ಕೆಲವೇ ದಿನಗಳ ಹಿಂದಷ್ಟೇ ಹೊಸ ಟಿವಿಎಸ್ ರೈಡರ್ ಐಗೋ ಬೈಕ್ ಬಿಡುಗಡೆ.. ನಿಮಗೆ ಗೊತ್ತಿರಬೇಕಾದ ವಿಚಾರಗಳು!

ಭಾರತದ ಪ್ರಖ್ಯಾತ ದ್ವಿಚಕ್ರ ವಾಹನ (Two wheeler) ತಯಾರಕ ಕಂಪನಿಗಳಲ್ಲಿ ಟಿವಿಎಸ್ ಮೋಟಾರ್ (TVS Motor) ಕೂಡ ಒಂದಾಗಿದೆ. ಗುರುವಾರ ರೈಡರ್ 125 (Raider 125) ಮೋಟಾರ್‌ಸೈಕಲ್‌ನ ಹೊಚ್ಚ ಹೊಸ ರೂಪಾಂತರವನ್ನು (ವೇರಿಯೆಂಟ್) ಬಿಡುಗಡೆಗೊಳಿಸಿತ್ತು. ಇದು ನವೀನವಾಗಿರುವ ಬಣ್ಣ (Color) ಹಾಗೂ ಆಕರ್ಷಕ ವೈಶಿಷ್ಟ್ಯಗಳನ್ನು (Features) ಒಳಗೊಂಡಿದ್ದು, ಕೈಗೆಟುಕುವ ಬೆಲೆಯಲ್ಲಿಯೂ ಖರೀದಿಗೆ ಲಭ್ಯವಿದೆ. ಬನ್ನಿ.. ಈ ನೂತನ ಬೈಕ್ ಕುರಿತ ಪ್ರಮುಖಾಂಶಗಳನ್ನು ತಿಳಿಯೋಣ.

ಬೆಲೆ (Price): ಟಿವಿಎಸ್ ರೈಡರ್ ಐಗೋ (TVS Raider iGo) ರೂಪಾಂತರ, ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, ರೂ.1 ಲಕ್ಷಕ್ಕಿಂತ ಕಡಿಮೆ ದರವನ್ನು ಹೊಂದಿದೆ. ರೂ.98,389 ಎಕ್ಸ್-ಶೋರೂಂ (Ex-showroom) ಬೆಲೆಯಲ್ಲಿ ಮಾರಾಟಕ್ಕೆ ಬಂದಿದ್ದು, ಗ್ರಾಹಕರು ಸುಲಭವಾಗಿ ಖರೀದಿ ಮಾಡಬಹುದು.

TVS Raider iGo Bike Top Things You Need To Know

ಕಾರ್ಯಕ್ಷಮತೆ (Performance): ಈ ಮೋಟಾರ್‌ಸೈಕಲ್ 124.8 ಸಿಸಿ ಏರ್ - ಆಯಿಲ್ ಕೋಲ್ಡ್ 3ವಿ ಪೆಟ್ರೋಲ್ ಎಂಜಿನ್‌ನ್ನು ಹೊಂದಿದೆ. 11.22 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 11.75 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಒಳಗೊಂಡಿದೆ. 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಪಡೆದಿದೆ.

ಬಣ್ಣ ಹಾಗೂ ವೈಶಿಷ್ಟ್ಯಗಳು (Color And Features): ನೂತನ ಟಿವಿಎಸ್ ರೈಡರ್ ಐಗೋ ಬೈಕ್, ನಾರ್ಡೊ ಗ್ರೇ (Nardo Grey) ಬಣ್ಣದ ಆಯ್ಕೆಯನ್ನು ಒಳಗೊಂಡಿದೆ. ರೆಡ್ (Red) ಬಣ್ಣದ ಅಲಾಯ್ ವೀಲ್‌ಗಳನ್ನು ಪಡೆದಿದೆ. ಬ್ಲೂಟೂಟ್ ಕನೆಕ್ಟ್ ಮಾಡಬಲ್ಲ ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನ್ನು ಹೊಂದಿದೆ. ಇದು ವಾಯ್ಸ್ ಅಸಿಸ್ಟ್ ಹಾಗೂ ಟರ್ನ್-ಬೈ-ಟರ್ನ್ ನಾವಿಗೇಷನ್ ಸಿಸ್ಟಮ್‌ನ್ನು ಬೆಂಬಲಿಸುತ್ತದೆ.

