ಆಕ್ಟೀವಾ ಇವಿ ಬಗ್ಗೆ ನಿಮಗಿದು ಗೊತ್ತಾ? ವಿಷಯ ತಿಳಿದು ಓಲಾ, ಎಥರ್‌ಗೆ ನಡುಕ ಶುರು!
ಹೋಂಡಾ ತನ್ನ 22 ವರ್ಷಗಳ ದೀರ್ಘಾವಧಿಯಲ್ಲಿ ಅತ್ಯಂತ ಜನಪ್ರಿಯ ಮಾದರಿಯಾದ ಆಕ್ಟಿವಾ ಸ್ಕೂಟರ್ ಅನ್ನು ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಬಿಡುಗಡೆಗೊಳಿಸಲು ರೆಡಿಯಾಗಿದೆ. ಹೋಂಡಾ ಆಕ್ಟಿವಾ ಎಲೆಕ್ಟ್ರಿಕ್ (Honda Activa Electric) ಸ್ಕೂಟರ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ 2025ರ ಆರಂಭದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಅದಕ್ಕೂ ಮುನ್ನ ಆಕ್ಟಿವಾ ಇವಿ ಹೊಚ್ಚ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ನ್ನು ನವೆಂಬರ್ 27 ರಂದು ಅನಾವರಣಗೊಳಿಸಲು ದಿನಾಂಕವನ್ನು ನಿಗದಿಪಡಿಸಲಾಗಿದೆ. ಸ್ಕೂಟರ್ ಬಗ್ಗೆ ಕುತೂಹಲ ಹೆಚ್ಚಿಸಲು ಕಂಪನಿ ಕೂಡ ಹೊಸ ಟೀಸರ್‌ಗಳನ್ನು ಬಿಡುವ ಮೂಲಕ ಭಾರೀ ಸದ್ದು ಮಾಡುತ್ತಿದೆ.
ಹೋಂಡಾ ಪ್ರಕಾರ, ಎಲೆಕ್ಟ್ರಿಕ್ ವಾಹನ ವಿಭಾಗಕ್ಕೆ ತಡವಾಗಿ ಪ್ರವೇಶಿಸುತ್ತಿರುವುದು ನಿಜವಾದರೂ, ಈ ಸಮಯವು ಇವಿಗಳಿಗೆ ಹೆಚ್ಚುತ್ತಿರುವ ಬೇಡಿಕೆಗೆ ಅನುಗುಣವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯು ಕಳೆದ ವರ್ಷದ ಒಟ್ಟು ಮಾರುಕಟ್ಟೆಯ ಶೇಕಡಾ 5 ರಿಂದ ಪ್ರಸ್ತುತ ಶೇಕಡಾ 8 ಕ್ಕೆ ವಿಸ್ತರಿಸುತ್ತಿರುವುದರಿಂದ, ಈ ವಿಭಾಗವನ್ನು ಪ್ರವೇಶಿಸಲು ಇದು ನಮಗೆ ಸರಿಯಾದ ಸಮಯವಾಗಿದೆ.

ಕಂಪನಿಯು 2030 ರ ವೇಳೆಗೆ ತನ್ನ ದೇಶೀಯ ಮಾರಾಟದ ಮೂರನೇ ಒಂದು ಭಾಗವನ್ನು ಎಲೆಕ್ಟ್ರಿಕ್ ವಾಹನಗಳನ್ನು ಹೊಂದುವ ಗುರಿಯಿದೆ ಎಂದು ಹೋಂಡಾ ವಿಶ್ವಾಸ ವ್ಯಕ್ತಪಡಿಸಿದೆ. ಮೂಲಗಳ ಪ್ರಕಾರ ಈಗಿನ ಎಲ್ಲಾ ಎಲೆಕ್ಟ್ರಿಕ್ ವಾಹನಗಳಲ್ಲಿನ ಆಧುನಿಕ ಫೀಚರ್‌ಗಳ ಜೊತೆಗೆ ಹೊಸ ಆಕರ್ಷಕ ಫೀಚರ್‌ಗಳನ್ನು ಹೋಂಡಾ ಆಕ್ಟೀವಾದಲ್ಲಿ ನೀಡುವ ಸಾಧ್ಯತೆ ಇದೆ.
ಆಕ್ಟೀವಾ ಇವಿನೆ ಏಕೆ?: ಆಕ್ಟಿವಾ ಎಂಬ ಹೆಸರು ಜನರಲ್ಲಿ ಭಾರಿ ಯಶಸ್ಸನ್ನು ಗಳಿಸಿರುವ ಜೊತೆಗೆ ಉತ್ತಮ ಮಾರಾಟವನ್ನು ಕಾಣುತ್ತಿರುವ ಕಾರಣ ಇದೇ ಹೆಸರನ್ನು ಬಳಿಸಿಕೊಂಡು ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡುವ ಪ್ಲಾನ್ ಕಂಪನಿಯದ್ದು. ಕೇವಲ ಆಕ್ಟೀವಾ ಇವಿ ಮಾತ್ರವಲ್ಲದೇ ಇನ್ನೂ ಹಲವು ಹೋಂಡಾ ಎಲೆಕ್ಟ್ರಿಕ್ ಸ್ಕೂಟರ್‌ಗಳು ಮುಂಬರುವ ವರ್ಷಗಳಲ್ಲಿ ಬರಲಿವೆ.

