೋಬ್ಬರಿ 123 ಕೆಜಿ ತೂಕವಿದ್ದು, 10 ಲೀಟರ್ ಸಾಮರ್ಥ್ಯದ ಫ್ಯುಯೆಲ್ (ಇಂಧನ) ಟ್ಯಾಂಕ್‌ನ್ನು ಪಡೆದಿದೆ.
ಈ ಬೈಕ್ ಹೆಸರೇ ಹೇಳುವುದಂತೆ ಮುಂಭಾಗ (ಫ್ರಂಟ್) ಹಾಗೂ ಹಿಂಭಾಗ (ರೇರ್) ಡ್ರಮ್ ಬ್ರೇಕ್ ಆಯ್ಕೆಯನ್ನು ಪಡೆದಿದೆ. ಹಾಗೆಯೇ ಮುಂದೆ ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂದೆ 5-ಸ್ಟೆಪ್ ಪ್ರಿಲೋಡ್ ಅಡ್ಜಸ್ಟೆಬಲ್ ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ಕೂಡ ಒಳಗೊಂಡಿದೆ. ಇನ್ನು, ಗರಿಷ್ಠ ಶ್ರೇಣಿ ರೂಪಾಂತರವಾಗಿರುವ 'ಟಿವಿಎಸ್ ರೈಡರ್ 125 ಎಸ್ಎಕ್ಸ್' ರೂ.1.04 ಲಕ್ಷ ಬೆಲೆಯನ್ನು ಹೊಂದಿದೆ.

ಕಳೆದ ತಿಂಗಳಾಂತ್ಯದಲ್ಲಿ ನವೀಕರಿಸಿದ ಹೊಚ್ಚ ಹೊಸ ಟಿವಿಎಸ್ ಜುಪಿಟರ್ 110 (TVS Jupiter 110) ಸ್ಕೂಟರ್‌ನ್ನು ಪರಿಚಯಿಸಲಾಗಿತ್ತು. ಇದು ರೂ.73,700 ದಿಂದ ರೂ.87,250 (ಎಕ್ಸ್ ಶೋರೂಂ) ದರವನ್ನು ಪಡೆದಿದೆ. 113 ಸಿಸಿ ಸಿಂಗಲ್-ಸಿಲಿಂಡರ್ ಏರ್-ಕೋಲ್ಡ್ ಪೆಟ್ರೋಲ್ ಎಂಜಿನ್‌ನ್ನು ಹೊಂದಿದೆ. ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಇಂಟಲಿಜೆಂಟ್ ಸ್ಟಾರ್ಟ್/ ಸ್ಟಾಪ್, ಇಂಟಿಗ್ರೇಟೆಡ್ ಸ್ಟಾರ್ಟರ್ ಜನರೇಟರ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








