TVS: ಈ ಪ್ರೀಮಿಯಂ ಬೈಕ್ ಖರೀದಿಸಬೇಕೇ.. ಅತಿ ಕಡಿಮೆ EMI, ಬೇಗ ಸಾಲ ತೀರುತ್ತದೆ!

ಹೊಸೂರು ಮೂಲದ ಟಿವಿಎಸ್ ಮೋಟಾರ್ (TVS Motor) ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಮಧ್ಯಮ ವರ್ಗದ ಜನರಿಗೆ ಹೆಚ್ಚಿನ ಅನುಕೂಲವಾಗುವ ನಿಟ್ಟಿನಲ್ಲಿ ಕೈಗೆಟುಕುವ ಬೆಲೆಯಲ್ಲಿ ಬೈಕ್ ಹಾಗೂ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದೆ. ಇವು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯವನ್ನು ಹೊಂದಿರುವುದರಿಂದ ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಅದರಲ್ಲೂ 'ರೈಡರ್ 125' ಪ್ರೀಮಿಯಂ ಮೋಟಾರ್‌ಸೈಕಲ್ ಆಗಿದ್ದು, ಹಲವು ಯುವಕರ ಹಾಟ್ ಫೇವರಿಟ್ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇಲ್ಲಿ ನೂತನ ಟಿವಿಎಸ್ ರೈಡರ್ 125 ಬೈಕ್‌ನ ಆನ್-ರೋಡ್ ಬೆಲೆ ಹಾಗೂ ಇಎಂಐ ಆಯ್ಕೆಯ ಬಗ್ಗೆ ವಿವರಿಸಿದ್ದೇವೆ.

ದೇಶೀಯ ಮಾರುಕಟ್ಟೆಯಲ್ಲಿ ಟಿವಿಎಸ್ ರೈಡರ್ 125 ಮೋಟಾರ್‌ಸೈಕಲ್ ವಿವಿಧ ರೂಪಾಂತರ (ವೇರಿಯೆಂಟ್)ಗಳೊಂದಿಗೆ ಸಿಗುತ್ತದೆ. ಬೆಂಗಳೂರಿನಲ್ಲಿ ಇದರ ಸೂಪರ್ ಸ್ಕ್ವಾಡ್ ಎಡಿಷನ್ (Super Squad Edition) ರೂ.1,31,059 ಆನ್-ರೋಡ್ ಬೆಲೆಯನ್ನು ಹೊಂದಿದೆ. ನೀವು ರೂ.12,000 ಡೌನ್ ಪೇಮೆಂಟ್ ಪಾವತಿಸಿ ಇದನ್ನು ಕೊಂಡುಕೊಂಡರೆ, ರೂ.1,19,059 ಸಾಲದ ಮೊತ್ತಕ್ಕೆ ಶೇಕಡ 9.7% ಬಡ್ಡಿ ದರದಲ್ಲಿ ಮೂರು ವರ್ಷದ (36 ತಿಂಗಳು) ಅವಧಿಗೆ ಮಾಸಿಕ ರೂ.3,825 ಇಎಂಐ ಕಟ್ಟಬೇಕು.

TVS Raider 125 Bike On Road Price And Emi Details Loan Clear Very Early

ಟಿವಿಎಸ್ ರೈಡರ್ ಸಿಂಗಲ್ ಸೀಟ್ (Single Seat) ಮಾದರಿಯು ರೂ.1,18,502 ಆನ್-ರೋಡ್ ದರವನ್ನು ಪಡೆದಿದೆ. ರೂ.12,000 ಡೌನ್ ಪೇಮೆಂಟ್ (Down Payment) ಕಟ್ಟಿ ಈ ಮೋಟಾರ್‌ಸೈಕಲ್‌ನ್ನು ಖರೀದಿಸಿದರೆ, ರೂ.1,06,502 ಸಾಲದ ಹಣಕ್ಕೆ ಶೇಕಡ 9.7% ಬಡ್ಡಿ ದರದಲ್ಲಿ 3 ವರ್ಷಕ್ಕೆ ತಿಂಗಳಿಗೆ ರೂ.3,422 ಇಎಂಐ (EMI) ಪಾವತಿಸಬೇಕು.

