ಮೊದಲೇ ಕಡಿಮೆ ಬೆಲೆ... ಮತ್ತೇ 15 ಸಾವಿರ ಬೆಲೆ ಇಳಿಕೆ: 220cc ಬೈಕ್ ದರ ಇಷ್ಟೇನಾ?
ಟಿವಿಎಸ್ ಮೋಟಾರ್ಸ್ ನೀಡುತ್ತಿರುವ ಬೆಸ್ಟ್ ಮೋಟಾರ್‌ಸೈಕಲ್‌ಗಳಲ್ಲಿ ರೋನಿನ್ ಕೂಡ ಒಂದು. ಉತ್ತಮ ಡಿಸೈನ್, ಆಧುನಿಕ ಫೀಚರ್ಸ್, ಅತ್ಯುತ್ತಮ ಪರ್ಫಾಮೆನ್ಸ್ ನೀಡುವ ಈ ಮೋಟಾರ್‌ಸೈಕಲ್‌ನ ಮೈಲೇಜ್ ಕೂಡ ಉತ್ತಮತವಾಗಿದೆ. ಇಂತಹ ಬೈಕ್ ಅನ್ನು ಗ್ರಾಹಕರಿಗೆ ಇನ್ನೂ ಕೈಗೆಟುಕುವಂತೆ ಮಾಡಲು ಟಿವಿಎಸ್ ರೋನಿನ್ ಬೆಲೆಯಲ್ಲಿ ಪರಿಷ್ಕರಣೆಯನ್ನು ಮಾಡಲಾಗಿದ್ದು, ಈಗ 15,000 ರೂ.ಗಳವರೆಗೆ ಬೆಲೆ ಕಡಿಮೆಯಾಗಿದೆ. ಕಂಪನಿಯು ರೋನಿನ್ ಬೆಲೆಯನ್ನು ಕಡಿತಗೊಳಿಸಿದ ಬಳಿಕ ಮೂಲ ರೋನಿನ್ ಎಸ್ಎಸ್ ವೇರಿಯೆಂಟ್ ಬೆಲೆಯು 1.35 ಲಕ್ಷ ರೂ.ಗಳಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುತ್ತದೆ.
ಹೊಸ ಬೆಲೆ ಪರಿಷ್ಕರಣೆ ಬೇಸ್ ಮಾಡಲ್ ರೋನಿನ್ ಎಸ್ಎಸ್ ವೇರಿಯೆಂಟ್‌ಗೆ ಮಾತ್ರ ಅನ್ವಯಿಸುತ್ತದೆ. ಉಳಿದ ಟಾಪ್ ವೇರಿಯೆಂಟ್‌ಗಳಲ್ಲಿ ಯಾವುದೇ ಬೆಲೆ ಪರಿಷ್ಕರಣೆಯಾಗಿಲ್ಲ ಎಂಬುದನ್ನು ಗಮನಿಸಬೇಕಾಗಿದೆ. ರೋನಿನ್ ಡಿಎಸ್, ರೋನಿನ್ ಟಿಡಿ ಮತ್ತು ರೋನಿನ್ ಟಿಡಿ ಸ್ಪೆಷಲ್ ಎಡಿಷನ್ ವೇರಿಯೆಂಟ್‌ಗಳು ಮೊದಲಿನಂತೆಯೇ ಅದೇ ಬೆಲೆಗಳನ್ನು ಹೊಂದಿವೆ.