ಈಗಾಗಲೇ ಕಂಪನಿಯು ಸ್ಥಿರ ಬ್ಯಾಟರಿ, ಮೋಟಾರ್‌ಗಳು, ಕಂಟ್ರೋಲರ್‌ಗಳು, ಚಾರ್ಜರ್‌ಗಳು ಸೇರಿದಂತೆ ಇವಿ ತಂತ್ರಜ್ಞಾನಕ್ಕಾಗಿ ಪೇಟೆಂಟ್ ಸಲ್ಲಿಸಿದೆ. ಹೋಂಡಾ ಭಾರತದಲ್ಲಿ ಪ್ಲಾಟ್ ಫಾರ್ಮ್-ಇ ನಲ್ಲಿ ವಾಹನಗಳನ್ನು ತಯಾರಿಸಲು ನಿರ್ಧರಿಸಿದೆ. ಇದರಲ್ಲಿ ವಿವಿಧ ರೀತಿಯ ಮೋಟರ್‌ಗಳು, ಬ್ಯಾಟರಿ ಪ್ಯಾಕ್‌ಗಳು ಮತ್ತು ವಿಭಿನ್ನ ದೇಹ ಶೈಲಿಗಳಲ್ಲಿ ವಾಹನಗಳನ್ನು ನಿರ್ಮಿಸುವ ಸಾಮರ್ಥ್ಯವನ್ನು ಈ ಪ್ಲಾಟ್‌ಫಾರ್ಮ್ ಹೊಂದಿದೆ.
ಆಕ್ಟೀವಾ ಇವಿ ವಿಶೇಷತೆಗಳು: ಮೂಲಗಳ ಪ್ರಕಾರ ಹೊಸ ಹೋಂಡಾ ಆಕ್ಟಿವಾ ಇವಿ ತೆಗೆದು ಹಾಕಬಹುದಾದ ಬ್ಯಾಟರಿಗಳನ್ನು (Removable Batteries) ಹೊಂದಿದ್ದು, ಸೀಟ್ ಕೆಳಭಾಗದಲ್ಲಿ 2 ಬ್ಯಾಟರಿ ಪ್ಯಾಕ್ ಇಡಲು ಅನುವುಮಾಡಿಕೊಡಲಾಗಿದೆ. ಇದು ಪವರ್‌ಫುಲ್ ಎಲೆಕ್ಟ್ರಿಕ್ ಮೋಟಾರ್ ಜೊತಗೆ 6 ಕೆಡಬ್ಲ್ಯೂ ಹಾರ್ಸ್ ಪವರ್ ಉತ್ಪಾದಿಸಲಿದೆ ಎಂದು ಹೇಳಲಾಗುತ್ತಿದೆ.

ಡಿಸ್ಕ್ ಮತ್ತು ಡ್ರಮ್ ಬ್ರೇಕ್‌ಗಳನ್ನು ಹೊಂದಿರಲಿದ್ದು, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ. ಪ್ರತಿಸ್ಪರ್ಧಿ ಕಂಪನಿಗಳ ಸ್ಕೂಟರ್ ಆರಂಭಿಕ ಬೆಲೆಗಳನ್ನು ಪರಿಗಣಿಸಿ ಸ್ಪರ್ಧಾತ್ಮಕ ಬೆಲೆಯಲ್ಲಿ ಅಂದರೆ ಅಂದಾಜು ರೂ.1 ಲಕ್ಷ (ಎಕ್ಸ್ ಶೋರೂಂ) ಅಥವಾ ಅದಕ್ಕಿಂತ ಕಡಿಮೆ ಬೆಲೆಯಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.
ಹೊಸ ಹೋಂಡಾ ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್ (Honda Activa EV) ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಎಥರ್ 450X, ಓಲಾ ಮತ್ತು ಟಿವಿಎಸ್ iQube ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ಪೈಪೋಟಿ ನೀಡಲಿದೆ. ಅಂದುಕೊಂಡಂತೆ ಉತ್ತಮ ರೇಂಜ್, ಅತ್ಯುತ್ತಮ ಫೀಚರ್ಸ್ ಹಾಗೂ ಆಧುನಿಕ ಡಿಸೈನ್‌ನೊಂದಿಗೆ ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್ ಭಾರತದಲ್ಲಿ ಬಿಡುಗಡೆಯಾದರೆ, ಈಗಿರುವ ಎಲ್ಲಾ ಓಲಾ, ಎಥೆರ್ ನಂತಹ ಇವಿ ಸ್ಕೂಟರ್‌ಗಳಿಗೆ ಭಾರೀ ಹೊಡೆತ ಬೀಳಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








