ನಿಮ್ಮ ಪತ್ನಿಗೆ ಸ್ಕೂಟರ್ ಕೊಡಿಸಬೇಕೇ?.. 50 Km ಮೈಲೇಜ್.. ರೂ.63,060 ಆರಂಭಿಕ ಬೆಲೆ
ದೇಶದಲ್ಲಿ ಬೈಕ್‌ಗಳಂತೆ ಸ್ಕೂಟರ್‌ಗಳು ಭಾರಿ ಜನಪ್ರಿಯತೆ ಗಳಿಸಿವೆ. ಹಲವರ ಮನೆಯಲ್ಲಿ ದಿನನಿತ್ಯದ ಬಳಕೆಗೆ ಸ್ಕೂಟರ್‌ವೊಂದು ಇದ್ದೆ ಇರುತ್ತದೆ. ಮೋಟಾರ್‌ಸೈಕಲ್‌ಗಳಿಗೆ ಹೋಲಿಕೆ ಮಾಡಿದರೆ ಸ್ಕೂಟರ್‌ಗಳು ಗೇರ್‌ನ್ನು ಪಡೆಯದೇ ಇರುವುದರಿಂದ ಮಹಿಳೆಯರಿಗೆ ಉತ್ತಮವಾದ ಆಯ್ಕೆಯಾಗಲಿವೆ. ಆದಾಗ್ಯೂ ಹಲವು ಸ್ಕೂಟರ್‌ಗಳು 125 ಸಿಸಿ ಎಂಜಿನ್‌ನ್ನು ಒಳಗೊಂಡಿದ್ದು, ಸ್ವಲ್ಪ ಭಾರವಾಗಿರುತ್ತವೆ. ಇವುಗಳನ್ನು ಓಡಿಸುವುದು ಕೂಡ ಕಷ್ಟದ ಕೆಲಸ. ನಾವಿಲ್ಲಿ ಬಜೆಟ್ ಬೆಲೆ ಹಾಗೂ ಗರಿಷ್ಠ ಮೈಲೇಜ್ ನೀಡುವ ಟಿವಿಎಸ್ ಕಂಪನಿಯ ಜನಪ್ರಿಯ ಸ್ಕೂಟರ್‌ಗಳ ಕುರಿತಂತೆ ಸಂಪೂರ್ಣವಾಗಿ ವಿವರಿಸಿದ್ದೇವೆ.
ಮೊದಲಿಗೆ ಟಿವಿಎಸ್ ಸ್ಕೂಟಿ ಪೆಪ್ ಪ್ಲಸ್ (TVS Scooty Pep Plus) ಸ್ಕೂಟರ್ ಬಗ್ಗೆ ಮಾತನಾಡೋಣ. ಇದು ರೂಪಾಂತರ (ವೇರಿಯೆಂಟ್)ಗಳಿಗೆ ಅನ್ವಯ ರೂ.63,060 ದಿಂದ ರೂ.66,160 ಎಕ್ಸ್ ಶೋರೂಂ ದರವನ್ನು ಪಡೆದಿದೆ. 87.8 ಸಿಸಿ ಸಾಮರ್ಥ್ಯದ ಪೆಟ್ರೋಲ್ ಎಂಜಿನ್ ಒಳಗೊಂಡಿದ್ದು, 5.43 ಪಿಎಸ್ ಗರಿಷ್ಠ ಶಕ್ತಿ (ಪವರ್) ಹಾಗೂ 6.5 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ.

ಈ ಸ್ಕೂಟರ್ ಸರಿ ಸುಮಾರು 50 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಹ್ಯಾಲೊಜೆನ್ ಹೆಡ್‌ಲೈಟ್, ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್‌ಗಳು (ಡಿಆರ್‌ಎಲ್), ಅನಲಾಗ್ ಇನ್ಸ್ಟ್ರುಮೆಂಟ್ ಕನ್ಸೋಲ್, ಸೈಡ್ ಸ್ಟ್ಯಾಂಡ್ ಅಲಾರಾಂ, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಮ್ಯಾಟ್ ಬ್ಲ್ಯಾಕ್, ಮ್ಯಾಟ್ ಬ್ಲೂ ಒಳಗೊಂಡಂತೆ ಹಲವು ಆಕರ್ಷಕ ಬಣ್ಣಗಳೊಂದಿಗೂ ಸಿಗುತ್ತದೆ.