ಹೊಸತೇನಿದೆ (What New): ಹೊಸ ಮೋಟಾರ್‌ಸೈಕಲ್ 'ಬೂಸ್ಟ್ ಮೋಡ್' ಎಂಬ ವಿಶಿಷ್ಟ ವೈಶಿಷ್ಟ್ಯದೊಂದಿಗೆ ಮಾರಾಟಕ್ಕೆ ಬಂದಿದೆ. ಇದು ಹೆಚ್ಚುವರಿಯಾಗಿ 0.55 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಶೇಕಡ 10% ಇಂಧನ ದಕ್ಷತೆಯೂ ಸುಧಾರಿಸಿದೆ ಎಂದು ಕಂಪನಿ ಹೇಳಿಕೊಂಡಿದೆ. ಜೊತೆಗೆ ಈ ಬೈಕ್ 5.8 ಸೆಕೆಂಡುಗಳಲ್ಲಿ 0 ರಿಂದ 60 ಕೆಎಂಪಿಹೆಚ್ ವೇಗವನ್ನು ಹೊಂದಲಿದೆ.

ಸಸ್ಪೆನ್ಷನ್ ಸೆಟಪ್ & ಬ್ರೇಕಿಂಗ್ ಸಿಸ್ಟಮ್ (Suspension Setup and Braking System): ನೂತನ ಮೋಟಾರ್‌ಸೈಕಲ್ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ಸ್ ಹಾಗೂ ಹಿಂಭಾಗ (ರೇರ್) ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ಅನ್ನು ಹೊಂದಿದೆ. ಸವಾರರ ರಕ್ಷಣೆಗಾಗಿ ಡಿಸ್ಕ್/ ಡ್ರಮ್ ಬ್ರೇಕ್‌ನ್ನು ಹೊಂದಿದೆ. ಬರೋಬ್ಬರಿ 123 ಕೆಜಿ ತೂಕವಿದ್ದು, 10 ಲೀಟರ್‌ನ ಫ್ಯುಯೆಲ್ (ಇಂಧನ) ಟ್ಯಾಂಕ್‌ನ್ನು ಪಡೆದಿದೆ.

ಪ್ರತಿಸ್ಪರ್ಧಿ ಬೈಕ್‌ಗಳು (Rival Bikes): ನೂತನ ಟಿವಿಎಸ್ ರೈಡರ್ 125 ಮೋಟಾರ್‌ಸೈಕಲ್‌ಗೆ ಹೀರೋ ಎಕ್ಸ್‌ಟ್ರೀಮ್ 125ಆರ್, ಹೋಂಡಾ ಶೈನ್ 125, ಬಜಾಜ್ ಪಲ್ಸರ್ ಎನ್125 ಹಾಗೂ ಹೀರೋ ಗ್ಲಾಮರ್ ಬೈಕ್‌ಗಳು ಪ್ರಬಲವಾದ ಎದುರಾಳಿಯಾಗಿವೆ. 2021ರ ಸೆಪ್ಟೆಂಬರ್‌ನಲ್ಲಿ ಈ ರೈಡರ್ 125 ಬೈಕ್ ಮಾರಾಟಕ್ಕೆ ಬಂದಿದ್ದು, 36 ತಿಂಗಳಲ್ಲಿ ಕಂಪನಿಯು 10 ಲಕ್ಷ ಯುನಿಟ್‌ನ್ನು ಮಾರಾಟ ಮಾಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Sunday, October 27, 2024, 13:00 [IST]
English summary
Tvs raider igo bike top things you need to know
Read more on tvs motor india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+