ಫೀಚರ್ಸ್ ಬದಲಾವಣೆ?: ಬೇಸ್ ವೇರಿಯೆಂಟ್ ಬೆಲೆ ಹೊರತುಪಡಿಸಿ, ಟಿವಿಎಸ್ ರೋನಿನ್‌ನಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಅದೇ ಗೋಲ್ಡ್ ಯುಎಸ್‌ಡಿ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್‌ಗಳು, ಹಿಂಭಾಗದಲ್ಲಿ 7-ಸ್ಟೆಪ್ ಪ್ರಿಲೋಡ್ ಅಡ್ಜಸ್ಟ್ ಮೊನೊ-ಶಾಕ್, 17-ಇಂಚಿನ ಅಲಾಯ್ ವೀಲ್‌ಗಳು, ಸ್ಮಾರ್ಟ್‌ಫೋನ್ ಸಂಪರ್ಕದೊಂದಿಗೆ ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ.
ಬೆಲೆ ಅಂತರ: ಕೇವಲ ಬೇಸ್ ವೇರಿಯೆಂಟ್ ಬೆಲೆಯಲ್ಲಿ ಮಾತ್ರ ಪರಿಷ್ಕರಣೆಯಾಗಿರುವುದರಿಂದ ಟಾಪ್ ವೇರಿಯೆಂಟ್ ಬೆಲೆಗಳ ನಡುವಿನ ಅಂತರ ಈಗ ಇನ್ನೂ ಹೆಚ್ಚಾಗಿದೆ. ರೋನಿನ್ ಎಸ್ಎಸ್ ಮತ್ತು ರೋನಿನ್ ಡಿಎಸ್ ನಡುವಿನ ಬೆಲೆ ವ್ಯತ್ಯಾಸವು ಈ ಹಿಂದೆ 7,500 ರೂ. ಇತ್ತು. ಆದರೆ ಈಗ ಟಿವಿಎಸ್ ಮೋಟಾರ್‌ನ ಬೆಲೆ ಪರಿಷ್ಕರಣೆಯೊಂದಿಗೆ, ಈ ಎರಡು ವೇರಿಯೆಂಟ್‌ಗಳ ನಡುವಿನ ಬೆಲೆ ವ್ಯತ್ಯಾಸವು 21,700 ರೂ.ಗೆ ಏರಿಕೆಯಾಗಿದೆ.

ಸದ್ಯ ಹೊಸ ಬೆಲೆ ಪರಿಷ್ಕರಣೆಯಿಂದ ಪ್ರತಿಸ್ಪರ್ಧಿ ರಾಯಲ್ ಎನ್‌ಫೀಲ್ಡ್ ಹಂಟರ್ 350 ಗಿಂತ ಅಗ್ಗವಾಗಿ ಸಿಗಲಿದ್ದು, 1.35 ಲಕ್ಷ ರೂ. ಬೆಲೆಗೆ (ಎಕ್ಸ್ ಶೋರೂಂ) ಈ ಬೈಕ್ ಉತ್ತಮ ಆಯ್ಕೆಯಾಗಿದೆ. ಆದರೆ ರೋನಿನ್ ಎಸ್ಎಸ್ ವೇರಿಯೆಂಟ್‌ಗಿಂತ ರೋನಿನ್ ಡಿಎಸ್ ವೇರಿಯೆಂಟ್ 21,700 ರೂ. ಬೆಲೆ ವ್ಯತ್ಯಾಸವಿದ್ದರೂ, ಇದರಲ್ಲಿ ಡ್ಯುಯಲ್-ಚಾನೆಲ್ ಎಬಿಎಸ್ ಇಲ್ಲದಿರುವುದನ್ನು ಇಲ್ಲಿ ಗಮನಿಸಬೇಕು.
ಡ್ಯುಯಲ್-ಚಾನೆಲ್ ಎಬಿಎಸ್ ಬಯಸುವವರು ರೋನಿನ್ ಟಿಡಿ (ಟಾಪ್ ವೇರಿಯೆಂಟ್) ಆಯ್ಕೆ ಮಾಡಬೇಕಾಗುತ್ತದೆ. ಇದು ಬೇಸ್ ವೇರಿಯೆಂಟ್ ಎಸ್‌ಎಸ್‌ಗಿಂತ ಸುಮಾರು 34 ಸಾವಿರ ರೂ. ಹೆಚ್ಚಾಗುತ್ತದೆ. ಡ್ಯುಯಲ್ ಚಾನಲ್ ಎಬಿಎಸ್ ಒಂದನ್ನು ಹೊರತುಪಡಿಸಿ ಹೊಸ ಬೆಲೆಯೊಂದಿಗೆ, ರೋನಿನ್ ಈಗ ರಾಯಲ್ ಎನ್‌ಫೀಲ್ಡ್ ಹಂಟರ್ 350 ಗಿಂತ ಅಗ್ಗದ ಬೆಲೆಯಲ್ಲಿ ಸಿಗುತ್ತದೆ.

ಎಂಜಿನ್ ವಿಶೇಷತೆಗಳು: ಟಿವಿಎಸ್ ರೋನಿನ್ 225.9 ಸಿಸಿ SOHC 4v ಆಯಿಲ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ. ಇದು 20.4 ಬಿಹೆಚ್ ಪವರ್ ಮತ್ತು 19.93 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಇದರ ಬೇಸ್ ವೇರಿಯೆಂಟ್ ಹೆಚ್ಚಿನ ವೈಶಿಷ್ಟ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ಪಡೆಯುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