ನೂತನ ಟಿವಿಎಸ್ ಸ್ಕೂಟಿ ಪೆಪ್ ಪ್ಲಸ್ ಸ್ಕೂಟರ್ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಪೋರ್ಕ್ ಹಾಗೂ ಹಿಂಭಾಗ (ರೇರ್) ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ ಡ್ರಮ್ ಬ್ರೇಕ್ ಆಯ್ಕೆಯನ್ನು ಪಡೆದಿದೆ. 93 ಕೆಜಿ ತೂಕವಿದ್ದು, 4.2-ಲೀಟರ್ ಸಾಮರ್ಥ್ಯದ ಫ್ಯುಯೆಲ್ (ಇಂಧನ) ಟ್ಯಾಂಕ್‌ನ್ನು ಒಳಗೊಂಡಿದೆ.

ಟಿವಿಎಸ್ ಸ್ಕೂಟಿ ಜೆಸ್ಟ್ (TVS Scooty Zest) ಕುರಿತಂತೆ ಹೇಳುವುದಾದರೆ, ಈ ಸ್ಕೂಟರ್ ರೂ.72,614 ದಿಂದ ರೂ.73,417 ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಸಿಗುತ್ತದೆ. 109.7 ಸಿಸಿ ಏರ್-ಕೋಲ್ಡ್ ಸಿಂಗಲ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಪಡೆದಿದ್ದು, 7.8 ಪಿಎಸ್ ಗರಿಷ್ಠ ಶಕ್ತಿ ಮತ್ತು 8.8 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿದೆ.
ಈ ಸ್ಕೂಟಿ ಜೆಸ್ಟ್ 48 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಅನಲಾಗ್ ಇನ್ಸ್ಟ್ರುಮೆಂಟ್ ಕನ್ಸೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಮ್ಯಾಟ್ ಬ್ಲ್ಯಾಕ್, ಮ್ಯಾಟ್ ಬ್ಲೂ, ಮ್ಯಾಟ್ ಪರ್ಪಲ್ ಮತ್ತು ಮ್ಯಾಟ್ ರೆಡ್ ಒಳಗೊಂಡಂತೆ ಹಲವು ಬಣ್ಣಗಳೊಂದಿಗೆ ಸಿಗುತ್ತದೆ. 103 ಕೆಜಿ ತೂಕವಿದ್ದು, 5 ಲೀಟರ್ ಸಾಮರ್ಥ್ಯದ ಫ್ಯುಯೆಲ್ (ಇಂಧನ) ಟ್ಯಾಂಕ್ ಹೊಂದಿದೆ.
ಹೊಸ ಸ್ಕೂಟಿ ಜೆಸ್ಟ್ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗ (ರೇರ್) ಸಿಂಗಲ್ ಶಾಕ್ ಸಸ್ಪೆನ್ಷನ್ ಸೆಟಪ್ ಒಳಗೊಂಡಿದೆ. ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆ ಒದಗಿಸಲು ಡ್ರಮ್ ಬ್ರೇಕ್‌ನ್ನು ಹೊಂದಿದೆ. 10-ಇಂಚಿನ ಸ್ಟೀಲ್ ವೀಲ್‌ಗಳು, ಮುಂದೆ 90/90 ಹಾಗೂ ಹಿಂದೆ 90/100 ಅಳತೆಯ ಟ್ಯೂಬ್‌ಲೆಸ್ ಟೈರ್‌ಗಳನ್ನು ಒಳಗೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