ನೂತನ ಟಿವಿಎಸ್ ರೈಡರ್ 125 ಸ್ಮಾರ್ಟ್ ಕನೆಕ್ಟ್ (TVS Raider 125 SmartXonnect) ಆವೃತ್ತಿಯು ರೂ.1,37,715 ಆನ್-ರೋಡ್ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. ರೂ.12,000 ಡೌನ್ ಪೇಮೆಂಟ್ ಪಾವತಿಸಿ ಇದನ್ನು ತೆಗೆದುಕೊಂಡರೆ, ರೂ.1,25,715 ಸಾಲ ಹಣಕ್ಕೆ ಶೇಕಡ 9.7% ಬಡ್ಡಿಯಂತೆ 3 ವರ್ಷದ ಅವಧಿಗೆ ಮಾಸಿಕ ರೂ.4,039 ಇಎಂಐ ತುಂಬಬೇಕು.

TVS Raider 125 Bike On Road Price And Emi Details Loan Clear Very Early

ಈ ಬೈಕ್‌ನ ಸ್ಪ್ಲಿಟ್ ಸೀಟ್ (Split Seat) ರೂಪಾಂತರವು ರೂ.1,19,888 ಆನ್-ರೋಡ್ ಬೆಲೆಯನ್ನು ಹೊಂದಿದೆ. ನೀವು ರೂ.12,000 ಡೌನ್ ಪೇಮೆಂಟ್ ಪಾವತಿಸಿ ಇದೇ ಮೋಟಾರ್‌ಸೈಕಲ್‌ನ್ನು ಮನೆಗೆ ತಂದರೆ, ರೂ.1,07,888 ಸಾಲದ ಮೊತ್ತಕ್ಕೆ ಶೇಕಡ 9.7% ಬಡ್ಡಿ ದರದಲ್ಲಿ 3 ವರ್ಷಕ್ಕೆ ತಿಂಗಳಿಗೆ ರೂ.3,466 ಇಎಂಐ ಕಟ್ಟಬೇಕು.

ಹೊಸ ಟಿವಿಎಸ್ ರೈಡರ್ 125 ಬೈಕ್ ವಿಶೇಷತೆಗಳ ಬಗ್ಗೆ ಹೇಳುವುದಾದರೆ, ಇದು 124.8 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೋಲ್ಡ್ ಪೆಟ್ರೋಲ್ ಎಂಜಿನ್ ಹೊಂದಿದೆ. 11.38 ಪಿಎಸ್ ಗರಿಷ್ಠ ಪವರ್ (ಶಕ್ತಿ) ಮತ್ತು 11.2 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಒಳಗೊಂಡಿದೆ. ಜೊತೆಗೆ 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಲಭ್ಯವಿದ್ದು, 71.94 ಕೆಎಂಪಿಎಲ್ ಮೈಲೇಜ್ ನೀಡುತ್ತದೆ.

TVS Raider 125 Bike On Road Price And Emi Details Loan Clear Very Early

ಈ ಮೋಟಾರ್‌ಸೈಕಲ್‌ ಇಕೋ, ಸ್ಪೋರ್ಟ್ ಎಂಬ ರೈಡಿಂಗ್ ಮೋಡ್‌ನ್ನು ಪಡೆದಿದ್ದು, ಎಲ್ಇಡಿ ಹೆಡ್‌ಲೈಟ್, ಡಿಆರ್‌ಎಲ್‌ಗಳು, ಎಲ್ಇಡಿ ಟೈಲ್ ಲೈಟ್, ಹ್ಯಾಲೊಜೆನ್ ಇಂಡಿಕೇಟರ್‌ಗಳು, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್, ಐಡಲ್ ಸ್ಟಾಪ್/ ಸ್ಟಾರ್ಟ್ ಸಿಸ್ಟಮ್, ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಗಾಗಿ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಹೊಂದಿದ್ದು, ಬರೋಬ್ಬರಿ 123 ತೂಕವಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, May 31, 2024, 16:12 [IST]
English summary
Tvs raider 125 on road price emi details loan clear very early
Read more on tvs motor india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+